ಸಿಪ್ ೧೨
ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ....
ವರುಷ ಹಿಂದೆ ಕಂಡ ಕನಸಿಗೆ ಈಗ ಮನಸ್ಸು ಬಣ್ಣ ಬಳಿಯುತಿತ್ತು. ಮೂಡಣದ ಉದಯಕಿರಣಗಳ ಹಿಮ್ಮೇಳದಲ್ಲಿ ೨೧ ನೆ ಶತಮಾನದ ಉದಯೋನ್ಮುಖ ಪ್ರೇಮ ಕಾದಂಬರಿ ಕಂಗಳೆಂಬ ಎರಡು ಸ್ಕ್ರೀನ್ ನ ಮುಲ್ಟಿಪ್ಲೆಕ್ಸ್ ನಲ್ಲಿ ಚಲನಚಿತ್ರ ಶುರುವಾಗಿತ್ತು. ಮೂಕ ಚಲನಚಿತ್ರಕ್ಕೆ ಸಂಧರ್ಭೋಚಿತ ವೆಂಬಂತೆ ದಿಂಬಿನ ಕೆಳಗಿನಿಂದ ಹಿಮ್ಮೇಳ ದನಿ ಶುರುವಾಯಿತು. ಮೊದಲ ಕೆಲವು ಕ್ಷಣ ಅದು ಹಿಮ್ಮೇಳ ಎಂಬಂತೆ ಆಲಿಸುತ್ತ ಪ್ರೇಮ ಕಾವ್ಯದ ಪ್ರೇಮಿಯರ್ ಶೋ ಅನುಭವಿಸುತ್ತಿದ್ದವನಿಗೆ ಅದು ಹಿಮ್ಮೆಳವಲ್ಲ ಬದಲಿಗೆ ಮೊಬೈಲಿನ ಕರೆಗಂಟೆ ಎಂದು ತಿಳಿಯಲು ಹೆಚ್ಚು ಸಮಯ ಹಿಡಿಯಲಿಲ್ಲ. ಎರಡು ತಿಂಗಳಿನಿಂದ ಬಾರಿಸುತಿದ್ದ "ಒರು ಮಾಲೈ..." ಹಾಡಿನ ಮೇಲೆ ಇಲ್ಲದ ಧ್ವೇಷ ಮೂಡಿತು. ಒಲ್ಲದ ಮನಸ್ಸಿನಿಂದ ಕಣ್ಣು ತೆರೆದೆ.
ಮೊಬೈಲ್ಗೆ ಆಕೃತಿಯ ಕರೆಯಾಗಿತ್ತು.
ಈ ಎರಡು ತಿಂಗಳಲ್ಲಿ ಆಕೃತಿ ಗೆ ನಾನು, ತುಂಬಾನೆ ಹತ್ತಿರವಾಗಿದ್ದೆ, ಯಾವ ಸಮಯಕ್ಕೆ ಯಾವುದೇ ಸಹಾಯ ಬೇಕಿರಲಿ ಅವಳು ನನ್ನಲ್ಲಿ ಕೆಳುತಿದ್ದಳು.ಅವಳ ಮನಸ್ಸಿನಲ್ಲಿ ಯಾವುದೇ ಹಾವ ಭಾವಗಳು ಮೂಡಲಿ ಅದಕ್ಕೆ ಮೊದಲ ಪ್ರೇಕ್ಷಕ ನಾನಾಗಿರುತಿದ್ದೆ. ಪ್ರೀತಿ ಪುಣೆಗೆ ಬರುತ್ತಾಳೆ ಎಂಬ ವಿಚಾರವನ್ನು ನಾನು ಅವಳಲ್ಲಿ ಹೇಳಿದ್ದೆ. ಅದಕ್ಕೆ ಅವಳೂ ತಮ್ಮ ಚೆನ್ನೈ ಪೂಲಿಂದ ರೆಜೆಕ್ಶನ್ ಆರ್ಡರ್ ಬಂದಿದ್ದ ಇನ್ನು ೧೦ ಮಂದಿ ಬರುತ್ತಾರೆ ಎಂದು ತಿಳಿಸಿದ್ದಳು.
