ಸಿಪ್ ೧೫
ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ....
೭ ಗಂಟೆಗೆ ಸೆಟ್ ಮಾಡಿದ 'ಕೌಸಲ್ಯ ಸುಪ್ರಜಾ ರಾಮ' ಶುರುವಾಗುವ ಒಂದು ಗಂಟೆ ಮುಂಚೆನೇ 'ಒರು ಮಾಲೈ' ರಿಂಗಿಣಿಸಿತು.ಇನ್ನೂ ೪ ಗಂಟೆಯ ನಿದ್ರೆ ಮುಗಿಸಿದ್ದೆ. ರಾತ್ರಿ ಆಕೃತಿಯನ್ನು ಅವಳ ಹಾಸ್ಟೆಲ್ ನಲ್ಲಿ ಬಿಟ್ಟು ರೂಮ್ಗೆ ತಲುಪಿ ಹೊದ್ದು ಮಲಗುವಾಗ ಘಂಟೆ ಒಂದು ದಾಟಿರಬಹುದು. ಬಂದು ಎರಡು ನಿಮಿಷ ಕನ್ನಡಿಯ ಎದುರಿಗೆ ನನ್ನ ಸೌಂದರ್ಯವನ್ನು ನೋಡುತ್ತಾ ಆಕೃತಿ ಗೆ ನಾನು ಯಾವ ಯೆಂಗಲ್ನಲ್ಲಿ ಸುಂದರವಾಗಿ ಕಂಡಿರಬಹುದು, ಅವಳನ್ನು ಇನ್ನೂ ಮರಳು ಮಾಡಲು ಇನ್ನೂ ಎಷ್ಟು ಮಿಲ್ಲಿ ಮೀಟರ್ ನಷ್ಟು ತುಟಿಗಳನ್ನು ಅಗಲಿಸಬೇಕು, ಕುರುಚಲು ಗಡ್ಡ ಬೋಳಿಸ ಬೇಕೇ..? ಜಾನ್ ತರಹ ೬ ಪ್ಯಾಕ್ ಬಾಡಿಯನ್ನು ಕಟ್ಟಿಸಬೇಕೇ ..? ಎಂಬ ವಿಶ್ಲೇಷಣೆಗಳು. ತಲೆಯಲ್ಲಿ ಹಲವು ಯೋಚನೆಗಳು, ನಾಳಿನ ಯೋಜನೆಗಳು. ಮನದಲ್ಲಿನ ಕಾಮನೆಗಳು !!
"ವೈಭವ್ , ಗುಡ್ ಮಾರ್ನಿಂಗ್ "
ಮೊಬೈಲ್ ಕೈಗೆತ್ತಿ "ಗುಡ್ ಮಾರ್ನಿಂಗ್" ಅನ್ನೋನ್ ನಂಬರ್ ಗೆ ಜವಾಬಿಟ್ಟೆ.
ಆ ಬದಿಯಲ್ಲಿ "ಇಟ್ಸ್ ದಿನೇಶ್, ಏನೋ ಎದ್ದಿಲ್ವಾ ಇನ್ನೂ...?"
ದಿನೇಶ್ ಮಾತನಾಡುತಿದ್ದ. ಅವನನ್ನು ಅವನು ಎನ್ನಬೇಕೇ ಅವರು ಎನ್ನಬೇಕೇ ತಿಳಿಯುತ್ತಿಲ್ಲ. ನಮ್ಮ ಸಾಫ್ಟ್ ಸ್ಕಿಲ್ ಟ್ರೇನಿಂಗ ಅದಮೇಲೆ ಈ ರೀತಿಯ ಕನ್ಫ್ಯೂಶನ್ ಶುರುವಾಗಿದೆ. ಇಂಗ್ಲಿಷ್ ನಲ್ಲಿ ವ್ಯಾಕರಣ ತುಂಬಾನೆ ಸುಲಭ. ಬಹುವಚನಗಳಿಲ್ಲ, ಕನ್ನಡದಂತೆ ಹಲವುಕಡೆ ಲಿಂಗ ಭೇದಗಳ ಗೋಜಲು ಇಲ್ಲ.
'ದಿನೇಶ್ ಬದಿಮನಿ' ನಮ್ಮ Dream -Tech ನ ಪುಣೆಯ ಎಚ್. ಆರ್, ಮೂಲ ಬೆಳಗಾವಿಯ ಗೋಕಾಕ್, ಬೆಳೆದದ್ದು ಬೆಂಗಳೂರು ಆದಕಾರಣ ಕನ್ನಡದಲ್ಲಿ ಬೆಳಗಾವಿಯ ಸೊಗಡಿಲ್ಲ. Dream -Tech ಪುಣೆಗೆ ಬಂದ ನಂತರ ನಮ್ಮ ಪರಿಚಯ ಮಾಡಿಸುತ್ತಾ ತನ್ನ ಪರಿಚಯ ನೆಡುವಾಗ ಆತನ ಪರಿಚಯವನ್ನು ಮಾಡಿದ್ದ. 'ಬದಿಮನಿ' ಉಪನಾಮ ಕೇಳಿ ನಾನು ನನ್ನ ಪರಿಚಯದಲ್ಲಿ "ಐ ಅಂ ಫ್ರೊಂ ಮಂಗಲೋರ್ " ಎಂದು ಇಂಗ್ಲಿಷ್ ಮಿಕ್ಸ್ ಕನ್ನಡ ಸ್ಲಾಂಗ್ ನಲ್ಲಿ ಒತ್ತಿ ಹೇಳಿದ್ದು.
