ಮೊಸರು, ಸಕ್ಕರೆ, ಜೇನುತುಪ್ಪ ಮತ್ತು ಮ್ಯಾಂಗೊ ಪ್ಯೂರಿ ಸೇರಿಸಿ ಮಿಶ್ರಣ ಮಾಡಿ ಮಾವಿನಹಣ್ಣಿನ ಹೋಳುಗಳನ್ನು ಸೇರಿಸಿ ಹಗುರವಾಗಿ ಕಲಸಿ. ಇದನ್ನು ಬಟರ್ ಪೇಪರ್ ಮೇಲೆ ಚಮಚದಿಂದ ಗುಂಡಗೆ ಒಂದೊಂದು ಚಮಚ ಹಾಕಿ ಒಂದು ಗಂಟೆ ಫ್ರಿಜ್‌ನಲ್ಲಿ ಇಡಿ. ಡಾರ್ಕ್ ಚಾಕೊಲೇಟ್ ಅನ್ನು ಬಿಸಿ ನೀರಿನಲ್ಲಿ ಇಟ್ಟು ಕರಗಿಸಿ ಫ್ರಿಜ್‌ನಲ್ಲಿ ಇಟ್ಟಿದ್ದ ಮ್ಯಾಂಗೊ ಬೈಟ್ ಅನ್ನು ತೆಗೆದು ಚಾಕೊಲೇಟ್‌ನಲ್ಲಿ ಅದ್ದಿ ತೆಗೆದು ಮೇಲೆ ಬಾದಾಮಿ, ಗೋಡಂಬಿ ತುಂಡುಗಳನ್ನು ಉದುರಿಸಿ ನಂತರ ಬಿಳಿ ಚಾಕೊಲೇಟ್ ಅನ್ನು ಕರಗಿಸಿ ಕೋನ್‌ನಲ್ಲಿ ಹಾಕಿ ಮೇಲೆ ಅಲಂಕರಿಸಿ.

-ವೀಣಾ ಶಂಕರ್