"ಹೇ, ಕುಂಬಕರ್ಣ... ಏಳೋ.. ನಿನ್ನಿಂದ ಒಂದು ಹೆಲ್ಪ್ ಬೇಕಿದೆ" ಎಂದಳು.
"ಏನಮ್ಮ ಬೆಳಬೆಳಗ್ಗೆ ಹೆಲ್ಪ್ ...?"
"ಹೇಳಿದ್ದೆ ಅಲ್ಲ ನಿಂಗೆ ನನ್ನ ಕಾಲೇಜ್ ನಿಂದ ಇಲ್ಲಿ Dream- tech ಗೆ ೧೦ ಮಂದಿ ಬರುವವರಿದ್ದಾರೆ ಎಂದು, ಅವರು ಇವತ್ತು ೧೨ ಗಂಟೆಗೆ ಸ್ಟೇಷನ್ ತಲುಪುತ್ತಾರೆ.. ಬಾ ಇಬ್ಬರು ಹೋಗೋಣ.. ನಿನ್ನೆ ಇಂದ ನಿನಗೆ ಕಾಲ್ ಮಾಡ್ತಿದ್ದೆ ತಾಗಲೇ ಇಲ್ಲ , ನಿನ್ನ ಡಬ್ಬ ಮೊಬೈಲ್ ..."
"ಓಯ್ ಮೊಬೈಲ್ ಗೆ ಬೈಬೇಡ, ನನ್ನ ತಪ್ಪು, ನಿನ್ನೆ ಸಿಂ ಬದಲಾಯಿಸಿದ್ದೆ"
"ಹೇ ವೈಭು, ಹೋಗ್ಲಿ ಬಿಡು,ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ ಅಂತ ತಿರುಗಾಡುವ ಪಾರ್ಟಿ,, ಅದರಲ್ಲೂ ಒಂದು ಡಿಡಿಕೆಟೆದ್ ಲೈನ್ ಇಟ್ಟು ಕೊಂಡ ಮನುಷ್ಯ, ನನ್ನ ನೆನಪು ಎಲ್ಲಿ ಬರುತ್ತೆ ನಿನಗೆ.." ಎಂದಳು.
"ಹೇ ಟ್ರಾನ್ಸ್ಲೆಟರ್, ಹಾಗೆ ಏನು ಇಲ್ಲ .."
ಟ್ರಾನ್ಸ್ಲೆಟರ್ ನಾನು ಅವಳಿಗೆ ಇಟ್ಟ ಪೆಟ್ನೆಮ್. ಘಜನಿ ಚಲನಚಿತ್ರಕ್ಕೆ ಕರೆದ ದಿನದಿಂದ ಅವಳನ್ನು ನಾವಿಬ್ಬರೇ ಮಾತಾಡುವಾಗ ಅದೇ ಹೆಸರಿನಿಂದ ಕರೆಯುತಿದ್ದೆ. ಟ್ರಾನ್ಸ್ಲೆಟ್ ಮಾಡ್ತೇನೆ ಹೇಳಿ ಸಿನೆಮಾ ಗೆ ಎಳೆದು ಹೋಗಿದ್ದ ಹುಡುಗಿ ಬರೇ ಎರಡು ಮೂರು ಡೈಲಾಗ್ ಗಳನ್ನೂ ಅನುವಾದಿಸಿದ್ದಳು. ಕಾರಣ ಕೇಳಿದ್ದಕ್ಕೆ ನೀನು ಡಂಬು,ವ್ಯವಹರಿಸುವ ಕಲೆ ಗೊತ್ತಿಲ್ಲದ ಡಂಬು ಎಂದು ಗೆಲಿಮಾಡಿದ್ದಳು. ಅಲ್ಲಿಂದ ಡಂಬು-ಟ್ರಾನ್ಸ್ಲೆಟರ್ ಗಳ ಜೋಡಿ ಯಾರ ಗಮನಕ್ಕೆ ಬಾರದೆ ಮರೆಯಲ್ಲೇ ಮೆರೆದಾಡುತಿದ್ದವು.
