ನಿಮಗೆ ಕೆಲವು ವಿಷಯ ಗೊತ್ತಿಲ್ಲ ಅದನ್ನ ನಾನು ವಿವರಿಸುತ್ತೇನೆ ಆಗ ನಿಮಗೆ ಅರ್ಥ ಆಗುತ್ತೆ. ನಮ್ಮ ಮನೆಯ ಮುಂದೆ ಇರುವ ಒಂದು ತಿರುವಿನ ಪಕ್ಕದಲ್ಲಿರುವ ಕೆಸರ ಕಾಡಿನಲ್ಲಿ ಒಂದು ಟ್ರೈನಿಂಗ್ ಸೆಂಟರ್ ತೆರೆಯಲಾಗಿದೆ. ಅದು ನಾವು ಭಾಗವಹಿಸಿ ಅದರಿಂದ ಬುದ್ಧಿ ಪಡೆದುಕೊಳ್ಳುವಂತದ್ದಲ್ಲ ಆ ಟ್ರೈನಿಂಗ್ ಸೆಂಟರ್ ಅಲ್ಲಿ ಸೊಳ್ಳೆ ಜಿರಳೆ ಹಲ್ಲಿಗಳಿಗೆ ತರಬೇತಿ ನೀಡುತ್ತಿದ್ದಾರೆ. ಆ ತರಗತಿಯಲ್ಲಿ ಜನರು ಹೇಗೆಲ್ಲಾ ಅವರನ್ನ ಸಾಯಿಸುವುದಕ್ಕೆ ಪ್ರಯತ್ನಪಡುತ್ತಾರೆ ಅದರಿಂದ ಹೇಗೆ ತಪ್ಪಿಸಿಕೊಳ್ಳಬೇಕು ರಕ್ತ ಹೇಗೆ ಹೀರ ಬೇಕು? ಹೇಗೆ ಬದುಕು ಕಟ್ಟಿಕೊಳ್ಳಬೇಕು? ಹೇಗೆ ತಮಗೆ ಬೇಕಾದನ್ನು ಕದಿಬೇಕು? ಎಲ್ಲ ವಿಷಯಗಳನ್ನ ತುಂಬಾ ಜತನವಾಗಿ ಹೇಳಿಕೊಟ್ಟು ಉತ್ತಮ ಅಂಕಗಳಲ್ಲಿ ಉತ್ತೀರ್ಣರಾದವರನ್ನು ಮಾತ್ರ ಕೆಲಸಕ್ಕೆ ಜೋಡಿಸುತ್ತಾರೆ. ಜಿರಳೆಗಳು ತಮ್ಮ ಬದುಕನ್ನ ಮನೆ ಒಳಗೆ ಕಟ್ಟಿಕೊಂಡಿದ್ದಾವೆ, ಹಲ್ಲಿಗಳು ಕಣ್ಣಿಗೆ ಕಾಣಿಸದಿದ್ದರೂ ಮನೆ ಒಳಗೆ ಸುರಕ್ಷಿತವಾಗಿವೆ ಹೀಗೆ ಪ್ರತಿಯೊಂದು ಜೀವಿಗಳು ಅವರವರ ಬದುಕನ್ನು ಸಾವಿಲ್ಲದೆ ನೆಮ್ಮದಿಯಾಗಿ ಕಟ್ಟಿಕೊಳ್ಳುವಂತಹ ತರಬೇತಿ ಕೇಂದ್ರಗಳು ಸ್ಥಾಪಿತವಾಗಿರುವುದೇ ಇವೆಲ್ಲದಕ್ಕೂ ಕಾರಣ. ಅದರ ಹಿಂದೆ ಕೆಲಸ ಮಾಡುತ್ತಿರುವ ಆಲೋಚನೆ ಯಾವುದು ಮುಖ್ಯಸ್ಥರು ಯಾರು ಅನ್ನೋದು ಇನ್ನೂ ತಿಳಿದಿಲ್ಲ ನಮ್ಮ ಹುಡುಕಾಟ ಮುಂದುವರೆದಿದೆ ನಮ್ಮ ತನಿಖೆಗೆ ಸಹಕರಿಸಿ ಹೀಗೊಂದು ಪೊಲೀಸರ ವಿನಂತಿ ಪತ್ರ ಮನೆಯ ಬಾಗಿಲಿಗೆ ಅಂಟಿಸಿ ಹೋಗಿದ್ದರು ನಾನು ಆ ಕೆಲಸದಲ್ಲಿ ಮುಂದುವರೆದಿದ್ದೇನೆ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