ಸಿಪ್ - ೨೯
ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ....
ಮೇ ನಲ್ಲಿ ತುಂಬಾ ದಿನದ ನಂತರ ತಿವಾರಿಯೊಂದಿಗೆ ಮುಕಾಮಖಿ ಯಾಗಿತ್ತು ಜೀವನ್ ದು. ತಿವಾರಿ ಇಬ್ಬರ ನಡುವೆ ನಡೆಯುತಿದ್ದ ಶೀತಲ ಸಮರಕ್ಕೆ ತೆರೆ ಯೇಳೆಯುವ ಮನಸ್ಸು ಮಾಡಿದ್ದ.ಇಲ್ಲಿ ವರೆಗೆ ತಿವಾರಿಯ ಹೆಸರು ಕೇಳಲು ಜೀವನ್ ಅವನಿಗೆ ಶಾಪದ ಸುರಿಮಳೆ ಗೈಯುತಿದ್ದ.
ಸೂತಕದ ಮನೆಯಿಂದ ತಿವಾರಿ ಪ್ರಾಜೆಕ್ಟ್ ಹೇಳಿ ಜೀವನ್ ನನ್ನು ಕರೆಸಿಕೊಂಡಿದ್ದ, ಅದಕ್ಕಾಗಿ ಜೀವನ್ ಅವನ ಮೇಲೆ ಹೆಚ್ಚಾಗಿಯೇ ಕೋಪಿಸಿಕೊಂಡಿದ್ದ. ಅವನ ಜೊತೆ ವಾಗ್ವಾದಕ್ಕೂ ಇಳಿದಿದ್ದ. ಲಕ್ಷ್ಮಿ ಸರ್ ಮದ್ಯ ಪ್ರವೇಶಿಸಿ ಇವರ ವಾಗ್ವಾದವನ್ನು ನಿಲ್ಲಿಸಿದ್ದರು. ಕರ್ನಲ್ ಸೆಂಟರ್ ನಲ್ಲಿಲ್ಲದ್ದರಿಂದ ಇಬ್ಬರೂ ಕೆಲಸದಲ್ಲಿ ಉಳಿದಿದ್ದರು, ಇಲ್ಲನ್ತಾದರೆ ಇಬ್ಬರಲ್ಲಿ ಒಬ್ಬರಿಗೆ ಕರ್ನಲ್ ಸರ್ ಗೇಟ್ಪಾಸು ಕೊಟ್ಟು ಬಿಡುತಿದ್ದರು. ತಿವಾರಿ ಮೆನೆಜ್ಮೆಂಟ್ ಲೆವೆಲ್ ನವನು ಅವನು ಹೇಗೋ ತಪ್ಪಿಸಿ ಕೊಳ್ಳುತಿದ್ದ, ಜೀವನ್ ನ ಕೆಲಸ ಹೋಗುತಿತ್ತು ಎಂದು ಸೆಂಟರ್ ನ ಎಲ್ಲ ನೂರು ಬಾಯಿಗಳು ಮಾತಾಡುತಿದ್ದವು.
ಅಮ್ಮನ ಸಾವಿನಿಂದ ಬಹಳಷ್ಟು ನೊಂದಿದ್ದ, ಎಲ್ಲ ಜವಾಬ್ಧಾರಿ ಇವನ ಮೇಲೆ ಇರುವಾಗ ತಿವಾರಿ ಇಲ್ಲಿ ಕರೆದದಕ್ಕೆ ಜೀವನ್ ಗೆ ಕೋಪ ಏರಿತ್ತು. ಇಲ್ಲಿ ಬಂದವನೇ ಅವನನ್ನು "ನಿನಗೇನು ಫ್ಯಾಮಿಲಿ ಇಲ್ವಾ, ದಾರಿಯಲ್ಲಿ ತಿರುಗುವ ನಾಯಿಗೆ ಹುಟ್ಟಿದಂತೆ ಯಾಕೆ ಆಡ್ತೀಯಾ" ಎಂದು ಕೇಳಿದ್ದು ತಿವಾರಿಯ ಪಿತ್ತ ನೆತ್ತಿಗೆರಿಸಿತ್ತು. ಅವನೂ ಬಾಯಿಗೆ ಬಂದ ಹಾಗೆ ಇವನ ಸಂಸಾರವನ್ನು ಬೈಯುತಿದ್ದ, ಒಂದು ನಿಮಿಷಕ್ಕೆ ಎಲ್ಲ ತಲೆಗಳು ಅಲ್ಲಿ ಜಮಾಯಿಸಿದ್ದವು. ಲಕ್ಷ್ಮಿ ಸರ್ ಇವನ ಕೈ ಹಿಡಿದು ಎಳೆದು ಕೊಂಡು ಹೋಗಿದ್ದರು.