ಅದಕ್ಕವನು "ಮಂಗಳೂರು ! ಕನ್ನಡಿಗ !!"ಎಂದು ಉದ್ಗರಿಸಿದ್ದ. ಅಲ್ಲಿಂದ ಶುರುವಾದ ಪರಿಚಯ ನಿರಂತರವಾಗಿ ಮುಂದುವರಿದಿತ್ತು.
೨೦ ಜನರ ಯಾವುದೋ ಸ್ಟಾರ್ಟ್ ಅಪ್ ಕಂಪನಿಯನ್ನು Dream -Tech ಪುಣೆಯಲ್ಲಿ ಟೆಕ್ ಓವರ್ ಮಾಡಿತ್ತು.ಆ ಕಂಪನಿಗೆ ಸೇರಿದ್ದ ೨೦ ರಲ್ಲಿ ಈ ದಿನೇಶ್, ಅಡ್ಮಿನ್ ನ ವರ್ಣೇಕರ್ ಸರ್, ೪೦ ಜನರನ್ನು ಸಂಬಾಳಿಸುತಿದ್ದ ಲಕ್ಷ್ಮಿ ಜನಾರ್ಧನ್ ಮತ್ತು ನವೀನ ಸರ್ ಎಂಬ ಇಬ್ಬರು ಪ್ರಾಜೆಕ್ಟ್ ಮಾನೇಜರ್ಗಳನ್ನು ಆಗಲೇ ನಾನು ಬುಟ್ಟಿಗೆ ಬೀಳಿಸಿದ್ದೆ. ಆದರೆ ಸಿವಿಲ್ ಸರ್ವಿಸ್ ಇಂದ ರಿಟೈರ್ಮೆಂಟ್ ತೆಕ್ಕೊಂಡು ಇಲ್ಲಿ ಸೆಂಟರ್ ಹೆಡ್ ಆದ ಮಹೇಂದರ್ ಮೆಹ್ತಾ ಮಾತ್ರ ನನ್ನ ಬುಟ್ಟಿಗೆ ಬಿದ್ದಿರಲಿಲ್ಲ.
ಎಂದಿನಂತೆ ನಾನು ದಿನೇಶ್ ರಲ್ಲಿ ಕನ್ನಡದಲ್ಲಿ ಮಾತು ಶುರು ಮಾಡಿದೆ "ಗುಡ್ ಮಾರ್ನಿಂಗ್ ದಿನೇಶ್ ! ಹೇಳಿ ಏನು ಬೆಳಬೆಳಗ್ಗೆ ಕರೆ ಮಾಡಿದ್ದು ..?"
"ವೈಭವ್ ನಿನ್ನಿಂದ ಒಂದು ಹೆಲ್ಪ್ ಬೇಕಿತ್ತು"
"ಬೆಳಬೆಳಗ್ಗೆ ಒಳ್ಳೆ ಕಾಮಿಡಿ ಮಾಡ್ತೀರಲ್ಲ್ರಿ !! ಎಚ್ ಅರ್ ಇರುವುದೇ ತನ್ನ ಎಂಪ್ಲೋಯೀ ಗಳಿಗೆ ಸಹಾಯಮಾಡಲು, ನೀವು ಹೋಗಿ ಹೋಗಿ ಈಗ ತಾನೇ ಜೋಯಿನ್ ಆದ ಟ್ರೈನಿ ಹತ್ರ ಸಹಾಯ ಕೆಳ್ತೀರಲ್ಲರಿ !"
"ವೈಭವ್ , ಅದು ನಿಜ ಅನ್ನು, ಆದ್ರೆ ನಿಮ್ಮಂತ ಎಂಗೇಜ್ ಹುಡುಗರಲ್ಲಿರುವ, ಹುಮ್ಮಸ್ಸು ಈ ಮೂವತ್ತೈದು ದಾಟಿದ ತರುಣನಲ್ಲಿ ಇರಲು ಸಾದ್ಯವೇ ..?" ಎಚ್ ಆರ್ ತಮ್ಮ ಮಾತಿನ ಚಾಕಚಕ್ಯತೆಯಲ್ಲಿ ಯಾರನ್ನು ಬೀಳಿಸುವ ಕಲೆ ಕಲ್ತಿರುತ್ತಾರೆ. ಅದರಲ್ಲೂ ಈ ಬದಿಮನಿ ೧೦ ವರ್ಷ ಈ ಫೀಲ್ದನಲ್ಲಿ ಪಳುಗಿದ ಜನ, ನಿದ್ದೆಯಲ್ಲಿದ್ದ ನನಗೆ ಬೆಣ್ಣೆ ಸವರುವ ಕೆಲಸದಲ್ಲಿ ಶುರುಮಾಡಿದ್ದ.
