ಸಿಪ್ ೧೩

 

ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ....

ಹಿಂದಿನ ಸಿಪ್ 



ಮಾಲ್ ನಲ್ಲಿ ವಿಂಡೌ ಶಾಪಿಂಗ್ ನಲ್ಲಿ ತಲ್ಲೀನನಾಗಿದ್ದ ನಮ್ಮಿಬ್ಬರನ್ನು ನಡುವೆ ಬಂದ ಕರೆ ಮತ್ತೆ ಸ್ಟೇಷನ್ ಗೆ ಹೋಗುವಂತೆ ಎಚ್ಚರಿಸಿತು. ಮೊಬೈಲ್ ನಲ್ಲಿ ಗೆಳತಿಯೊಂದಿಗೆ ಮಾತಾಡಿದ ಆಕೃತಿ ಈಗ ತಾನೇ ಟ್ರೈನ್ ಶೋಲಾಪುರ್ ದಾಟಿರುವುದಾಗಿ ಹೇಳಿದಳು. ಶೋಲಾಪುರ್ ೩ ಗಂಟೆಗೆ ತಲುಪಿದೆ ಅಂದರೆ ಇನ್ನು ಮಿನಿಮುಂ ನಾಲ್ಕುವರೆ ಗಂಟೆಯ ಬಳಿಕ ಗಾಡಿ ಪುಣೆ ತಲುಪಲುವುದು.

ಇನ್ನು ೫  ಗಂಟೆ ಅವಳೊಂದಿಗೆ ಇರಬಹುದು ಎಂದು ಇನ್ನೂ ಖುಷಿಯಾಯಿತು. ನನ್ನಲ್ಲಿ ಏರಿದ ಅವಳ ಕೋಪ ಇನ್ನೂ ಇಳಿದಿರಲಿಲ್ಲ. ಪ್ರೀತಿಗೆ ಬರ್ತ್ಡೇ ಗಿಫ್ಟ್ ಎಂದು ಒಂದು watch ಖರೀದಿಸಿದೆವು. ಪ್ರೀತಿಗಿದ್ದ ಪ್ರಿಯೋರಿಟಿ ಆಕೃತಿ ಈಗ ಮೀರಿಸಿದ್ದಳು.ಅವಳಿಗೆ ಗಿಫ್ಟ್ ಕೊಡಲು ಏನೂ ಕಾರಣ ಇಲ್ಲದಿದ್ದರೂ ಅವಳಿಗೂ ಒಂದು ಕೈಗಡಿಯಾರವನ್ನು ಖರೀದಿಸಿದೆ. ಅದನ್ನು ಅವಳ ಕೈಗೆ ಕಟ್ಟಿ ಹೊಸ ಗಳಿಗೆಗೆ ಇಬ್ಬರು ಸಾಥಿಯಾದೆವು.

ಇನ್ನು ೪ ಗಂಟೆ ನಮಗೆ ಕಳೆಯ ಬೇಕಿತ್ತು.ಚೆನ್ನೈ ನಲ್ಲಿ ಯಾವ ರೀತಿ ಎಲ್ಲಾ ಸ್ಕ್ರೀನ್ ಗಳಲ್ಲಿ ತಮಿಳು ಸಿನೆಮಾಗಳು ರಾರಾಜಿಸುತಿದ್ದವೋ, ಅದೇ ವೇಗದಲ್ಲಿ ಇಲ್ಲಿ ಹಿಂದಿ ಚಲನಚಿತ್ರ ಗಳು ಬಿತ್ತರಿಸುತಿದ್ದವು. ೬೫% ಬಾಚುಲರ್ ಗಳನ್ನೇ ತನ್ನಲ್ಲಿ ಸೇರಿಸಿಕ್ಕೊಂಡಿರುವ ಪುಣೆ ನಗರದಲ್ಲಿ ಒಂದೊಂದಾಗಿ ಆ ಸಮಯದಲ್ಲಿ ಇತರ ನಗರ ಗಳಿಗಿಂತ ಹೆಚ್ಚಿನ ಮಲ್ಟಿ ಪ್ಲೆಕ್ಸ್ಗಳು ತಲೆ ಎತ್ತಿಕ್ಕೊಂಡಿದ್ದವು. ಆಕೃತಿಯಲ್ಲಿ ಈ ಕುರಿತು ವಿಚಾರಿಸಿದಾಗ ತನಗೆ ಹಿಂದಿ ಬರುವುದಿಲ್ಲ ಎಂಬ ಜವಾಬು ಇಟ್ಟಳು.