ಅವರಲ್ಲಿ "ಇವನಿಗೆ ಮಗನನ್ನು ಕೆ.ಜಿ ಕ್ಲಾಸ್ನಿಂದ ಕರ್ಕೊಂಡು ಬರುವಾಗ ಪ್ರಾಜೆಕ್ಟ್ ಕಾಣಿಸಲ್ಲ, ನಾನು ಅಮ್ಮನ ಅಂತ್ಯ ಸಂಸ್ಕಾರಕ್ಕೆ ಹೋದದ್ದು, ಇವನಿಗೆ ಬಿಲ್ಲಿಂಗ್ ನಲ್ಲಿ ದೊಡ್ಡ ಲಾಸ್ ಆಯಿತು ಅನ್ನುವಾಗೆ ಮಾತಾಡ್ತಾನೆ."
ಲಕ್ಷ್ಮಿ ಸರ್" ಬಿಡೋ ... ಕೂಲ್"
"ಇವನಿಂದಲೇ ಬರಬೇಕಾಗಿರೋ ಸಾಮ್ಸಂಗ್ ಪ್ರಾಜೆಕ್ಟ್ ಕೈ ತಪ್ಪಿದ್ದು; ನಾ ಎರೆಂಜ್ ಮಾಡಿದ ಮೀಟಿಂಗ್ ಅನ್ನು ಜಬರ್ದಸ್ತಿ ತಾನೇ ಹೆಂಡಲ್ ಮಾಡ್ತೇನೆ ಹೇಳಿ ಮೈಮೇಲೆ ಏಳ್ದು, ಮೀಟಿಂಗ್ ದಿನ ಹೆಂಡ್ತಿ ಒಟ್ಟಿಗೆ ಮಾಲ್ ಸುತ್ತುತಿದ್ದ ಸೊ ಕಾಲ್ದ್ ಮೆನೆಜೆರ್... ಮತ್ತೆ ಮರುದಿನ ಬಂದು ನನ್ನಿಂದಲೇ ಪ್ರಾಜೆಕ್ಟ್ ಕೈ ತಪ್ಪಿತು ಎಂದು ಕರ್ನಲ್ಗೆ ಹೇಳಿ ಕೊಡುತಿದ್ದ, ಒಂದು ವರ್ಷದಲ್ಲಿ ನಾನು ಗಳಿಸಿದ ಒಳ್ಳೆ ಹೆಸರನ್ನು ಇವನು ಒಂದೇ ಬಾರಿಗೆ ಮಸಿ ಎಳೆದು ಬಿಟ್ಟ. ಅವನು ಕಳಕೊಳ್ಳುವುದು ಏನು ಇಲ್ಲ, ತನ್ನ ಹೆಸರು ಮೇಲೆ ತರಲು ನನ್ನನ್ನು ಕೆಳಗೆ ಅದಮುತಿದ್ದಾನೆ.ಮಗನನ್ನು ನೀವು ಬಾರದೇ ಇದ್ರೆ ಇಲ್ಲೇ ಕತ್ತು ಹಿಸಕಿ ಸಾಯಿಸ್ತಿದ್ದೆ" ಎಂದು ಕೋಪ ಉಗುಳಿದ್ದ.
ಮುಂದಿನ ಎರಡು ದಿನದಲ್ಲಿ ಲಕ್ಷ್ಮಿ ಸರ್ ಕರ್ನಲ್ ಗೆ ಸಾಮ್ಸಂಗ್ ಪ್ರಾಜೆಕ್ಟ್ ಹಿಂದೆ ಹೋದ ಕಾರಣವನ್ನು ಮನವರಿಸಿದಾಗ ಕರ್ನಲ್ ಮತ್ತೆ ಮೊಡ್ಯುಲ್ ನ ಜವಾಬ್ದಾರಿಯನ್ನು ತಿವಾರಿಯಿಂದ ಕಿತ್ತು ಲಕ್ಷ್ಮಿ ಸರ್ ಗೆ ವಹಿಸಿದರು. ಲಕ್ಷ್ಮಿ ಸರ್ ಮೊದಲಿಗೆ ೨೦ ಜನರ ಜವಾಬ್ದಾರಿ ನೋಡಿ ಕೊಳ್ಳುತಿದ್ದರು, ಅದಕ್ಕಾಗಿ ಮತ್ತೆ ಈ ಮೊಡ್ಯುಲ್ ನ ಜವಾಬ್ದಾರಿಯನ್ನು ಜೀವನ್ ಗೆ ವಹಿಸಿ ಬಿಟ್ಟ. ಇದು ಜೀವನ್ ನಲ್ಲಿ ಮತ್ತೆ ಹಳೆಯ ಹುಮ್ಮಸ್ಸು ಮೂಡಲು ಕಾರಣವಾಯಿತು. ತಿವಾರಿ ಜೀವನ್ ಆ ದಿನದಿಂದ ಹಾವು ಮುಂಗುಸಿಗಳಾಗಿದ್ದರು.
