ವೇದಿಕೆಯ ಮೇಲೇರಿದ್ದಷ್ಟೇ ಭಯ ಶುರುವಾಯಿತು. ಕಣ್ಣು ಕತ್ತಲಾಯಿತು ಏನು ಕಾಣುತ್ತಿಲ್ಲ ನಾನು ಈ ವೇದಿಕೆಗೇರುವುದಕ್ಕಿಂತ ಮೊದಲು ಕೆಲವು ದಿನಗಳು ಗಂಟೆಗಳು ವಾರಗಳು ಪರಿಶ್ರಮಪಟ್ಟಿದ್ದೆ. ನಾನು ಅದ್ಭುತವಾಗಿ ಮಾಡುತ್ತೇನೆ ಅಂತ ಸುತ್ತ ನಿಂತ ನನ್ನ ತರಗತಿಯವರೆಲ್ಲರೂ ಚಪ್ಪಾಳೆ ಹೊಡೆದಿದ್ರು ಇಷ್ಟೆಲ್ಲಾ ಇದ್ದವನಿಗೆ ಈ ಹೊಸ ವೇದಿಕೆಯ ಮೇಲೆ ಬಂದಾಗ ಈ ಭಯ ಶುರುವಾಯಿತು ನಾನು ಏನಲ್ಲ ಅಭಿನಯಿಸಬೇಕೋ ಎಲ್ಲವನ ಮರೆತು ವಾಪಸು ಓಡಿಬಂದಿದ್ದೆ ಮಾತು ಬರ್ತಾ ಇರಲಿಲ್ಲ ಗುರುಗಳು ಪಕ್ಕದಲ್ಲಿ ನಿಂತು ಏನಾಯ್ತು ಅಂತ ಕೇಳಿದರು ಏನು ಹೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ ನಾನು ವೇದಿಕೆಯ ಮೇಲೆ ಇರಬೇಕು ಬಹುಮಾನ ಪಡಿಬೇಕು ಹೀಗೆ ಏನೇನೋ ಆಸೆಗಳಿದೆ ಆದರೆ ಆ ಕ್ಷಣದಲ್ಲಿ ಕಣ್ಣು ಕತ್ತಲಾಗಿ ಉಸಿರು ಕಟ್ಟಿದಂತಾಗಿ ಏನೂ ತೋಚದ ಪರಿಸ್ಥಿತಿ ನಿರ್ಮಾಣವಾಗಿರುವುದು ಏನಕ್ಕೆ? ಯಾವ ಕಾರಣಕ್ಕೆ ಅನ್ನೋದು ಇನ್ನೂ ಅರ್ಥವಾಗಿಲ್ಲ. ಆ ಪುಟ್ಟ ಹುಡುಗನ ಮನಸ್ಸಿನೊಳಗೆ ಓಡುತ್ತಿರುವ ಎಲ್ಲಾ ಆಲೋಚನೆಗಳಿಗೆ ಉತ್ತರ ಹುಡುಕುವ ಜವಾಬ್ದಾರಿ ಶಿಕ್ಷಕನಾದ ನನ್ನದಾಗಿತ್ತು.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!