ನದಿಗೋಸ್ಕರ ಊರಿನಲ್ಲಿ ಹೊಡೆದಾಟ ಶುರುವಾಗಿದೆ. ಇದು ನಿನ್ನ ಮೊನ್ನೆಯದಲ್ಲ. ನದಿ ತನ್ನಿಂದ ತಾನಗಿಯೇ ಹಲವು ಸಮಯದಿಂದ ಹರಿಯುತ್ತಿದೆ. ಆದರೆ ಆ ನದಿಯ ನೀರನ್ನು ಪಡೆದುಕೊಳ್ಳುವುದಕ್ಕೆ ಎರಡು ಊರಿನ ಜನ ರಕ್ತ ಹರಿಸುವುದಕ್ಕೂ ಸಿದ್ಧರಾಗಿದ್ದಾರೆ. ಹಲವುಮನೆಗಳಲ್ಲಿ ನಂದಾದೀಪ ಆರಿ ಹೋಗಿದೆ. ಬದುಕು ಕಟ್ಟಿಕೊಳ್ಳುವುದಕ್ಕಾಗದೇ ಉಸಿರು ನಿಲ್ಲಿಸಿದ್ದಾರೆ. ಸಣ್ಣ ಸಣ್ಣ ವಿಷಯಕ್ಕೂ ಕತ್ತಿ ಮಸಿಯುತ್ತಿರುವ ಆ ಊರಿನಲ್ಲಿ ಒಬ್ಬರನ್ನ ಕಂಡರೆ ಒಬ್ಬರಿಗಾಗೊದಿಲ್ಲ ಒಟ್ಟಿನಲ್ಲಿ ನೀರು ತಮ್ಮದಾಗೋಕು ಅನ್ನುವುದಕ್ಕೆ ಹೋರಾಟ ಜಾರಿಯಲ್ಲಿದೆ ಹಂಚಿಕೊಳ್ಳುವ ಮನಸ್ಥಿತಿ ಇಲ್ಲ ನಿನ್ನೆ ಸಂಜೆಯೇ ಊರುಗಳ ನಡುವೆ ಮೋಸದ ಆಟ ನಡೆದು ಹಲವು ಮನೆಗಳಲ್ಲಿ ವಿಷದ ಅನ್ನವನ್ನು ತಿಂದು ಹೆಣಗಳು ಬಿದ್ದಿವೆ. ಇನ್ನು ಕೂಡ ನೀರು ಬೇಕು ಅಂತಿದ್ದಾರೆ ಹಲವು ಮನೆಗಳಲ್ಲಿ ಹರಿಯುತ್ತಿರುವ ಕಣ್ಣೀರಿನ ಬಗ್ಗೆ ಯಾರಿಗೂ ಗಮನವೇ ಇಲ್ಲದೆ ಇರೋದು ವಿಪರ್ಯಾಸ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