ಘಜನಿಯ ಆಹ್ವಾನಕ್ಕೆ ನನ್ನ ಉತ್ತರಕ್ಕೆ ಅವಳು ಪ್ರತಿಕ್ರಿಯಿಸಿದ ಧಾಟಿಯಲ್ಲಿ ನಾನು "ಐ ವಿಲ್ ಟ್ರಾನ್ಸ್ಲೇಟ್ ಫಾರ್ ಯು !" ಅಂದೆ.
ಅವಳು ಮುಗುಳ ನಕ್ಕಳು. ಹುಡುಗಿ ಒಮ್ಮೆ ನಕ್ಕಳೆಂದರೆ ಜಗತ್ತಿನ ಒಂದು ಮುಗ್ದ ಗಂಡು ಪ್ರಾಣಿಯ ಆತ್ಮ ಆತ್ಮಹತ್ಯೆ ಮಾಡಿಕ್ಕೊಂಡಂತೆ! ಇನ್ನೊಮ್ಮೆ ನನ್ನ ಆತ್ಮ ಆತ್ಮಹತ್ಯೆ ಮಾಡಿಕೊಂಡಿತು.

ಮೇಲಿನ ಅಂತಸ್ತಿನ ಮಲ್ಟಿ ಪ್ಲೆಕ್ಸ್ ನ ಬಾಕ್ಸ್ ಆಫೀಸ್ ತಲುಪುವಷ್ಟರಲ್ಲಿ ಅವಳು "ಗೆಟ್ ಟಿಕೆಟ್ ಫಾರ್ ಗರಂ ಮಸಾಲ ! ಐ ಲವ್ ಜಾನ್ !!" ಅಂದಳು.

ಹದಿಹರೆಯದ ಹುಡುಗೀರನ್ನು ತನ್ನಲ್ಲಿ ಬೀಳಿಸಿದ ಜೋನ್ ಎಂಬ  ಸೊ ಕಾಲ್ಡ್ ಬಾಡಿ ಬಿಲ್ಡರ್ ಮೇಲೆ ಕೋಪ ಉಕ್ಕಿತು. ಹುಡುಗರು ಚಿತ್ರ ವೀಕ್ಷಣೆಗೆ ಹಿರೋಯಿನ್ ಅನ್ನು ಮಾನದಂಡ ವಾಗಿ ಇಡುತ್ತಾರೆ, ಅದೇ ಮನಗೆದ್ದ ಗೆಳತಿ ಹೀರೋ ಬಗ್ಗೆ ಈ ರೀತಿಯ ಕಾಮೆಂಟ್ ಮಾಡುವುದು ಹುಡುಗನಿಗೆ ಹುಳಿ ಹಿಂಡಿದಂತಾಗುತ್ತದೆ.

ಅಕ್ಕಪಕ್ಕದ ಸೀಟ್ ನಲ್ಲಿ ಇಬ್ಬರು ಕುಳಿತು ಚಿತ್ರ ವೀಕ್ಷಿಸುತ್ತಿದ್ದೆವು, ಜೋನ್ ಮೇಲಿನ ಕೋಪಕ್ಕೆ ನಾನು ಒಂದು ಡೈಲಾಗ್ ಅನ್ನು ಅನುವಾದಿಸಲಿಲ್ಲ, ಅವಳೂ ಕೇಳಲಿಲ್ಲ, ಕಾಮಿಡಿ ಚಿತ್ರ ವಾದುದರಿಂದ ನನ್ನ ಕೋಪದ ತೀವ್ರತೆ ಅವಳಿಗೆ ತಿಳಿಯಲೂ ಇಲ್ಲ. ೭ ಕ್ಕೆ ಚಿತ್ರ ಮುಗಿಸಿ ಇಬ್ಬರೂ ರಾತ್ರಿಯ ಬರ್ತ್ ಡೇ ಗೆ ಕೇಕ್ ಖರೀದಿಸಲು ಮತ್ತೆ ಕಾರ್ವೆ ರೋಡ್ ಸೇರಿದೆವು.

