ತಲೆ ತುಂಬಾ ಆಲೋಚನೆಗಳು ಮುಂದೆ ಮುಂದೇನು ಮಾಡಬೇಕು ಅಂತ ಗೊತ್ತಾಗ್ತಾ ಇಲ್ಲ, ಬದುಕಲ್ಲಿ ಒಂದಷ್ಟು ಕಷ್ಟಗಳು ಸಂಶಯಗಳು ನೋವುಗಳು ಇವೆಲ್ಲವನ್ನು ಹೊತ್ತುಕೊಂಡು ಬದುಕು ಒಂದಷ್ಟು ಭಾರವಾಗುವುದಕ್ಕೆ ಶುರುವಾಗಿದೆ. ಇದಕ್ಕೆ ಪರಿಹಾರ ಹುಡುಕಿಕೊಳ್ಳಲೇಬೇಕು ಅನ್ನುವ ಅನಿವಾರ್ಯತೆಯಲ್ಲಿದ್ದೇನೆ. ಅವತ್ತು ನಮ್ಮ ಮನೆಯ ಕಂಪ್ಯೂಟರ್ನ ಕೀ ಬೋರ್ಡು ಬದುಕಿಗೆ ಒಂದು ದೊಡ್ಡ ಪಾಠವನ್ನು ಸುಮ್ಮನಿದ್ದೆ ಹೇಳಿ ಕೊಟ್ಟುಬಿಟ್ಟಿತ್ತು. ನೋಡು ನನ್ನೀ ಪರದೆಯಲ್ಲಿ ಶಿಪ್ಪು ಡಿಲೀಟ್ ಎಂಟರ್ ಗಳು ಉಳಿದಕ್ಕಿಂತ ದೊಡ್ಡದಾಗಿರುತ್ತದೆ ಕಾರಣ ಇಷ್ಟೇ ಎಲ್ಲಿ ಪ್ರವೇಶವಾಗಬೇಕು ಯಾವುದನ್ನ ದೂರ ಬಿಡಬೇಕು ಎಲ್ಲಿಂದ ಯಾವುದನ್ನು ಬದಲಾಯಿಸಿಕೊಳ್ಳಬೇಕು ಅನ್ನೋದು ನಾವು ಮಾಡಬೇಕಾಗಿರುವ ಮೊದಲು ಕೆಲಸ. ಈ ಮೂರು ಕೆಲಸಗಳು ಸರಿಯಾಗಿದ್ದಾಗ ಬದುಕೆಂಬ ಕಂಪ್ಯೂಟರ್ ಪರದೆಯಲದಲ್ಲಿ ವಿನೂತನ ವಿನ್ಯಾಸವನ್ನು ಸೃಷ್ಟಿಸಿಕೊಳ್ಳಬಹುದು. ಇಲ್ಲವಾದರೆ ಬರಿಯ ನೋವಿನಿಂದ ತುಂಬಿ ಕೊರಗಬೇಕಾಗಬಹುದು ಅರ್ಥ ಮಾಡ್ಕೊ, ನನಗಂತೂ ಪಾಠ ಸಿಕ್ಕು ಬದುಕಿಗೆ ನಿಮಗೆ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