ಟ್ವಿಟರಿನಲ್ಲಿ ಕನ್ನಡ ಆಯ್ಕೆ ಸಧ್ಯಕ್ಕೆ ಲಭ್ಯವಿಲ್ಲ. ಆದರೆ ನಾನು ಕನ್ನಡ ಟ್ವಿಟರ್ ಎಂಬ ವೆಬ್ ತಂತ್ರಾಂಶ ತಯಾರಿಸಿದ್ದೇನೆ. ಇದರಲ್ಲಿ ಬಹುತೇಕ ಎಲ್ಲಾ ಆಯ್ಕೆಗಳು, ಸೂಚನೆಗಳು ಹಾಗೂ ಕೆಲವೊಂದು error messageಗಳೂ ಕೂಡಾ ಕನ್ನಡದಲ್ಲಿದೆ. ಇದರಿಂದ ಕನ್ನಡ ಬಲ್ಲವರಿಗೆ ಟ್ವಿಟರನ್ನು ಬಳಸಲು ಸುಲಭವಾಗುತ್ತದೆ ಎಂದು ನನ್ನ ನಂಬಿಕೆ. ಕನ್ನಡ ಟ್ವಿಟರನ್ನು http://prasannasp.net/twitter ತಾಣಕ್ಕೆ ಹೋಗುವ ಮೂಲಕ ಬಳಸಬಹುದು.
ಏನಿದು "ಕನ್ನಡ ಟ್ವಿಟರ್"? ಅಂತರ್ಜಾಲದಲ್ಲಿ ಸಾಕಷ್ಟು ಕನ್ನಡ ತಾಣಗಳಿದ್ದರೂ ಭಾರತದ ಬೇರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡದ ಬಳಕೆ ಕಡಿಮೆಯೇ. ಇನ್ನು ಸಾಮಾಜಿಕ ತಾಣಗಳೂ ಕೂಡ ಮೊದಲು ಹಿಂದಿ, ತಮಿಳು, ತೆಲುಗು ಮುಂತಾದ ಭಾಷೆಗಳಲ್ಲಿ ಬಿಡುಗಡೆಗೊಂಡು ನಂತರ ಯಾವುದೋ ಕಾಲದಲ್ಲಿ ಕನ್ನಡಕ್ಕೆ ಬರುತ್ತಿವೆ. ಟ್ವಿಟರ್ ಕೂಡಾ ಇದಕ್ಕೆ ಹೊರತಾಗಿಲ್ಲ. ಟ್ವಿಟರ್ ಈಗಾಗಲೇ ಹಿಂದಿಯಲ್ಲಿ ಲಭ್ಯವಿದೆ. ಆದರೆ ಅದು ಕನ್ನಡಕ್ಕೆ ಯಾವಾಗ ಬರುತ್ತದೆಂದು ಹೇಳಲು ಈಗಲೇ ಸಾಧ್ಯವಿಲ್ಲ. ಈ ಬಗ್ಗೆ ಯೋಚಿಸಿದಾಗ ನಾನೇ ಏಕೆ ಟ್ವಿಟರಿಗೆ ಕನ್ನಡದ ಹೊದಿಕೆ ಹೊದಿಸಬಾರದು ಎಂದೆನಿಸಿತು. ಆಗ ಹುಟ್ಟಿದ್ದೇ ಈ ಕನ್ನಡ ಟ್ವಿಟರ್ ತಂತ್ರಾಂಶ.
ಉಪಯೋಗಿಸುವುದು ಹೇಗೆ? ಮೊದಲು http://prasannasp.net/twitter/oauth ತಾಣಕ್ಕೆ ಹೋಗಿ. ನಿಮ್ಮ ಟ್ವಿಟರ್ ಯೂಸರ್ ನೇಮ್ ಮತ್ತು ಪಾಸ್ವರ್ಡ್ ಕೊಟ್ಟು, "Authorize app" ಬಟನ್ ಒತ್ತಿ. (ಗಮನಿಸಿ: ನೀವು ಈ ತಂತ್ರಾಂಶಕ್ಕೆ ನಿಮ್ಮ ಟ್ವಿಟರ್ ಅಕೌಂಟನ್ನು ಬಳಸಲು ಮಾತ್ರಾ ಅನುಮತಿ ಕೊಡುತ್ತಿದ್ದೀರ. ಈ ತಂತ್ರಾಂಶಕ್ಕೆ ನಿಮ್ಮ ಟ್ವಿಟರ್ ಪಾಸ್ವರ್ಡ್ ಗೊತ್ತಾಗುವುದಿಲ್ಲ. ಹಾಗಾಗಿ ಧೈರ್ಯವಾಗಿ ನಿಮ್ಮ ಪಾಸ್ವರ್ಡ್ ಕೊಡಬಹುದು!)
