ಇವತ್ತಿನ ದಿನ ಒಂದಷ್ಟು ವಿಚಿತ್ರವಾಗಿತ್ತು. ಗಡಿಯಾರ ಎದ್ದು ಬಂದು ಕಪಾಳಕ್ಕೆರಡು ಹೊಡೆದು ನೋಡು ನಾನು ಪ್ರತಿದಿನ ಚಲನೆಯಲ್ಲಿ ಇರುತ್ತೇನೆ ನನಗೆ ಗೋಡೆಯನ್ನು ಬಿಟ್ಟು ಎಲ್ಲಾ ಕಡೆಗೂ ಚಲಿಸುವುದಕ್ಕಾಗುವುದಿಲ್ಲ ಆದರೂ ನಿನಗೆ ಕೂತಲ್ಲಿ ಕೂತಿರಬೇಡ ಸ್ಥಿರವಾಗಿರಬೇಡ ಪ್ರತಿಕ್ಷಣವೂ ಹೊಸತನ್ನ ಅನ್ವೇಷಿಸು ಹುಡುಕು ಅಂತ ಎಷ್ಟೇ ಹೇಳಿದರು ನೀನು ಪ್ರಯತ್ನವೇ ಪಡುತ್ತಿಲ್ಲ ನಾನು ಪ್ರತಿಕ್ಷಣವೂ ಸಾಯ್ತಾ ಹುಟ್ಟುತ್ತ ಸಾಯ್ತಾ ಹುಟ್ಟುತ್ತ ದಿನ ವಾರ ತಿಂಗಳು ವರ್ಷಗಳು ಬದಲಾದರೂ ನಿನ್ನಲ್ಲಿ ಅಂತಹ ದೊಡ್ಡ ಬದಲಾವಣೆಗಳು ಕಾಣುತ್ತಿಲ್ಲ ನನಗೆ ಬದುಕು ಬೇಸರವೆನಿಸಿದೆ ನೀನು ಬದಲಾಗಬೇಕು ನನ್ನ ಚಲನೆಯ ಜೊತೆಗೆ ನಿನ್ನ ಚಲನೆ ಇದ್ದರೆ ಮಾತ್ರ ಬದುಕಿಗೂ ಅರ್ಥ ಕಳಿಸಿಕೊಟ್ಟ ಭಗವಂತನ ಕೆಲಸವೂ ಸಾರ್ಥಕ ಈ ಆಲೋಚನೆ ಸರಿಯಾಗಿ ನೆನಪಿಟ್ಟುಕೋ, ಇಲ್ಲವಾದರೆ ನಿನ್ನ ಮನೆಯ ಗೋಡೆಯಿಂದ ಇಳಿದು ನಾವು ಹೊರಟು ಹೋಗಿಬಿಡುತ್ತೇವೆ." ಯಾಕೋ ಭಯವಾಗಿ ಎದ್ದು ಕುಳಿತಾಗ ಮುಖ ಬೆವರಿತ್ತು ಗಡಿಯಾರ ಚಲಿಸುತ್ತಿತ್ತು ಚಲನೆ ನಿರಂತವಾಗಿರಬೇಕು ಅಂತ ಮನಸ್ಸು ಮಾತನಾಡುವುದಕ್ಕೆ ಶುರು ಮಾಡಿತು.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