"ಹೇಳಿ ದಿನೇಶ್, ಏನು ಕರೆ ಮಾಡಿದ ವಿಚಾರ..?"
"ಇವತ್ತು ಇಬ್ಬರು ಮನೆಜ್ಮೆಂಟ್ ಲೆವೆಲ್ ನ ಎಂಪ್ಲೋಯೀ ಸೇರಿದಂತೆ ೩೬ ಮಂದಿ ELTP ನಮ್ಮ Dream -Tech ಪುಣೆ ಬ್ರಾಂಚ್ ಗೆ ಸೇರುವವರಿದ್ದಾರೆ..."
ಅವರನ್ನು ನಡುವಲ್ಲಿ ತಡೆದು "ಅಲ್ಲ ಸರ್, ಈ ತಾರಾ ನೀವು ಹೈರ್ ಮಾಡ್ತಾ ಹೋದ್ರೆ ಇರುವ ೪೦ ಡೆಸ್ಕ್ ನಲ್ಲಿ ಇಷ್ಟು ಮಂದಿಯನ್ನು ಎಲ್ಲಿ ಕೂರಿಸ್ತೀರಿ..?!"
ದಿನೇಶ್ "ಜನವರಿ ಒಂದರಿಂದ Dream -Tech ಗೆ ಫಸ್ಟ್ ಫ್ಲೂರ್ ನಲ್ಲಿ ಹೊಸ ಜಾಗ ಕೊಟ್ಟಿದ್ದಾರೆ SEZ , ಆ ಚಿಂತೆ ನಿಂಗೆ ಬೇಡ "
"ಹಾಗಾದ್ರೆ ಸರಿ, ನಮ್ಮ ಹೈಸ್ಕೂಲ್ ಕಂಪ್ಯೂಟರ್ ಲಾಬ್ ತಾರಾ ಒಂದು ಡೆಸ್ಕ್ ಟಾಪ್ ಅನ್ನು ಇಬ್ಬರು ಎಂಪ್ಲೋಯೀ ಗಳ ನಡುವೆ ಶೇರ್ ಮಾಡ್ತೀರಿ ಅನ್ಕ್ಕೊಂಡೆ!!"
ನನ್ನ PJ ಗೆ ನಗುತ್ತಾ ಅವರು "ನ್ಯೂ ಜೋಯ್ನೀಸ್ ಗಳಿಗೆ ಒಂದು ಇಂಡಕ್ಷನ್ ಪ್ರೊಗ್ರಾಮ್ ಇಟ್ಟುಕ್ಕೊಂಡಿದ್ದೇವೆ, ಅದಕ್ಕೆ MC ಆಗಿ ನೀನು ಕಾರ್ಯಕ್ರಮ ನಿರ್ವಹಿಸಬೇಕು, ಆಗಬಹುದೇ..?"
ನಾನು "ಬೇರೆ ...?" ಎಂದು ನಿರಾಸಕ್ತಿ ಇಂದಲೇ ಉತ್ತರಿಸಿದೆ.
ಆ ಬದಿಯಲ್ಲಿದ ಎಚ್ ಅರ್ ಗೆ ನನ್ನ ದನಿಯಲ್ಲಿನ ಏರು ಪೆರಿನ ಗತಿ ತಿಳಿದು "ಲೇ ಹುಡ್ಗಾ! ಹುಡ್ಗೀನ ಸೆಟ್ ಮಾಡ್ಲಿಕ್ಕೆ ಒಳ್ಳೆ ಚಾನ್ಸ್ ಐತಲೆ!"ಎಂದು ತನ್ನ ಸ್ಲಾಂಗ್ ಅನ್ನು ಬದಲಾಯಿಸಿದ.
"ನಾನು ಹಾಗೆ ಹೇಳಿದಲ್ಲ ದಿನೇಶ್, ನಂಗೆ ಇನ್ನೂ ಅನುಭವ ಇಲ್ಲ, ಇಂತಹದರಲ್ಲಿ ! ನಾನು ಡಂಬು!! ನೀವು ಬೇರೆ ಯಾರನ್ನಾದರು ಕೇಳಿ ನೋಡಿ, ಯಾರು ಸಿಕ್ಕಿಲ್ಲನ್ತಾದ್ರೆ ನಾನು ಮಾಡುವೆ , ಪ್ರಾಮಿಸ್ " ಅಂದೆ.
