ಸಿಪ್ - ೧೪
ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ....
ಎರಡು ತಿಂಗಳ ಹಿಂದೆ ಫ್ಯೂಚರ್ ಡೇಸ್ ಜನರಿಲ್ಲದೆ ಭಿಕೋ ಎನ್ನುತಿತ್ತು, ಇವತ್ತು ಇಲ್ಲಿ ಕಳೇನೆ ಬದಲಾಗಿತ್ತು. ಎಲ್ಲ ಮೂರು ಮಾಳಿಗೆಯಲ್ಲಿ ವಸತಿ ತುಂಬಿ ಹೋಗಿತ್ತು. ಬೈಕ್ ಅನ್ನು ಹೊರ ನಿಲ್ಲಿಸಿ ಆಕೃತಿ ಮತ್ತು ನಾನು ಗೆಸ್ಟ್ ಹೌಸ್ ನ ರಿಸೆಪ್ಶನ್ ತಲುಪಿ ಇವತ್ತಿನ್ನಿಂದ ಮುಂದಿನ ೮ ದಿನಗಳವರೆಗೆ Dream - tech ಅಲ್ಲೋಕೆಟ್ ಆದ ರೂಂ ಗಳ ಬಗ್ಗೆ ಮಾಹಿತಿ ಕೇಳಿದೆವು.
ರಿಸೆಪ್ಶನ್ ನಲ್ಲಿ ಕುಳಿತ ಚೀನೀ ಕಣ್ಣಿನ ನಲವತ್ತು ಸಮೀಪಿಸಿದ ರೆಸೆಪ್ಶನಿಷ್ಟ್ Dream - tech ಗೆ ಒಟ್ಟಿಗೆ ೧೮ ರೂಂ ಅಲ್ಲೋಕೆಟ್ ಆಗಿದೆ ಎಂದು ಹೇಳಲು ನಾವಿಬ್ಬರು ಹೌಹಾರಿದೆವು. ಪುಣೆ ಯಲ್ಲಿನ Dream - tech ನಲ್ಲಿ ಒಟ್ಟು ನಾವು ಜೋಯಿನ್ ಅದ ಬಳಿಕ ಗಣತಿ ೪೦ ಕ್ಕೆ ಏರಿತ್ತು, ಅದೇ ಈ ಹೊಸ ಬಾಚ್ ಒಂದರಲ್ಲೇ ೧೮ ರೂಮ್ಸ್ ಎಂದರೆ ೩೬ ಹೊಸ ಉದ್ಯೋಗಿಗಳನ್ನು ಸೇರಿಸಲಾಗಿತ್ತು. ಬಳಿಕ ಅವನಲ್ಲಿ ಚೆನ್ನೈ ಇಂದ ಬಂದ ೧೦ ಮಂದಿಗೆ ಅಲ್ಲೋಕೆಟ್ ಆಗಿರುವ ರೂಂ ಬಗ್ಗೆ ಕೇಳಿದಾಗ ಅವನು ೪ ಹುಡುಗಿಯರಿಗೆ ಮೀಸಲಿಟ್ಟ ೨ ರೂಂ ಕೀ ಕೊಟ್ಟ, ಹುಡುಗರಿಗೆ ಎಲ್ಲ ರೂಂ ತುಂಬಿದೆ ಆದಕಾರಣ ಮೇಲಿನ ಮಹಡಿಯ ಕಾಂಫಾರೆನ್ಸ್ ರೂಂ ನಲ್ಲಿ ೩ ದಿನ ವ್ಯವಸ್ತೆ ಮಾಡಿರುವೆ, ಬುಧವಾರದಿಂದ ಕೆಳಗೆ ರೂಂ ನಲ್ಲಿ ವ್ಯವಸ್ತೆ ಮಾಡುವೆ ಎಂದು ಹೇಳಿದ.
ಪಾಪ ಹುಡುಗರ ಪಾಡು ನಾಯಿಪಾಡು ! ಒದಿಸಿಕ್ಕೊಂಡಂತೆ ಒದಿಸಿಕ್ಕೊಂದಿರಬೇಕು!!
ಆಕೃತಿಯಲ್ಲಿ "ಒಂದು ನಿಮಿಷ ಇಲ್ಲೇ ನಿಲ್ಲು" ಹೇಳುತ್ತಾ ನಿಂತ ಬೈಕ್ ನ ಕ್ಯಾರಿಯರ್ ನಲ್ಲಿ ಇಟ್ಟ ಬೆಳಗ್ಗೆ ಮಾಲ್ ನಿಂದ ತಂದ ಬಣ್ಣದ ಕಾಗದ ಮತ್ತು ಬಲೂನ್ ಗಳನ್ನೂ ತೆಗೆದು ರೆಸೆಪ್ಶನಿಸ್ಟ್ ನಲ್ಲಿ ಕೀ ಇಸ್ಕೊಂಡು ಸೀದಾ ನಾಲ್ಕನೇ ಮಹಡಿಗೆ ಹೋದೆವು.
