ಸಿಪ್ - ೨೮
ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ....
ಸಿಪ್ - ೨೮
ಏಳು ತಿಂಗಳಿಂದ ಸೇರಿದ್ದ ಹನ್ನೊಂದು ಮುಕ್ಕಾಲು ರಜೆಯಲ್ಲಿ ೯ ಕ್ಕೆ ನಾನು ಅಪ್ಲೈ ಮಾಡಿದ್ದೆ, ಅದನ್ನು ತಿವಾರಿ ಮೂರಕ್ಕೆ ಇಳಿಸಿದ್ದ , ಮಾತಾಡಿದರೆ ಬಿಲ್ಲಿಂಗ್, ಬಿಲ್ಲಿಂಗ್ ಎಂದು ಬೊಬ್ಬೆ ಇಡುತಿದ್ದ. ಮಾರ್ಚ್ ಹದಿನಾಲ್ಕರ ಹೋಳಿ ಗೆ ಆಫೀಸ್ ನಲ್ಲಿ ರಜೆ ಇತ್ತು, ಒಂಬತ್ತು ರಜೆ ಹಾಕಿದರೆ ಎರಡು ವೀಕೆಂಡ್, ಹೋಳಿ ಎಲ್ಲ ಸೇರಿ ೧೬ ದಿನದ ಪ್ಲಾನ್ ಮಾಡಿದ್ದೆ. ಜೀವನ್ ಅವನ ಅಮ್ಮನಿಗೆ ಆಸ್ಪತ್ರೆಗೆ ಅಡ್ಮಿಟ್ ಮಾಡಿದಾಗ ನಾನಿಟ್ಟ ಸಹಕಾರವನ್ನು ಮನದಲ್ಲಿ ಇಟ್ಟು ನನ್ನಲ್ಲಿ ನೀನು ಊರಿಗೆ ಹೋಗಿ ಬಾ ಇಲ್ಲಿ ನಾನೇ ನೋಡಿಕೊಳ್ಳುತ್ತೇನೆ ಎಂದು ಒಪ್ಪಿದ್ದನು. ಈಗ ಅವಿನಾಶ್ ಕೂಡ ಉತ್ತಮ ವೇಗ ಹಿಡಿದಿದ್ದ, ಆದಕಾರಣ ಮೊಡ್ಯುಲ್ ಒಳಗೆ ಮೂವರ ನಡುವೆ ಅಂಡರ್ಸ್ಟಾಂಡಿಂಗ್ ತಕ್ಕ ಮಟ್ಟಿಗೆ ಇತ್ತು.
ತಿವಾರಿ ಬುಧವಾರದ ಮದ್ಯಾನ ಮೂವರನ್ನು ಮೀಟಿಂಗ್ ಗೆ ಕರೆದು ಕೊನೆಗೆ ಮೂರು ದಿನದ ರಜೆಗೆ ಹಸಿರು ನಿಶಾನಿ ಕೊಟ್ಟಿದ್ದ, ಇನ್ನಿಬ್ಬರ ಒತ್ತಾಯ ದೊಂದಿಗೆ ಅವನು
"ವೈಭು, ನೀನು ಇಲ್ಲಿ ರಜೆಯಲ್ಲಿರುವುದು ಬರೇ ಮೂರು ದಿನ. ಎಂಜಾಯ್ ದಿ ವೆಕೇಶನ್" ಎಂದು ದೊಡ್ಡ ಸಹಾಯ ಮಾಡಿದಂತೆ ಬೀಗುತಿದ್ದ.
"ಸರ್, ಅಟ್ ಲೀಸ್ಟ್ ೫ ದಿನ ಮಾಡಿ ವೀಕ್ ಎಂಡ್ ಸೇರಿ ಟೋಟಲ್ ೯ ದಿನ ಸರಿ ಯಾಗುತ್ತೆ" ಅಂದೆ.
ಅವನು "ನೀನು ಎರಡು ವಾರದ ಪ್ಲಾನೇ ಮಾಡು, ರಜೆ ಮಾತ್ರ ಮೂರು ದಿನದ್ದು, ನೀನು ಮಂಗಳೂರಿನಲ್ಲಿ ನೀನಂದು ಕೊಂಡಂತೆ ೧೬ ದಿನಾ ನೇ ಇರಬಹುದು" ಅಂದ.
"ಸರ್ ಅರ್ಥ ಆಗ್ಲಿಲ್ಲ" ಅಂದೆ.
ಅದಕ್ಕೆ ತಿವಾರಿ "ಬಿಲ್ಲಿಂಗ್ ಅನ್ನು ಬರೇ ಮೂರು ದಿನಕ್ಕೆ ಕ್ಲೋಸ್ ಮಾಡ್ತೇನೆ, ಅದಕ್ಕಾಗಿ ಮೂರೇ ದಿನ ರಜೆ"
ಅಷ್ಟರಲ್ಲಿ ಜೀವನ್ "ಯೌ ಮೀನ್ ಹಿ ಹೇವ್ ಟು ಡು ವರ್ಕ್ ಫ್ರೊಂ ಹೋಂ ಆರ್ ವಾಟ್ " ಅಂದ.
"ಎಸ್ ಎಗ್ಸೆಟ್ಲಿ... ಒನ್ ವೀಕ್ ವರ್ಕ್ ಫ್ರೊಂ ಹೋಂ ... ಇಸ್ ಇಟ್ ಓಕೆ ವಿಥ್ ಯು ವೈಭವ್ " ಅಂದ ತಿವಾರಿ.