"ಇದಪ್ಪಾ ವರಸೆ ಅಂದ್ರೆ ! ನೀನೆ ಮಾಡಬೇಕು !! ಇಲ್ಲಿ ಉಳ್ದವ್ರು ನಿನ್ಗಿನತ್ಲೂ ಹೆಚ್ಚಿನ ಡಂಬುಗಳೇ !" ಅಂದ್ರು ದಿನೇಶ್ ಖುಷಿ ಇಂದಲೇ.
"ಓಕೆ, ಸರಿ, ಕಾರ್ಯಕ್ರಮದ ಲೈನ್ ಅಪ್ ತಯಾರಾಗಿದೆಯ..?"
"ಇಲ್ಲ,ಒಟ್ಟು ಒಂದು ಗಂಟೆಯ ಕಾರ್ಯಕ್ರಮ, ಬೆಳಗ್ಗೆ ೧೦ ರಿಂದ ೧೧ ರ ವರೆಗೆ, ನಂತರ ಹೆಡ್ ಆಫೀಸ್ ನಿಂದ ನೇರ ಕಾನ್ಫೆರೆನ್ಸ್ ಸೆಶನ್, ಯಾಕಪ್ಪಾ ಮೇಲ್ ಓದ್ಲಿಲ್ವಾ ..?"
"ಇಲ್ಲ, ನಡುವಲ್ಲಿ ಎಲ್ಲೋ ಮಿಸ್ ಆಗಿರಬೇಕು"
"ಮಿಸ್ಸು ಆಗಿಲ್ಲ, ಏನೂ ಇಲ್ಲ, ಎಚ್ ಆರ್ ಡಿಪಾರ್ಟ್ಮೆಂಟ್ ಅಂದ್ರೆ ನಿಮಗೆ ಸಸಾರ, ಅದೇ ಮೇಲ್ ಹುಡುಗೀರ್ದು ಅಂದ್ರೆ ಅದರಲ್ಲಿರುವ ಅವಳ ಸೈನ್ ಅನ್ನು ಬಿಡದೆ ಓದ್ತೀರಿ"
"ಇಲ್ಲ, ಇಲ್ಲ , ಹಾಗೀನು ಇಲ್ಲ, ಅಂತವರು ಯಾರಿದ್ದಾರೆ ಅದೂ ಪುಣೆ ಆಫೀಸ್ ನಲ್ಲಿ..??"
"ನಂಗೆ ಗೊತಪ್ಪಾ !! ನಿನ್ ದೃಷ್ಟಿ ಯಾವ್ ಕಡೆ ವಾಲ್ತಿದೆ, ಮಾತು ಯಾವ್ ಕಡೆ ಓಡ್ತಿದೆ ಹೇಳಿ.. ಹೆಸರು ಹೇಳಬೇಕಾ ...?"
ಎಚ್ ಆರ್ ನೊಂದಿಗೆ ವಾದಮಾಡುವುದು ವ್ಯರ್ಥ, ಕೂತಲ್ಲೇ ಎಲ್ಲ ಗ್ರಹಿಸುವ ಕಲೆ ಕರಗತ ಮಾಡಿರ್ತಾರೆ ಮಹಾನುಭಾವರು ! ಇನ್ನೂ ಈ ವಿಚಾರ ಮಾತಾಡಿದರೆ ಏನು ನಡೆಯದ ನನ್ನ ಮತ್ತು ಆಕೃತಿಯ ನಡುವೆ ಒಂದು ಸುಂದರ ಕಥೆ ಎಳಿತಾರೆ ಹೇಳಿ ನಾನು "ಅದು ಬಿಡಿ ಸರ್, ಒಂದು ಗಂಟೆಯಲ್ಲಿ ಏನೆಲ್ಲಾ ಹಾಕಬಹುದು ಹೇಳಿ " ಅಂದೆ.
ಅವರು "೧೦ ನಿಮಿಷದ ಒಂದು ಪ್ರಸೆಂಟ್ಟೆಶನ್ ಇದೆ, ಅದು ಸೇರಿ ನನ್ನ ಪರಿಚಯ ಎಲ್ಲ ಸೇರಿ ನನಗೆ ೧೫ ನಿಮಿಷ ಬೇಕು, ಉಳಿದ ೪೫ ನಿಮಿಷದಲ್ಲಿ ನೀನು ನಿನ್ನ ಕ್ರಿಯೇಟಿವಿಟಿ ತೋರಿಸು" ಅಂದ್ರು.
