ದೊಡ್ಡವರು ಮಾತನಾಡುತ್ತಾರೆ. ಪತ್ರಿಕೆಗಳಲ್ಲಿ ಸುದ್ದಿಯಾಗುವುದಕ್ಕೆ, ಮುಖ ಪುಟದಲ್ಲಿ ದೊಡ್ಡ ಅಕ್ಷರದಲ್ಲಿ ಬರೆದಿಡುವುದಕ್ಕೆ, ಒಂದಿಷ್ಟು ಕಡೆ ಇವರ ಈ ಮಾತುಗಳು ದಾಖಲಾಗಿ ಎಲ್ಲರೂ ಹಂಚಿಕೊಂಡು ಮುಂದಿನ ಚುನಾವಣೆಯಲ್ಲಿ ಅವರನ್ನು ಗೆಲ್ಲಿಸುವುದಕ್ಕೆ ಇಷ್ಟೆಲ್ಲ ಕಾರಣಕ್ಕೆ ದೊಡ್ಡವರು ಮಾತನಾಡುತ್ತಾರೆ. ಸುದ್ದಿಗಳೆಲ್ಲ ಬಿತ್ತರಗೊಂಡು ಜಗತ್ತು ಅವರನ್ನು ಒಪ್ಪಿಕೊಂಡಿತು. ಸುದ್ದಿಯಲ್ಲಿ ಹೇಳಿದ ಕೆಲಸ ಆಗದೇ ಇರೋದು ವಿಪರ್ಯಾಸ. ನದಿ ಇಲ್ಲದ ಊರಿಗೆ ಸೇತುವೆ ಕಟ್ಟುವುದಕ್ಕೆ ಉಪಾಯ ಹುಡುಕುತ್ತಾರೆ. ಗುಂಡಿ ರಸ್ತೆಗಳ ಮೇಲೆ ಅಲ್ಲಲ್ಲಿ ತೇಪೆ ಹಾಕಿ ಇಡೀ ರಸ್ತೆಯ ಬಿಲ್ಲು ನುಂಗುತ್ತಾರೆ, ಆಸ್ಪತ್ರೆ ಬೇಕು ಎಂದು ಒದ್ದಾಡುವವರಿಗೆ ಬದುಕುವುದು ಹೇಗೆ ಅನ್ನುವ ತರಗತಿ ಉಚಿತವಾಗಿ ನೀಡುತ್ತಾರೆ, ಬದುಕಿಗೊಂದು ಉದ್ಯೋಗ ನೀಡಿ ಅಂತ ಬೇಡಿದವರಿಗೆ ಅಕೌಂಟಿಗೆ ದುಡ್ಡು ಬೀಳುತ್ತೆ ಅನ್ನುವ ಭ್ರಮೆ ಸೃಷ್ಟಿಸುತ್ತಾರೆ .ಹೀಗೆ ದೊಡ್ಡ ಸಾಧನೆ ಮಾಡಿದವರಿಗೆ ಕೊಡುತ್ತೇವೆ ಅಂದದ್ದೆಲ್ಲವೂ ಪತ್ರದಲ್ಲಿದೆ ಹೊರತು ಅವರ ಬದುಕು ಬದಲಾಗಲೇ ಇಲ್ಲ. ಒಟ್ಟಿನಲ್ಲಿ ಸುದ್ದಿಯಲ್ಲಿರುವುದಕ್ಕೆ ಸದ್ದು ಮಾಡುವವರೆಲ್ಲ ಬದುಕನ್ನೊಂದಷ್ಟು ತಿರುಗಿ ನೋಡಬೇಕು. ತಾವು ಹಿಡಿದೆತ್ತಿ ನಿಲ್ಲಿಸಿದ ಜನರೇಷ್ಟು ಅನ್ನೋದನ್ನ ಅರಿತುಕೊಳ್ಳಬೇಕು.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!