ಈಗ ನೀವು ಕನ್ನಡ-ಟ್ವಿಟರನ್ನು ನೇರವಾಗಿ ಬಳಸಬಹುದು. ಇದರ ಒಂದು ದೊಡ್ಡ advantage ಎಂದರೆ ನೀವು ಒಮ್ಮೆ ಕನ್ನಡ-ಟ್ವಿಟರಿಗೆ ಲಾಗಿನ್ ಆಗಿ, ನಂತರ settings (http://prasannasp.net/twitter/settings) ಪುಟದಲ್ಲಿ ಒಂದು ಪಾಸ್ವರ್ಡ್ ಕೊಟ್ಟು ನಿಮ್ಮ ಪ್ರೊಫೈಲನ್ನು ಸೇವ್ ಮಾಡಿದರೆ, ಮುಂದಿನ ಸಲದಿಂದ ನೀವು ನೇರವಾಗಿ ಆ ಪಾಸ್ವರ್ಡ್ ಮೂಲಕ ಕನ್ನಡ-ಟ್ವಿಟರಿಗೆ ಲಾಗಿನ್ ಆಗಬಹುದು. ಇದರಿಂದ ನೀವು ಕನ್ನಡ-ಟ್ವಿಟರನ್ನು twitter.com ಬ್ಲಾಕ್ ಆಗಿರುವ ಕಡೆಯೂ ಬಳಸಲು ಸಾಧ್ಯವಾಗುತ್ತದೆ.
ಕನ್ನಡ-ಟ್ವಿಟರಿಗೆ ನೇರವಾಗಿ ಲಾಗಿನ್ ಆಗಲು http://prasannasp.net/twitter/login ಪುಟಕ್ಕೆ ಹೋಗಿ, ನಿಮ್ಮ ಟ್ವಿಟರ್ ಯೂಸರ್ ನೇಮ್ ಹಾಗೂ ನೀವು ಕನ್ನಡ-ಟ್ವಿಟರಿಗೆ ಆರಿಸಿಕೊಂಡ ಪಾಸ್ವರ್ಡ್ ನ್ನು ಕೊಟ್ಟು ಸೈನ್ಇನ್ ಆಗಿ.
ವೈಶಿಷ್ಟ್ಯತೆಗಳು:
- ಕನ್ನಡ-ಟ್ವಿಟರ್ ಸಂಪೂರ್ಣವಾಗಿ ಯೂನಿಕೋಡ್ನಲ್ಲಿದೆ. ಹಾಗಾಗಿ ಇದನ್ನು ಯೂನಿಕೋಡ್ ಬೆಂಬಲಿತ ಎಲ್ಲಾ ಉಪಕರಣಗಳಲ್ಲಿ ಬಳಸಬಹುದು. (ಮೊಬೈಲ್ ಫೋನ್ಗಳಲ್ಲಿ ಸಹ ಬಳಸಬಹುದು).
- ಇದು OAuth ಮೂಲಕ ಕೆಲಸ ಮಾಡುವುದರಿಂದ ತುಂಬಾ ಸುರಕ್ಷಿತ. ನಿಮ್ಮ ಪಾಸ್ವರ್ಡ್ ಎಂದಿಗೂ ಬೇರೆಯವರಿಗೆ ತಿಳಿಯುವುದಿಲ್ಲ. ಹಾಗೂ ಯಾವಾಗ ಬೇಕಾದರೂ http://twitter.com/settings/applications ಪುಟಕ್ಕೆ ತೆರಳಿ ಈ ತಂತ್ರಾಂಶಕ್ಕೆ access revoke ಮಾಡಬಹುದು.
- ಟ್ವಿಟ್ಪಿಕ್ ಮೂಲಕ ನೇರವಾಗಿ ಚಿತ್ರಗಳನ್ನು ಸೇರಿಸಬಹುದು.