ನಾನು "ಫೈನ್ ಸರ್, ಬಟ್ ನನ್ ಸಿಸ್ಟಮ್ ಎಲ್ಲ ಈಗ ಪುಣೆಯಲ್ಲಿದೆ, ನೀವು ಲ್ಯಾಪ್ಟಾಪ್ ಕೊಟ್ರೆ ಮಾಡಬಹುದು"
"೩.೧ ಎಂಪ್ಲೋಯೀ ಗೆ ಲ್ಯಾಪ್ ಟಾಪ್ ನನಗೆ ಕೊಡಿಸುವ ಪೆರ್ಮಿಶನ್ ಇಲ್ಲ, ಕರ್ನಲ್ ನ ಪೆರ್ಮಿಶನ್ ಬೇಕು, ಮಕ್ಷಿಮಮ್ ಐ ಕ್ಯಾನ್ ಅಪ್ರೋವ್ ಫಾರ್ ಅ ವಿಪಿಎನ್ ಕನೆಕ್ಷನ್ ಫಾರ್ ಯು ...ಸಂ ಹೌ ನೀನೆ ಮೆನೆಜ್ ಮಾಡ್ಬೇಕು, ನಿಂಗೆ ಲಾಂಗ್ ವೆಕೇಶನ್ ಬೆಕಂತಾದ್ರೆ" ಅಂದ, ಭುಜ ಬಲ ಸೋತ ಅರ್ಜುನ ನಂತೆ.
ನಿರಾಶೆಯ ದೃಷ್ಟಿ ಜೀವನ್ ನ ಹತ್ತಿರ ಬೀರಿದೆ, ಅವನು ಕಣ್ಣಲ್ಲೇ ಪ್ರೊಪೋಸಲ್ ಒಪ್ಪ್ಕೋ ಅಂದ.
ನಾನು "ಓಕೆ ಸರ್, ಒಪ್ಪಿಗೆ ಇದೆ, ಮತ್ತೆ ಉಳಿದ ಎರಡು ದಿನ ..?"
ತಿವಾರಿ "ಒಂದು ದಿನ ಹೋಳಿ ರಜೆ ಇದೆಯಲ್ಲ, ಮತ್ತೆ ಒಂದು ನಿಂಗೆ ಕಾಮ್ಪೋಫ್ಫ್ ಕೊಡಲು ತೀರ್ಮಾನಿಸಿದ್ದೇನೆ..." ಅಂದ. ಇದು ಅವನು ಅಂಡರ್ ನಾನು ಕತ್ತೆ ಶ್ರಮ ಪಟ್ಟಂತೆ 24X7 ಕೆಲಸ ಮಾಡಿದ್ದಕ್ಕೆ ಕೊಟ್ಟ ಉಡುಗೊರೆ.
ನಾನು "ಥ್ಯಾಂಕ್ಸ್ ಫಾರ್ ಕಾಮೊಫ್ಫ್ ಸರ್" ಅಂದೆ.
ಮನಸಲ್ಲಿ ಬರೇ ಮೂರು ಪಿಎಲ್ ನಲ್ಲಿ ೧೬ ದಿನದ ಮಜಾ ಸಿಕ್ಕುತ್ತದೆ ಎಂದು ಹಿಗ್ಗಿದೆ. ಅವನು ಐಟಿಐಜಿ ಡಿಪಾರ್ಟ್ಮೆಂಟ್ ಗೆ ವಿಪಿಎನ್ ಕನೆಕ್ಷನ್ ಕೊಡುವಂತೆ ಮೇಲ್ ಹಾಕಿ ಮೀಟಿಂಗ್ ಅನ್ನು ಮುಗಿಸಿದ.ನಾನು ಅವಿನಾಶ್ ಮತ್ತು ಜೀವನ್ ಇನ್ನೂ ಕಾನ್ಫೆರೆನ್ಸ್ ರೂಂ ನಲ್ಲಿದ್ದೆವು.
ಅವರು ಹೋದ ಬಳಿಕ "ಜೀವನ್ ವರ್ಕ್ ಫ್ರೊಂ ಹೋಂ ಹೇಳಿದ್ದಾನೆ, ಈಗ ಊರಿಗೆ ಹೋದರು ಅವನು ಬೆನ್ನು ಬಿಡಲ್ಲ, ಸುಮ್ನೆ ಮೊಣಕೈಗೆ ತುಪ್ಪ ಹಚ್ಚಿ ಕೋಲಾರ್ ಎತ್ತಿ ಹೋದ" ಅಂದೆ.
"ವೈಭು, ಟೆನ್ಶನ್ ತೆಕೋ ಬೇಡ, ನಾನು ನೋಡ್ಕೊತೇನೆ, ಅಲ್ಲಿ ಹೋದಂತೆ ನಿನ್ನ ಇಲ್ಲಿನ ಸಿಂ ತೆಗೆದು ಬಿಸಾಡು, ಸಾದ್ಯ ಇದ್ರೆ ಆಫೀಸ್ ಟೈಮಿಂಗ್ ನಲ್ಲಿ ಬಂದು ಒಂದು ಬಾರಿ ಅವನನ್ನು ಸಿ.ಸಿಯಲ್ಲಿ ಇಟ್ಟು ಒಂದು ಎರಡು ಮೇಲ್ ಕಳಿಸು, ಉಳ್ದದ್ದು ನಾನು ನೋಡ್ಕೊಳ್ತೇನೆ" ಅಂದ.
"ನಮ್ಮ ಅಸ್ತಿತ್ವ ತಿಳಿ ಬೇಕಂದ್ರೆ ಸಿ.ಸಿ ಯಲ್ಲಿ ಇಂತವರನ್ನು ಇಡಬೇಕು, ಪರವಾಗಿಲ್ಲ ನಾನು ಐದು ದಿನದಲ್ಲಿ ಒಂದೆರಡು ದಿನ ನೆಟ್ಗೆ ಬಂದು ಆ ಕೆಲಸ ಮಾಡಬಹುದು . ಥ್ಯಾಂಕ್ಸ್ ಜೀವನ್"
"ಥಾಂಕ್ಸ್ ಗೀನ್ಗ್ಸ್ ಬೇಡ, ಊರಿಂದ ಬರ್ಬೇಕಾದ್ರೆ ಬಾಳೆಹಣ್ಣಿನ ಹಲ್ವಾ ಮತ್ತು ಚಿಪ್ಸ್ ತಂದರೆ ಅಷ್ಟು ಸಾಕು, ವರ್ಷಗಳೇ ಅಘೋಯ್ತು, ಅವ್ವನ್ನು ತಿಂದು" ಅಂದ ನಿರಾಸೆಯಲ್ಲಿ.
