ಬರದಿರದ ಪ್ರೀತಿಗಳ ಸೆಳೆಯದಿರು ಚೆಲುವೆ

ಹಸಿದಿರದ ಪ್ರೇಮಗಳ ಬಳಸದಿರು ಚೆಲುವೆ 


ಮತಿಯಿರದ ಮಾತುಗಳ ಕೇಳದಿರು ಚೆಲುವೆ

ಹಿತವಿರದ ಸಲಹೆಗಳ ಪಡೆಯದಿರು ಚೆಲುವೆ


ಕೊನೆಯಿರದ ಕನಸುಗಳ ಕಾಣದಿರು ಚೆಲುವೆ

ನನಸಿರದ  ಬಂಧುಗಳ ನೋಡದಿರು ಚೆಲುವೆ


ಬಸಿರಿರದ ಒಡಲುಗಳ ಪಡೆಯದಿರು ಚೆಲುವೆ

ಉಸಿರಿರದ ಹೃದಯಗಳ ಕಡೆಯದಿರು ಚೆಲುವೆ


ಈಶನಿರದ ಪರ್ವತಗಳ  ಹಿಡಿಯದಿರು ಚೆಲುವೆ

ಭಾಷೆಯಿರದ ತಪ್ಪುಗಳ ಮಾಡದಿರು ಚೆಲುವೆ 

-ಹಾ ಮ ಸತೀಶ ಬೆಂಗಳೂರು