ಇನ್ನು ನಮ್ಮಲ್ಲಿ ೧ ಗಂಟೆ ಸಮಯ ವಿತ್ತು. ಏನು ಮಾಡುವುದೆಂಬ ವಿಚಾರದಲ್ಲೇ ಬೈಕನ್ನು ಸ್ಟೇಷನ್ ನ ದಿಕ್ಕಿಗೆ ಹಾಯಿಸುತಿದ್ದೆ. ಹಿಂದೆ ಕುಳಿತ ಆಕೃತಿ "ಒನ್ ಮೋರ್ CAD-B ..?"
ಅವಳ ಆಹ್ವಾನ ತೆಲಾಡುತಿದ್ದ ಮನಸ್ಸಿಗೆ ಮತ್ತೆ ತೀರ ಸಿಕ್ಕಂತಾಯಿತು. ಗಾಡಿಯನ್ನು ಬಲಕ್ಕೆ ತಿರುಗಿಸಿ ಮತ್ತೆ ಅದೇ  CAD-B ಔಟ್ಲೆಟ್ ನ ಎದುರಿಗೆ ಪಾರ್ಕ್ ಮಾಡಿದೆ.

ಆವಳು ನನ್ನಲ್ಲಿ "ವೈಭು ಒನ್ ಲಾರ್ಜ್ CAD-M ತೆಕೋ "
"ಒಂದೇ ನಾ...?"
"ಹೌದು, ಅವರೆಲ್ಲ ಬಂದ ಮೇಲೆ ಒಳ್ಳೆ ರೆಸ್ಟೋರೆಂಟ್ ನಲ್ಲಿ ಊಟ ಮಾಡಿ ಫ್ಯೂಚರ್ ಡೇಸ್ ಗೆ ಹೋಗೋಣ ಆಗ ನಿನ್ನ ಬರ್ತ್ ಡೇ ಪಾರ್ಟಿ ಯ ಸಮಯಕ್ಕೆ ಸರಿಯಾಗುತ್ತದೆ. ಈಗ CAD-m ಫುಲ್ ಕುಡಿದರೆ ಮತ್ತೆ ಬ್ಯಾಟ್ಟಿಂಗ್ ಮಾಡಲು ಜಾಗ ಇರಲಾರದು, ಇಬ್ಬರೂ ಒನ್ ಬೈ ಟು ಮಾಡುವ" ಅಂದಳು.
ನಾನು ಸರಿ ಎಂದು ಮತ್ತೆ ಸರತಿಯಲ್ಲಿ ನಿಂತೆ.

