ಕ್ಯಾರೆಟ್, ಈರುಳ್ಳಿ ಶುಂಠಿಯನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ. ಕುಕ್ಕರಿನಲ್ಲಿ ಆಲಿವ್ ಎಣ್ಣೆಯನ್ನು ಹಾಕಿ ಬಿಸಿ ಮಾಡಿಕೊಳ್ಳಿ. ಅದರಲ್ಲಿ ಶುಂಠಿ ಮತ್ತು ಈರುಳ್ಳಿಯನ್ನು ಹಾಕಿ ಹುರಿಯಿರಿ. ಬಳಿಕ ಹೆಚ್ಚಿದ ಕ್ಯಾರೆಟ್ ಅನ್ನು ಹಾಕಿ ಮಿಶ್ರಣ ಮಾಡಿ. ಈ ಮಿಶ್ರಣಕ್ಕೆ ನೀರು ಮತ್ತು ಉಪ್ಪನ್ನು ಸೇರಿಸಿ ಕುಕ್ಕರಿನ ಮುಚ್ಚಳ ಮುಚ್ಚಿ. ನಾಲ್ಕು ವಿಷಲ್ ಬಂದ ನಂತರ ಒಲೆ ಆರಿಸಿ. ನಂತರ ನೀರು ಮತ್ತು ಹೋಳುಗಳನ್ನು ಬೇರೆ ಮಾಡಿ ಸೋಸಿಕೊಳ್ಳಿ.
ಹೋಳುಗಳನ್ನು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ. ಬಾಣಲೆಯಲ್ಲಿ ರುಬ್ಬಿದ ಮಿಶ್ರಣವನ್ನು ಮತ್ತು ಸೋಸಿಕೊಂಡ ನೀರನ್ನು ಸೇರಿಸಿ ಮಧ್ಯಮ ಉರಿಯಲ್ಲಿ ಚೆನ್ನಾಗಿ ಕುದಿಸಿ. ನಂತರ ಮಿಕ್ಸ್ಡ್ ಹರ್ಬ್ಸ್ ಮತ್ತು ಕಾಳುಮೆಣಸಿನ ಪುಡಿಯನ್ನು ಹಾಕಿ ಕುದಿಸಿ. ಕೊನೆಯಲ್ಲಿ ಪುದಿನಾ ಸೊಪ್ಪು ಹಾಕಿ ಅಲಂಕರಿಸಿ.
-ವೇದಾವತಿ ಎಚ್ ಎಸ್
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!