"ಡಂಬು .. ಬೇಗ ರೆಡಿ ಆಗಿ ನನ್ನ ಹಾಸ್ಟೆಲ್ ಕಡೆ ಬಾ, ೧೨ ರ ಒಳಗಾಗಿ ಸ್ಟೇಷನ್ ತಲುಪಬೇಕು."
"ಆಯಿತು" ಎಂದು ಕರೆ ಕಟ್ ಮಾಡಿ ಸಮಯ ನೋಡಿಕ್ಕೊಂಡೆ, ಆಗಲೇ ೯:೩೦ ದಾಟಿತ್ತು.
ಒಂದುವರೆ ಗಂಟೆಯದಾರಿ ಸ್ಟೇಷನ್ ಗೆ ಅಂದರೆ ನನ್ನ ಬಳಿ ಉಳಿದದ್ದು ಬರೇ ಒಂದೇ ಗಂಟೆ. ಆ ಒಂದು ಗಂಟೆಯಲ್ಲಿ ನಾನು ಒಂದು ವಾರದಿಂದ ಮೃದು ಮುಖದ ಮೇಲೆ ಬೆಳೆದಿದ್ದ ಹುಲ್ಲುಗಳನ್ನು ಬೋಳಿಸಬೇಕಿತ್ತು. ಇವತ್ತು ಹೆಚ್ಚಿನ ಸಮಯವನ್ನು ಸೌಂದರ್ಯ ಪಾಲನೆಗೆ ಇಡುವುದು ಅನಿವಾರ್ಯ ವಾಗಿತ್ತು. ಹಿಂದಿನ ಪ್ರಿಯತಮೆಗೆ ಹತ್ತಿರವಾಗುವ ದಿನ. ಬೇಡ್ದಿಂದ ಮೇಲೆದ್ದು ಎಲ್ಲ ಕೆಲಸಗಳನ್ನು ಪಟಪಟನೆ ಮಾಡಿ ಮುಗಿಸಿದೆ.
ಪಕ್ಕದ ರೂಂ ನ ಕಿಶೋರನಲ್ಲಿ ಬೈಕ್ ತಕ್ಕೊಂಡು ಸರಿಯಾಗಿ ೧೦:೩೦ ಕ್ಕೆ ಅವಳ ಹಾಸ್ಟೆಲ್ ಕೆಳಗಡೆ ನಿಂತು ಅವಳಿಗೆ ಕರೆಕ್ಕೊಟ್ಟೆ. ಅವಳು ಕೆಳಗಿಳಿದು ಬರುವಷ್ಟರಲ್ಲಿ ಮತ್ತೊಮ್ಮೆ "ಒರು ಮಾಲೈ.." ರಿಂಗಣಿಸಿತು.
ಆ ಬದಿಯಲ್ಲಿ ಪ್ರೀತಿ "ವೈಭು ಗೆಸ್ಟ್ ಹೌಸ್ ನಲ್ಲಿದ್ದೇವೆ, ೧೦ ಕ್ಕೆ ತಲುಪಿದೆವು, ಯಾವುದೇ ತೊಂದರೆ ಇಲ್ಲದೆ ನಾನು ಗೆಸ್ಟ್ ಹೌಸ್ ತಲುಪಿದೆ, ಫ್ರೀ ಇದ್ದರೆ ಬಾ" ಅಂದಳು.
"ನಾನು ಸಲ್ಪ ಬ್ಯುಸಿ ಇದ್ದೇನೆ, ಮದ್ಯಾನ್ಹ ಕೆಲಸ ಮುಗಿದೊಡನೆ ಬಂದು ಬಿಡುತ್ತೇನೆ" ಹೇಳುತಿದ್ದಂತೆ ಆಕೃತಿ ಹಿಂದಿನ ಸೀಟ್ ಏರಿ ಕುಳಿತು ಬಿಟ್ಟಳು.
ಆಕೃತಿ "ಇಟ್ಸ್ ಆಲ್ರೆಡಿ ಲೇಟ್ .. ಹರ್ರಿ ಅಪ್ " ಅಂದಳು.