"ನಂದೇನು ಕ್ರಿಯೇಟಿವಿಟಿ..? ಇದೇನು ರಿಯಾಲಿಟಿ ಶೋ ನಾ..? ಇಲ್ಲ ನಾನೇನು ಅಭಿಜಿತ್ ಸಾವಂತ್ ನಾ ಹಾಡು ಹಾಡ್ತಾ ಹುಡುಗೀರನ್ನು ಮರಳು ಮಾಡಲು..?" ಜ್ಚಾಲ್ತಿಯಲ್ಲಿರುವ ಹೀರೋ ನ ಹೆಸರು ಬಾಯ್ತಪ್ಪಿ ಬಂದು ಬಿಡ್ತು.
"ಇದೆ ಬೇಕಾಗಿರೂದು ವೈಭವ್ ನಮಗೆ, ಮಾತಾಡುವ ಕಲೆ ನಿನ್ನಲ್ಲಿದೆ, ಯಾರು ನಿಂಗೆ ಡಂಬು ಅಂತ ಹೇಳಿದ್ದು ...?"
"ನಿಮ್ಮೆದುರು ಮಾತಾಡ್ತೇನೆ, ಆದ್ರೆ ಸಭೆಎದುರು ... ಅನುಭವ ಇಲ್ಲ ಸರ್"
"ಮಾತಾಡ್ತೀಯ !! ಪುಣೆಯ ಹೀರೋ ಆಗ್ತೀಯ"
"ರೈಲು ಹತ್ತಿಸಿದ್ದು ಸಾಕು ಗುರೂ, ನಾನು ನಿಮ್ ಕೆಲಸ ಮಾಡ್ತೇನೆ! ನನ್ನ ಪ್ಲಾನ್ ಕೇಳಿ
ಮೊದಲಿಗೆ ಒಂದು ಪ್ರಾಥನೆ ಯೊಂದಿಗೆ ಶುರು ಮಾಡುವ ಕಾರ್ಯಕ್ರಮ, ನಂತರ ಎಲ್ಲಾ ನ್ಯೂ ಜೋಯಿನಿಗಳಿಗೆ ಸ್ಟೇಜ್ ಗೆ ಕರೆದು ಪರಿಚಯ ತಿಳಿಸುವಂತೆ ಹೇಳಿ, ಪಿಕ್ ಅಂಡ್ ಆಕ್ಟ್ ಮಾಡಿಸುವ, ಒಬ್ಬೊಬ್ಬರಿಗೂ ಒಂದೊಂದು ನಿಮಿಷ ಇಟ್ಟರೆ ೩೮ ನಿಮಿಷ ಎರಡು ನಿಮಿಷದ ಪ್ರಾಥನೆ,೫ ನಿಮಿಷ ನನಗೆ !! ಸರಿಯಾಗಿ ೪೫ ನಿಮಿಷ !! ಹೇಗಿದೆ ಪ್ಲಾನ್ ?"
"ಇದಪ್ಪಾ !! ಹೀಗಿರಬೇಕು ರಿಕ್ವೈರ್ ಮೆಂಟ್ ಹೇಳುವಷ್ಟರಲ್ಲಿ ನೀನು ಪ್ರಾಜೆಕ್ಟ್ ಡೆಲಿವರಿ ಮಾಡಿ ಬಿಟ್ಟೆ" ಎಂದು ಪಕ್ಕ ಪ್ರೋಫ್ಫೆಶನಲ್ ಐ.ಟಿ ಕುಳದಂತೆ ಜವಾಬು ಕೊಟ್ಟ.
ಸ್ವಲ್ಪದರಲ್ಲೇ "ಅದು ಸರಿ , ಪ್ರಾರ್ಥನೆ ಗೆ ಯಾರನ್ನು ಹುಡುಕುವುದು ಈಗ ..? ಎನಿ ಸುಜ್ಜೆಶನ್ ..?"
"ಆಕೃತಿ, ಹಿಂದೂಸ್ತಾನಿ ಸಂಗೀತದಲ್ಲಿ ವಿಶಾರದ ಮುಗ್ಸಿದ್ದಾಳೆ" ಅಗತ್ಯಕ್ಕಿಂತ ಹೆಚ್ಹಿನ ಏಕ್ಸ್ಪ್ಲಿನೆಶನ್ ಕೊಟ್ಟೆ ಅನ್ಸಿತು.
"ಓಹ್, ಆಕೃತಿ !! ಹೀಗೂ ಸಮಾಚಾರ ..??"
"ಹಾಗೂ ಇಲ್ಲ ಹೀಗೂ ಇಲ್ಲ, ನಿಮ್ ಒಪ್ಪಿಗೆ ಇದ್ರೆ ಅವಳನ್ನು ಒಪ್ಪಿಸ್ತೇನೆ, ನೀವು ಬೇಡ ಅಂದ್ರೆ ನೀವೇ ಹಾಡಬಹುದು !!"
