ಕನ್ನಡದ ಮೇರು ಸಾಹಿತಿ, ಚಿಂತಕರ ಸಂದರ್ಶನಗಳಿರುವ ಆಂಡ್ರಾಯ್ಡ್ ಅಪ್ಲಿಕೇಶನ್ ಈಗ ಆಂಡ್ರಾಯ್ಡ್ ಮಾರ್ಕೆಟ್ ನಲ್ಲಿ ಲಭ್ಯ!
ಕನ್ನಡದ ಮೊಟ್ಟ ಮೊದಲ ಸಂದರ್ಶನಗಳ ಆಂಡ್ರಾಯ್ಡ್ ಅಪ್ಲಿಕೇಶನ್ ಈ ಮೊದಲೇ ಸಂಪದದಲ್ಲಿ ಡೌನ್ ಲೋಡ್ ಮಾಡಿಕೊಳ್ಳಲು ಲಭ್ಯವಿತ್ತು. ನೂರೈವತ್ತಕ್ಕೂ ಹೆಚ್ಚು ಮಂದಿ ಇದನ್ನು ಡೌನ್ ಲೋಡ್ ಮಾಡಿ ಬಳಸಿದ್ದರು. ಈಗ ಆಂಡ್ರಾಯ್ಡ್ ಮಾರ್ಕೆಟಿಗೆ ಈ ತಂತ್ರಾಂಶ ___LINK_OPEN_href="https://market.android.com/details?id=com.saaranga&feature=search_result#?t=W251bGwsMSwxLDEsImNvbS5zYWFyYW5nYSJd"___Sampada Shravya Kannada ಎನ್ನುವ ಹೆಸರಿನಲ್ಲಿ ಸೇರಿಸಲ್ಪಟ್ಟಿದೆ. ನವೆಂಬರ್ ೩ ರಂದು ಮಾರ್ಕೆಟಿಗೆ ಸೇರಿಸಲ್ಪಟ್ಟ ಈ ತಂತ್ರಾಂಶ ಹತ್ತೇ ದಿನಗಳಲ್ಲಿ ನೂರಕ್ಕೂ ಹೆಚ್ಚು ಬಾರಿ ಡೌನ್ ಲೋಡ್ ಆಗಿದೆ.
ಲಕ್ಷಾಂತರ ಅಪ್ಲಿಕೇಶನ್ ಗಳನ್ನು ಹೊಂದಿರುವ ಆಂಡ್ರಾಯ್ಡ್ ಮಾರ್ಕೆಟ್ ನಿಂದ ಸಂಪದ ಶ್ರಾವ್ಯ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಳ್ಳಬಹುದು. ನಿಮ್ಮ ಮೊಬೈಲ್ ನಲ್ಲಿ ಆಂಡ್ರಾಯ್ಡ್ ಮಾರ್ಕೆಟ್ ತೆರೆದು "sampada shravya kannada" ಎಂದು ಹುಡುಕಿದರೆ Saaranga Infotech ಅಭಿವೃದ್ಧಿ ಪಡಿಸಿದ ಅಪ್ಲಿಕೇಶನ್ ದೊರೆಯುತ್ತದೆ. ಅದನ್ನು ಡೌನ್ ಲೋಡ್ ಮಾಡಿಕೊಂಡರೆ ನೇರವಾಗಿ ಅದು ನಿಮ್ಮ ಮೊಬೈಲಿನಲ್ಲಿ ಅನುಸ್ಥಾಪನೆಗೊಳ್ಳುತ್ತದೆ.