- ಇದು open source ತಂತ್ರಾಂಶವಾಗಿರುವುದರಿಂದ ನೀವೂ ಇದರ ಅಭಿವೃದ್ಧಿಯಲ್ಲಿ ಭಾಗವಹಿಸಬಹುದು. ವಿವರಗಳಿಗಾಗಿ ಈ ಪುಟವನ್ನು ನೋಡಿ.
ಇನ್ನೇನು ಮಾಡಬಹುದು:
- ಸಧ್ಯಕ್ಕೆ ಈ ತಂತ್ರಾಂಶ ನನ್ನ ವೆಬ್ಸೈಟ್ನಲ್ಲಿದೆ. ಯಾರಾದರೂ ಬೆಂಬಲಕ್ಕೆ ನಿಂತರೆ ಇದಕ್ಕೆ ಒಂದು ಡೊಮೈನ್ ಕೊಂಡು, ಬೇರೆ ತಾಣ ಮಾಡಬಹುದು.
- Google Transliteration ಬಳಸಿಕೊಂಡು ನೇರವಾಗಿ ಕನ್ನಡದಲ್ಲಿ ಟ್ವೀಟ್ ಮಾಡುವಂತೆ ಮಾಡಬಹುದು.
- Google Translation ಸೇವೆ ಬಳಸಿಕೊಂಡು ಬೇರೆ ಭಾಷೆಯಲ್ಲಿರುವ (ಉದಾ:English) ಟ್ವೀಟ್ಗಳನ್ನು ಕನ್ನಡಕ್ಕೆ ಭಾಷಾಂತರಿಸಿ ತೋರಿಸಬಹುದು.
ನಿಮ್ಮಿಂದೇನು ಸಹಾಯವಾಗಬಹುದು:
- ಇದನ್ನು ಬಳಸಿ ನೋಡಿ, ಚೆನ್ನಾಗಿದ್ದರೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಆಗ ನಾನು ಹಾಕಿದ ಶ್ರಮ ಸಾರ್ಧಕವಾಗುತ್ತದೆ.
- ಇದು open source ತಂತ್ರಾಂಶವಾದ್ದರಿಂದ ಯಾರು ಬೇಕಾದರೂ ಇದನ್ನು ಬಳಸಬಹುದು ಹಾಗೂ ಅಭಿವೃದ್ಧಿಪಡಿಸಬಹುದು. ವಿವರಗಳಿಗೆ ಈ ಪುಟ ನೋಡಿ. ನೀವು ಇದರಲ್ಲಿ ಆಸಕ್ತರಾಗಿದ್ದರೆ ನನಗೊಂದು ಸಂದೇಶ ಕಳಿಸಿ.
ಕನ್ನಡ-ಟ್ವಿಟರ್ ತಂತ್ರಾಂಶದ ಒಂದಿಷ್ಟು screen shotಗಳು: (ಚಿತ್ರಗಳನ್ನು ಹಿರಿದಾಗಿಸಲು ಅದರ ಮೇಲೆ ಕ್ಲಿಕ್ಕಿಸಿ)
___LINK_OPEN_ href="http://4.bp.blogspot.com/-Dz-5qdJMBpw/TocCmi8NuVI/AAAAAAAAAWc/_72A1Bopp3E/s1600/kn-twt-login.png"___
___LINK_OPEN_ imageanchor="1" href="http://1.bp.blogspot.com/-Ysf4I_qzI-s/ToqaAyL83NI/AAAAAAAAAWo/x3qXaJyuwII/s1600/kn-twtr-1.png"___
___LINK_OPEN_ href="http://1.bp.blogspot.com/-Ysf4I_qzI-s/ToqaAyL83NI/AAAAAAAAAWo/x3qXaJyuwII/s1600/kn-twtr-1.png"___
