ಚೆಲು ಕನ್ನಡ ಚೆಲು ಕನ್ನಡ ಚೆಲುವಿನ ನಾಡು

ಜೈ ಭಾರತ ಜನನಿಯ ತನುಜೆಯ ಬೀಡು


ಎತ್ತರದ ಕರಿಮಣ್ಣಿನ ಸೊಬಗಿನ ನಾಡು

ಶ್ರೀಗಂಧದ ನದಿವನಗಳ ಸುಂದರ ಬೀಡು

ತರುಲತೆಗಳ ಶಾಸನಗಳ ಹೆಮ್ಮೆಯ ನಾಡು

ಸ್ವಾಭಿಮಾನ ಹಿರಿಮೆಗಳ ಸಾಧನೆ ಬೀಡು

ಶೂರ ಧೀರ ರಾಜರುಗಳ ಚರಿತೆಯ ನಾಡು

ದೇಶಪ್ರೇಮಿ ಬಂಧುಗಳ ಐಕ್ಯತೆ ಬೀಡು

ಸದ್ಗುಣಿಗಳ ಭಕ್ತರ ಬದುಕಿನ ನಾಡು

ಸಂತ ಋಷಿ ಪಾಮರರ ಕವಿಗಳ ಬೀಡು

ಕಲೆಗಾರ ಪಂಡಿತರ ವೈಭವ ನಾಡು

ವಿಜ್ಞಾನ ಚಿಗುರುಗಳ ಸಾಧನೆ ಬೀಡು

ನೀತಿ ಧರ್ಮ ದುಡಿಮೆಗಳ ಸೇವೆಯ ನಾಡು

ಪರಮ ಜ್ಯೋತಿ ಸತ್ಯತೆಯ ಸಾರಿದ ಬೀಡು

ಚೆಲು ಕನ್ನಡ ಮನ ಕನ್ನಡ ತನುವಿನ ನಾಡು

ಜೈ ಭಾರತ ಮಾತೆಯ ತನುಜೆಯ ಬೀಡು

-ಹಾ ಮ ಸತೀಶ ಬೆಂಗಳೂರು