ಜೀವನ್ ಸ್ವೀಟ್ ಅಟ್ ಮೈ ಡೆಸ್ಕ್ ಮೇಲ್ ಗೆ ನಮ್ಮ ಕ್ಯುಬಿಕಲ್ ನಲ್ಲಿ ಜಾತ್ರೆಯೇ ಸೇರಿತ್ತು, ಅವರಲ್ಲಿ ತಿವಾರಿಯು ಒಬ್ಬನಾಗಿದ್ದ. ಎರಡನೇ ಬಾರಿಗೆ ಅವನು ಕ್ಯುಬಿಕಲ್ ಗೆ ಬಂದಿದ್ದ, ಹಿಂದೊಮ್ಮೆ ಪುಣೆ ಯಲ್ಲಿ ತಾನು ಮೇನೇಜರ್ ಆಗಿ ನೇಮಕ ಆದ ದಿನ, ನಂತರ ಇವತ್ತೇ ..
"ಹೇಗಿದ್ದಿಯಾ ...? ಹೇಗಿದೆ ನಿನ್ನ ಮೊಡ್ಯುಲ್ ..?" ಅಂದ ಜೀವನ್ ನಲ್ಲಿ
"ಇಟ್ಸ್ ಗೋಯಿಂಗ್ ಗುಡ್, ಹೇವ್ ಸ್ವೀಟ್ ಸರ್" ಎನ್ನುತ್ತಾ ಬಾಕ್ಸ್ ಮುಂದೆ ಹಿಡಿದ. ಅದರಿಂದ ಸ್ವೀಟ್ ಎತ್ತಿ ಅದನ್ನು ಜೀವನ್ ನ ಬಾಯಿಗೆ ಹಾಕಿ "ಕಾಂಗ್ರಟ್ಸ್..." ಎಂದು ತನ್ನ ಮೆನೇಜರಿಕೆ ತೋರಿಸಿದ ತಿವಾರಿ.
ಜೀವನ್ ಗೆ ಏ ಬ್ಯಾಂಡ್ ನೊಂದಿಗೆ ಪ್ರೊಮೋಷನ್ ಸಿಕ್ಕಿತ್ತು, ಇದು ಅವನಿಗೆ, ಅವನು ಮಾಡಿದ ಕೆಲಸಕ್ಕೆ ಕೊಟ್ಟ ಪ್ರೋತ್ಸಾಹ ವಾಗಿತ್ತು. ಜೊತೆಗೆ ಲಕ್ಷ್ಮಿ ಸರ್ ನೊಂದ ಮನಸ್ಸಿಗೆ ಮಾಡಿದ ಎಕ್ಸಲೇಶನ್ ಆಗಿತ್ತು. ತಿವಾರಿಯು ತೆರೆ ಮರೆಯಲ್ಲಿ ತನ್ನ ಕಾರ್ಯಕ್ಕೆ ಪಶ್ಯಾತ್ತಾಪ ಪಡುತ್ತ ಕರ್ನಲ್ ನಲ್ಲಿ ಇವನ ಪ್ರೊಮೋಷನ್ ಗೆ ಖುದ್ದು ರೆಕಮೆಂಡ್ ಮಾಡಿದ್ದ. ಬೋನಸ್ ಆಗಿ ಸಿಗಲಿದ್ದ ಅರವತ್ತು ಸಾವಿರದ ಮೊತ್ತ ಅಮ್ಮನ ಕೊನೆ ದಿನದ ಆಸ್ಪತ್ರೆಯ ಖರ್ಚು ತೀರಿಸಲು ನೆರವಾದೀತು ಎಂದು ಜೀವನ್ ದುಖದಲ್ಲೂ ಸಂತೃಪ್ತಿ ಪಡುತಿದ್ದ.
೫ ರಲ್ಲಿ ೩.೮ ನನ್ನ ಪೆರ್ಫಾರ್ಮನ್ಸ್ ರೇಟಿಂಗ್ ಇದ್ದರೂ ನನಗೆ ಯಾವುದೇ ಬ್ಯಾಂಡ್ ಕೊಡದಕ್ಕೆ ಬೇಜಾರಿತ್ತು, ಕೆಲಸಕ್ಕೆ ಸೇರಿ ಒಂದು ವರ್ಷದಲ್ಲಿ ಪ್ರೊಮೋಷನ್ ಸಿಗಬೇಕು ಎನ್ನುವುದು ಹುಂಬತನ ವಾಗುತ್ತೆ ಅಂತ ಗೊತ್ತಿತ್ತು, ಆದಕಾರಣ ಮನಸ್ಸು ಅಷ್ಟೇನೂ ವಿಚಲಿತ ವಾಗಿರಲಿಲ್ಲ. ಅವಿನಾಶ್ ಮಾಡಿದ ೫ ತಿಂಗಳ ಕೆಲಸಕ್ಕೆ ಸಿ ಬ್ಯಾಂಡ್ ನೊಂದಿಗೆ ಪ್ರಮೋಶನ್ ಪಡೆದು ಹಿಗ್ಗಿದ್ದ.
ನನ್ನಲ್ಲಿ "ಅಗಲೇ ಸಾಲ್ ತುಮ್ಹೇ ಏ ಬ್ಯಾಂಡ್ ಕೆ ಸಾಥ್ ಪ್ರೊಮೋಷನ್ ಹೋಗ, ಟೆನ್ಶನ್ ನಹಿ ಲೆನೇಕ ಬಿಂದಾಸ್ ರೆಹ್ನೆಕಾ ..." ಎನ್ನುತ್ತಾ ಚೇಡಿಸುತಿದ್ದ.