ಕೂಪನ್ ತೆಕ್ಕೊಂಡು ಸರ್ವಿಸ್ ಕೌಂಟರ್ ನಲ್ಲಿ ಅದನ್ನು ಒನ್ ಬೈ ಟು ಮಾಡಲು ಕೋರಿದಾಗ ಅವರು ತಮ್ಮಲ್ಲಿ ಒನ್ ಬೈ ಟು ಸರ್ವಿಸ್ ಇಲ್ಲ ಎಂದು ಹೇಳಿದರು. ಇದು ನನಗೆ ಇನ್ನೂ ಖುಷಿ ಕೊಟ್ಟಿತು. ಜೀವನದಲ್ಲಿ ಮೊದಲ ಬಾರಿಗೆ ಒಂದೇ ಕಪ್ನಲ್ಲಿ ಸವೆಯುವಭಾಗ್ಯ ಇಪ್ಪತ್ತೆರಡರ ನಾಲಿಗೆಗೆ ಇಲ್ಲಿ ವರೆಗೆ ಲಭ್ಯವಾಗಿರಲಿಲ್ಲ. ಇವತ್ತು ಅದಕ್ಕೂ ಕಾಲ ಕೂಡಿ ಬಂದಂತಿತ್ತು. ಮನಸಲ್ಲೇ ಚೆನ್ನೈ ಎಕ್ಸ್ಪ್ರೆಸ್ ಓಡಿಸುವ ಇಂಜಿನ್ ಡ್ರೈವರ್ ಗೆ ಸ್ಮರಿಸಿ ಸರ್ವಿಸ್ ಕೌಂಟರ್ನಲ್ಲಿ ಇಟ್ಟ ಆರೂವರೆ ಇಂಚಿನ ಗಾಜಿನ ಗ್ಲಾಸಿಗೆ ಸ್ಟ್ರೋ ಹಾಕಿದೆ.

ನನ್ನ ಕೈಯಲ್ಲಿನ ಒಂದೇ ಗ್ಲಾಸ್ ಮತ್ತು ಅದರಲ್ಲಿನ ಒಂದೇ ಸ್ಟ್ರೋ ನೋಡಿ ಆಕೃತಿ ಸಲ್ಪ ಸಂಶಯದಿಂದಲೇ ನೋಡಿದಳು. ನಾನು "ಇಲ್ಲಿ ಒನ್ ಬೈ ಟು ಸರ್ವಿಸ್ ಇಲ್ಲ, ಒಂದೇ ಗ್ಲಾಸ್ ಸೇರ್ವ್ ಮಾಡುತ್ತಾರೆ.. ಒಂದೇ ಸ್ಟ್ರೋ ನೂ !!" ಎಂದು ಹೇಳಲು
"ನಿಂಗೆ ಬೇಕಾದದ್ದು ಅದೇ ಆಲ್ವಾ ಎಂದು ಮುಗುಳ ನಕ್ಕಳು"
ಕಣ್ಣನ್ನು ಎರಡು ಬಾರಿ ಮಿಟುಕಿಸಿ ಅವಳ ಎದುರಿಗೆ ಬಂದು ಕುಳಿತೆ. ಆವಳು ಬದಿಯಲ್ಲಿ ಇದೆ ರೀತಿ ಒನ್ ಬೈ ಟು ಮಾಡುತಿದ್ದ ಜೋಡಿಯನ್ನು ನೋಡಲು ಹೇಳಿದಳು.
ನಾನು "ಅದರಲ್ಲೇನಿದೆ ವಿಶೇಷ ..?"
"ಅವರನ್ನಲ್ಲಾ, ಡಂಬು .. ಅವರ ಗ್ಲಾಸ್ ನೋಡು.. ಒಂದೇ ಗ್ಲಾಸ್ ಇದೆ ಆದರೆ ಎರಡು ಸ್ಟ್ರೋ ಇದೆ ! ನೋಡಿದೆಯ ..?"

ಒನ್ ಬೈ ಟು ಸರ್ವಿಸ್ ಇಲ್ಲ ಎಂದಾಗ ಒಂದೇ ಸ್ಟ್ರೋ ನಲ್ಲಿ ಅವಳ ರಸವನ್ನು ಸವೆಯ ಬಹುದು ಎಂದು ಮೇಲೆ ಹಾರಿದ್ದ ಜೀವ ಒಮ್ಮೆಲೇ ಗಾಳಿ ಬಿಟ್ಟ ಬಲೂನಿನಂತೆ ಸರ್ವಿಸ್ ಕೌಂಟರ್ ಕಡೆಗೆ ಟುಸ್ಸ್ ಎನ್ನುತ್ತಾ ಹಾರಿತು. ಅಸಲಿಗೆ ನಾನು ಎರಡನೇ ಸ್ಟ್ರೋ ತೆಕೊಳ್ಬಹುದಿತ್ತು, ಉದ್ದೇಶ ಪೂರ್ವಕವಾಗಿಯೇ ತೆಕ್ಕೊಂಡಿರಲಿಲ್ಲ, ಈಗ ಇನ್ನೊಮ್ಮೆ ಕೌಂಟರ್ ಗೆ ಬಂದ ನನ್ನನು ಆ ಹುಡುಗ ಇನ್ನೂ ಸಂಶಯ ಮತ್ತು ಗೇಲಿಯ ನೋಟದಿಂದ ನೋಡುತಿದ್ದ.

