ಸೋಶಿಯಲ್ ಮೀಡಿಯಾದಲ್ಲಿ ಹಾಕಬೇಕು ಅಂತ ರಾಶಿ ಫೋಟೋಗಳ ನಡುವೆ ಚಂದದ ಫೋಟೋವನ್ನು ಹುಡುಕುವುದಕ್ಕೆ ಶುರು ಮಾಡಿದೆ. ಪ್ರತಿಯೊಂದುರಲ್ಲೂ ಒಂದೊಂದು ತಪ್ಪುಗಳನ್ನು ಹುಡುಕಿ ಕೊನೆಗೊಂದು ಫೋಟೋ ಮನಸ್ಸಿಗೆ ತುಂಬಾ ಒಪ್ಪಿಗೆಯಾಗಿ ಎಲ್ಲರಿಗೂ ಇಷ್ಟವಾಗುವ ಹಾಗೆ ನಾನು ತುಂಬಾ ಚೆಂದ ಕಾಣುವ ಹಾಗೆ ಕಂಡು ಬಂತು. ಅದನ್ನ ಎಲ್ಲರೂ ನೋಡಲಿ ಮೆಚ್ಚಿ ನನಗೆಲ್ಲರೂ ಅಭಿನಂದನೆ ಸಲ್ಲಿಸಬೇಕು ಅಂತ ದಾಖಲು ಮಾಡಿಯೋ ಬಿಟ್ಟೆ. ಇಷ್ಟೆಲ್ಲ ಕೆಲಸವನ್ನ ಮಾಡ್ತಾ ಇದ್ದದ್ದನ್ನು ನೋಡಿದ ಅಪ್ಪ ಹೆಗಲ ಮೇಲೆ ಕೈ ಇಟ್ಟು ಹೇಳಿದರು ಖಾಲಿ ಒಂದು ಭಾವಚಿತ್ರವನ್ನು ಹುಡುಕುವುದಕ್ಕೆ ಇಷ್ಟೆಲ್ಲ ಸಮಯ ಕೊಟ್ಟು ಚಂದದ ಫೋಟೋವನ್ನೇ ಹುಡುಕಿ ತೆಗೆಯುವುದಕ್ಕೆ ಶ್ರಮವಹಿಸಿದ ನೀನು ನಿನ್ನ ಬದುಕನ್ನ ಸುಂದರವಾಗಿಸುವುದಕ್ಕೆ ನಿನ್ನ ಕೆಲಸದಲ್ಲಿ ಇನ್ನೊಂದಷ್ಟು ಹೆಚ್ಚು ಸಂಪಾದನೆಗೆ ನಿನ್ನ ಸಾಮರ್ಥ್ಯವನ್ನು ಇನ್ನೊಂದು ಹಂತಕ್ಕೇರಿಸುವುದಕ್ಕೆ ಏನು ಕೆಲಸ ಮಾಡಿಕೊಂಡಿದ್ದೀಯಾ? ಏನು ಕೆಲಸ ಮಾಡ್ತಾ ಇದ್ದೀಯಾ? ಹೆಗಲ ಮೇಲೆ ಕೈ ಇಳಿಸಿದಾಗ ಅವರ ಪ್ರಶ್ನೆಗೆ ನನ್ನಲ್ಲಿ ಉತ್ತರವಿರಲಿಲ್ಲ ಬರಿಯ ಮೌನವನ್ನೇ ಜೀವಿಸಬೇಕಾಯಿತು.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!