ಅವಳ ಮಾತುಗಳು ಆ ಬದಿಯಲ್ಲಿ ಪ್ರೀತಿಗೆ ಕೆಳುವಂತಿತ್ತು ಚೊಲ್ಲು ಹುಡುಗಿ "ವೈಭೂ ... ಹೀಗೋ ಸಮಾಚಾರ ... ಕೀಪ್ ಇಟ್ ಅಪ್ ... ಆರಾಮಾಗಿ ಬಾ" ಅಂದಳು.
ಬರ್ಗರ್ ನ ನಡುವೆ ಸಿಕ್ಕ ಟಿಕ್ಕಿ ಯಂತಾದೆ ಈ ಇಬ್ಬರು ಹುಡುಗಿಯರ ನಡುವೆ. ಆಕ್ರುತಿಯೊಂದಿಗೆ ವಿಹರಿಸಲೇ .. ಇಲ್ಲ ಪ್ರೀತಿಯನ್ನು ವರಿಸಲೇ ಎಂಬ ಪ್ರಶ್ನಾರ್ಥಕ ಮೌನ ಮೂಡಿತು.
ಪ್ರೀತಿಗೆ ಬಾಯ್ ಹೇಳಿ, ಆಕೃತಿಯೊಂದಿಗೆ ಹಾಯಾದ ಕುಳಿರ್ಗಾಳಿಯಲ್ಲಿ ತೇಲಿ ಹೋದೆ !
************
ಕಿಚಗುಡುವ ಪುಣೆ ಸ್ಟೇಷನ್ ತಲುಪಿದೊಡನೆ ಸರಿಯಾದ ಸಮಯಕ್ಕೆ ತಲುಪಿದೆವು ಎಂಬ ನಿಟ್ಟುಸಿರು ಇಬ್ಬರಿಗೂ. ನಾವೇನು ಸರಿಯಾದ ಸಮಯಕ್ಕೆ ತಲುಪಿದ್ದೆವು ಆದರೆ ಅದು ಹೇಳಿ ಕೇಳಿ ಇಂಡಿಯನ್ ರೈಲ್ವೆ ಸರಿಯಾದ ಸಮಯಕ್ಕೆ ಬರುವುದುಂಟೇ.. ಇವತ್ತು ಚೆನ್ನೈ ನಿಂದ ಬರುವ ಟ್ರೈನ್ ಬರೋಕ್ ಬರಿ ೫ ಗಂಟೆ ಲೆಟ್ ಆಗುವುದೆಂದು ನಮಗೆ ಸ್ವಾಗತ ಕೊರುತಿದ್ದ ಮೈಕ್ ನಲ್ಲಿ ತೇಲಿ ಬರುತಿತ್ತು. ೫ ಗಂಟೆ ಲೇಟ್ ಎಂದರೆ ಸಂಜೆ ೫ ರ ಮೊದಲು ಆ ಗಾಡಿ ಈಚೆ ಸುಳಿಯದು. ೫ ಗಂಟೆ ಮಾಡಲು ಕೆಲಸ ಏನು ಇಲ್ಲ. ಬೈಕ್ ಇದೆ, ಪುಣೆ ಸುತ್ತಾಡುವ ಮನಸ್ಸಿದೆ, ಎಲ್ಲಕ್ಕಿಂತ ಮಿಗಿಲಾಗಿ ಆಕೃತಿ ಇದ್ದಾಳೆ ಎಂದು ಮನಸ್ಸು ಹಿರಿಹಿರಿ ಹಿಗ್ಗಿತು. ಒಂದು ಕ್ಷಣ ಪ್ರೀತಿಯನ್ನು ವಿವೇಕನಿಗೆ ಬಿಟ್ಟು ಬಿಡುವ ಎಂದು ತ್ಯಾಗಮಯಿ ಯಾಯಿತು.
"ಸೊ .. ವಾಟ್ ಟು ಡು ನೌ, ಎನಿ ಪ್ಲಾನ್ಸ್ ..?" ಅಂದಳು.