20 X 20 ಯ ದೊಡ್ಡದಾದ ಕಾನ್ಫೆರೆನ್ಸ್ ಹಾಲ್ ನಡುವಿನ ಟೇಬಲ್ ತೆಗೆದು ಅಲ್ಲಿ ೬ ಜನರಿಗೆ ಮಲಗಲು ಅನುಕೂಲ ವಾಗುವಂತೆ ಕೊಟ್ ಹಾಕಿದ್ದರು. ಗಾಲಿಗಲಿರುವ ೩ ವಲ್ದ್ರೋಬ್ ಕೂಡ ಮೂರು ಮೂಲೆಯಲ್ಲಿ ಇಟ್ಟಿದ್ದರು, ಬಳಿಯಲ್ಲೇ ೨ ಟೇಬಲ್ಗಳು. ಆಕೃತಿ ನಾನು ಸೇರಿ ಎಲ್ಲ ಕೂತ ಗಳನ್ನೂ ಬಾಡಿಗೆ ಸರಿಸಿ ತಂದಿದ್ದ ಬಲೂನ್ ಗಳಿಗೆ ಗಾಳಿ ತುಂಬಿಸುವ ಬರದಲ್ಲಿದ್ದಾಗ 'ಒರು ಮಾಲೈ' ಮತ್ತೆ ರಿನ್ಗಿಣಿಸಿತು.
"ಅರರೆ ಪ್ರೀತಿ, ಸಾರೀ ಕಣೆ ಮರ್ತೆ ಕಣೇ, ಸಲ್ಪ ಬ್ಯುಸಿ ಇದ್ದೆ"
"ಹೌದು ಮಹರಾಯ !! ಮರಿಯದೇ ಏನು, ಊರು ಬಿಟ್ಟ ಮೇಲೆ ಇಲ್ಲಿ ಹುಡುಗಿಯನ್ನು ಸೆಟ್ಲ್ ಮಾಡಿ ಕೊಂಡಿರುವ ನಿನಗೆ ಈ ಹಳೆ ಗೆಳತಿಯ ನೆನಪಾದರು ಹೇಗೆ ಬರುತ್ತೆ.."
"ಹೇ, ಇಲ್ಲ ಪ್ರೀತಿ ಹಾಗಲ್ಲ, ಯಾರನ್ನೋ ಭೇಟಿ ಮಾಡುವುದಿತ್ತು, ಹಾಗೆ ಹಿಡಿ ದಿನ ಬ್ಯುಸಿ ಆಗಿದ್ದೆ, ಇನ್ನೂ ಅವರೊಂದಿಗೆ ಇದ್ದೇನೆ, ಹೇಗೂ ನಾಳೆ ನೀನು ಆಫೀಸ್ ನಲ್ಲಿ ಸಿಗುತ್ತಿಯಲ್ಲ! ಅಂದುಕ್ಕೊಂಡೆ"
"ಹೋಗೋ .. ಗೊತ್ತಿಲ್ಲದ ಪುಣೆಯಲ್ಲಿ ನೀನಾದ್ರು ನನ್ನ ಜೊತೆ ಇರ್ತಿಯ ಅನ್ಕ್ಕೊಂಡಿದ್ರೆ, ಇಲ್ಲಿ ನಿಂಗೆ ನಾನ್ ಬೇಡವಾಗಿದ್ದೇನೆ"
"ಹೇ, ಇಲ್ಲ ಕಣೇ.. ಸಲ್ಪ ಬ್ಯುಸಿ ಇದ್ದೆ ಅಷ್ಟೇ, ಸಣ್ಣ ವಿಷಯವನ್ನು ಇಷ್ಟು ದೊಡ್ಡದು ಮಾಡ್ತಿ ಅನ್ಕ್ಕೊಂಡಿರಲಿಲ್ಲ"
"ಹೌದು, ಸಣ್ಣ ವಿಚಾರನೇ, ಅದು ಬಿಡು ನಾನು ಕೇಳಿದ ಒಂದು ಹೆಲ್ಪ್ ಅದನ್ನಾದ್ರು ಮಾಡಿದ್ದಿಯ..?"
"ಏನಪ್ಪಾ ಹೆಲ್ಪ್ ನೀನು ಕೇಳಿದ್ದು..."
"ನೋಡು ಮರ್ತು ಬಿಟ್ಟೆ ನೋಡು.. ಮಹಾರಾಷ್ಟ್ರದ ಸಿಮ್"
"ಅರ್ರೆ, ಅದನ್ನು ಮರ್ತು ಹೋದೆ"
"ಯಾವುದಕ್ಕೂ ಪ್ರೋಯೋಜನವಿಲ್ಲ, ಬೇರೆ ಯಾರಾದ್ರು ಹುಡುಗೀರು ಹೆಲ್ಪ್ ಕೇಳಿದ್ರೆ ಓಡೋಡಿ ಮಾಡ್ತಿದ್ರು.. ನಿನೊಬ್ಬ ಇದ್ದೀಯ ವೇಸ್ಟ್ ಫೆಲ್ಲೋ"
"ಸಾರೀ ಕಣೇ .."
"ಇದಕ್ಕೇನು ಕಮ್ಮಿ ಇಲ್ಲ .. ನೀನು ಹೊರಗಿದ್ದಿ ಅಂದಿಯಲ್ಲ, ಈ ನಂಬರ್ ಗೆ ೧೦೦ ರ ಟೋಪುಪ್ ಆದರು ಹಾಕ್ಸಿ ಪುಣ್ಯ ಕಟ್ಕೊ!!"
"ಸರಿ, ಸಮಯ ಮತ್ತು ಟೋಪುಪ್ ಕೌಂಟರ್ ಎರಡೂ ಸಿಕ್ಬೇಕು ಈ ರಾತ್ರಿಯಲ್ಲಿ, ಆಗ ನಂಗೆ ಪುಣ್ಯ ಸಿಕ್ಕಿದಂತೆ !"