ಕನ್ನಡದಲ್ಲಿನ ಸಂಭಾಷಣೆ ಪಕ್ಕದಲ್ಲಿದ್ದ ನೋರ್ಥಿಗೆ ಮನವರಿಕೆ ಯಾಗಿಲ್ಲ, ಬರಿ ಹಲ್ವಾ ಚಿಪ್ಸ್ ಪದಗಳೇ ಮನವರಿಕೆ ಯಾಗಿತ್ತು. ಅವನು "ಯಾ, ಯಾ ಯು ಷುಡ್ ಬ್ರಿಂಗ್ ಹಲ್ವ ಅಂಡ್ ಚಿಪ್ಸ್" ಎಂದ. ಮೂವರು ಕಾಫಿ ಹೀರಿ ಕ್ಯುಬಿಕಲ್ ಗೆ ಮರಳಿದೆವು.
ಆಕೃತಿಗೆ ಮೀಟಿಂಗ್ ನ ಕುರಿತು ಪಿಂಗ್ ಮಾಡಿದೆ. ಮೊದಲಿಗೆ ನನ್ನ ಪ್ಲಾನ್ ಕೇಳಿ "೧೬ ಲಾಂಗ್ ಡೆಯ್ಸ್ ನೋ ವೈಭು" ಎಂದು ನನಗೆ ಲಗಾಮು ಹಾಕಲು ಯತ್ನಿಸಿದಳು, ನಾನು "ಡೋಂಟ್ ವೊರ್ರಿ, ನಾನು ಅಲ್ಲಿದ್ರು ನಿನ್ ಜೊತೆಗೆ ಇರ್ತೇನೆ, ಡೈಲಿ ಕಾಲ್, ಎಸ್ಸ್ಸೇಮೆಸ್ಸ್, ಎಲ್ಲ ಇಲ್ಲಂತೆ ಅಲ್ಲಿಂದಲೂ ಮಾಡ್ತೇನೆ, ನೇರ ಸಂಪರ್ಕದಲ್ಲಿ ಇರಲ್ಲ ಅಷ್ಟೇ.."
"ಬಟ್ ಅಲ್ಸೋ, ಐ ನೀಡ್ ಯು ವಿಥ್ ಮಿ" ಎಂದಳು ಉದಾಸೀನದಲ್ಲಿ.
***********
ಮಾರ್ಚ್ ನಲ್ಲಿ ಏಳು ತಿಂಗಳ ನಂತರ ಊರಿಗೆ ಬಂದಾಗ ವಿರಹ ಪರಿಪರಿಯಾಗಿ ಕಾಡುತಿತ್ತು; ಕಸಿನ್ ಗಳಿಗೆಲ್ಲ ರಜೆ ಸಿಕ್ಕಿ ಆದ ಮೇಲೆ ಮನೆಗೆ ಬಂದಿದ್ದರು. ದೊಡ್ಡವರೆಲ್ಲ "ವೈಭು ಎಷ್ಟು ಸೊರಗಿ ಹೋಗಿದ್ದೀಯ.. ಕುಚ್ಚಿಲು ಅಕ್ಕಿ ತಿಂದು ಬೆಳೆದ ಹುಡುಗನಿಗೆ ರೋಟಿ ಹಿಡಿಸಲಿಲ್ಲ ಎಂದು ಕಾಣುತ್ತದೆ" ಎಂದು ಮರಾಟಿ ರೊಟಿಗೆ ಆಪಾದನೆ ಹಾಕುತಿದ್ದರೆ ಕಸಿನ್ಗಳು "ಸೂಪರ್ ಕಾಣ್ ತಿದ್ದಿಯ" ಎನ್ನುತಿದ್ದರು. ಏಳು ತಿಂಗಳಲ್ಲಿ ದೈಹಿಕ ಬದಲಾವಣೆಗಳು ಅಷ್ಟೇನೂ ಆಗದಿದ್ದರೂ ಮಾನಸಿಕ ಮತ್ತು ಮೌಲಿಕ ಬದಲಾವಣೆಗಳು ನನ್ನಲ್ಲಿ ಬಹಳಷ್ಟು ಆಗಿದ್ದು ನನ್ನ ಗಮನಕ್ಕೆ ಬಂದಿದ್ದವು, ಆ ಬದಲಾವಣೆಗಳು ಹೊರಗಿನ ಪ್ರಪಂಚಕ್ಕೆ ಕಾಣುತ್ತಿರಲಿಲ್ಲ. ಅವರು ಮಾತಿಗೆ ಮಾತು ಕ್ರೂಡಿಕರಿಸುವಲ್ಲಿ ಬ್ಯುಸಿ ಆಗಿದ್ದರು.
ಕಸಿನ್ಗಳು ಮನೆಗೆ ಲಗ್ಗೆ ಹಾಕುವ ಮೊದಲು ಪುಣೆ ಜೊತೆಗಿನ ಸಂಪರ್ಕ ಜೋರಾಗಿಯೇ ನಡೆಯುತ್ತಿತ್ತು, ನೆಂಟರಿಷ್ಟರು ಮುಂದಿನವಾರ ಬಂದಾದ ಮೇಲೆ ದಿನದ ಕಾಲ್ಗಳು ನಿಂತವು, ಬರಿ ಮುಸುಕಿನ ಹರಟೆ ಶುರುವಾದವು.ರಾತ್ರಿಯ ಮುಸುಕು ಹರಟೆ ಯಾರು ಗಮನಿಸರು ಎಂದು ಎಣಿಸಿದ್ದ ನನಗೆ ವರ್ಷ ಬಂದ ಮಾರನೆದಿನ ಎದ್ದೊಡನೆ "ಕೊಣ್ ಮುಲ್ಗಿ ರೇ...?" ಎಂದು ಕೇಳಿದಾಗ ಆಕಾಶವೇ ಕಳಚಿ ಬಿದ್ದಂತಾಯಿತು.