"ಐ ಹೇವ್ ಮೆನಿ ಪ್ಲಾನ್ಸ್ !!!" ಎಂದು ಕಳ್ಳ ನಗೆ ಬಿಟ್ಟೆ.
ಅವಳು "ಓಕೆ , ಚಲೋ ..A cup of coffee..?"
"ನೋ , ಸಂಥಿಂಗ್ ದಿಫ್ಫೆರೆಂಟ್ ಟುಡೇ, ವಾಟ್ ಯು ಸೆ ..?"
"ಓಕೆ ಬಾಬಾ .." ಎನ್ನುತ್ತಾ ಬೈಕ್ ಏರಿದಳು, ಹಿಂಬದಿಯಿಂದ ಕೈಯ ಹಿಡಿತ ಗಟ್ಟಿಯಾಯಿತು, ಮನಸ್ಸು ಮೆದುವಾಗುತ್ತಾ ನೀರಾಗುತಿತ್ತು.
ಪುಣೆಗೆ ಬಂದಾಗಿಂದ CAD-B ಯ ಹೆಸರು ತುಮ್ಬಾಬಾರಿ ಕೇಳಿದ್ದೆ, ಕಾಫಿ ಡೇ ನ ಎಲ್ಲ ಸಿಪ್ ಹೀರಿ ಸಪ್ಪೆಯಾದ ನಾಲಿಗೆ ಬೇರೆ ಹೊಸ ರುಚಿಗೆ ಹವಣಿಸುತ್ತಿತ್ತು, ಜೀವನ್ ಮಾತೆತ್ತಿದ್ದರೆ CAD-B ಯ ಸಹಸ್ರನಾಮ ಮಾಡುತಿದ್ದ, ಇವತ್ತು ಅದಕ್ಕೆ ಕಾಲ ಕೂಡಿ ಬಂದಿತ್ತು. ಬೈಕ್ ಕಾರ್ವೆ ರೋಡ್ ಪ್ರವೇಶಿಸಿತು, CAD-B ಯ ಔಟ್ಲೆಟ್ ಹುಡುಕಲು ಸಲ್ಪ ಸಮಯನೆ ಹಿಡಿಯಿತು.
CAD-B ಎಂದರೆ CCD ತರಹನೇ ದೊಡ್ಡದೊಂದು ರೆಸ್ಟೋರೆಂಟ್ ಎಂದು ನನ್ನಲ್ಲಿ ಚಿತ್ರಣ ಇತ್ತು ಆದರೆ ನಾವಲ್ಲಿ ತಲುಪಿದಾಗ ಅದು ಸಣ್ಣದೊಂದು ಅಂಗಡಿಯಷ್ಟೇ, ಆದರೆ CCD ಗೆ ಸಡ್ಡು ಹೊಡೆಯುವಂತಹ ವ್ಯಾಪಾರ ! ಟೋಕನ್ ಸಿಸ್ಟಮ್.