___LINK_OPEN_ imageanchor="1" href="http://3.bp.blogspot.com/-_eg6Guo2LAg/ToqaBwv3DqI/AAAAAAAAAWs/xm1nmTJ0ErI/s1600/kn-twtr-01.png"___



___LINK_OPEN_ imageanchor="1" href="http://3.bp.blogspot.com/-IGROu_SXLFE/ToqaEZ7MK2I/AAAAAAAAAW8/TOKtIk6B4Rs/s1600/kn-twtr-7.png"___


ಅಪ್ಡೇಟ್ಗಳಿಗಾಗಿ ನನ್ನನ್ನು ಟ್ವಿಟರಿನಲ್ಲಿ ಹಿಂಬಾಲಿಸಿ: @prasannasp
Code credits: Dabr
ಧನ್ಯವಾದಗಳೊಂದಿಗೆ, -ಪ್ರಸನ್ನ. ಎಸ್. ಪಿ

ಪ್ರತಿಕ್ರಿಯೆ (6)
ವ್ಯತ್ಯಾಸ.[/quote] ಹೌದು, ಮೊದಲು ಮೆನುವನ್ನು ಕನ್ನಡದಲ್ಲಿ ತಂದು, ನಂತರ ಬಿಡುವಾದಾಗ ಹಂತ ಹಂತವಾಗಿ ಎಲ್ಲವನ್ನೂ ಕನ್ನಡದಲ್ಲಿ ತರುವುದು ಉದ್ದೇಶವಾಗಿತ್ತು. ಮೆನು ಅಷ್ಟೇ ಅಲ್ಲ, ಎಲ್ಲಾ ಸೂಚನೆಗಳು ಹಾಗೂ error messageಗಳು ಕನ್ನಡದಲ್ಲಿದೆ. [quote]ಸದ್ಯಕ್ಕೆ ನಿಮ್ ಅಪ್ಲಿಕೇಶನ್ ನಲ್ಲಿ ಕನ್ನಡವನ್ನು ನೇರವಾಗಿ (direct transliteration ) ಟೈಪ್ ಮಾಡುವ ವ್ಯವಸ್ತೆ ಇಲ್ಲ. ಟ್ವಿಟ್ಟರ್ನಲ್ಲೂ ಇಲ್ಲ.[/quote] ಹೌದು, ಅದರ ಮೇಲೆ ಕೆಲಸ ಮಾಡುತ್ತಿದ್ದೇನೆ. ಸಮಯ ಸಾಕಾಗುತ್ತಿಲ್ಲ. ಸ್ವಲ್ಪ ತಡವಾಗಬಹುದು. [quote]ಮೊಬೈಲ್ನಲ್ಲೊಂದು ಕನ್ನಡ ಕಿಬೋತ್ಡ್ ಹಾಕೊಂಡ್ರೆ ನಿಮ್ ಟ್ವಿಟರ್ಗೂ ಮೂಲ ಟ್ವಿಟರ್ಗೂ ವ್ಯತ್ಯಾಸ ಇರಲ್ಲ.[/quote] ಮೂಲ ಮೊಬೈಲ್ ಟ್ವಿಟರಿನಲ್ಲಿಲ್ಲದ ಒಂದೆರಡು ಹೆಚ್ಚುವರಿ ಸೌಲಭ್ಯಗಳಿವೆ, ಉದಾಹರಣೆಗೆ ಚಿತ್ರವನ್ನು ನೇರವಾಗಿ ಅಪ್ಲೋಡ್ ಮಾಡುವ ಅವಕಾಶ. [quote]ನಿಮ್ಮ ಸೈಟ್ ಅನುಕೂಲ ಅಂದರೆ ಎಲ್ಲ ಕಡೆ ಅಕ್ಸೆಸ್ . ಸಾಮಾನ್ಯವಾಗಿ ಟ್ವೀಟ್ ಮಾಡೋವ್ರಲ್ಲಿ ಹೆಚ್ಚಿನವರು ಮೊಬೈಲ್ನಿಂದ ಮಾಡ್ತಾರಾದ್ರಿಂದ ಇದು ಅಂತ ದೊಡ್ಡ ಅಡ್ವಾಂಟೇಜ್ ಅಲ್ಲ.