"ಮಾತಾಡ್ಲಿಕ್ಕೆ ಒಂದು ಬರುತ್ತೆ, ಅದನ್ನು ಬಿಟ್ರೆ ನೀನು ಗುಡ್ ಫಾರ್ ನತಿಂಗ್, ಸರಿ ಸರಿ ನಿನ್ನತ್ರ ಮಾತಾಡ್ತಾ ಇದ್ರೆ ಇದ್ದ ಬೆಲನ್ಸೂ ಆಗ್ ಹೋಗುತ್ತೆ ! ನಾನು ಕಾಲ್ ಇಡ್ತೇನೆ , ನಾಳೆ ಬೆಳಗ್ಗೆ ಮರಿಬೇಡ ಸಿಮ್ ತೆಕ್ಕೊಂಡು ಬರಬೇಕು! ಮತ್ತು ಹೇಳಿದ ಟೋಪುಪ್ ಅನ್ನು ಮರೀದೆ ಹಾಕು"
"ಅಲ್ಲಾವುದ್ದೀನ್ ನ ಜೀನಿ ಗೆ ಹತ್ತರ ಜೊತೆ ಹನ್ನೊಂದನೇ ಕೆಲಸ ಸಿಕ್ತು !!"
"ಸರಿ ಸರಿ , ಬಾಯ್, ಗುಡ್ ನೈಟ್ , ಸ್ವೀಟ್ ಡ್ರೀಮ್ಸ್!!"
"ಬಾಯ್"
ಕಾಲ್ ಕಟ್ ಮಾಡಿ ಹಿಂದಿನ ಜೇಬಿನಲ್ಲಿದ್ದ ವಾಲೆಟ್ ತೆಗೆದು ಕೊಂಡ ಹೊಸ ಸಿಮ್ ಇದೆಯಾ ಹೇಳಿ ಖಾತ್ರಿ ಪಡಿಸಿಕ್ಕೊಂಡೆ. ನನ್ನ ಪುಣ್ಯಕ್ಕೆ ವಾಲೆಟ್ ಒಳಗೆ ಇಟ್ಟಿದ್ದೆ !! ಆಕೃತಿ ೪ ಬಲೂನಿಗೆ ಆಗಲೇ ಗಾಳಿ ಊದಿ ಉಬ್ಬಿಸಿದ್ದಳು. ಐದನೇ ಬಲೂನ್ ಅನ್ನು ಅರ್ದಕ್ಕಿಂತ ಹೆಚ್ಚು ಉಬ್ಬಿಸಿವುದರಲ್ಲಿ ನಿರತವಾಗಿರುವಷ್ಟರಲ್ಲಿ ಅಲ್ಲೇ ಟೇಬಲ್ ಮೇಲೆ ಇತ್ತ ಅವಳ ಮೊಬೈಲ್ ನಡುಗಲು ಶುರುಮಾಡಿತು. ಬಳಿಯಲ್ಲೇ ಇದ್ದ ನಾನು "ಯಾರೋ, ಶ್ರೀಶಾ.."
"ಅವರು ಬಂದ್ ಬಿಟ್ರು ! ಡಂಬು ನಾನ್ ಹೋಗ್ತೇನೆ!" ಹೇಳುತ್ತಾ ಕೈಯಲ್ಲಿದ್ದ ಬಲ್ಲೂನು ನನ್ನ ಕೈಯಲ್ಲಿ ಕೊಟ್ಟು ನನ್ನಲ್ಲಿದ್ದ ಆ ಮೊಬೈಲ್ ನ ಹಸಿರು ಗುಂಡಿ ಒತ್ತುತ್ತಾ ಹಲೋ "ಶ್ರೀ "ಎನ್ನುತ್ತಾ ಹೊರ ತಿರುಗಿದಳು.
ಅರ್ದ ತುಂಬಿದ್ದ ಬಲೂನ್ ನನಗೆ ಜೀವ ವಾಯು ಕೊಟ್ಟಂತೆ ಆಯಿತು. ಸಂಜೆ ಅವಳ ಅಧರದ ರುಚಿಯನ್ನು ಪರೋಕ್ಷವಾಗಿ ಅನುಭವಿಸಿದವನಿಗೆ ಈಗ ಪೂರ್ಣ ಸ್ವಾಧ ಅನುಭವಿಸುವ ಸುಖ! ಕೊಟ್ಟ ಬಲೂನ್ ಗೆ ನನ್ನ ಕಾರ್ಬೋನ್ ಡೈ ಆಕ್ಸೈಡ್ ಸೇರಿ ಹಿರಿ ಹಿರಿ ಹಿಗ್ಗುತಿತ್ತು, ಜೊತೆಗೆ ನಾನೂ !! ಬಾಗಿಲಿನಂಚಿನಲ್ಲಿ ಆಕೃತಿ ತಿರುಗಿ ನನ್ನ ಸಂಭ್ರಮ ನೋಡಿ ತಲೆಗೆ ಹೊಡೆದುಕ್ಕೊಂಡಳು !