"ಒಪ್ಪಿಸು,ಒಪ್ಪಿಸು ಒಟ್ಟಾರೆ ಇವತ್ತಿನ ಪ್ರೊಗ್ರಾಮ್ ಗ್ರಾಂಡ್ ಸಕ್ಸೆಸ್ ಆಗಬೇಕು, ಕಳೆದ ಬಾರಿ ಅಪ್ಪ್ರಿಸಲ್ ಸೈಕಲ್ ನಲ್ಲಿ ನನಗೆ ಮೇಲೆರಲಾಗಲಿಲ್ಲ , ಈ ವರ್ಷ ಮೇಲ್ರಬೇಕು "
"ಮೇಲೇರಿ , ಮೇಲೇರಿ, ಆದ್ರೆ ನಮ್ಮನ್ನು ಕೆಳಗೆ ತುಳಿಬೇಡಿ ಅಷ್ಟೇ !"
"ಯಾಕಾಗಿ ತುಳೀಲಿ ವೈಭವ್, ಒಟ್ಟಿಗೆ ಮೇಲೇರುವ !!"
ತನ್ನ ಕೆಲಸ ಮಾಡಿಸಿ ಕ್ರೆಡಿಟ್ ತೆಗೆದು ಮೇಲೇರುವ ಹುನ್ನಾರ ಮೇಲಿನವರಿಗೆ, ಮೊಣಕೈಗೆ ಒರೆಸಿದ ತುಪ್ಪದ ಆಸೆಯಲ್ಲೇ ವರುಷ ದೂಡುವ ಕೆಳಗಿನವರು, ನನಗೆ ಮೊದಲ ಬಾರಿಗೆ ಅಪ್ಪ್ರೈಸಲ್ ಪದದ ಪರಿಚಯ ಮಾಡಿಸಿಕ್ಕೊಟ್ಟ.
"ಸರಿ ಸರ್, ಬೈ"
"ಮೇಲ್ ಓದಲಿಲ್ಲ ಅಂತೀಯ, ಪ್ರೊಗ್ರಾಮ್ ವೆನ್ಯೂ ನಾದ್ರೂ ಕೇಳಿ ಫೋನ್ ಇಡಪ್ಪಾ"
"ಹಾನ್ಹ್ ಹೌದಲ್ಲ .. ಎಲ್ಲಿ ?"
"ಪ್ರೆಸ್ತಿಜ್ ಹೌಸ್, ಬಿಲ್ಡಿಂಗ್ ನಂಬರ್ ೧೪ ಟಾಪ್ ಫ್ಲೂರ್"
"ಅಂದ್ರೆ ನಮ್ ಬಿಲ್ಡಿಂಗ್ ನೇ!!"
"ಹಾಂ ... ಅರ್ರೆ, ವೈಭವ್ ಆ ಆಕೃತಿಗೆ ಸಾದ್ಯವಾದರೆ ಸೀರೆ ಉಟ್ಟು ಬರಲು ಹೇಳು, ಸಭೆಗೆ ಒಳ್ಳೆ ಕಳೆ ಬರುತ್ತೆ, ನೀನು ಶೇರ್ವಾನಿ, ಕುರ್ತಾ ಏನಾದ್ರೂ ಹಾಕಿ ಬಾ!"
"ನೋಡಿ, ಪ್ರಾಜೆಕ್ಟ್ ಡೆಲಿವರಿ ಅದ್ರು ನಿಮ್ಮ ರಿಕ್ವೈರ್ ಮೆಂಟ್ ಫೆಸ್ ಮುಗೀಲೆ ಇಲ್ಲ !!"
"ಆಯ್ತಪ್ಪಾ, ಮುಗೀತು, ಅವಳಿಗೆ ಕಾಲ್ ಮಾಡಬೇಕಾ..?"
"ಆ ಕಷ್ಟ ತೆಕೊಳ್ ಬೇಡಿ, ೯ ೩೦ ಕ್ಕೆ P2 ನಲ್ಲಿರ್ತೇವೆ ಇಬ್ಬರೂ ಅಲ್ಲಿಂದ ಟಾಪ್ ಫ್ಲೂರ್ ಗೆ ಒಟ್ಟಿಗೆ ಹೋಗೋಣ "
"ಶೂರ್ ,ವೈಭವ್ ಬಾಯ್ " ಹೇಳುತ್ತಾ ಕರೆ ಮುರಿದ.
ಒಂದು ಹೆಣ್ಣಿಗೆ ಸಹಾಯ ಮಾಡಿದಾಗ ಅವಳು ಥ್ಯಾಂಕ್ಸ್ ಅಂದಾಗ ಗಂಡು ಥ್ಯಾಂಕ್ಸ್ ಬೇಡ ಹೇಳುವುದು ಸಹಜ, ಆದ್ರೆ ಒಬ್ಬ ಗಂಡಿಗೆ ಇನ್ನೊಬ್ಬ ಗಂಡು ಸಹಾಯ ಮಾಡಿದಾಗ ಅವ ಥ್ಯಾಂಕ್ಸ್ ನ ನಿರೀಕ್ಷೆಯಲ್ಲಿರುವುದೂ ಅಷ್ಟೇ ನಿಜ, ಅದೇ ನಿರೀಕ್ಷೆಯಲ್ಲಿದ್ದ ನನಗೆ ಅವನ ಬಾಯಿಯಿಂದ ಆ ಶಬ್ದಗಳ ಆಹ್ವಾನ ಆಗದೆ ಇರುವುದು ತುಸು ಬೇಸರವೆನಿಸಿತು.
