ಒಂದು ಗಾಜಿನ ಅಗಲವಾದ ಬೌಲ್‌ ಗೆ ಮಾರಿ ಬಿಸ್ಕತ್ ಅನ್ನು ಸಣ್ಣಗೆ ಪುಡಿ ಮಾಡಿ ಹಾಕಿ. ಇದಕ್ಕೆ ಬೆಣ್ಣೆ ಸೇರಿಸಿ ಕಲಸಿ ಬೌಲ್‌ಗೆ ಹಾಕಿ ಸಮನಾಗಿ ಹರಡಿ ನಂತರ ಪಾತ್ರೆಗೆ ಕ್ರೀಂ ಚೀಸ್, ಮೊಸರು, ಸಕ್ಕರೆ ಪುಡಿ ಸೇರಿಸಿ ಚೆನ್ನಾಗಿ ಬೆರೆಸಿ. ಬಿಸ್ಕತ್ ಪುಡಿಯ ಮೇಲೆ ಹರಡಿ ಐದು ನಿಮಿಷ ಫ್ರಿಜ್‌ನಲ್ಲಿ ಇಟ್ಟು ತೆಗೆದು ನಂತರ ಮ್ಯಾಂಗೊ ಪ್ಯೂರಿ ಸಕ್ಕರೆ ಪುಡಿ ಸೇರಿಸಿ ಚೆನ್ನಾಗಿ ಬೆರೆಸಿ ಚೀಸ್ ಮೇಲೆ ಹರಡಿ ಐದು ನಿಮಿಷ ಫ್ರಿಜ್‌ನಲ್ಲಿ ಇಟ್ಟು ತೆಗೆದು ಅದರ ಮೇಲೆ ಮಾವಿನಹಣ್ಣಿನ ಹೋಳುಗಳನ್ನು ಹರಡಿ ಸರ್ವ್ ಮಾಡಿ.

-ವೀಣಾ ಶಂಕರ್