ಇನ್ನೂ ಅದನ್ನು ಹಿಗ್ಗಿಸಿದರೆ ಎಲ್ಲಿ ಒಡೆದು ಅದು ೭ ಶತ ಕೋಟಿ ಜನರ ಕಾರ್ಬೋನ್ ಡೈ ಆಕ್ಸೈಡ್ ನೊಡನೆ ಬೇರೆಯಿತೋ ಎಂಬ ಕಾಳಜಿ ಗೊತ್ತಾಗದಂತೆ ಮೂಡಿತು! ಇನ್ನು ಅದನ್ನು ಹಿಗ್ಗಿಸಲು ಮನಸ್ಸು ಒಪ್ಪಲಿಲ್ಲ. ಅರ್ದ ಮಿಲ್ಲಿ ಮೀಟರ್ ನ ಪರದೆಯಲ್ಲಿ ಕಾಣದಂತೆ ಬಂದಿಯಾದ ಇಬ್ಬರ ಉಸಿರನ್ನು ಜೋಪಾನ ವಾಗಿ ಇಡುವ ಮನಸ್ಸಾಯಿತು !! ಅರ್ದಕ್ಕೆ ಆ ಬಲೂನ್ ಅನ್ನು ನಿಲ್ಲಿಸಿ ಗಂಟು ಕಟ್ಟಿ ಬದಿಯಲ್ಲಿ ಇದ್ದ ಕೊಟ್ ನ ಕೆಳಗೆ ಅದನ್ನು ಎಸೆದೆ.
ಮುಂದಿನ ೧೦ ನಿಮಿಷದಲ್ಲಿ ಉಳಿದ ಬಲೂನ್ ಗಳನ್ನೂ ಗಾಳಿ ತುಂಬಿಸಿ ಆ ಕಾಂಫಾರೆನ್ಸ್ ರೂಂ ಶ್ರಿಂಗರಿಸುವಾಗ ಗಂಟೆ ೧೧ ೪೫ ದಾಟಿತ್ತು. ಕೆಳಗೆ ಮೂರನೇ ಮಹಡಿಯಲ್ಲಿ ಚೆನ್ನೈ ಗೆಳೆಯರೊಡನೆ ಆಕೃತಿ ಬ್ಯುಸಿ ಆಗಿದ್ದಳು. ನಾನು ಸೀದಾ ಕೆಳಗಿನ ರಿಸೆಪ್ಶನ್ ಗೆ ಹೋಗಿ ಎಲ್ಲ ೧೮ ರೂಂ ನ ವಿವರ ಪಡೆದು ಪ್ರತಿಯೊಂದು ರೂಮಿನವರಿಗೆ ಇವತ್ತಿನ ಸರ್ಪ್ರೈಸ್ ಪಾರ್ಟಿ ಯ ವಿವರ ಒದಗಿಸಿದೆ. ಪ್ರೀತಿಯ ರೂಮಿಗೆ ಎಲ್ಲರು ಜೊತೆಗೆ ಹೋಗುವ ಮಾತಾಯಿತು.
ಆಕೃತಿ ನನ್ನಲ್ಲಿ "ನೀನು ಅವಳ ಎದುರಿಗೆ ಬರ ಬೇಡ, ನೀನು ಮೇಲಿರು ಅವಳಿಗೆ ಸರ್ಪ್ರೈಸ್ ಕೊಡೋಣ !" ಅಂದಳು. ನನಗೂ ಹೌದೆನಿಸಿತು.
ನಾನು ಮೇಲಿನ ಕಾನ್ಫೆರೆನ್ಸ್ ರೂಂ ಗೆ ಹೋಗಿ ಕೊನೆ ಗಳಿಗೆಯ ಎಲ್ಲ ತಯಾರಿ ಮಾಡಿ ೧೨ ರ ನಿರೀಕ್ಷೆಯಲ್ಲಿ ಕುಳಿತುಕ್ಕೊಂಡೆ.
೧೨ ಕ್ಕೆ ಎರಡೂ ನಿಮಿಷ ಇರುವಂತೆ ಆಕೃತಿ ೩೬ ಮಂದಿಯ ಜೊತೆಗೆ ಬರ್ತ್ಡೇ ಬೇಬಿ ಪ್ರೀತಿಯೊಂದಿಗೆ ಮೇಲೆ ಬಂದಳು! ಪ್ರೀತಿ ಬಾಗಿಲು ತೆರೆಯುತಿದ್ದಂತೆ ರೂಂ ಒಳಗೆಲ್ಲ ಅಂಧಕಾರ ನಡುವಲ್ಲಿ ಒಂದು ಟೇಬಲ್ ಮೇಲೆ ಉರಿಯುತ್ತಿರುವ ಮೊಂಬತ್ತಿ ಹಿಡಿ ಕಾನ್ಫೆರೆನ್ಸ್ ಅನ್ನು ಮಂದ ಬೆಳಕಿನಲ್ಲಿ ಹೊಳೆಯುವಂತೆ ಮಾಡಿತ್ತು, ಬಾಗಿಲಿನ ಬಳಿಯಲ್ಲಿ ನಿಂತಿದ್ದ ನನ್ನನು ಪ್ರೀತಿ ಗಮನಿಸಲಿಲ್ಲ, ಆ ೩೮ ರ ಗುಂಪಲ್ಲಿ ನಾನು ಸೇರಿಕ್ಕೊಂಡೆ!
ಪ್ರೀತಿ ನಡುವಿನ ಟೇಬಲ್ ನೋಡಿ "ಹೇ !! ಇಟ್ಸ್ ಮೈ ಬರ್ತ್ ಡೇ !!" ಅಂದ್ಲು.
ಅಲ್ಲಿ ಒಟ್ಟಾದ ಎಲ್ಲರೂ "ಎಸ್ ಇಟ್ ಇಸ್ !"ಎಂದು ಜೊತೆ ಗೂಡಿದರು.
ಅವಳು "ಆದ್ರೆ ಇದೆಲ್ಲ ನಿಮಗೆ ..?"
"ಸರ್ಪ್ರೈಸ್ !!" ಅಂದ್ರು.
