ಒಂದು ಪಾತ್ರೆಗೆ ಗೋಧಿ ಹಿಟ್ಟು, ಮೈದಾ ಹಿಟ್ಟು, ರವೆ, ತುಪ್ಪ, ಉಪ್ಪು, ಮಸಾಲೆ ಪುಡಿ, ಕಸೂರಿ ಮೇಥಿ ಹಾಕಿ ಚೆನ್ನಾಗಿ ಬೆರೆಸಿ ನೀರು ಹಾಕಿ ಕಲಸಿ ಚಪಾತಿ ಲಟ್ಟಿಸಿ. ಇದಕ್ಕೆ ಫೋರ್ಕ್‌ನಿಂದ ಹಗುರವಾಗಿ ಹಾಳೆಯ ಮೇಲೆ ಚುಚ್ಚಿ ಚಾಕುವಿನಿಂದ ತ್ರಿಕೋನಾಕಾರದಲ್ಲಿ ಸುಮಾರು ಹತ್ತು ತುಂಡುಗಳನ್ನು ಕತ್ತರಿಸಿ.

ಅಗಲವಾಗಿರುವ ಭಾಗದಿಂದ ಸುರುಳಿ ಸುತ್ತಿಕೊಳ್ಳುತ್ತಾ ಹೋಗಿ ಮಧ್ಯಭಾಗದಲ್ಲಿ ಸುರುಳಿಯನ್ನು ತೆಗೆದು ನೀರು ಸವರಿ ತುದಿಯನ್ನು ಅಂಟಿಸಿ. ಹೀಗೆ ಎಲ್ಲಾ ಸುರುಳಿಯನ್ನು ಮಾಡಿಕೊಂಡು ಕಾದ ಎಣ್ಣೆಯಲ್ಲಿ ಸಣ್ಣ ಉರಿಯಲ್ಲಿ ಗರಿಗರಿಯಾಗುವಂತೆ ಕರಿದು ಮೇಲೆ ಖಾರದ ಪುಡಿ ಉದುರಿಸಿ.

-ವೀಣಾ ಶಂಕರ್