ಮೇಲಿನ ಮೆನು ಕಾರ್ಡ್ನಲ್ಲಿ ಎಲ್ಲ ಬಗೆಯ ಪಾನೀಯಗಳ ಪರಿಚಯ ಹಾಕಿದ್ದರು. ಸರತಿಯಲ್ಲಿ ನನ್ನಿಂದ ಮುಂದಿನ ೧೧ ಮಂದಿಯಲ್ಲಿ ಯಾವುದಕ್ಕೆ ಹೆಚ್ಚಿನ ಆರ್ಡರ್ ಕೊಡುತ್ತಾರೋ ಅದನ್ನೇ ಆಸ್ವಾದಿಸುವ ಎಂದುಕ್ಕೊಂಡೆ. ಅಪ್ಪಟ ಭಾರತೀಯ ನಾಗರಿಕನ ಗುಣ ಕ್ಕೆ ಸಾಕ್ಷಿ ಎಂಬಂತೆ ನಾನು ಮುಂದಿನ ಗುಂಪನ್ನು ಹಿಂಬಾಲಿಸುತಿದ್ದೆ. ತಮಗೆ ಯಾವುದರ ಅವಶ್ಯವಿದೆ, ತಮಗೆ ಹಿಡಿಸಿದೆಯೇ ಎನ್ನುವ ಮನೋದರ್ಮಕ್ಕಿಂತ , ಯಾರು ಯಾವುದಕ್ಕೆ ಮಾರುಹೋಗಿದ್ದಾರೆ, ಯಾವುದಕ್ಕೆ ಶರಣಾಗಿದ್ದಾರೆ ಎನ್ನುವಂತಹ ಮನಸ್ತಿತಿ. ಇಬ್ಬರು ಯಾವುದೊ ಕೆಟ್ಟ ಸಲಹೆಗೆ ಸಮ್ಮತಿ ಇಟ್ಟರೆ ಮೂರನೆಯವನು ಅದಕ್ಕೆ ಒಪ್ಪಿಗೆ ಇಲ್ಲದಿದ್ದರೂ ಅವರನ್ನು ಹಿಂಬಾಲಿಸುತ್ತಾನೆ !! ಇದು ಇಂದಿನ ಮನುಷ್ಯ ಗುಣ, ನಾನು ಮಾನವ ಅದರಲ್ಲೂ ಭಾರತೀಯ ರಕ್ತ, ಮುಂದಿನ ಮಂದಿ-ಮಂದೆಯನ್ನು ಅನುಸರಿಸಿ CAD-B ಯಲ್ಲಿನ ವಿವಿದ ಬಗೆಗೆ ಬಂದ ಆರ್ಡರ್ ಗಳನ್ನೂ ಪಟ್ಟಿ ಮಾಡಿ CAD-B ಯನ್ನೇ ಫೈನಲ್ ಮಾಡಿಕ್ಕೊಂಡೆ, ಬಹುಷಃ ಅಂದು ಅಲ್ಲಿ ಬಂದಿದ್ದ ಎಲ್ಲರು ನನ್ನ ಮಾನದಂಡ ಅನುಸರಿಸುತಿದ್ದರು ಏನೋ.. ಮೆನು ಬೋರ್ಡ್ ನಲ್ಲಿ ೧೯ ಬಗೆಯ ವಿದ ಗಳಿದ್ದರು CAD-B ಗೆ ಮೆಜೋರಿಟಿ ವೋಟು ಬಂದಿದ್ದವು !!
ಸೀದಾ ಮಾತಿನಲ್ಲಿ ಹೇಳುವುದಾದರೆ CAD-B ಕ್ಯಾಡ್ಬರೀಸ್ ಚಾಕೊಲೆಟ್ ನ ಮಿಲ್ಕ್ ಶೇಕ್, ಸ್ಟ್ರೋ ನಲ್ಲಿ ಒಮ್ಮೆಗೆ ಮೇಲೆ ಬಾರದಷ್ಟು ದಪ್ಪದ ಮಿಲ್ಕ್ ಶೇಕ್, ಅದರ ಮೇಲೆ ಚಾಕೊಲೆಟ್ ಅನ್ನು ತುರಿದು ಹಾಕಿ ಅದನ್ನು ಇನ್ನೂ ದಪ್ಪ ಮಾಡಿ ಸೇರ್ವ್ ಮಾಡುತಿದ್ದರು, ಚಾಕೊಲೆಟ್ ಪ್ರಿಯರಿಗೆ ಇದು ಮೆಚ್ಚಿನ ಖಾದ್ಯ ವಾಗುವುದರಲ್ಲಿ ಯಾವುದೇ ಸಂಚಯ ವಿರಲಿಲ್ಲ !! ಈ ಇನೋವೆಟಿವ್ ಐಡಿಯಾ ಹೊರ ತಂದವರಿಗೆ ಶರಣು ಎನ್ನುತ್ತಾ ಇಬ್ಬರು CAD-B ಸವೆದೆವು.