ಎಲ್ಲರೂ ಆ ಸರ್ಕ್ಯುಲರ್ ಟೇಬಲ್ ಗೆ ಮುತ್ತಿ ಕೊಂಡರು, ಅವಳ ಬಲ ಬದಿಯಲ್ಲಿ ಆಕೃತಿ, ಆಕೃತಿಯ ಹಿಂದೆ ನಾನು ನನ್ನನ್ನು ಅಡಗಿಸಿಕ್ಕೊಂಡಿದ್ದೆ. ಪ್ರೀತಿ ಮೇಲಿನ ಕೆಂಡಲ್ ನಂದಿಸಿದಳು, ರೂಮಲ್ಲಿ ಅಂದಕಾರ ಮೂಡಿತು! ಹೊಸ ಗುಂಪಿನಲ್ಲಿ ಯಾರೋ ತನ್ನ ಮೊಬೈಲ್ ನಿಂದ ಬೇಕಾದಷ್ಟು ಬೆಳಕನ್ನು ಕೇಕ್ ಇರುವ ಟೇಬಲ್ ಮೇಲೆ ಚೆಲ್ಲಿದರು.ಪ್ರೀತಿ ಬದಿಯಲ್ಲಿದ್ದ ಪ್ಲಾಸ್ಟಿಕ್ ಚೂರಿಯಿಂದ ಆ ಕೇಕ್ ಅನ್ನು ಕತ್ತರಿಸಿ, ತನ್ನ ಪಕ್ಕದಲ್ಲಿದ್ದ ಆಕೃತಿಯ ಬಾಯಿಗೆ ಹಾಕಲು ಮುಂದಾದಳು, ಆಕೃತಿ ಅಲ್ಲಿ ಇರಲಿಲ್ಲ, ನನ್ನನ್ನು ಅವಳ ಸ್ತಳಕ್ಕೆ ಪಲ್ಲಟಿಸಿದ್ದಳು!
ನನ್ನ ಬಾಯಲ್ಲಿ ಕೇಕ್ ಹಾಕುತಿದ್ದಂತೆ ಯಾರೋ ಇನ್ನಿಬ್ಬರು ರೂಂ ನ ದೀಪಗಳನ್ನು ಬೆಳಗಿದರು!!
ಎದುರಲ್ಲಿ ನನ್ನ ಕಂಡು ಪ್ರೀತಿ "ಹೇ ವೈಭೂ !!! ನಿನ್ ಪ್ಲಾನ್ ಏನೋ ಇದೆಲ್ಲ !! ಸೋ ಸ್ವೀಟ್ ಆಫ್ ಯು !!!"
"ಹ್ಯಾಪಿ ಬರ್ತ್ ಡೇ ಪ್ರೀತಿ !!" ಹೇಳುತ್ತಾ ನನ್ನ ಬಾಯಲ್ಲಿದ್ದ ಕೇಕ್ ತುಂಡನ್ನು ತೆಗೆದು ಅವಳ ಬಾಯಿಗೆ ಹಾಕಿದೆ. ಅವಳು ಇನ್ನೂ ಆಶ್ಯರ್ಯ ಚಕಿತಳಾಗಿದ್ದಳು. ಈ ರೀತಿಯ ಸರ್ಪ್ರೈಸ್ ಅವಳು ನಿರೀಕ್ಷಿಸಿರಲಿಲ್ಲ ಎನ್ನುವುದು ಅವಳ ಭಾವದಿಂದಲೇ ವ್ಯಕ್ತವಾಗುತ್ತಿತ್ತು.
ಪ್ರತಿಯೊಬ್ಬರು ಮುಂದೆ ಬಂದು ಅವಳಿಗೆ ವಿಷಸ್ ತಿಳಿಸಿದರು, ಪ್ರತಿಯೊಬ್ಬರಿಂದಲೂ ಶುಭಾಷಯ ವಿನಿಮಯ ಮಾಡುತ್ತಾ ನನಗೆ ಕ್ರುತಜ್ಯ ನೋಟ ಬೀರುತಿದ್ದಳು!
ಬರೇ ಹತ್ತರಿಂದ ಹನ್ನೆರಡು ಮಂದಿಗೆ ಸಾಕಾಗುವಷ್ಟು ಕೂಲ್ ಡ್ರಿಂಕ್ ಮತ್ತು ಚಿಪ್ಸ್ ನಾವು ತಂದಿದ್ದೆವು, ಅದನ್ನು ಇದ್ದ ೩೮ ಮಂದಿನೂ ಸುದಾರಿಸಿಕೊಂಡರು!
ಬಳಿಕ ಎಲ್ಲ ೩೮ ಮಂದಿಗಳು ಪರಸ್ಪರ ಪರಿಚಯ ವಿನಿಮಯ ಮಾಡಿಕ್ಕೊಂಡರು. ಇಲ್ಲಿ ಭಾರತದ ವೈವಿದ್ಯತೆ ರಾರಾಜಿಸುತ್ತಿತ್ತು. ಕಾಶ್ಮೀರ ದಿಂದ ಕನ್ಯಾಕುಮಾರಿ, ಗುಜರಾತಿನಿಂದ ಗೋವ್ಹಾಟಿ ವರೆಗಿನ ಎಲ್ಲ ಪ್ರತಿನಿಧಿಗಳು ಈ ಗುಂಪಿನಲ್ಲಿದ್ದರು. ಬರೇ ಮರಾಟಿ ಗಳು ಎನ್ನುವ Dream - tech ಪುಣೆ ಬ್ರಾಂಚ್ ನ ಕೊರಗಿಗೆ ಒಂದು ಪರಿಹಾರ ದೊರಕಿದಂತಾಯಿತು. ಅದರಲ್ಲಿ ಪ್ರೀತಿಯನ್ನು ಬಿಟ್ಟರೆ ಯಾರೊಬ್ಬರು ಕರ್ನಾಟಕ ದವರಿಲ್ಲ ಎಂಬ ನ್ಯೂನ್ಯತೆ ನನಗೊಬ್ಬನಿಗೆ ಗೋಚರಿಸುತ್ತಿತ್ತು.