ನಾನು "ಕುಚ್ ಭಿ ಭಾಯಿ ಪಾರ್ಟಿ ತೊಹ್ ಬನತಾ ಹೇ.." ಅಂದಾಗ
ಅವಿನಾಶ್ "ಈಗ ನಿನ್ನ ಭೈಯ್ಯ ನತ್ರ ತಕೋ.. ನಾನು ಪಾರ್ಟಿ ಅರಂಸೆ ಕೊಡ್ತೇನೆ, ಏ ಬ್ಯಾಂಡ್ ಪ್ಲುಸ್ ಪ್ರೊಮೋಷನ್ ಸಿಕ್ಕವನು ಕೊಡಲಿ ಮೊದಲು" ಅಂದ.
"ಜೀವನ್ ಪಾರ್ಟಿ, ಎಲ್ಲಿ ಹೇಳೋ ..."
"ನೀನು ಹೇಳು ಅಲ್ಲಿ ಕೊಡೋಣ " ಅಂದ.
"ಪುಣೆ ಬಗ್ಗೆ ಎಲ್ಲಿ ಕೇಳ್ಲಿ, ಯಾವುದಾದರು ನೈಸ್ ರೆಸ್ಟೋರೆಂಟ್" ಅಂದೆ ನಾನು
ಜೀವನ್ ನು "ಓಕೆ, ಸಾಲರಿ ಬರಲಿ ಕೊಡ್ತೇನೆ ಶೂರ್" ಅಂದ
"ಅಂದ್ರೆ ಬರುವ ಮೂವತ್ತರ ವರೆಗೆ ಕಾಯಬೇಕು ಅಂತಾಯ್ತು, ಇಟ್ಸ್ ಓಕೆ, ನಂತರ ಅವಿನಾಶ್ ಕೊಡ್ತಾನೆ ಅವನ ಪಾರ್ಟಿ" ಅಂದೆ.
ಅಷ್ಟರಲ್ಲಿ ಅವಿನಾಶ್ "ಜುಲೈ ನಲ್ಲಿ ನಂದು ಪಾರ್ಟಿ ಕೊಡ್ತೇನೆ, ಆದ್ರೆ ನಿಮ್ಹಾಗೆ, ಜುಜುಬಿ ರೆಸ್ಟೋರೆಂಟ್ ನಲ್ಲಿ ಅಲ್ಲ, ಫೈವ್ ಸ್ಟಾರ್ ಹೋಟೆಲ್ ನಲ್ಲೆ ಕೊಡ್ತೇನೆ"
ಜೀವನ್ "ಏನಪ್ಪಾ ಸ್ಪೆಷಲ್ , ಫೈವ್ ಸ್ಟಾರ್ ನಲ್ಲಿ ಪಾರ್ಟಿ ಕೊಡುವಷ್ಟು...?"
"ನನ್ನ ಜರ್ಮನಿ ಫಿಫಾ ಗೆದ್ರೆ , ಫೈವ್ ಸ್ಟಾರ್ ಏನು ಚಂದ್ರನಲ್ಲೂ ಪಾರ್ಟಿ ಕೊಡಲು ನಾನು ತಯಾರ್" ಅಂದ ಅವಿನಾಶ್ ಜವಾಬಾಗಿ.
ಅವಿನಾಶ್ ಪಕ್ಕ ಜರ್ಮನಿ ಅಭಿಮಾನಿ, ಹುಟ್ಟಿದ್ದು ಭಾರತದಲ್ಲಿ ಆದ್ರೂ ತನ್ನಲ್ಲಿ ಜರ್ಮನಿ ಆತ್ಮ ಸೇರಿ ಕೊಂಡಂತೆ ಅಭಿಮಾನಿ ಯಾಗಿದ್ದ.
ಹುಡುಗಿಯರು ತನ್ನ ಸಿಸ್ಟಮ್, ಅಕೌಂಟ್ ನ ಪಾಸ್ವರ್ಡ್ ಎಲ್ಲ ತನ್ನ ಮೆಚ್ಚಿನ ಹೀರೋ ನ ಹೆಸರು, ಇಲ್ಲ ತನ್ನ ಹುಟ್ಟಿದ ದಿನಾಂಕ ಇಟ್ಟುಕೊಳ್ಳುತ್ತಾರೆ; ಹುಡುಗರು ತನ್ನ ಸ್ಪೋರ್ಟ್ಸ್ ಸ್ಟಾರ್ ನ ಹೆಸರು ಇಟ್ಟಿರುತ್ತಾರೆ ಇಲ್ಲ ಕೈ ಕೊಟ್ಟ ಪ್ರೆಯೆಯ ಹೆಸರನ್ನು ಲಗುತ್ತಿಸಿರುತ್ತಾರೆ, ಮದುವೆಯಾದವರು ತನ್ನ ಸಂಗಾತಿಯ ಇಲ್ಲ ಮಕ್ಕಳನ್ನು ಪಾಸ್ವರ್ಡ್ ಆಗಿ ಇಡುವುದು ವಾಡಿಕೆ.
