ಊರಲ್ಲೊಂದು ಕಾಡಿದೆ. ಆ ಕಾಡಿನಲ್ಲಿ ಒಂದೆರಡು ಹದ್ದುಗಳು ತಮ್ಮ ಬಳಗವನ್ನ ಕಟ್ಟಿಕೊಂಡು ಕಾಯ್ತಾ ಇದ್ದಾವೆ. ಅವುಗಳಿಗೆ ಸಾಮಾನ್ಯ ಸಾಮಾನ್ಯ ಹಣ್ಣು ಹಂಪಲುಗಳು ರುಚಿಸುವುದೇ ಇಲ್ಲ. ಅದಕ್ಕೆ ಹೆಣಗಳೇ ಬೇಕು ಅದಕ್ಕೆ ಕಾದು ಕೊಂಡಿರುತ್ತವೆ ಯಾವುದೇ ಕಾರಣಕ್ಕೆ ಹೆಣ ಬಿದ್ದಾಗ ಆ ಹೆಣದಿಂದ ಅದನ್ನು ತಿಂದು ತಮ್ಮ ದೇಹ ಬಲಿಷ್ಠವಾಗಿ ತನ್ನ ಪರಾಕ್ರಮವನ್ನ ತೋರಿಸ್ತದೆ. ಆ ಹೆಣದ ಮುಂದೆ ಕುಳಿತು ಅನುಕಂಪ ಸೂಚಿಸುತ್ತದೆ. ತಾನು ಆ ಹೆಣ ಬೀಳದಂತೆ ತುಂಬಾ ಪ್ರಯತ್ನಪಟ್ಟೆ ಅನ್ನೋದನ್ನ ಬಿಂಬಿಸುತ್ತದೆ ಕೊನೆಗೆ ಹೆಣವನ್ನ ತಿನ್ನುತ್ತದೆ. ಅದರ ಜೊತೆಗಿರುವ ಇನ್ನೊಂದು ಹದ್ದು ಸಾಮಾನ್ಯದೇನಲ್ಲ ಅದು ಕೂಡ ಹೆಣ ಹೇಗೆ ಮಾಡೋದು ಅಂತ ಉಪಾಯಗಳನ್ನು ಹುಡುಕುತ್ತೆ.
ಒಟ್ಟಿನಲ್ಲಿ ಎರಡು ಹದ್ದುಗಳು ತಮಗೆ ಬೇಕಾದ ಒಪ್ಪಿಗೆಯಾದ ಹೆಣಗಳನ್ನು ತಿನ್ನುತ್ತವೆ ಹಾಗೆ ಇಬ್ಬರಿಗೂ ಒಪ್ಪಿಗೆ ಆಗದ ಹೆಣಗಳು ಎಷ್ಟೇ ಬಿದ್ದಿದ್ರು ಅವುಗಳನ್ನ ಆಹಾರವಾಗಿ ಸ್ವೀಕರಿಸುವುದಿಲ್ಲ. ತನ್ನ ಪರಿಧಿಯೊಳಗೆ ತನ್ನ ಸ್ವಾರ್ಥಕ್ಕೆ ಒಪ್ಪಿಗೆಯಾಗುವ ಹೆಣಗಳನ್ನು ತಿನ್ನುವ ಹದ್ದುಗಳೆರಡು ಕಾಯುತ್ತಿವೆ ಎಚ್ಚರ!
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!