ಅವಳ ಆ ತೀಕ್ಷ್ಣ ನೋಟಕ್ಕೂ ನನ್ನ ಬೆಂಡಾದ ನೋಟಕ್ಕೂ ಬರೇ ೪ ಇಂಚಿನ ದೂರ, ಆದರೂ ಆ ಕಣ್ಣು ಗಳನ್ನೂ ನೋಡಲಾಗದಷ್ಟು ನಾಚಿಕೆ ನನಗೂ ಅವಳಿಗೂ; ಕರಗುತಿದ್ದ ಮಿಲ್ಕಿ ಬಾರ್ ಅನ್ನು ಇಬ್ಬರೂ ಸವೆಯುವುದರಲ್ಲಿ ವ್ಯಸ್ತ ವಾಗಿದ್ದೆವು. ಇಬ್ಬರ ಕಣ್ಣು ಗ್ಲಾಸಿನ ಒಳಗೆ ನೆಟ್ಟಿದ್ದರೂ, ಗ್ಲಾಸ್ನಲ್ಲಿ CAD-m  ಮುಗಿದಿರುವ ವಿಚಾರ ಇಬ್ಬರ ಗಮನಕ್ಕೂ ಬರಲಿಲ್ಲ.

೨೦ ಸೆಕೆಂಡ್ಸ್ ಗಳ ವರೆಗೆ ಕೆಳಗಿನಿಂದ ಒಂದು ಹನಿಯು ಮೇಲೆ ಬಾರದನ್ನುನೋಡಿ ಕಣ್ಣಿನ ಝೂಮ್ ಅನ್ನು ಕಮ್ಮಿ ಮಾಡಿ ಗಾಜಿನ ಕೆಳಗೆ ನೋಡಿದೆ. ಕೆಳಗಿನ ಟೇಬಲ್ ಸ್ವಚ್ಚ ವಾಗಿ ಗೋಚರಿಸುತ್ತಿತ್ತು. ಒಂದು ಹನಿಯು ಉಳಿದಿರಲಿಲ್ಲ.ಅಂಗಲ್ ಆಫ್ ಎಲಿವಶನ್  ಮತ್ತೆ ವ್ರದ್ದಿಸುತ್ತ ಹೋದೆ, ಆ ತೀಕ್ಷ್ಣ ನೋಟ ಇನ್ನೂ ಕೆಳಗೆ ಇತ್ತು, ಗ್ಲಾಸನ್ನು ಹಿಡಿದ ಆ ಮೃದು ಕೈಯನ್ನು ಒಮ್ಮೆ ಮುಟ್ಟಲು, ಎಲ್ಲೋ ಕಳೆದು ಹೋಗಿದ್ದ ಆಕೃತಿ ಮತ್ತೆ ಕಾರ್ವೆ ರೋಡಿಗೆ ಬಂದಿಳಿದಳು.

ಅವಳ ಮೊಬೈಲ್ ಮತ್ತೆ ರಿಂಗಿಣಿಸಿತು. ಆವಳು "ಅವರು ಆಗಲೇ ತಲುಪಿದರು, ಎಲ್ಲಿದ್ದಿರಿ ಹೇಳಿ ಕೇಳ್ತಾ ಇದ್ದಾರೆ.. ಹುರ್ರಿ ಅಪ್ .." ಅಂದ್ಲು.