ವರ್ಷ, ವಿಭಾ ಅತ್ತೆಯ ಮಗಳು; ಬೆಳಗಾವಿಯ ಕೆ ಎಲ್ ಈ ಮೆಡಿಕಲ್ ಕಾಲೇಜ್ ನಲ್ಲಿ ಮೂರನೇ ವರ್ಷದ ಮೆಡಿಕಲ್ ಮಾಡುತಿದ್ದಳು, ಹಿಂದಿನಿಂದಲೂ ಹೆಚ್ಚಿನ ಸಲುಗೆ, ಮೊದಲಿಗೆ ಮನೆಯವರು 'ನಿನ್ನ ಹಕ್ಕಿನ ಹೆಂಡತಿ' ಎಂದು ಚಾಳಿಸುತಿದ್ದರು; ಹರೆಯ ಬಂದಾದ ಮೇಲೆ ಅವರು ಚಾಳಿಸುವುದನ್ನು ನಿಲ್ಲಿಸಿದ್ದರು, ಇಬ್ಬರ ನಡುವಿನ ಸಲುಗೆ ಮುಂದುವರಿದಿತ್ತು. ನನ್ನ ಪ್ರತಿ ಆಗು ಹೋಗನ್ನು ಅವಳಲ್ಲಿ ಹಂಚಿಕೊಳ್ಳುತಿದ್ದೆ, ಅವಳೂ ನನ್ನನ್ನು ಬೆಸ್ಟ್ ಫ್ರೆಂಡ್ ನ ದೃಷ್ಟಿಯಲ್ಲಿ ನೋಡುತಿದ್ದಳು. ಚೆನ್ನೈ ನಿಂದ ಪುಣೆಗೆ ಟ್ರಾನ್ಸ್ಫರ್ ಆದಾಗ ಅವಳು ಖುಷಿ ಪಟ್ಟಿದ್ದಳು "ನಾನೇ ನಿಂಗೆ ಹತ್ತಿರದ ಫ್ರೆಂಡ್ ಕಂ ರೆಲೆಟೀವ್ ವೈಭು" ಎಂದು ಹಿರಿ ಹಿರಿ ಹಿಗ್ಗಿದ್ದಳು.
ಮನದಲ್ಲಿ ಹುಟ್ಟಿದ ಪ್ರೀತಿ ಯಾರಲ್ಲಿಯೂ ಹಂಚಿಕ್ಕೊಂಡಿರಲಿಲ್ಲ, ಎಲ್ಲಿ ಮನದ ವಿಚಾರ ಬೇರೊಬ್ಬರಲ್ಲಿ ಹೇಳಿದರೆ ನಾಳೆ ಏನಾದರು ಪ್ರೀತಿ ಕೈತಪ್ಪಿಹೊದರೆ ಅವರಿಗೆ ಕಾರಣ ಯಾರು ಹೇಳುವುದು ಎಂದು ಭಯ ಗೊಂಡಿತ್ತು ಮನಸ್ಸು. ಅದಕ್ಕಾಗಿಯೇ ಹೇಳಿರಲಿಲ್ಲ ಎನ್ನ ಬಹುದು. ಇವಳಲ್ಲಿ ಹಯ್ ಸ್ಕೂಲ್ ದಿನದಲ್ಲಿ ಹೇಳಿದ ಕೃಪಾ ಕುರಿತಾದ ಭಾವನೆ ಅವಳು ಹುಡುಗಾಟಿಕೆಯಲ್ಲಿ ಎಲ್ಲರೆದುರು ಹೇಳಿದ್ದಳು. ಅಲ್ಲಿಂದ ಅವಳಲ್ಲಿ ಇಂತ ವಿಚಾರ ಹೇಳಲು ಮನಸ್ಸು ಬರುತ್ತಿರಲಿಲ್ಲ, ಅವ್ಳು ಅವಳ ಕಾಲೇಜ್ ದಿನದಲ್ಲಿ ನಡೆಯುವ ಎಲ್ಲ ಮಹತ್ತರ ವಿಷಯವನ್ನು ನನ್ನಲ್ಲಿ ಹಂಚುತಿದ್ದಳು, ಆದರೂ ನಾನು ಮೌನದಲ್ಲಿರುತ್ತಿದ್ದೆ.
ಪ್ರತಿ ಬಾರಿಯೂ ಕರೆ ಮಾಡಿದಾಗ 'ವೈಭು ಹೊಸ ಅತ್ತಿಗೆ ಸಿಕ್ಕಿದ್ಲಾ, ಇಲ್ಲ ಇನ್ನು ಕೃಪಾ ನ ಕೃಪೆಯಲ್ಲಿದ್ದಿಯಾ...?' ಎಂದು ಗೇಲಿ ಮಾಡುತಿದ್ದಳು.
ನಾನು ಕೆಂಪಸ್ ಸೆಲೆಕ್ಟ್ ಆದ ದಿನವಂತೂ ಅವಳು "ಇನ್ನ್ಯಾಕೋ ನಿಂಗೆ ಆ ಕೃಪಾ ನ ಆಲೋಚನೆ, ಇನ್ನು ಅವಳ ಅಮ್ಮನಂತವರು ನಿನಗೆ ಸಿಗ್ತಾರೆ, ಅವಳ ನೆನಪಿಂದ ಹೊರಗೆ ಬಾ ಮೋಡರ್ನ್ ದೇವದಾಸ ..." ಎಂದು ವಿಶ್ ಮಾಡಿದ್ದಳು.
