ಕಣ್ಣ ಸನ್ನೆಯ ಮಾಡಿ ಕರೆದ, ಚೆಂದ ಅವನು
ಬಣ್ಣದ ಮಾತು ಆಡುತ್ತಾ,ನಿಂದ ಅವನು
ತಾಯಿಗೆ ಯಾವತ್ತೂ,ಮುದ್ದು ಮಾಣಿಯಂತೆ
ನನ್ನ ಜೊತೆಗಿಂದು ಕೀಟಲೆಯು,ಕಂದ ಅವನು
ಗತ್ತು ಇರದ ರೀತಿಯಲಿ, ಹೀಗೆಯೇ ನಡೆದ
ಕೊಟ್ಟ ಪ್ರಸಾದವ, ಹಾಗೇ ತಿಂದ ಅವನು
ಬಟ್ಟಿ ಇಳಿಸಿದ ನೀರಂತೆ, ಸ್ವಚ್ಛ ಮನಸು
ಕಷ್ಟವಿದೆ ಎಂದಾಗ,ಸನಿಹ ಬಂದ ಅವನು
ಗಟ್ಟಿ ದೇಹದಲ್ಲಿ,ಮೃದು ಹೃದಯ ಈಶ
ದಟ್ಟಿಯೊಳಿರುತ, ಬೆಂಕಿಯೊಡನೆ ಬೆಂದ ಅವನು
-ಹಾ. ಮ ಸತೀಶ ಬೆಂಗಳೂರು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!