೧೨ :೧೫ ಆಗುತಿದ್ದಂತೆ ಎಲ್ಲರೂ ಅವರವರ ರೂಂ ಗೆ ಮರಳಿದರು. ಮೇಲಿನ ಹಾಲ್ ನಲ್ಲಿ ನಾನು, ಆಕೃತಿ, ಪ್ರೀತಿ.
ಪ್ರೀತಿಗೆ ಕೊಂಡುಕ್ಕೊಂಡ ಆ ಗಡಿಯಾರ ಎಂಬ ಪುಟ್ಟ ಉಡುಗೊರೆ ಕೊಟ್ಟೆ, ಅದನ್ನು ಸ್ವೀಕರಿಸಿ "ಹೊಸ ಗಳಿಗೆಗೆ ಜೋತೆಯಾದಿ ವೈಭು... ಐ ಮ್ ಸೊ ಗ್ರೇಟ್ಫುಲ್ ಫಾರ್ ಯು !!" ಅಂದಳು.
ಆಕೃತಿ "ಪ್ಲಾನ್ ನಲ್ಲಿ ನಾನು ಇದ್ದೇನೆ, ಬರಿ ಆ ಡಂಬು ಗೆ ಕ್ರೆಡಿಟ್ಸ್ ಆ ??"
"ಡಮ್ಬೂ... ಹೇ ನೈಸ್ ನೆಮ್ !!ನಿಜವಾಗಲು ಅವನು ಡಮ್ಬೂ ನೇ ನಾಲ್ಕು ವರ್ಷ ಒಂದು ಅಕ್ಷರ ಮಾತಾಡದ ಈ ವ್ಯಕ್ತಿ ಇವತ್ತು ಈ ರೀತಿ ಸರ್ಪ್ರೈಸ್ ಕೊಡ್ತಾನೆ ಅಂತ ಊಹಿಸಿರಲಿಲ್ಲ !!"
"ಹೇ ಟ್ರಾನ್ ಲೆಟರ್ ನೀನು ಸುಮ್ನಿರು!!" ಎಂದು ನಾನು ಆಕೃತಿಯ ಬಾಯಿ ಮುಚ್ಚಿಸಲು ಮುಂದಾದೆ.
" ಟ್ರಾನ್ ಲೆಟರ್ .. ಏನು ಡಮ್ಬೂ ಅವಳಿಗೂ ನೀನು ಹೆಸರಿಟ್ಟಿದ್ದಿಯಾ, ಚೆನ್ನಾಗಿದೆ ನಿಮ್ಮ ಕೆಮೆಸ್ಟ್ರಿ !!" ಪ್ರೀತಿಯ ಬಾಯಿಯಿಂದ ಡಂಬು ಎಂದು ಕರೆಸಿಕ್ಕೊಳ್ಳುವುದು ಇನ್ನೂ ಮುದ ನೀಡಿತು.
ಅಷ್ಟರಲ್ಲೇ ಮೇಲಿನ ರೂಂ ನಲ್ಲಿ ವಾಸ್ತವ್ಯ ಹೂಡಲಿರುವ ೬ ಹುಡುಗರು ಮೇಲೆ ಬಂದರು, ನಾವು ಅವರಿಗೆ ರೂಂ ಬಿಟ್ಟು ಕೆಳಗಿಳಿದೆವು.
ಪ್ರೀತಿ ನಮ್ಮನ್ನು ಬಿಡಲು ಕೆಳಗೆ ವರೆಗೆ ಬಂದಿದ್ದಳು, ಅವಳಿಗೆ ಬಾಯ್ ಎಂದು ಹೇಳಿ ಬೈಕ್ ಸ್ಟಾರ್ಟ್ ಮಾಡುವಷ್ಟರಲ್ಲಿ ಅವಳು "ವೈಭು ಸಿಮ್ ಮರಿ ಬೇಡ !, ಇದ್ದ ಬ್ಯಾಲೆನ್ಸ್ ಎಲ್ಲ ಖಾಲಿ ಆಗೋಯ್ತು ! ನೋಡು ಈ ಡಬ್ಬ ರೋಮಿಂಗ್ ಹೇಳಿ :("
"ಹೇ.. ಪ್ರೀತಿ, ಮರ್ತಿಲ್ಲಮ್ಮಾ, ಎರಡೂ ದಿನದಿಂದ ನಿನ್ನ ಸಿಮ್ ಜೊತೆಗೆ ಓಡಾಡ್ತಿದ್ದೇನೆ, ಅದಕ್ಕಾಗಿ ಬೇಕಾದಷ್ಟು ಬಾರಿ ಬೇಕಾದವರೊಡನೆ ಬೈಗುಳ ತಿಂದದ್ದು ಆಯಿತು, ತಕೋ ನಿನ್ ಸಿಮ್ ! ಅದೇನೋ ಪುಣ್ಯ ಬರುತ್ತೆ ಅಂದಿಯಲ್ಲ !! ಬೇಗನೆ ಪುಣ್ಯ ಬರಬೇಕಿದೆ." ಎನ್ನುತ್ತಾ ವಾಲೆಟ್ ಗೆ ಕೈ ಹಾಕಿದೆ.