ಇಲ್ಲಿ ಅವಿನಾಶ್ ಅವೆಲ್ಲಕ್ಕಾಗಿ ಹೊರತಾಗಿ ನಿಂತಿದ್ದ, ತನ್ನ ಪಾಸ್ವರ್ಡ್ ಅನ್ನು '೫೪೭೪೯೦' ಎಂದು ಇಟ್ಟಿದ್ದ.
ಐಟಿ ಲೈಫ್ ನಲ್ಲಿ ಎಲ್ಲರು ತಮ್ಮ ಸಿಸ್ಟಮ್ ಗೆ ಪಾಸ್ವರ್ಡ್ ಕೊಟ್ಟಿರ್ತಾರೆ, ಒಬ್ಬನ ಪಾಸ್ವರ್ಡ್ ಇನ್ನೊಬ್ಬನಿಗೆ ಗೊತ್ತಿರುತ್ತದೆ, ಅದ್ರೂ ಸಿಸ್ಟಮ್ ಅನ್ನು ಲೋಕ ಮಾಡಿಡ್ತಾರೆ !!
ಒಂದೇ ಮೊಡ್ಯುಲ್ ನಲ್ಲಿರುವಾಗ ಒಬ್ಬನ ಕೆಲಸ ಇನ್ನೊಬ್ಬ ನೋಡ ಬೇಕಾಗುತ್ತದೆ, ಇದಕ್ಕಾಗಿ ನಾವು ಪಾಸ್ವರ್ಡ್ ಶೇರ್ ಮಾಡಿಕೊಳುತಿದ್ದೆವು. ಜನ್ಮ ದಿನವನ್ನು ಪಾಸ್ವರ್ಡ್ ಆಗಿ ಚೂಸ್ ಮಾಡಿಕ್ಕೊಂಡ ನಾನು ಅವನಲ್ಲಿ "ಭಾಯಿ ಎ ಕಿಸ್ ಟೈಪ್ ಕ ಪಾಸ್ವರ್ಡ್, ಲಾಸ್ಟ್ ನ ೯೦ ನೋಡಿದರೆ ಜನ್ಮ ವರ್ಷ ಅನ್ಸುತ್ತೆ, ಆದ್ರೆ ನೀನು ೯೦ ರ ಮಾಡೆಲ್ ಅಲ್ಲ, ಮೇಲಾಗಿ ಮೊದಲ ನಾಲ್ಕು ಡಿಜಿಟ್ ನಿನ್ನ ಬರ್ತ್ ಡೇಟ್ ನೂ ಅಲ್ಲ , ಏನೋ ಅದು ಅಂದು ಕೇಳಿದ್ದೆ"
ಅವನು "೫೪೭೪೯೦. ಅಷ್ಟು ಗೊತಿಲ್ವಾ...? ಆರು ತಿಂಗಳಿಂದ ನನ್ನೊಟ್ಟಿಗೆ ಇದ್ದು" ಅಂದ.
ಜೀವನ್ "ಒಂದು ಕ್ಲೂ ಕೊಡ್ತೇನೆ, ಜರ್ಮನಿ ಗೆ ಸಂಭಂದಿಸಿದ ವರ್ಷಗಳು ಅವ್ವು" ಅಂದ.
ಅಲ್ಲಿ ವರೆಗೆ ಜೆರ್ಮನಿ ಎಂದರೆ ವಿಶ್ವಯುದ್ದ ಮತ್ತು ಹಿಟ್ಲರ್ ಬಿಟ್ರೆ ಬೇರೆ ವಿಷಯ ಗೊತ್ತಿರದ ನಾನು "ಎರಡು ವರ್ಲ್ಡ್ ವಾರ್ ನಡೆದದ್ದು ಗೊತ್ತಿದೆ , ಹಿಟ್ಲರ್ ಸತ್ತದ್ದು ಗೊತ್ತಿದೆ, ಇದು ಬಿಟ್ರೆ ಜೆರ್ಮನಿ ಏತಕ್ಕೆ ವಿಖ್ಯಾತಿ/ ಖುಕ್ಯಾತಿ ಪಡೆದಿದೆ ಹೇಳಿ ಗೊತ್ತಿಲ್ಲ ಅವ್ವು ಮೂರಕ್ಕೂ ನಿನ್ನ ೫೪೭೪೯೦ ಗು ಸಂಭಂದ ಕೂಡಿ ಬರ್ತಾ ಇಲ್ಲ " ಸೋರಿ ಅಂದೆ.
ಅವಿನಾಶ್ "ಪ್ರಪಂಚದ ಎಲ್ಲ ಜನರು ಸರಿ ಇಲ್ಲ, ಜೆರ್ಮನಿ ಅಂದ್ರೆ ಹಿಟ್ಲರ್ ಬಿಟ್ರೆ ಬೇರೆ ಕಡೆ ತಲೇನೆ ಓಡ್ಸಲ್ಲ" ಅಂದ ಕೋಪದಲ್ಲಿ.