"ಎಚ್ ಆರ್ ಗಳೇ ಹೀಗೆ, ಕಾಗೆ ಗಳಂತೆ ಎಲ್ಲರಿಗೆ ಆಹಾರದ ಸುಳಿವು ಕೊಡುತ್ತಾರೆ , ಎಲ್ಲಾ ನೆಂಟರಿಷ್ಟ(ಕಾಗೆಗಳು)ರು ಬಂದು ಸೇರುವಷ್ಟರಲ್ಲಿ ಸಿಕ್ಕ ಆಹಾರವನ್ನು ತಿಂದು ಮುಗಿಸಿರುತ್ತವೆ, ಕೊನೆಗೆ ಅಲ್ಲಿ ಉಳಿದಿರುವುದು ಬರಿ ಕರ್ಕಶ ದನಿ ಮಾತ್ರ" ಅಂದುಕ್ಕೊಂಡೆ.
ಸ್ಪೀಡ್ ಡಯಲ್ ನಲ್ಲಿ ಇತ್ತ ಆಕೃತಿಯ ನಂಬರ್ ಗೆ ಕರೆ ಮಾಡಲು ಆ ನಂಬರ್ ಬ್ಯುಸಿ ಅಂತ ಬರುತಲಿತ್ತು. ಕಾಲ್ ಕಟ್ ಮಾಡುವಷ್ಟರಲ್ಲಿ 'ಒರು ಮಾಲೈ' ರಿಂಗಿಣಿಸಿತು.
"ಹಲೋ ಟ್ರಾನ್ಸ್ ಲೆಟರ್! ಗುಡ್ ಮಾರ್ನಿಂಗ್ "
"ಗುಡ್ ಮಾರ್ನಿಂಗ್ ...! ಏನು ಬೆಳ ಬೆಳಗ್ಗೆ ಅಮ್ಮವ್ರ್ ಜೊತೆ ಬ್ಯಾಟಿಂಗಾ..?"
"ಓಯ್ .. ಏನು ಇಲ್ಲ ... ನಿಂಗೆ ಒಂದು ವಿಷಯ ತಿಳಿಸೋದಿದೆ"
"ಇವತ್ತು ಆಫೀಸ್ ಗೆ ಬೇಗ ಹೋಗ್ಬೇಕು, ಎಲಾಸ್ಟಿಕ್ ವರ್ಕ್ ಪೋಲಿಸಿ ಹೇಳಿ ನಿದ್ದೆ ಹೊಡಿತಿರ್ಬಹುದು ಅಂತ ಕಾಲ್ ಮಾಡ್ದೆ.. ಏನೋ ಅದು ನಂಗೆ ಹೇಳಬೇಕಾದ ವಿಷಯ ..?"
"ಅದೇ, ಇವತ್ತಿನ ಇಂಡಕ್ಷನ್ ಪ್ರೊಗ್ರಾಮ್ ನಲ್ಲಿ ನಿಂದು ಒಂದು ಪ್ರೊಗ್ರಾಮ್ ಗೊತ್ತು ಮಾಡಿದ್ದೇನೆ.."
"ಓ ಅಧಿಕಪ್ರಸಂಗಿ, ಏನೂ ...?"
"ಪಂಡಿತ್ ಆಕೃತಿ ಗೋಪಾಲನ್ ಅವರಿಂದ ಕೀರ್ತನೆ"
"ನಿನಗೇನು ಹುಚ್ಚಾ..?"
"ಹಮ್ ನಿನ್ ಸಂಗೀತ ಕೇಳಬೇಕೆಂಬ ಹುಚ್ಚು, ಸಂದರ್ಭ ಈಗ ಸಿಕ್ತು ಅಷ್ಟೇ.."
"ಯಬ್ಬಾ !! ಅಭ್ಯಾಸ ಬಿಟ್ಟು ಎರಡು ವರ್ಷದ ಮೇಲಾಯ್ತು, ಇವತ್ತು ಒಮ್ಮೆಲೇ ಹೇಳಿದ್ರೆ ಹೇಗೆ..?"
"ಏನು ಆಗಲ್ಲ, ಅಲ್ಲಿರುವ ಎಲ್ಲರೂ ಸಂಗೀತದಲ್ಲಿ ನಾನಂತೆ ಡಂಬು ಗಳೇ.. ಮೇಲಾಗಿ ನೀನು ಯಾವುದೇ ಕೊಂಪಿಟೆಶನ್ ಗೆ ಹಾಡ್ತಾ ಇಲ್ಲ ... ಬಿ ಚಿಲ್ "
"ಸರಿ, ಯಾವುದು ಹಾಡ್ಲಿ..?"