ಅವಳ ಕೇಳಿದ ಪ್ರಶ್ನೆಗೆ "ಮುಲ್ಗಿ ನೈ, ಪೆಣ್ ತಮಿಳ್ ಪೆಣ್ " ಎಂದು ಉತ್ತರ ಕೊಡುವುದೊಂದೇ ಆ ತಿಳಿನಿದ್ದೆಯಲ್ಲಿ ಹೊರಳುತಿದ್ದ ನನ್ನಿಂದ ಹೊರಬಂದ ಮಾತು.
ಅವಳು "ಅಂತು , ಇಂತೂ ಕೃಪಾ ಗ್ರಹಣದಿಂದ ಹೊರ ಬಂದಿಯಲ್ಲ... ಕಾಂಗ್ರಟ್ಸ್" ಎಂದು ಕೈ ಚಾಚಿದಳು.
ಸುತ್ತಲು ಯಾರಾದರು ನಮ್ಮ ಸಂಭಾಷಣೆ ಗಮನಿಸುತ್ತರಾ ಎಂದು ನೋಡಿದೆ, ಮನೆಯಲ್ಲಿದ್ದ ನೆಂಟರಿಷ್ಟರು ಅವರವರ ಕೆಲಸದಲ್ಲಿ ಮುಳುಗಿದ್ದರು. ಶೇಖ್ ಹ್ಯಾಂಡ್ ಕೊಟ್ಟಾದ ಬಳಿಕ ಗಂಟಲಿಗೆ ಬೆರಳೋತ್ತುತ್ತಾ 'ಪ್ರಾಮಿಸ್ ಯಾರಿಗೂ ಹೇಳ್ ಬೇಡ' ಅಂದೆ.
ಅವಳು "ಶೂರ್ ವೈಭು, ಹೇಳಲ್ಲ, ನನ್ನ ಅದೆಷ್ಟೋ ಸೀಕ್ರೆಟ್ ನಿಂಗೆ ಗೊತ್ತಿದೆ ನೀನು ಅವನ್ನು ಯಾವತ್ತಾದ್ರು ಹೊರಗೆ ಬಿಚ್ಚಿದ್ದಿಯ... ನಾನು ಹಾಗೆ ನನ್ನಲ್ಲೇ ಇಟ್ಟು ಕೊಂಡಿರ್ತೇನೆ.. ಆದ್ರೆ ನೀನು ನಂಗೆ ಒಂದು ಪ್ರಾಮಿಸ್ ಮಾಡಬೇಕು.."
"ಏನಮ್ಮ ಅದು ಹೇಳು.."
"ನಿನ್ ಲಾವ್ ಸ್ಟೋರಿ ನಂಗೆ ಹೇಳ್ಬೇಕು"
"ಶೂರ್ ಹೇಳ್ತೇನೆ, ಇನ್ಯಾವತ್ತಾದ್ರೂ... " ಅಂದೆ.
ಅವಳು ಅದಕ್ಕೆ ಸಮ್ಮತಿಸಿದಳು. "ಬೈ ದ ಬೈ ಅತ್ತಿಗೆಯ ಹೆಸರು ..."
"ಆಕೃತಿ... ಟ್ರಾನ್ಸ್ಲೆಟರ್ .."
"ಮಲಯಾಳಿಗಳು ಹೀಗೂ ಸುರ್ನೆಮ್ ಇಡಲು ಶುರು ಮಾಡಿದ್ದಾರ...?" ಎಂದಳು ವ್ಯಂಗ್ಯ ವಾಗಿ.
"ಓಯ್ ಅದು ಸರ್ನೇಮ್ ಅಲ್ಲ , ನಾ ಕೊಟ್ಟ ಪೆಟ್ನೆಮ್"
"ಅಂದ್ರೆ ನಮ್ ಯಜಮಾನ್ರದ್ದು ದೊಡ್ಡ ಲವ್ ಸ್ಟೋರಿ ನೇ ಆಗಿದೆ ಅಂತ ಆಯಿತು"
"ಇಲ್ಲ ಎಲ್ಲ ಹೇಳ್ತೇನೆ, ಮತ್ತೆ ಅವಳು ತಮಿಳ್ ಹುಡುಗಿ , ಮಲಯಾಳಿಯಲ್ಲ"
"ನಂಗೆ ತಮಿಳ್ ಮಲಯಾಳಿ ಎಲ್ಲ ಒಂದೇ" ಎನ್ನುತ್ತಾ ಮತ್ತೆ ನಕ್ಕಳು, ಮುಷ್ಠಿ ಕಟ್ಟಿ ಹೆಬ್ಬೆರಳನ್ನು ಮೇಲೆತ್ತಿ 'ಆಲ್ ದಿ ಬೆಸ್ಟ್ ವೈಭು, ಐ ವಿಲ್ ಬಿ ವಿಥ್ ಯು' ಎನ್ನುತ್ತಾ ಅಲ್ಲಿಂದ ಹೊರ ಹೋದಳು.
ನಂತರದ ಏಳು ದಿನಗಳು ಮನೆಯವರ ಮತ್ತು ಉಳಿದ ಕಸಿನ್ ಗಳ ಕಣ್ಣು ತಪ್ಪಿಸಲು ವರ್ಷ ನೆರವಾದಳು, ಯಾರಾದರು ಕೇಳಿದಾಗ ಒಂದಲ್ಲ ಒಂದು ಜವಾಬು ತಯಾರಿರುತಿತ್ತು ಅವಳಲ್ಲಿ ನನ್ನನ್ನು ಆಕೃತಿಯ ಜೊತೆಗೆ ಸೇರಿಸಲು. ಒಂದು ವಾರದಲ್ಲಿ ನಾನು ಆಕೃತಿಯ ಬಗ್ಗೆ ನನಗೆ ಗೊತ್ತಿರುವ , ಅವಳಲ್ಲಿ ಉತ್ಪತ್ತಿಯಾದ ಪ್ರೇಮದ ಹರಿವನ್ನು ಅವಳಿಗೆ ಹೇಳಿದ್ದೆ, ಅವಳು ಪೂರ್ಣ ಮೌನದಲ್ಲಿ ಅದನ್ನು ಆಸ್ವಾದಿಸುತಿದ್ದಳು, ಒಂದು ಸಂಜೆ ನನ್ನ ಮಾತು ಮುಗಿದಾದ ಬಳಿಕ ಆಕೃತಿಯಲ್ಲಿ ಅವಳು ಮಾತಾಡಿದ್ದಳು; ಬಳಿಕ 'ಶಿ ಗೊಟ್ ಅ ವಂಡರ್ ಫುಲ್ ವಾಯ್ಸ್' ಎಂದು ಕೊಮ್ಪ್ಲಿಮೆಂಟ್ ಕೊಟ್ಟಿದ್ದಳು.