ನಾನು "ಅವನ ಜೆರ್ಮನ್ ರಕ್ತಾ ಕುದಿತಾ ಇದೆ, ಬಿಡೋ ಅವನನ್ನು ಗೋಳು ಹೊಯ್ಕೊಬೇಡ.. ನೀನಾದ್ರು ಹೇಳೋ ಜೀವನ್" ಅಂದೆ.
ಜೀವನ್ "ಜೆರ್ಮನ್ ಫೂಟ್ ಬಾಲ್ ಆಡುತ್ತೆ ಹೇಳಿ ಆದರೂ ಗೊತ್ತಾ...? ಅದು ಆ ಮೂರು ವರ್ಷದಲ್ಲಿ ಫಿಫಾ ಗೆದಿತ್ತು" ಅಂದ.
ಇಷ್ಟರ ಮಟ್ಟಿಗೆ ಅವನ ಜರ್ಮನಿ ಫೂಟ್ ಬಾಲ್ ಪ್ರೇಮ ತುಂಬಿತ್ತು.
ನಾನು "ಅಂದ್ರೆ ಸದ್ಯದಲ್ಲೇ ನಿನ್ನ ಪಾಸ್ವರ್ಡ್ ೫೪೭೪೯೦೦೬ ಆಗುತ್ತೆ ಅಂತಾತಯ್ತು" ಎಂದೆ.
"ಹಾಂ ಭಾಯಿ ಅದು ನಿಜಕ್ಕೂ ೫೪೭೪೯೦೦೨ ಆಗಬೇಕಿತ್ತು, ಲಾಸ್ಟ್ ಮೊಮೆಂಟ್ ಮಿಸ್ ಆಯಿತು, ಆದ್ರೆ ಈ ಬಾರಿ ಪಕ್ಕ ಇದು ಬದಲಾಗುತ್ತೆ" ಅಂದ ಅವಿನಾಶ್, ಅವನಲ್ಲಿ ೨೦೦೨ ರಲ್ಲಿ ಜೆರ್ಮನಿ ಫಿಫಾ ಫೈನಲ್ ಸೋತ ನಿರಾಶೆ ಗೋಚರಿಸುತ್ತಿತ್ತು. ಆದರೆ ಸದ್ಯಕ್ಕೆ ಫಾರಂ ನಲ್ಲಿರುವ ಜೆರ್ಮನ್ ಸ್ಟಾರ್ ಬಲಾಕ್ ನ ಆತ್ಮ ವಿಶ್ವಾಸ ಇವನಲ್ಲೂ ಗೆಲ್ಲುವ ವಿಶ್ವಾಸ ತುಂಬಿಸಿತ್ತು.
****************
ಜೂನ್ ೨ ೨೦೦೬ ಜೀವನ್ ತನ್ನ ಪಾರ್ಟಿ ಗೊತ್ತು ಮಾಡಿದ, ಜೀವನ್ ಇಲ್ಲಿ ತನ್ನ ಗುರುತಿನವರನ್ನು ಪಾರ್ಟಿಗೆ ಆಮಂತ್ರಿಸಲು ಬಯಸಿದ್ದ, ಅಕ್ಟೋಬರ್ ೨೦೦೫ ನಿಂದ ಮಾರ್ಚ್ ೨೦೦೫ ವರೆಗೆ ಪುಣೆ ಆಫೀಸ್ ನಲ್ಲಿ ಉತ್ತುಂಗದಲ್ಲಿದ್ದ ಜೀವನ್ ನ ಐಡೆನ್ಟಿಟಿ ಮಾರ್ಚ್ ನಲ್ಲಿ ಯಾದ ಸಣ್ಣ ಕಿಚ್ಚಾಟ ದಿಂದ ಆಫೀಸ್ ನ ರೆಬಲ್ ಸ್ಟಾರ್ ಆಗಿ ಬದಲಾಗಿದ್ದ. ಮೊದಲು ತನ್ನಲ್ಲಿ ಮಾತಾಡುತಿದ್ದ ಕಾಲಿಗ್ಸ್ ಗಳು ಅವನಿಂದ ಮಾತಾಡಲು ಹೆದರುತಿದ್ದರು, ಮೇಲಾಗಿ ಅಮ್ಮನ ಸಾವಿನಿಂದ ಪೂರ್ಣವಾಗಿ ಕುಗ್ಗಿ ಹೋಗಿದ್ದ. ನಮ್ಮಿಬ್ಬರನ್ನು ಬಿಟ್ಟರೆ ಅವನು ಇನ್ಯಾರಲ್ಲೂ ಮಾತಾಡುವುದು ನೋಡಲು ಸಿಗುತ್ತಿರಲಿಲ್ಲ. ಬೆಳಗ್ಗೆ ಬಂದು ಕಂಪ್ಯೂಟರ್ ಒಳಗೆ ಸೇರಿದರೆ ರಾತ್ರಿ ಕ್ರಿಸ್ ಗೆ ಗುಡ್ ಮಾರ್ನಿಂಗ್ ಹೇಳಿ ಮನೆ ಸೇರುತಿದ್ದ.
