ನಿನಗೆ ಊರು ತಿರುಗುವ ಅಭ್ಯಾಸ ಇದೆಯಾ? ಹಾಗಾದರೆ ಒಮ್ಮೆ ಕೆಲವೊಂದಷ್ಟು ಊರುಗಳನ್ನ ನೋಡಿಕೊಂಡು ಬಾ, ಪತ್ರಿಕೆಗಳಲ್ಲಿ ಮೊಬೈಲ್ ಗಳಲ್ಲಿ ಕ್ರೀಡಾ ಸಾಧಕರ ರಾಷ್ಟ್ರ ರಾಜ್ಯ ಅಂತರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದದ್ದು ಸುದ್ದಿ ಆಗುತ್ತೆ ಅವರು ಗೆದ್ದಾಗ ಅಭಿನಂದಿಸುತ್ತಾರೆ, ಪತ್ರಿಕೆಗಳಲ್ಲಿ ಟಿವಿ ಮೊಬೈಲ್ ಗಳಲ್ಲಿ ಅವರ ಬಗ್ಗೆ ಸುದ್ದಿಗಳು ಹಂಚುತ್ತಾರೆ, ತಮ್ಮದೇ ಸಾಧನೆ ಎಂಬಂತೆ ಕೊಂಡಾಡುತ್ತಾರೆ. ಆದರೆ ಒಂದಷ್ಟು ವರ್ಷಗಳು ದಾಟಿದ ಮೇಲೆ ಅವರ ಬದುಕು ಹೇಗಿದೆ ಅನ್ನೋದನ್ನ ನೋಡಬೇಕಾದ ಜವಾಬ್ದಾರಿ ಕೂಡ ನಮ್ಮು ಎಲ್ಲೋ ಕಸ ಹೆಕ್ತಾ ಸಣ್ಣಪುಟ್ಟ ಕೆಲಸ ಮಾಡುತ್ತಾ ತಮ್ಮ ದಿನವನ್ನು ದೂಡುವುದಕ್ಕೆ ಕಷ್ಟಪಡುವ ಪರಿಸ್ಥಿತಿ ಹಲವರದ್ದು. ಎದ್ದಾಗ ಬೆನ್ನು ತಟ್ಟಿ ಹೆಗಲ ಮೇಲೆ ಹೊತ್ತು ಮೆರೆದಾಡಿದವರು ಅವರ ಬದುಕಿನ ಪ್ರತಿ ಕ್ಷಣದಲೂ ಜೊತೆ ಇರಬೇಕು. ಮೊದಲು ಆ ಕೆಲಸ ಮಾಡುವಂತವರಾಗೋಣ. ಹೀಗಂದವರು ನಿಧಾನವಾಗಿ ಎದ್ದು ತಮ್ಮ ಹಳೆಯ ಚೀಲವನ್ನು ಹೆಗಲಿಗೆ ಏರಿಸಿಕೊಂಡು ಹೊರಟಾಗ ರಾಷ್ಟ್ರಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಗೆದ್ದಿದ್ದ ತುಕ್ಕು ಹಿಡಿದ ಚಿನ್ನದ ಪದಕ ಅವರ ಜೋಬಿನಿಂದ ಕೆಳಗೆ ಬಿತ್ತು.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!