ನನ್ನಲ್ಲಿ ಅವಳ ಫೋಟೋ ಇದ್ರೆ ಕೊಡೊ , ನೋಡ್ಬೇಕು ಎಂದಾಗ ಫ್ರೆಶರ್ ದೇ ದಿನ ಪ್ರೀತಿ ಮೊಬೈಲ್ ನಲ್ಲಿ ತೆಗೆದ ಫೋಟೋ ತೋರಿಸಿದೆ. ಅವಳು 'ಬೇರೆ ತೋರಿಸು, ಇದು ಬ್ಲುರ್ ಆಗಿದೆ' ಅಂದಾಗ, 'ಇಲ್ಲಮ್ಮಾ, ಇದೊಂದೇ ಇರುವುದು'
ಆಗ 'ಪರವಾಗಿಲ್ಲ ನಾಡಿದ್ದು ಪುಣೆ ಎತ್ತಿ ಆದ ಮೇಲೆ ಅವಳ ಫೋಟೋಸ್ ಮೇಲ್ ಮಾಡು' ಎಂದಿದ್ದಳು.
ಅಂತು ಇಂತೂ ಹದಿನೈದು ದಿನ ಮುಗಿದದ್ದೇ ಗೊತ್ತಾಗಲಿಲ್ಲ, ಎಲ್ಲರು ತುಂಬಿ ಇರುವಾಗಲೇ ಮನೆ ಬಿಡಲು ಮನಸ್ಸಾಗಲಿಲ್ಲ; ಆದರೂ ಮನೆ ಬಿಡುವ ಅನಿವಾರ್ಯತೆ. ಮನೆಯವರು ವರ್ಷಳನ್ನು ನನ್ನ ಬಸ್ ನಲ್ಲಿ ಹೋಗುವಂತೆ ಹೇಳಿದ್ದರು; ಸೀದಾ ಹೋಗುವ ದಾರಿ ಬಿಟ್ಟು ಬೆಳಗಾಂವ್ ಆಗಿ ಹೋಗುವ ಪುಣೆ ಬಸ್ಸನ್ನು ಆರಿಸಿಕ್ಕೊಂಡಿದ್ದೆ, ಇದು ನನ್ನನ್ನು ಮದ್ಯಾಹ್ನ ಎರಡಕ್ಕೆ ಮನೆ ಬಿಡುವಂತೆ ಮಾಡಿತ್ತು.
ಲಗೇಜ್ ಅನ್ನು ಕೆಳಗಿಟ್ಟು ಮುಂದಿನ ಸೀಟ್ ನಲ್ಲಿ ಅವಳಿದ್ದಳು, ಹಿಂದಿನ ಸೀಟ್ನಲ್ಲಿ ನಾನು ಮುಂದೆ ಜನ ಬಂದಾಗ ಸೀಟ್ ಎಕ್ಸ್ಚೆಂಜ್ ಮಾಡಿಸಿ ಕೊಂಡರಾಯಿತು ಎಂದು ಕುಳಿತಿದ್ದೆ. ಬಿಜೈ ಬಿಟ್ಟ ಬಸ್ ಕೊಟ್ಟಾರ ತಲುಪುತಿದ್ದಂತೆ ಬಸ್ ನಿಂತು ಬಿಟ್ಟಿತು. ಪ್ರೀತಿ ಬಸ್ ಏರಿದಳು.
ಎರಡು ತಿಂಗಳಿಂದ ಅವಳು ನನ್ನಲ್ಲಿ ಕೊಪಿಸಿಕೊಂಡಿದ್ದಳು. ವಿವೇಕ್ ಮೇಲಿನ ಕೋಪ ಇನ್ನೂ ಇಳಿದಿರಲಿಲ್ಲ. ಇವತ್ತು ನನ್ನನ್ನು ನೋಡುತಿದ್ದಂತೆ ಕಣ್ಣಲ್ಲೇ ಹಾಯ್ ಅಂದಳು. ಬಂದು ವರ್ಷ ಪಕ್ಕದ ಸೀಟ್ ನಲ್ಲಿ ಕುಳಿತು ಬಿಟ್ಟಳು. ಹಿಂದೆ ತಿರುಗಿ "ಸೊ ಸುರ್ಪ್ರೈಸ್ ವೈಭು ಯು ಆರ್ ಹಿಯರ್"
"ನಿಂಗೆ ಸರ್ಪ್ರೈಸ್ ಇರಬಹುದು, ಇದು ನನ್ನ ತುಂಬಾ ಹಿಂದಿನ ಪ್ಲಾನ್, ನಿಂಗೆ ಗೊತ್ತಿಲ್ಲ ಅಷ್ಟೇ" ಅಂದೆ.
ಅವಳು "ಸೋರಿ ಕಣೋ, ನಾನು ರೂಡ್ ಆದೆ ಆ ದಿನ ಅಷ್ಟು ರೂಡ್ ಆಗಬಾರದಿತ್ತು, ಸಾರೀ ಕಣೋ" ಅಂದಳು.
"ಇಟ್ಸ್ ಓಕೆ, ಏನು ಈ ಬಸ್ , ಐದರ ಬಸ್ ಗೆ ಬರಬಹುದಿತ್ತಲ್ಲಾ..."