ಅವಳಿಗೆ ಸಿಮ್ ಕೊಡಲು, ಮೇಲಿನ ರೂಂ ನಲ್ಲಿ ಬಿಟ್ಟ ಮೊಬೈಲ್ ನ ನೆನಪಾಗಿ "ಆಕೃತಿ ಒಂದು ನಿಮಿಷ ತಡಿ, ಮೊಬೈಲ್ ಮೇಲೆ ಬಾಕಿ ಆಗಿದೆ, ತಕ್ಕೊಂಡು ಬರ್ತೇನೆ " ಎನ್ನುತ್ತಾ ಮೇಲೇರಿದೆ.
ಆರು ಜನ ಕಟ್ಟಿದ್ದ ಎಲ್ಲ ಬಲೂನ್ ಗಳನ್ನೂ ಹೊಡೆದು ಚಿಂದಿ ಉಡಾಯಿಸಿದ್ದರು. ಒಮ್ಮೆಗೆ ಉಸಿರು ನಿಂತಂತಾಯಿತು. ಅವಳ ಉಸಿರೊಳಗೆ ಬೆರೆತ ನನ್ನುಸಿರು ಏಳು ಕೋಟಿ ಉಸಿರಿನೊಂದಿಗೆ ಸೇರಿದಂತಾಯಿತು. ಇಬ್ಬರು ಐದು ಕೊಟ್ ಗಳನ್ನೂ ಆಗಲೇ ಸೆಟ್ ಮಾಡಿಟ್ಟಿದ್ದರು. ಇನ್ನಿಬ್ಬರು ಕೊನೆಯ ಮೂಲೆಯಲ್ಲಿರುವ ಕೊಟ್ ಎತ್ತಿ ಸಾಗಿಸುವಲ್ಲಿ ನಿರತರಾಗಿದ್ದರು. ನನ್ನನ್ನು ಗಾಬರಿಯಲ್ಲಿ ನೋಡುತ್ತಾ "ವೈಭು ವಾಟ್ ಹಪ್ಪೆಂಡ್..?"
"ನನ್ನ ಮೊಬೈಲ್ "
"ಅಲ್ಲೇ ಇದೆ ನೋಡು "ಎನ್ನುತ್ತಾ ಬದಿಯಲ್ಲಿದ್ದ ಟೇಬಲ್ ಕಡೆಗೆ ಕೈಚಾಚಿದ. ಇನ್ನೊಂದು ಮೂಲೆಯಲ್ಲಿನ ಆ ಟೇಬಲ್ ಮೇಲಿಂದ ಮೊಬೈಲ್ ಎತ್ತಿಕ್ಕೊಂಡೆ.ತಿರುಗಲು ಇನ್ನೊಂದು ಮೂಲೆಯಲ್ಲಿ ಬಿದ್ದ ಬಲೂನ್ ಅನ್ನು ಒಬ್ಬ ದ್ರುಡಕಾಯಿ ದೇಹ ಎತ್ತಿ ಹೊಟ್ಟಿಸಲು ಹವಣಿಸುವುದು ನನ್ನ ಕಣ್ಣಿಗೆ ಬಿತ್ತು.
ಜೀವಕ್ಕೆ ಮತ್ತೆ ಹುರುಪು ಬಂತು.ಅದು ಅದೇ ಬಲೂನ್ ! ಇಬ್ಬರ ಉಸಿರು ಬೆಸೆದಿರುವ ಬಲೂನ್ !!
ನಾನು "ಪ್ಲೀಸ್ ಸ್ಟಾಪ್ !" ಎಂದು ಬೋಬ್ಬಿಟ್ಟೆ. ನನ್ನ ಪುಣ್ಯಕ್ಕೆ ಅವನ ಕೈಯೇಡೆಯಲ್ಲಿ ಸಿಲುಕಿದ್ದ ಆ ಬಲೂನ್ ಮತ್ತೆ ಜೀವ ಪಡೆದಂತೆ ನಗುತಿತ್ತು.
ಅವನಲ್ಲಿ ಆ ಬಲೂನ್ ಇಸ್ಸ್ಕೊಂಡು ಸ್ವರ್ಗವನ್ನೇ ಗೆದ್ದ ಖುಷಿಯಲ್ಲಿ ಮಾಳಿಗೆ ಮೆಟ್ಟಿಲು ಇಳಿದೆ. ನಡುವಲ್ಲಿ ಬಂದ ೭ ಮಿಸ್ ಕಾಲ್ ಕಾಲನ್ನು ನೋಡಲಿಲ್ಲ.. ಕಿಸೆಯಲ್ಲಿ ಇಟ್ಟ ಮೊಬೈಲ್ ಬಾರಿಸುತಿದ್ದ "ಒರು ಮಾಲೈ" ಕೇಳಲೂ ಇಲ್ಲ.
ಕೆಳಗಿಳಿದು ಪ್ರೀತಿಗೆ ಇನ್ನೊಮ್ಮೆ ಶುಭಾಷಯ ಕೋರಿ ಬಾಯ್ ಎನ್ನುತ್ತಾ ಬೈಕ್ ಸ್ಟಾರ್ಟ್ ಮಾಡಿದೆ.
ಪ್ರೀತಿ "ಥಾಂಕ್ಸ್ ಅ ಲೋಟ್ ವೈಭು, ಸಿಮ್ ಬದಲಾಯಿಸಿದೆ ! ನನ್ನ ನಂಬರ್ ಆಕೃತಿಗೆ ಕೊತೀದ್ದೇನೆ, ಅವಳ ಹತ್ತಿರ ತಕೋ"
"ನಂಗೆ ನಿನ್ ನಂಬರ್ ಗೊತ್ತಿದೆ ಗೂಬೆ !!"