ಮೌನ ಮೌನಗಳ ನಡುವೆಯೇ ಎರಡು ಮೌನ ಹಕ್ಕಿಗಳು ಒಂದಾಗಿದ್ದವು, ಒಂದರ ಮೌನಕ್ಕೆ ಇನ್ನೊಂದು ಹಕ್ಕಿ ಮೌನದ ಸಾಂತ್ವನ ನೀಡುತ್ತಿತ್ತು. ಯಾರ ಗಮನಕ್ಕೆ ಬಾರದೆ ಇಬ್ಬರ ನಡುವೆ ಮೌನ ಸಂಭಾಷಣೆ ನಡೆಯುತ್ತಿತ್ತು.
ಪ್ರೊಮೋಷನ್ ಲೆಟರ್ ಬಂದ ದಿನದಿಂದ ಜೂನ್ ೨ ಕ್ಕೆ ಪಾರ್ಟಿ ಅನ್ನುತಿದ್ದವ ಮೇ ಎರಡನೇ ವಾರದಲ್ಲಿ ಇದಕ್ಕಿದ್ದಂತೆ ಪಾರ್ಟಿಯನ್ನು ಒಂಬತ್ತನೇ ತಾರಿಕೆಗೆ ಮುಂದೆ ಹಾಕಿದನು. ಇದು ನನ್ನಲ್ಲಿ ಸಂಶಯ ಮೂಡಿಸಿತು.
ಅವನಲ್ಲಿ ನಾನು "ಏನೋ ಒಂಬತಕ್ಕೆ ಮುಂದೆ ಹಾಕಿದ್ದೀಯ...?" ಅಂದೆ.
ಅವನು "ಪಾರ್ಟಿ ದಿನ ಇಲ್ಲಿ ಮೇನ್ ಗೆಸ್ಟ್ ಇರಲ್ಲ ಅದಕ್ಕೆ ಅಂದ"
"ಮೇನ್ ಗೆಸ್ಟ್, ಯಾರಪ್ಪಾ ಅದು" ಅಂದೆ.
ಅವನು "ಯಾರು ಇಲ್ಲ, ಜೋಯಿನ್ ಆದ ಯಿಎಲ್ಟಿಪಿ ಯಲ್ಲಿ ಇಬ್ಬರು ಇರಲ್ಲ, ಪ್ಲುಸ್ ನಂಗೆ ಹತ್ತಿರ ಆದ ಪ್ರಕಾಶ್ ಸರ್ ಇರುವುದಿಲ್ಲ" ಅಂದರು.
"ಪ್ರಕಾಶ್ ಸರ್ ಬಿಡು, ಯಾರಿಗಾಗಿ ಪಾರ್ಟಿ ಮುಂದೆ ಹಾಕಿದ್ದಿ ಹೇಳಿ ಸೀದಾ ಪಾಯಿಂಟ್ ಗೆ ಬಾ" ಅಂದೆ.
ಅವನು "ಅವಳೇ, ಮೌನದಲ್ಲಿ ನನ್ನ ಮೌನ ಗುರುತಿಸಿದವಳು"
"ಮೌನ ದಲ್ಲಿ ಮೌನ ಅಂದ್ರೆ ಪ್ರೀತಿನಾ..."
ಎರಡು ಕ್ಷಣ ಸುಮ್ಮನಿದ್ದು ಅವನು "ಹೌದು ಕಣೋ, ಆಗೋಯ್ತು..."
ಮುಗುಳ್ನಗೆ ಉಕ್ಕಿತು, ಆದ್ರೆ ವಿವೇಕನ ನೆನಪಾಗಿ ನಾನು ಆ ನಗುವನ್ನು ಸಾಯಿಸಿದೆ.
ಅವನು ಮುಂದುವರಿಸಿದ "ಮೌನದ ನಡುವೆಯೇ ಮನಸ್ಸಿನ ಮಾರಾಟ ಆಗೋಯ್ತು ಕಣೋ..."
"ಆದ್ರೆ..."