"ಅದರಲ್ಲಿ ಸೀಟ್ ಸಿಕ್ಕಿಲ್ಲ ಕಣೋ, ಹಬ್ಬ ಅಲ್ಲಾ, ಅದಕ್ಕೆ ಇದಕ್ಕೆ ಬಂದೆ, ಸುತ್ತಿ ಬಳಸಿ ಹೋಗುತ್ತೆ ಕರ್ಮದ್ದು !! ಅದು ಬಿಡು ನಿಂದು ಸೇಮ್ ಕೇಸಾ ??ಒಳ್ಳೆದಾಯ್ತು ನೋಡು ಒಂದು ಕಂಪೆನಿ ಸಿಕ್ತು"
"ಹೇ, ಮೀಟ್ ಮೈ ಮೋಸ್ಟ್ ಫೆವರಿಟ್ ಕಸಿನ್ ಡಾಕ್ಟರ್ ವರ್ಷ " ಎಂದು ವರ್ಷಳನ್ನು ಅವಳಿಗೆ ಗುರುತು ಮಾಡಿ ಕೊಟ್ಟೆ.
ವರ್ಷ ಇವಳನ್ನು ನೋಡುತ್ತಲೇ "ಪ್ರೀತಿ, ರೈಟ್" ಎಂದಳು.
ಪ್ರೀತಿಯಲ್ಲಿ ಪ್ರೀತಿ ಮೂಡಿದ ಕ್ಷಣ ನಾನು ವರ್ಷಾಳಿಗೆ ಇವಳ ನವಿಲು ಅಂಗಿ ತೊಟ್ಟ ಆರ್ಕುಟ್ ಫೋಟೋ ಮೇಲ್ ಮಾಡಿದ್ದೆ, ಅಲ್ಲಿ ಸ್ಕೇನ್ ಆದ ಚಿತ್ರ ಇವತ್ತು ಅವಳನು ಎದುರು ಕಂಡು ಹೊರಬಿತ್ತು.
"ಹೌ ಕಂ ಯು ಕ್ನೌ ಅಬೌಟ್ ಮಿ .. ರಕ್ಷಾ...?"
"ನಾಟ್ ರಕ್ಷಾ, ವರ್ಷಾ ... ಐ ಕ್ನೌ ಎವೆರಿಥಿಂಗ್ ಅಬೌಟ್ ವೈಭು, ಹಿ ಇಸ್ ಮೈ ಬೆಸ್ಟ್ ಪಾಲ್ ..." ಅಂದಳು ವರ್ಷಾ.
ಪ್ರೀತಿ ನನ್ನಲ್ಲಿ ತಿರುಗಿ "ಏನೋ ..? ಏನೆಲ್ಲಾ ಹೇಳಿದ್ದಿಯ ನನ್ ಬಗ್ಗೆ..?"
ನಾನು ಮೌನದಲ್ಲೇ "ಎನೇನೋ ಹೇಳ್ಬೇಕು ಅಂತ ಇದ್ದೆ, ಆದ್ರೆ ಆಗ್ಲೇ ನೀನು ಬ್ರೇಕ್ ಹಾಕಿದೆ ವರ್ಷದ ಹಿಂದೆ, ಅದಕ್ಕೆ ಏನು ಹೇಳ್ ಲಿಲ್ಲ.."
ಅಷ್ಟರಲ್ಲೇ ವರ್ಷ "ಏನು ಹೇಳ್ಲಿಲ್ಲ, ಆ ದಿನ ಕೆಲಸ ಸಿಕ್ಕ ದಿನ ನಿನ್ನ ಬಗ್ಗೆ ಹೇಳಿದ್ದ, ನಂತರ ನೀನು ಅಲ್ಲಿ ಜೋಯಿನ್ ಆದ ಬಳಿಕ ಹೇಳಿದ್ದ ಮಂಗಳೂರು ಹುಡುಗಿ ಇದ್ದಾಳೆ ಆಫೀಸ ನಲ್ಲಿ ಹೇಳಿ, ಅಷ್ಟೇ..." ಎಂದು ಮಾತನ್ನು ಸಾರಿಸಿದಳು.
ಅಂದು ಪ್ರೀತಿ ಮೂಡುವಾಗ ಆ ಪ್ರೀತಿಯ ಪರಿವು ವರ್ಷಾಳಿಗೆ ಆಗಿತ್ತು , ಆದರೆ ಈಗ ಒಂದು ವಾರದಲ್ಲಿ ನಾನು ವಿವರಿಸಿದ ಆಕೃತಿ-ಚರಿತ ದಿಂದ ಹಿಂದಿನ ಪ್ರೇಮ ಕಥೆಯ ಸ್ವಾರಸ್ಯ ಕಳೆದಿದೆ ಎಂದು ಅವಳು ಮನಗೊಂಡಿದ್ದಳು.
ಇಬ್ಬರೂ ಲೇಡಿಸ್ ಒಟ್ಟಾದರು, ಗಂಡಿನ ಮಾತಿಗೆ ಬೆಲೆ ಇರಲಿಲ್ಲ. ಕಿವಿಗೆ ಯಿಯರ್ ಫೋನ್ ತುರುಕಿಸಿ ನಿದ್ದೆಗೆ ಜಾರಿದೆ.
ಇನ್ನೇನು ಬಸ್ ಅಂಕೋಲಾ ತಲುಪಿತು ಅನ್ನುವಷ್ಟರಲ್ಲಿ ಫೋನ್ ರಿಂಗಾಯಿತು "ವೈಭು, ಎಲ್ಲಿದ್ದಿಯಾ ..?" ಅಂದ ಜೀವನ್ ಆ ಬದಿಯಿಂದ.
