ಅವರಿಬ್ಬರು ಪ್ರೀತಿಸಿದ್ದರು, ಈಗ ಎರಡೂ ಮನೆಯಲ್ಲಿ ಮೌನ. ತಪ್ಪುಗಳಾಗಿದೆ, ಸಾವೂ ಸಂಭವಿಸಿದೆ, ಒಪ್ಪಿ ನಡೆದರೆ ಬದುಕು ನಗುವಿನ ಹೂದೋಟವಾಗುತ್ತಿತ್ತು. ಈಗ ಪ್ರಪಾತದಲ್ಲೇ ಬದುಕುಕಟ್ಟಿಕೊಳ್ಳುವ ಸ್ಥಿತಿ. ತಪ್ಪಿಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸಿ, ಕಣ್ಣೀರೊಂದೆ ಕೊನೆಯ ಬದುಕಾಗಿದೆ. ಕೋಪ, ತಪ್ಪುನಿರ್ಧಾರ, ಅತಿರೇಕ, ಮೋಸ, ಸಿಟ್ಟು ಇವುಗಳು ಬದುಕಿನ ಭಾಗವಾದರೆ ಕಣ್ಣೀರು ಮಾತ್ರ ಹೊಟ್ಟೆ ತುಂಬಿಸುತ್ತದೆ ಅನ್ನೋದನ್ನ ತಿಳಿಸಿದವರಾದರು. ಮಾರ್ಗದರ್ಶಕರಾಗ ಬೇಕಾದವರೇ ದಾರಿ ತಪ್ಪಿದರು.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