ಇನ್ನೇನು ಪ್ರೇಮ ಕಾದಂಬರಿಯ ಮೊದಲ ಪ್ರೇಮಗೀತೆ ಶುರು ಆಗಬೇಕು ಎನ್ನುವಷ್ಟರಲ್ಲಿ ಕ್ಲೈಮಾಕ್ಸ್ ಬಂದಂತಾಯಿತು. ನಾನು ಅವಳಲ್ಲಿ "ಒಟ್ಟು ಹತ್ತು ಮಂದಿ ಇದ್ದರಲ್ಲ ಅವರು, ಇಲ್ಲಿಂದಲೇ ಸುಮೋ ಬಾಡಿಗೆಗೆ ತೆಕ್ಕೊಂಡು ಹೋಗೋಣ ಸ್ಟೇಶನ್ ಗೆ, ಇಲ್ಲನ್ತಾದ್ರೆ ಅಲ್ಲಿ ಅವರು ಕೇಳಿದ ರೇಟ್ ಗೆ ಸುಮೋ ಬುಕ್ ಮಾಡಬೇಕಾಗುತ್ತೆ " ಅಂದೆ. ಆವಳು ಅದಕ್ಕೆ ಸಮ್ಮತಿಸಿದಳು.

ಪಕ್ಕದಲ್ಲಿರುವ ಚೌ ರಾಸ್ತದಲ್ಲಿ ಎರಡು ಸುಮೋ ಗಳನ್ನೂ ಒಪ್ಪಿಸಿ, ಇಬ್ಬರೂ ಸ್ಟೇಷನ್ ಕಡೆಗೆ ನಡೆದೆವು.
 

ಸ್ಟೇಶನ್ ನಿಂದ ಐದೈದು ಮಂದಿಯನ್ನು ಒಂದೊಂದು ಸುಮೋ ದಲ್ಲಿ ಹಾಕಿ ಪಿಮ್ಪಿರಿ ಕಡೆಗೆ ಹೋಗುತಿತ್ತು. ಆಕೃತಿ ಹಿಂದಿನ ಸೀಟ್ ನಲ್ಲಿ ತೆಕ್ಕೊಂಡ ಕೇಕ್ ಹಿಡಿದು ಕುಳಿತಿದ್ದಳು; ಕನಸಿನ ಲೋಕದಲ್ಲಿ ನಾನು ಮುಂದಿನ ಸೀಟ್ ನಲ್ಲಿ ಬೈಕ್ ಬಿಡುತಿದ್ದೆ. ನಗರದ ಹೊರಗೆ ಒಂದು ಡಾಬಾದಲ್ಲಿ ರಾತ್ರಿಯ ಊಟ ಮುಗಿಸಿ ಎಲ್ಲರು ಫ್ಯೂಚರ್ ಡೇಸ್ ಕಡೆಗೆ ಪಯಣ ಬೆಳೆಸಲು, ನಮ್ಮಿಬ್ಬರ ನಡುವೆ ಬೆರಿಕೆಡ್ ತರಹ ಇದ್ದ ಕೇಕ್ ಅನ್ನು ಒಂದು ಸುಮೋ ನಲ್ಲಿ ಇಡಲು ಸುಮೋ ದಲ್ಲಿದ್ದ ಆಕೃತಿಯ ಗೆಳತಿ ಹೇಳಿದ್ದು ಹಾರುವ ಮನಸ್ಸಿಗೆ ಇನ್ನೊಂದು ಆಗಸ ಸಿಕ್ಕಂತಾಯಿತು.

ಅವರನ್ನು ಹಿಂದೆ ಬಿಟ್ಟು ಎರಡು ಜೀವ ಹೈವೇಯಲ್ಲಿ ಒಬ್ಬರನ್ನೊಬ್ಬರು ತಬ್ಬಿ ಫ್ಯೂಚರ್ ಡೇಸ್ ಕಡೆಗೆ ಮುನ್ನುಗುತಿತ್ತು.

ಮುಂದಿನ ಸಿಪ್