ಒಂದು ಪುಟ್ಟ ಮಗುವಿಗೆ ಆರೋಗ್ಯದಲ್ಲಿ ತೊಂದರೆಯಾಗಿ ತುಂಬಾ ನೋವಾಗುತ್ತಿತ್ತು. ನೋವನ್ನು ತಾಳಲಾರದೆ ಮಗು ತನ್ನ ತಾಯಿಯ ಬಳಿ ಕೇಳಿತು. ಅಮ್ಮಾ, ದೇವರು ನನಗೇಕೆ ಇಷ್ಟು ನೋವು ಮತ್ತು ಶಿಕ್ಷೆ ನೀಡಿದ್ದಾನೆ? ನಾನೇನು ತಪ್ಪು ಮಾಡಿದ್ದೇನೆ?
ಇಲ್ಲ ಕಂದಾ, ನೀನು ಯಾವ ತಪ್ಪನ್ನೂ ಮಾಡಿಲ್ಲ. ಜೀವನದಲ್ಲಿ ಕೆಲವೊಮ್ಮೆ ಕಷ್ಟಗಳು ಬರುತ್ತವೆ. ಅವುಗಳನ್ನು ಧೈರ್ಯದಿಂದ ಎದುರಿಸುವುದನ್ನು ನಾವು ಕಲಿಯಬೇಕು. ಕತ್ತಲೆಯ ನಂತರ ಬೆಳಕು ಬರುವಂತೆ, ಕಷ್ಟದ ನಂತರ ಸುಖವೂ ಬರಬಹುದು.ಅಮ್ಮಾ... ನಾನು ಬೇಗ ಗುಣಮುಖನಾದರೆ ಮತ್ತೆ ನಿನ್ನ ಜೊತೆ ತೋಟದಲ್ಲಿ ಆಡಬಹುದಾ? ನಿನ್ನ ಕೈ ಹಿಡಿದು ದೇವಸ್ಥಾನಕ್ಕೆ ಬರಬಹುದಾ? ನೀನು ಮಾಡಿಕೊಡುವ ಊಟವನ್ನು ನಿನ್ನ ಪಕ್ಕದಲ್ಲೇ ಕುಳಿತು ತಿನ್ನಬಹುದಾ?
ಅಮ್ಮ: ಯಾಕಿಲ್ಲ ಕಂದಾ...! ನಾವೆಲ್ಲರೂ ನಿನ್ನ ಆರೋಗ್ಯಕ್ಕಾಗಿ ಪ್ರಯತ್ನಿಸುತ್ತೇವೆ. ನೀನು ಮತ್ತೆ ನಗುವ ದಿನಕ್ಕಾಗಿ ನಾನೂ ಕಾಯುತ್ತಿದ್ದೇನೆ. ಅಮ್ಮಾ... ನನಗೆ ಇನ್ನೊಂದು ಪ್ರಶ್ನೆ ಇದೆ.: ಕೇಳು ಕಂದಾ. ನಾನು ದೊಡ್ಡವನಾದ ಮೇಲೆ ದೇವರಲ್ಲಿ ಏನು ಕೇಳಲಿ? (ತಾಯಿ ಮಗುವಿನ ಹಣೆಗೆ ಮುತ್ತಿಡುತ್ತಾಳೆ.ದೇವರಲ್ಲಿ ನಿನಗಾಗಿ ಮಾತ್ರ ಬೇಡಿಕೆಯನ್ನು ಇಡಬೇಡ ಕಂದಾ... ನಿನ್ನ ಹಾಗೆ ನೋವಿನಲ್ಲಿ ಇರುವ ಎಲ್ಲ ಮಕ್ಕಳಿಗೂ ಧೈರ್ಯ ಸಿಗಲಿ, ಅವರಿಗೆ ಪ್ರೀತಿ ತೋರಿಸುವ ಜನ ಸಿಗಲಿ, ಅವರ ನೋವು ಕಡಿಮೆಯಾಗಲಿ ಅಂತ ಪ್ರಾರ್ಥಿಸು.
(ಮಗು ತಾಯಿಯ ಎದೆಯ ಮೇಲೆ ತಲೆಯಿಟ್ಟು ಕಣ್ಣು ಮುಚ್ಚುತ್ತದೆ.)
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!