ಊರಿನ ಬತ್ತದ ಗದ್ದೆಗಳು ಈಗ ದಿನವೂ ಅಳುತ್ತಿವೆ. ಪ್ರತೀದಿನ ತಮ್ಮ ಮೇಲೆ ಯಾರೂ ನಡೆದಾಡಿಕೊಂಡು ಕೃಷಿಯನ್ನ ಮಾಡುತ್ತಿದ್ದಾರೆ ಅನ್ನುವ ಕಾರಣಕಲ್ಲ, ಒಂದಷ್ಟು ಸಮಯದ ಹಿಂದೆ ನಮ್ಮ ಮೇಲೆ ಪೈರು ನೆಟ್ಟು ಬತ್ತದ ಕಟಾವು ಮಾಡಿಕೊಂಡು ಸಂಭ್ರಮ ಪಡುತ್ತಿದ್ದ ಮನಸ್ಸುಗಳು ಈ ಕೆಸರಲ್ಲಿ ಓಡಾಡುತ್ತಿದ್ದ ಕೈಕಾಲುಗಳು ಹಾಡುತ್ತಿದ್ದ ಪಾಡ್ತನಗಳು ಮಕ್ಕಳ ತುಂಟಾಟಗಳು ಕೆಸರೆರೆಚಾಟಗಳೆಲ್ಲವೂ ಈಗ ಮಾಯವಾಗಿಬಿಟ್ಟಿದೆ. ನಮ್ಮ ಉಸಿರು ಕಟ್ಟುವಂತೆ ಮೇಲೊಂದಿಷ್ಟು ಕೆಂಪುಮಣ್ಣನ್ನು ಸುರುವಿ ಅದರ ಮೇಲೆ ಮನೆಯನ್ನೋ ಕಟ್ಟಡವನ್ನೋ ಕಟ್ಟಿಕೊಂಡು ಬದುಕು ಕಟ್ಟಿಕೊಳ್ಳುವುದಕ್ಕೆ ಶುರು ಮಾಡಿದ್ದಾರೆ. ನಾವು ಇದಕ್ಕೆ ಒಗ್ಗಿಕೊಂಡವರಲ್ಲ ನಾವು ಹೀಗಿರಬೇಕು ಅಂತ ಅಂದುಕೊಂಡವರೂ ಅಲ್ಲ. ಆದರೆ ವಿಧಿಯಾಟವೋ ಅಥವಾ ಮಾನವನ ಅಹಂಕಾರವೋ ಗೊತ್ತಿಲ್ಲ ನಮ್ಮ ಬದುಕಿನ ರೀತಿ ಬದಲಾಗಿಬಿಟ್ಟಿದೆ ಯಾರು ನಮ್ಮನ್ನ ಕಣ್ಣೆತ್ತಿ ನೋಡುವವರಿಲ್ಲದೆ ಅನಾಥರಾಗಿದ್ದೇವೆ. ಬದುಕು ಬದಲಾಗುವುದಕ್ಕೆ ಕಾಯುತ್ತಿದ್ದೇವೆ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!