[/quote] ಕೆಲವು ಕಾಲೇಜ್, ಆಫೀಸ್ಗಳಲ್ಲಿ ಟ್ವಿಟರ್ ಬ್ಲಾಕ್ ಆಗಿರುತ್ತೆ. ಅಲ್ಲಿ ಉಪಯೋಗಿಸಬಹುದು. ಇನ್ನು ಅಡ್ವಾಂಟೇಜ್ಗೋಸ್ಕರವೇ ಬಳಸಬೇಕೆನ್ನುವುದಕ್ಕೆ ನಾನೇನೂ ಹೇಳಲಾರೆ. ಗೂಗಲ್ನಲ್ಲಿ ಕೂಡಾ ಕನ್ನಡ ಬಳಸುವುದರಿಂದ ದೊಡ್ಡ ಅಡ್ವಾಂಟೇಜ್ ಇಲ್ಲ. ಆದರೂ ನಾವು ಕನ್ನಡ ಮುಖಪುಟವನ್ನೇ ಬಳಸುತ್ತೇವೆ. ಕನ್ನಡ ಅನ್ನೋ ಅಭಿಮಾನ ಅಷ್ಟೇ! [quote]ಉಳಿದಂತೆ ನಿಮ್ಮ ಸೈಟ್ ನಲ್ಲಿ ಮೆನು ಕನ್ಡ ದಲ್ಲಿದೆ. ನಿಜಕ್ಕೂ ಇದರ ಬಗ್ಗೆ ಮೆಚ್ಚುಗೆ ಇದೆ. ಆದರೆ ದಯವಿಟ್ಟು ಗಮನಿಸಿ ಕನ್ನಡ ಅಂತ ನೀವು ತಿಳಿದು ಮೆನು ನಲ್ಲಿ ಬಳಸಿರುವ ಪದಗಳೆಲ್ಲಾ ಸಂಸ್ಕೃತ. ದಯವಿಟ್ಟು ಕನ್ನಡ ಪದಗಳಿಗೆ ಬದಲಾಯಿಸಿ.[/quote] ಯಾವ ಯಾವ ಪದಗಳು ಸಂಸ್ಕೃತದ್ದು, ಕನ್ನಡದ್ದು ಯಾವುದು ಅಂತ ನಿಜವಾಗಿಯೂ ನನಗೆ ಗೊತ್ತಾಗಲಿಲ್ಲ. ಆಡುಭಾಷೆಯಲ್ಲಿದ್ದ, ಹೆಚ್ಚಿನ ಪರಿಚಯವಿದ್ದ ಪದಗಳನ್ನೇ ಬಳಸಿದ್ದೇನೆ. ಕೆಲವು ಪದಗಳನ್ನು ನಿಘಂಟಿನಿಂದ ಪಡೆದಿದ್ದೇನೆ.ನಾನು ಒಂದು ಭಾಷೆಯಾಗಿ ಕನ್ನಡಕ್ಕಿಂತ ಸಂಸ್ಕೃತವನ್ನೇ ಹೆಚ್ಚಾಗಿ ಕಲಿತಿರುವುದರಿಂದ ಕನ್ನಡ-ಟ್ವಿಟರಿನಲ್ಲಿ ಸಂಸ್ಕೃತದ ಹಾವಳಿ ಹೆಚ್ಚಾಗಿರಬಹುದು! [quote]ಕನ್ನಡ ಪದಗಳ ಬಗ್ಗೆ ಸಂದೇಹ. ಬನ್ದ್ರೆ ಇಲ್ಲಿ ಸಂಪದದಲ್ಲಿ ಹಾಕಿ... ಎಲ್ರೂ ಸೇರಿ ಒಳ್ಳೆ ಪದಗಳ ಹುಡ್ಕೋಣ.[/quote] ಕನ್ನಡ ಪದಗಳ ಬಗ್ಗೆ ಸಂದೇಹ ಬರದಷ್ಟು ಆಳವಾಗಿ ಸಂಸ್ಕೃತದ ಪ್ರಭಾವ ಈ ಭಾಷೆಯ ಮೇಲಿದೆ. ಇದು ಕನ್ನಡದ್ದೇ ಪದ ಹೌದಾ ಎನ್ನುವಷ್ಟು ತರ್ಕ ಮಾಡುವಷ್ಟು ಪುರುಸೊತ್ತು ಸಾಮಾನ್ಯ ಜನರಿಗೆ ಇರುವುದನ್ನು ನಾನು ಕಾಣೆ! ಸಂದೇಹ ಬಂದ ಪದಗಳನ್ನು ಸಂಪದದಲ್ಲಿ ಹಾಕುತ್ತೇನೆ. ಒಳ್ಳೆ ಪದಗಳನ್ನು ಹುಡುಕೋಣ. ಧನ್ಯವಾದಗಳು.. :)