ಅವಳ ಹಾಡುಗಾರಿಕೆ ಈ ವರೆಗೆ ಕೇಳಿರಲಿಲ್ಲ, ಅಲ್ಪ ಸಲ್ಪ ಸಂಗೀತ ಜ್ಯಾನ ಇದ್ದ ನಾನು ಅದನ್ನು ತೋರಿಸಿ ಕೊಳ್ಳಬೇಕು ಹೇಳಿ.
"ಹಂಸ ಧ್ವನಿ ಹಾಡು" ಅಂದೆ.
"ಹೇ ವೈಭು, ನಿಂಗೆ ಸಂಗೀತ ಗೊತ್ತಾ ...?"
ಕೊಲರಿಲ್ಲದ ಟಿ ಶರ್ಟ್ ಗೆ ಎರಡು ಕೋಲಾರ್ ಮೂಡಿದವು, ಅವನ್ನು ನಾನು ಮೇಲೆ ಮಾಡಿ "ಗೊತ್ತು, ಅಲ್ಪ ಸಲ್ಪ.." ಅಂದೆ.
"ಹೋ, ಇವತ್ತಿಂದ ಮಾತಾಡಲು ಹೊಸ ಟಾಪಿಕ್ ಸಿಕ್ತು " ಅಂದ್ಲು.
"ಒಯ್ಯ್, ನಂಗೆ ನಿನ್ನಷ್ಟು ಕುಯ್ಯ್ಲಿಕ್ಕೆ ಗೊತಿಲ್ಲಮ್ಮಾ ... ಸಲ್ಪೆ ಸಲ್ಪ ಗೊತ್ತಿರೋದು.."
"ಸರಿ, ಹಂಗಾದ್ರೆ ಕುಯ್ಯಲ್ಲ ಬಿಡು, ಇವತ್ತು ನೀನು ಹಾಡು ಕೆಳುವಿಯಂತೆ ಮತ್ತೆ ನೀನು ಹಾಡು ಹಾಡು ಹೇಳ್ಬೇಕು ಆ ತಾರಾ ಮಾಡ್ತೇನೆ"
"ಸರಿ ನೋಡೋಣ ಹಾಗಾದ್ರೆ"
ಚೆನ್ನೈ ನ ಇಂಟ್ರೋಡೆಕ್ಷನ್ ದಿನ ಅವಳುಕೊಟ್ಟ ಪರಿಚಯ ನೆನಪಿಟ್ಟಿದಕ್ಕೂ ಸಾರ್ಥಕವಾಯಿತು ಅಂದುಕ್ಕೊಂಡೆ.
ನಾನು "ಸೀರೆ ಇದೆಯಾ ..? ಉಟ್ಟು ಬರ್ಬೇಕಂತ ಹೈ ಕಮಾಂಡ್ ನಿಂದ ಆರ್ಡರ್ ಬಂದಿದೆ"
"ಸರಿ, ಆದ್ರೆ ಸೀರೆ ಉಟ್ಟು ವೇಷ ಕಟ್ಟಿ ಹೇಗೋ ಹೋಗೋದು ಆಫೀಸ್ ಗೆ ..?"
"ಆ ಚಿಂತೆ ಬೇಡ ನಿಂಗೆ ನೀನು ರೆಡಿ ಆಗು ೮ :೩೦ ಕ್ಕೆ ನಾನೂ ನನ್ನ ವೇಷ ಕಟ್ಟಿ ಅಲ್ಲಿ ಬರ್ತೇನೆ, ಒಟ್ಟಿಗೆ ಹೋಗೋಣ"
"ಸರಿ ಹಾಗಾದ್ರೆ.. ಬಾಯ್ ಡಂಬು"
"ಬಾಯ್" ಎನ್ನುತ್ತಾ ಕಾಲ್ ಕಟ್ ಮಾಡಿ ಮೊಬೈಲ್ ನಲ್ಲಿ 'ಒರು ಮಾಲೈ' ಶುರು ಮಾಡಿ ಆಗಲೇ ಮುಕ್ಕಾಲು ಸವೆದ ಟೂಥ್ ಬ್ರುಶ್ಗೆ ಪೇಸ್ಟ್ ಹಾಕಿ ಒಂದು ದಿನದಲ್ಲಿ ಮೂಡಿದ ಕುಡಿ ಗಡ್ಡ ಕೆರೆಯ ಬೇಕೇ ಬೇಡವೇ ಎನ್ನುವ ಚಿಂತೆಯಲ್ಲಿ ಮುಳುಗಿದೆ.
ಮುಂದಿನ ಸಿಪ್
ಪ್ರತಿಕ್ರಿಯೆ (1)