ಕೆಲಸದಲ್ಲಿಂದ ಮನೆಗೆ ಹೋಗಬೇಕು ಅಂತಿದ್ರೆ ತಿರುವು ದಾಟಿದ ಮೇಲೊಂದು ಆಸ್ಪತ್ರೆ ಸಿಗುತ್ತೆ. ಪ್ರತಿಸಲನೂ ಹೋಗುವಾಗ ಆಸ್ಪತ್ರೆಯ ಚಂದದ ಬಣ್ಣಗಳು, ಕಿಟಕಿಗಳು ಓಡಾಡುತ್ತಿರುವ ಆಂಬುಲೆನ್ಸ್ ಗಳು ಜನರ ಓಡಾಟವನ್ನೆಲ್ಲ ಗಮನಿಸಿ ಅಲ್ಲಿಯ ಡಾಕ್ಟರ್ ಬದುಕು ಎಷ್ಟು ಚಂದ ಒಳಗಿಂದ ಹೊರಗೆ ಬರ್ತಾ ಇರುವವರ ಮುಖದಲ್ಲಿರುವ ನಗು ಎಲ್ಲವನ್ನು ನೋಡಿದಾಗ ಸಂಭ್ರಮದಿಂದ ನಗುತ ಅದೇ ದಾರಿಯಲ್ಲಿ ಮನೆ ತಲುಪ್ತಾ ಇದ್ದೆ. ಇತ್ತೀಚೆಗೆ ನನ್ನವರು ಅದೇ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿರುವಾಗ ಆಸ್ಪತ್ರೆಯ ಒಳಗಿನ ನೋವೇನೂ ಆಂಬುಲೆನ್ಸ್ ನ ಸದ್ದಿನ ಭೀಕರತೆಯನ್ನು ಆ ಕ್ಷಣದಲ್ಲಿ ಅರ್ಥವಾಗಿಬಿಡ್ತು ಆಸ್ಪತ್ರೆ ಅನ್ನೋದು ನಗುವಿನ ನಿಲ್ದಾಣವಲ್ಲ ಅಲ್ಲಿ ಪ್ರತಿಕ್ಷಣವೂ ಉಸಿರನ್ನು ಕೈಯಲ್ಲಿ ಹಿಡಿದು ಎಲ್ಲ ದೇವರು ಕಣ್ಣು ಮುಂದೆ ಹಾದು ಹೋಗಿ ಏನಾದರೂ ಹೇಗಾದರೂ ಒಳಗಿರುವವರು ಬದುಕಬೇಕು ಅನ್ನುವ ಆಸೆ ಹೆಚ್ಚಾಗುತ್ತದೆ. ದ್ವೇಷ ಅಸೂಯೆ ಮಾತ್ಸರ್ಯ ಎಲ್ಲವೂ ಮರೆಯಾಗಿ ಮನುಷ್ಯತ್ವ ಎದ್ದು ನಿಲ್ಲುತ್ತದೆ ನಾನು ಹೊರಗಿನಿಂದ ನೋಡಿದ ಆಸ್ಪತ್ರೆ ಇದಲ್ಲ ಅಂತ ಅನ್ನಿಸಿತು. ಬದುಕು ಯಾವ ಕ್ಷಣದಲ್ಲಾದರೂ ಬದಲಾಗಿಬಿಡಬಹುದಲ್ಲ?

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