ಬೆಟ್ಟದ ಕೆಳಗೆ ದೊಡ್ಡ ಫಲಕವೊಂದನ್ನು ನೇತು ಹಾಕಿದ್ದಾರೆ ಈ ಬೆಟ್ಟದ ತುದಿ ಸಮುದ್ರಮಟ್ಟಕ್ಕಿಂತ ಹಲವು ಸಾವಿರ ಅಡಿಗಳಷ್ಟು ಎತ್ತರದಲ್ಲಿದೆ ಎಂದು. ಬಿದ್ದ ಮಳೆಯ ನೀರೆಲ್ಲವೂ ಬೆಟ್ಟದ ಬುಡಕ್ಕಿಳಿದ್ದು ಅಲ್ಲಿಂದ ಸಮುದ್ರವನ್ನು ತಲುಪುತ್ತದೆ. ಆದರೆ ಬೆಟ್ಟದ ಮೇಲೊಂದು ವಿಶಾಲವಾದ ದೊಡ್ಡ ಮರವಿದೆ ಆ ಮರ ಒಂದಲ್ಲ ಅಂತಹ ಹಲವಾರು ಸಣ್ಣ ಪುಟ್ಟ ದೊಡ್ಡಮರಗಳು ಆ ಬೆಟ್ಟದ ಸುತ್ತಲೂ ಇದೆ. ಕೆಲವು ಹೆಚ್ಚು ಹಣ್ಣುಗಳನ್ನು ನೀಡಿದ್ರೆ ಕೆಲವೊಂದಿಷ್ಟು ಕಡಿಮೆ ಹಣ್ಣುಗಳನ್ನು ನೀಡುತ್ತಿವೆ. ಅದಕ್ಕೆ ಯಾರು ನೀರನ್ನು ಹಾಕುವುದಿಲ್ಲ ಪ್ರತಿಯೊಂದು ಮರದ ಬೇರುಗಳು ಒಳಕ್ಕೆ ಇಳಿದು ತಮಗೆ ಬೇಕಾದ ನೀರು ಆಹಾರವನ್ನು ಪಡೆದುಕೊಂಡು ಕೆಲಸ ನಿರ್ವಹಿಸುತ್ತಿವೆ. ಬೆಟ್ಟದ ಮೇಲೆ ಹೆಚ್ಚು ಜನ ಬರುವುದಕ್ಕೆ ಅ ಮರಗಳು ಕಾರಣವಾಗಿದೆ ಬಂದವರೆಲ್ಲರೂ ಮರವನ್ನ ಹೊಗಳಿ ಸಂಭ್ರಮಿಸುತ್ತಾರೆ. ಅದರ ಜೊತೆಗೆ ಭಾವಚಿತ್ರವನ್ನು ತೆಗೆದು ಹಂಚಿಕೊಳ್ಳುತ್ತಾರೆ. ಆದರೆ ಅವರು ಯಾರಿಗೂ ಆ ಮರದ ಬೇರುಗಳ ಕಷ್ಟ ಪರಿಶ್ರಮ ಇದ್ಯಾವುದೂ ಕಾಣದೆ ಮರೆಯಾಗಿಬಿಟ್ಟಿದೆ. ಮರದ ಬೇರುಕೊಳ್ಳುವ ಅದ್ಯಾವುದನ್ನು ಯೋಚಿಸದೆ ಮೌನವಾಗಿವೆ. ಅವುಗಳ ಕೆಲಸ ಮರವನ್ನು ಗಟ್ಟಿ ನಿಲ್ಲಿಸುವುದಷ್ಟೇ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