ನಡುವಲ್ಲಿ ವಿವೇಕ್ ನ ನೆನಪಾಗಿ ಆಕೃತಿಯಲ್ಲಿ " ನಾಳೆ ಸೇರಲಿರುವ ನ್ಯೂ ಜೋಯಿನಿಯಲ್ಲಿ ನಮ್ಮ ಕಾಲೇಜ್ ನ ಪ್ರೀತಿ ಅಂತ ಒಬ್ಬಳಿದ್ದಾಳೆ, ಅವಳ ಬರ್ತ್ಡೇ ನಾಳೆ, ಅದಕ್ಕೆ ಅವಳಿಗೆ ಏನಾದ್ರೂ ಗಿಫ್ಟ್ ತಕೊಬೇಕು,ಯಾವುದಾದರು ಗಿಫ್ಟ್ ಸುಜೆಸ್ಟ್ ಮಾಡು" ಅಂದೆ.
ಅವಳು "ಮಾಲ್ ಗೆ ಹೋಗುವ ಏನಾದ್ರೂ ಒಳ್ಳೆ ಐಟಂ ಸಿಕ್ಕೆ ಸಿಕ್ಕುತ್ತೆ ಕೊಡುವಿಯಂತೆ" ಅಂದಳು.
ನಾನು ಅದಕ್ಕೆ ಹೂನ್ ಎಂದು ಕಾರ್ವೆ ರೋಡಿಂದ ಬೈಕನ್ನು SP ರೋಡ್ ನೆಡೆಗೆ ತಿರುಗಿಸಿದೆ. ಅಲ್ಲಿನ ಒಂದು ಮಾಲ್ ನಲ್ಲಿ ನಮ್ಮ ವಿಂಡೋ ಶಾಪಿಂಗ್ ಶುರುಮಾಡಿದೆವು.
ಆಕೃತಿ ನನ್ನಲ್ಲಿ "ಹೇ ಡಂಬು ಬರೇ ಪ್ರೀತಿಗೆ ಗಿಫ್ಟಾ.. ಸುಗ್ಗೆಸ್ಟ್ ಮಾಡಿದ ನನಗೇನು ಇಲ್ಲವಾ..."ಅಂದಳು
ನಾನು "ಅವಳು ಸಂ ಒನ್ ಸ್ಪೆಷಲ್, ನೀನು ಟ್ರಾನ್ಸ್ಲೆಟರ್ ಅಷ್ಟೇ" ಅಂದೆ.
"ಬರೇ ಅಷ್ಟೇನಾ ...?"
"ಬರೇ ಅಷ್ಟೇನಾ ಅಂದ್ರೆ ..? ಏನರ್ಥ ..?"
"ಏನೂ ಇಲ್ಲ, ಬೇರೆ ಅರ್ಥ ನಿನಗೆ ಅರ್ಥ ಆಗಲ್ಲ ಅಂದ್ರೆ ನಾನೇನು ಮಾಡುಕ್ಕೆ ಆಗುತ್ತೆ, ನಾನೇ ಅರ್ಥ ಮಾಡಬೇಕಿತ್ತು"
ಒಗಟಗಟು ಅರ್ಥ ವಾಗಲೇ ಇಲ್ಲ.ಅವಳು ಮುಂದುವರಿಸಿದಳು.
"ಒಮ್ಮೆ ನಿನ್ನಲ್ಲಿ ನಾನು ಕೇಳಿದ್ದೆ ನನ್ನ ಬಗೆಗಿನ ನಿನ್ನ ಅನಿಸಿಕೆ ಏನೂ ಹೇಳಿ, ಆಗ ನೀನು ಏನೇನೇನೋ ಅನಿಸಿಕೆ ಗಳಿವೆ ಹೇಳುವುದು ಕಷ್ಟ ಅಂದೆ, ಆ ಎನೆನೆನನ್ನು ನಾನು ಇನ್ನೆನ್ನೇನೋ ಅನ್ಕೊಂಡು ಗೋಪುರ ಕಟ್ಟುತಿದ್ದೆ, ಪ್ರತಿದಿನ ಏನಾದರೊಂದು ನೆಪ ಹೇಳಿ ನಿನ್ನ ಸೇರುತಿದ್ದೆ, ನಿನ್ನಲ್ಲೂ ಆ ಅದೇನೇನೋ ಗಳಿಕೆ ಬೇರೆ ಅರ್ಥವಿದೆ ಅಂದುಕ್ಕೊಂಡಿದ್ದೆ" ಎನ್ನುತ್ತಾ ಸುಮ್ಮ ನಾದಳು.
