ಆ ದೊಡ್ಡ ಹುದ್ದೆಗೆ ಬೇರೆ ಯಾರನ್ನಾದರೂ ತರಬೇಕು ಸರ್. ಹಾಗೆ ತರೋದು ಸಾಧ್ಯ ಆಗೋದಿಲ್ಲ ಮಾರಾಯಾ? ಯಾಕೆಂದರೆ ಈಗ ಅಲ್ಲಿ ಕೆಲಸ ಮಾಡ್ತಾ ಇರೋರು ತುಂಬಾ ಅದ್ಭುತವಾದ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರತಿಯೊಂದು ಶಾಲೆಗೆ ಬಳಿಗೆ ತೆರಳಿ ಕುಂದು ಕೊರತೆಗಳನ್ನ ವಿಚಾರಿಸಿ ಶಿಕ್ಷಣಕ್ಕೆ ಏನು ಬೇಕೋ ಎಲ್ಲವನ್ನು ಮಾಡ್ತಾ ಇದ್ದಾರೆ.ಹಾಗಾಗಿ ಅವರನ್ನು ಹುದ್ದೆಯಿಂದ ತೆಗೆಯುವುದಕ್ಕೆ ಸಾಧ್ಯವಾಗುವುದಿಲ್ಲ. ಇಲ್ಲ ಅವರು ಉತ್ತಮವಾದ ಕೆಲಸವನ್ನು ಮಾಡಿದ್ದಾರೆ ಆದರೆ ಅದು ಫಲಿತಾಂಶ ಬಂದಾಗ ಕೆಲಸ ನಾವು ಮಾಡಿದ್ದು ಅಂತ ಆಗಬೇಕು. ನಮ್ಮವರು ಒಬ್ಬರು ಆ ಪದವಿಯಲ್ಲಿ ಕುಳಿತುಕೊಳ್ಳಬೇಕು. ಹಾಗಾಗಿ ಅವರನ್ನು ಅಲ್ಲಿಂದ ದಾಟಿಸಬೇಕು.ದಾಖಲೆಯಲ್ಲಿ ಸಿಕ್ಕಿಬಿಟ್ಟರೆ ಸಾಕು ಅಲ್ಲಿಂದ ನಿಧಾನವಾಗಿ ಸ್ಥಾನಪಲ್ಲಟ ಮಾಡಿಬಿಡಬಹುದು . ಎಷ್ಟೇ ಕಷ್ಟಪಟ್ಟು ದುಡಿಯುವರಾದರೂ ಒಂದಷ್ಟು ಕೆಲಸ ಸರಿಯಾದ ಸಮಯಕ್ಕೆ ಮುಗಿಯದೆ ಕೆಲವು ದಿನಗಳನ್ನು ತೆಗೆದುಕೊಂಡಿರಬಹುದು ಅಥವಾ ನಾವು ಸ್ವೀಕಾರದಲ್ಲಿ ತಡವಾದರೂ ಅವರು ಕೊಟ್ಟದ್ದೇ ತಡ ಅಂತ ನಾವು ವಾದಿಸಿ ಗೆಲ್ಲಬಹುದು ಈ ದಾರಿಯನ್ನ ಹಿಡಿದು ಅವರನ್ನು ಅಲ್ಲಿಂದ ಎತ್ತಂಗಡಿ ಮಾಡಲೇಬೇಕು ನಿಮ್ಮ ಕೈ ಕೆಳಗೆ ಕೆಲಸ ಮಾಡ್ತಾ ಇದ್ದೇನೆ ಅನ್ನುವ ಕಾರಣಕ್ಕೆ ಮಾತ್ರ ಇಂತಹ ಸಹ್ಯವಲ್ಲದ ಕೆಲಸಕ್ಕೆ ಕೈ ಹಾಕುತ್ತಿದ್ದೇನೆ. ಭಗವಂತನ ರಶೀದಿ ಪುಸ್ತಕದ ತಪ್ಪಿನ ಮುಖಪುಟದಲ್ಲಿ ನನ್ನ ಹೆಸರೇ ಉಲ್ಲೇಖಿಸಲ್ಪಟುತ್ತದೆ

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