"ಬರ್ತಾ ಇದ್ದೇನೋ, ಬಸ್ನಲ್ಲಿದ್ದೇನೆ... ಏನಾಯ್ತು ಮಗಾ ..? ಟೆನ್ಶನ್ ನಲ್ಲಿದ್ದಿಯಾ..?"
"ಏನಿಲ್ಲ ಕಣೋ ..." ಎಂದು ದನಿ ಮೌನಕ್ಕೆ ಜಾರಿತು, ಅವನ ಕಂಠವು ದುಖದಲ್ಲಿ ಉಮ್ಮಳಿಸಿ ಬಿಕ್ಕಳಿಸುತಿತ್ತು.
"ಏನಾಯ್ತೋ...? ಅನಿತಿಂಗ್ ರೊಂಗ್ ...?"
"ವೈಭು, ಅಮ್ಮ ಹೋಗ್ಬಿಟ್ರೋ.." ಎನ್ನುತ್ತಾ ಬಿಕ್ಕಳಿಕೆ ಹೆಚ್ಚಾಯಿತು.
"ರಾಮಾ ಅತ್ತೇ.... ದೇವರಿದ್ದಾನೆ, ಕಾಂ ಆಗಿರೋ, ಏನೂ ಆಗಲ್ಲ..."
"...."ಮೌನದಲ್ಲೇ ಇದ್ದ.ಬಿಕ್ಕಳಿಕೆ ಬಿಟ್ಟು ಮೇರೆ ಮಾತು ಅವನಿಂದ ಹೊರಡುತ್ತಿರಲಿಲ್ಲ.
"ಎಲ್ಲಿದ್ದಿಯಾ...? ಸೀಧಾ ಹೋಗು... ಪ್ರಾಜೆಕ್ಟ್, ತಿವಾರಿಗೆ ಮಣ್ಣು ಹಾಕು"
"ಹೋಗ್ತಾ ಇದ್ದೇನೆ, ಜಸ್ಟ್ ಈಗ ಕರೆ ಬಂತು,ಹೋಗುವ ಮೊದಲು ನಿನಗೆ ವಿಷಯ ತಿಳಿಸೋಣ ಹೇಳಿ ಕರೆ ಮಾಡಿದೆ, ನಾಳಿನ ರಿಲೀಸ್ ಬಗ್ಗೆ ಅವಿನಾಶ್ ನಲ್ಲಿ ಹೇಳಿದ್ದೇನೆ..." ಎಂದು ಅವನ ಮಾತು ಮುಂದುವರಿಸಿದ್ದ.
"ಹುಚ್ಚಾ, ಪ್ರಾಜೆಕ್ಟ್ ಗೆ ಬೆಂಕಿ ಹಾಕು, ನೀನು ನಿನ್ನ ಕೆಲಸ ನೋಡು, ಇಲ್ಲಿನ ಟೆನ್ಶನ್ ಬಿಡು"ಅನ್ನಲು ನನ್ನ ಕಣ್ಣು ಕೊರಳು ತುಂಬಿ ಬಂತು.
ಬಾಲ್ಯದಲ್ಲಿ ರಮಾ ಅತ್ತೇ ತೋರಿಸುತಿದ್ದ ಪ್ರೀತಿ ನೆನಪಿಗೆ ಬಂದು ಕಣ್ಣುಗಳು ತೇವವಾದವು. ಬಳಿಕ ನೋಡಿರಲಿಲ್ಲ, ಒಮ್ಮೆ ಅವರಲ್ಲಿ ಮಾತಾಡಿದ್ದೆ, ಭೇಟಿ ಮಾಡುವ ಬಯಕೆ ಇತ್ತು, ಆದ್ರೆ ಬಯಕೆ ಬಯಕೆಯಾಗೆ ಉಳಿಯಿತು ಎಂದು ಬೇಜಾರಾಯಿತು.
ಬಸ್ ಉಟಕ್ಕೆ ನಿಲ್ಲಿಸಿದಾಗ ಕರ್ಚೀಪ್ ಎಲ್ಲ ಒದ್ದೆಯಾಗಿತ್ತು. ಮುಂದಿನ ಸೀಟ್ನಲ್ಲಿದ್ದ ಇಬ್ಬರೂ "ಏನಾಯ್ತು ವೈಭು..?"
"ಹೇ ವರ್ಷಾ, ರಮಾ ಅತ್ತೇ ನೆನಪಿದೆಯಾ...? ಹೋಗ ಬಿಟ್ರಂತೆ..?"
"ಅವರೇ ಅಲ್ಲ, ನಮ್ಮನ್ನು ಗಂಡ-ಹೆಂಡತಿ ಅಂತ ಮೊದಲು ಕರೆಯಲು ..." ಎಂದು ಅರ್ಧಕ್ಕೆ ಮಾತು ನಿಲ್ಲಿಸಿದಳು.
"ಹೌದು, ಅವರೇ, ಜೀವನ್ ಕರೆ ಮಾಡಿದ್ದ, ಹೋಗ ಬಿಟ್ರಂತೆ"
"ಡೋಂಟ್ ಬಿ ಸೆಂಟಿ ವೈಭು, ಎಲ್ಲ ನಡೆಯುತ್ತೆ, ಇವತ್ತು ಅವರು, ನಾಳೆ ನಾನು ನಾಡಿದ್ದು ನೀನು ಹೀಗೆ ಒಬ್ಬೊಬ್ಬರೇ ಖಾಲಿ ಅಗ್ತಾ ಇರ್ಬೇಕು, ಇಲ್ಲನ್ತಾದ್ರೆ ಭೂಮಿ ಮೇಲೆ ಬದುಕಲಿಕ್ಕೆ ಜಾಗ ಸಿಗಲ್ಲ" ಎಂದು ತಲೆ ಸವರಿದಳು ವರ್ಷ. ನಡುವಲ್ಲಿ ಪ್ರೀತಿ ಮೂಕ ಪ್ರೇಕ್ಷಕಳಾಗಿದ್ದಳು.
ಮುಂದಿನ ಸಿಪ್
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!