"ಹೇ , ಟ್ರಾನ್ಸ್ಲೆಟರ್ ನಾನು ಆ ದಿನಾನೇ ನಿನಗೆ ಹೇಳಿದೆನಲ್ಲ ಒಬ್ಬಳನ್ನು ಇಷ್ಟ ಪಟ್ಟಿದ್ದೆ, ಅವಳು ಸಿಕ್ಕಲಿಲ್ಲ ಹೇಳಿ "
"ಹೌದು , ಸಿಕ್ಕಿಲ್ಲ ಅಂದೆ ಅದಕ್ಕಾಗಿಯೇ ಆ ಅದೇನೆನೋಗಳಿಗೆ ನಾನು ಕಳೆದ ೩ ತಿಂಗಳಿಂದ ಅರ್ಥ ಹುಡುಕುತಿದ್ದೆ"
"ಹೇ,ಟ್ರಾನ್ಸ್ಲೆಟರ್ ಇಗಲೂ ನನಗೆ ನಿನ್ನಲ್ಲಿ ಅದೇನೇನೋ ಅನಿಸಿಕೆ ಗಳಿವೆ, ಕಾಲ ಬಂದಾಗ ಹೇಳುತ್ತೇನೆ, ಸೆಂಟಿ ಆಗಬೇಡ,ಎಂದು ಅವಳ ಬಾಡಿದ ಮುಖವನ್ನು ಮೇಲೆ ಮಾಡಿದೆ"
ನನ್ನ ಕೈಯನ್ನು ದೂಡಿ "ಪ್ರೀತಿ ಅಂದ್ರೆ , ಅದೇ ಹುಡುಗೀನ...?"
"ಹೌದು, ಆದ್ರೆ ಅವಳು ಈಗ ಬರಿ ಫ್ರೆಂಡ್ ಅಷ್ಟೇ.. "
"ಮೊನ್ನೆ ವರೆಗೆ ನನ್ನೊಂದಿಗೆ ಸರಿ ಇದ್ದವನು ಅವಳು ಬರುತ್ತಾಳೆ ಎಂದು ತಿಳಿದ ತಕ್ಷಣ ಪಕ್ಷಾಂತರಿ ಯಾದೆ, ಈಗ ಫ್ರೆಂಡ್ ಅಷ್ಟೇ ಅನ್ನುತ್ತಿಯಾ ..."
"ಓಯ್ ಟ್ರಾನ್ಸ್ಲೆಟರ್ ಅಷ್ಟೇ, ಸದ್ಯಕ್ಕೆ ಅಷ್ಟೇ !! ನಿನ್ನಲ್ಲಿನ ಅದೇನೇನೋ ಭಾವನೆಗಳು ಅವಳಲ್ಲಿ ಮೂಡಿ ಮರೆಯಾಗಿವೆ ಮತ್ತೆ ಹುಟ್ಟುತ್ತಾವೋ
ಎನ್ನುವುದರಲ್ಲಿ ನಂಬಿಕೆ ಇಲ್ಲ"
ಈ ಮಾತುಗಳನ್ನು ಕೇಳುತ್ತಲೇ ಅವಳು ಮತ್ತೆ ಆಕೃತಿ ಯಾದಳು , ಅದೇ ಮುಗ್ದ ಆಕೃತಿ. ಮೂರು ದಿನದಿಂದ ಕಾರಣ ವಿಲ್ಲದ ಬೀಳುತಿದ್ದ ವ್ಯರ್ಥ ಕನಸುಗಳ ಮೇಲೆ ಕರುಣೆ ಉಕ್ಕಿತು.
ಮುಂದಿನ ಸಿಪ್
ಪ್ರತಿಕ್ರಿಯೆ (1)