ಹೀಗೆ ಮಾರ್ಕೆಟ್ ಮೂಲಕ ತಂತ್ರಾಂಶ ಅನುಸ್ಥಾಪಿಸಿಕೊಂಡರೆ ನಿಮಗೆ ಹಲವು ಪ್ರಯೋಜನಗಳಿವೆ. ಈ ಅಪ್ಲಿಕೇಶನ್ ಕುರಿತು ನೀವು ಮಾರ್ಕೆಟ್ ನಲ್ಲಿ ಪ್ರತಿಕ್ರಿಯಿಸಬಹುದು, ನಿಮ್ಮ ರೇಟಿಂಗ್ ನೀಡಬಹುದು. ಗೂಗಲ್ ಪ್ಲಸ್ ನಲ್ಲಿ ಶೇರ್ ಮಾಡಿ ಈ ಅಪ್ಲಿಕೇಶನ್ ಬಗ್ಗೆ ನಿಮ್ಮ ಗೆಳೆಯರಿಗೆಲ್ಲಾ ತಿಳಿಸಬಹುದು. ಅಲ್ಲದೆ ಈ ಅಪ್ಲಿಕೇಶನ್ ಗೆ ಸಂಬಂಧಿಸಿದ ಅಪ್ ಡೇಟ್ ಗಳನ್ನು ಸುಲಭವಾಗಿ ಪಡೆಯಬಹುದು.
ಆಂಡ್ರಾಯ್ಡ್ ಪ್ಲಾಟ್ ಫಾರಂನಲ್ಲಿ ಹೆಚ್ಚು ಕನ್ನಡದ ಕೆಲಸಗಳು ನಡೆಯಬೇಕಿದೆ. ಆಂಡ್ರಾಯ್ಡ್ ಮೊಬೈಲು ಬಳಸುವ ಕನ್ನಡಿಗರು ಹೆಚ್ಚು ಹೆಚ್ಚು ಸೇವೆಗಳನ್ನು ಕನ್ನಡದಲ್ಲೇ ಪಡೆಯುವಂತೆ ಮಾಡಲು ಕನ್ನಡದ ಕೆಲಸಗಳಿಗೆ ಹೆಚ್ಚಿನ ಬಂಬಲ ಹಾಗೂ ಬೆನ್ತಟ್ಟುವಿಕೆಯ ಅಗತ್ಯವಿದೆ. ಸಂಪದದ ಚೊಚ್ಚಿಲ ಅಪ್ಲಿಕೇಶನ್ ಗೆ ನಿಮ್ಮ ಸಂಪೂರ್ಣ ಬೆಂಬಲ ಬೇಕು. ಮಾರ್ಕೆಟ್ ನಲ್ಲಿ ಈ ತಂತ್ರಾಂಶವನ್ನು ಡೌನ್ ಲೋಡ್ ಮಾಡಿಕೊಂಡು ಉತ್ತಮವಾದ ರೇಟಿಂಗ್ ನೀಡಿ, ಪ್ರೋತ್ಸಾಹದಾಯಕ ಪ್ರತಿಕ್ರಿಯೆ ಬರೆದರೆ ಕನ್ನಡದ ಅಪ್ಲಿಕೇಶನ್ ಮುನ್ನೆಲೆಗೆ ತರುವುದಕ್ಕೆ ಸಹಾಯವಾಗುತ್ತದೆ. ಕನ್ನಡದ ತಂತ್ರಾಂಶಗಳನ್ನು ಹುಡುಕುವಾಗ ಪಟ್ಟಿಯಲ್ಲಿ Sampada shravya kannada ಪ್ರಮುಖವಾಗಿ ಕಾಣುತ್ತದೆ.
ನಿಮ್ಮ ಪ್ರೋತ್ಸಾಹದ ನಿರೀಕ್ಷೆಯಲ್ಲಿ...
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
Data Deletion Instructions
ಮೂಡುಬಿದ್ರೆಯ ಡಾ. ಸೋನ್ಸ್ ಫಾರ್ಮ್
ಸಾವಯವ ಸಂಪದ ಜುಲೈ ತಿಂಗಳ ಪತ್ರಿಕೆ ೨೦೧೭
ಶ್ರೀ ಯಲ್ಲಪ್ಪ ರೆಡ್ಡಿಯವರ ಆತ್ಮಕಥೆ 'ಹಸಿರುಹಾದಿ'
ಚಿಕ್ಕಮಗಳೂರಿನ ಅನುವನಹಳ್ಳಿಯಲ್ಲಿರುವ ಶಾಸನ ಮತ್ತು ಅದರಲ್ಲಿರುವ ಮಾಹಿತಿ
ಗಣಿತ ಅಧ್ಯಾಪನ
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)