ಅವಳನ್ನು ೭ ತಿಂಗಳ ನಂತರ ಗೂಬೆ ಎಂದು ಸಂಬ್ಹೊದಿಸುತಿದ್ದೆ, ಅವಳು "ಸರಿ ಮಂಗಾ !! ತುಂಬಾ ಥ್ಯಾಂಕ್ಸ್ !!!" ಎನ್ನುತ್ತಾ ಲಿಫ್ಟ್ ಗುಂಡಿ ಅದುಮಿದಳು.
ಹಿಂದೆ ಕುಳಿತ ಆಕೃತಿ "ಏನು ಡಮ್ಬೂ, ಡಂಬು ಅನ್ಕೊಂಡಿದ್ದೆ, ಒಂದೇ ದಿನದಲ್ಲಿ ಇಬ್ಬರನ್ನು ಬೀಳಿಸಿದೆಯಲ್ಲ !!"
"ಹೇ ಟ್ರಾನ್ ಲೆಟರ್, ಹಾಗೆ ಏನು ಇಲ್ಲ ಅವಳು ಬರೇ ಫ್ರೆಂಡ್"
"ನಿಂಗೇನೋ ಅವಳು ಬರಿ ಫ್ರೆಂಡ್ ಇರಬಹುದು, ಅವಳಿಗೆ ನೀನು ಅದಕ್ಕಿಂತ ಜಾಸ್ತಿ ಅಗ್ತಿದ್ದಿಯ ಅಂತ ನನಗೆ ಅನಿಸುತ್ತಿದೆ, ೨ ನಿಮಿಷದ ಅವದಿಯಲ್ಲಿ ನಿನ್ನ ಸಹಸ್ರನಾಮ ಮಾಡಿದ್ದಳು, ಆ ಮಹಾತಾಯಿ!"
"ಆ ಸೀನ್ ಇಲ್ಲಮ್ಮಾ !! ಸುಮ್ನೆ ಬೇಡದೆಲ್ಲ ತಲೆಗೆ ಹಚ್ಕೊ ಬೇಡ"
"ಮತ್ತೇನು..? ನೀನು ಅವಳೆದುರಿಗೆ ಯಾಕಾಗಿ ವಿವೇಕ್ ನ ಪ್ರಸ್ತಾಪ ಮಾಡಲಿಲ್ಲ, ಅಸಲಿಗೆ ಇದು ಅವನ ಪ್ಲಾನ್ ತಾನೇ ?"
"ಹೇ ಆಕೃತಿ, ಹಾಗೆ ಏನು ಇಲ್ಲ, ಅವಳು ಅವನ ಸೋತ್ತೆ .. ಅವಕಾಶ ಬಂದಾಗ ಹೇಳ್ತೇನೆ"
"ಹುಡುಗ್ರು ಹೀಗೇನೆ, ಗಾಳಿ ಬಂದಕಡೆ ತೂರ್ತಾರೆ !"
"ನಿಂಗೆ ಹುರ್ಟ್ ಆದ್ರೆ ಸೋರಿ ಕಣೇ !" ಎನ್ನುತ್ತಾ ಬೈಕ್ ನ ಗೇರ್ ಬದಲಿಸಿದೆ.
ಅವಳು ನಾನು ಎದುರು ಕಟ್ಟಿದ್ದ ಆ ಬಲೂನ್ ಅನ್ನು ನೋಡಿ "ಇದಕ್ಕಾಗಿಯೇ ನೀನು ಮೇಲೆ ಹೋದದ್ದಾ ...?" ಅಂದಳು.
ನಾನು "ಹೌದು !!" ಅಂದೆ.
ಸುಳ್ಳು ಅದ್ರೂ ಇದು ನಿಜ !! 'ಒಂದು ಸುಳ್ಳಿಂದ ರಾಜ್ಯ ಉಳಿಯುತ್ತೆ ಅಂತಾದ್ರೆ ಸುಳ್ಳು ಹೇಳಬಹುದು' ಎಂದು ಯವುದೋ ಅಶರೀರವಾಣಿ ಕೇಳಿಸುತಿತ್ತು. ನನಗೆ ನನ್ನ ಪ್ರೀತಿ ಉಳಿಸ ಬೇಕಿತ್ತು ಅದಕ್ಕಾಗಿ ಸುಳ್ಳು ಹೇಳಿದೆ.
ಆ ಬಲೂನ್ ಅನ್ನು ಸೈಡ್ ಮಿರರ್ ಇಂದ ತೆಗೆದು ಅವಳ ಕೈಗಿಟ್ಟೆ. ಅವಳು ಅದನ್ನು ತನ್ನ ಕಣ್ಣುಗಳಿಗೊರಸಿ ಮುತ್ತಿಟ್ಟಿದ್ದು ಸೈಡ್ ಮಿರರ್ ನಲ್ಲಿ ಕಾಣುತಿತ್ತು. ಮನಸ್ಸು ಮೊಬೈಲ್ ಹೊರ ತೆಗೆದು 'ಒರು ಮಾಲೈ' ಲೌಡ್ ಸ್ಪೀಕರ್ ನಲ್ಲಿ ಹಾಕಿ ಕುಣಿ ಎನ್ನುತಿತ್ತು!!
ಮುಂದಿನ ಸಿಪ್
ಪ್ರತಿಕ್ರಿಯೆ (2)