ಅವನು "ಆದ್ರೇ, ಗೀದ್ರೆ ಏನು ಇಲ್ಲ... ನಿಂಗೆ ಇನ್ನು ವಿವೇಕ್ ಮೇಲೆ ಕರುಣೆ ಅಲ್ಲ"
"ಇಲ್ಲ, ಹಾಗಲ್ಲ, ಅವನು ಅವಳನ್ನು ಪೂರ್ಣವಾಗಿ ಪ್ರೀತಿಸುತಿದ್ದ, ಇನ್ನು ಪ್ರೀತಿಸ್ತಾನೆ"
"ಇಲ್ಲ ವೈಭು, ಅವಳು ಅವನ ಎಲ್ಲ ವಿಚಾರ ನನ್ನಲ್ಲಿ ಹೇಳಿದ್ದಾಳೆ, ಮೊದಲಿಗೆ ಮಂಗಳೂರು ಹುಡುಗಿ ಹೇಳಿ ಅವಳಿಗೆ ಹತ್ತಿರ ವಾಗಿದ್ದೆ, ಪ್ರೀತಿ ಮೂಡಿದೆ ಎಂದಾಗುತಿತ್ತು ಆಗ ಇದು ಇನ್ಫಾಚುಯೇಶನ್ ಎಂದು ಮನ ಹೇಳುತಿತ್ತು, ಹೀಗೆ ಬರ್ತಾ ಬರ್ತಾ ಎರಡು ವಾರದಲ್ಲಿ ಅವಳು ಹತ್ತಿರವಾದ್ಳು, ಎಲ್ಲ ವಿಚಾರ ನನ್ನಲ್ಲಿ ಹೇಳಿದಳು, ವಿವೇಕನಿಂದ ಸಂಪೂರ್ಣವಾಗಿ ಕುಗ್ಗಿ ಹೋಗಿದ್ದಾಳೆ, ಅಲ್ಲಿ ಅವನು ಬೇರೆ ಹುಡುಗಿಯರೊಡನೆ ಸುತ್ತಾಡುತ್ತ ಅಲ್ಲಿನ ಫೋಟೋಗಳನ್ನು ಆರ್ಕುಟ್ ಗೆ ಅಪ್ಲೋಡ್ ಮಾಡಿ ಇವಳಿಗೆ ಇಲ್ಲಿ ಹೊಟ್ಟೆ ಉರಿಸುತ್ತಿರುತ್ತಾನೆ, ಅವನು ನಿಜವಾಗಲು ಪ್ರೀತಿಸುತಿದ್ರೆ ಇದೆಲ್ಲ ಮಾಡ್ತಿರಲಿಲ್ಲ ಆಲ್ವಾ...?"
"ಇರಬಹುದು ಜೀವನ್, ಅವಳಿಗೆ ಗೊತ್ತ ನಿನ್ ವಿಚಾರ..?"
"ಅವಳಾಗೇ ಪ್ರೊಪೋಸ್ ಮಾಡಿದ್ದು, ನೋವಲ್ಲಿ ಸಾಂತ್ವನ ಹೇಳುವ ಮನಸ್ಸು ಹತ್ತಿರವಾಗುತ್ತೆ, ನನಗೆ ಅವಳು ಸಾಂತ್ವನ ನೀಡುತಿದ್ದಳು, ನಾನು ಅವಳಿಗೆ, ಹೀಗೆ ಒಬ್ಬರಿಗೊಬ್ಬರು ಹತ್ತಿರವಾದೆವು"
"ಅಂದ್ರೆ ಟು ಸೈಡೆಡ್ ಅಂತ ಆಯಿತು, ಯು ಕ್ಯಾರಿ ಆನ್ ಆಲ್ ದಿ ಬೆಸ್ಟ್ ಮಗ"
"ಥ್ಯಾಂಕ್ಸ್ ಕಣೋ, ಈ ವಿಚಾರ ನಿನ್ನಲ್ಲಿ ಹೇಳ್ತಾ ಇದ್ದೇನೆ, ಬೇರೆ ಯಾರಿಗೂ ಗೊತ್ತಿಲ್ಲ; ಯಾರಿಗೂ ಗೊತ್ತು ಮಾಡಿಸ್ಬೇಡ ಪ್ಲೀಸ್" ಅಂದ.
ನಾನು ಅವನಿಗೆ ಪ್ರಾಮಿಸ್ ಅನ್ನುತ್ತಾ "ಏನಾಯ್ತು ಜೂನ್ ಎರಡಕ್ಕೆ ಅವಳು ಊರಿಗೆ ಹೋಗ್ತಾ ಇದ್ದಾಳ..?"
"ಇಲ್ಲ, ಬೆಂಗಳೂರಿಗೆ, ಕ್ಲೈಂಟ್ ಆಫೀಸ್ ಗೆ, ಯಾವುದೋ ಟ್ರೇನಿಂಗ ಇದೆ ಅಂತೆ ಒಂದು ವಾರದ್ದು"
"ಓಕೆ ಸರಿಯಪ್ಪಾ !!" ಅಂದೆ.
ಇಬ್ಬರೇ ಕ್ಯುಬಿಕಲ್ ನಲ್ಲಿ ಮಾತಾದುತಿದ್ದದ್ದು ಅವಿನಾಶ್ ಬಂದಂತೆ ಮೌನಕ್ಕೆ ತಿರುಗಿದೆವು, ಮೊನಿಟರ್ ನಲ್ಲಿ ಹಿಂದಿನ ದಿನದ ಅಪ್ದೆಟ್ಸ್ ಬಗ್ಗೆ ಮಾತಾಡುವಂತೆ ಅಭಿನಯಿಸಲು ಶುರು ಮಾಡಿದೆವು.
ಅವಿನಾಶ್ ನಮ್ಮಿಬ್ಬರಿಗೆ ಗುಡ್ ಮಾರ್ನಿಂಗ್ ಅನ್ನುತ್ತ ತನ್ನ ಸಿಸ್ಟಮ್ ಆನ್ ಮಾಡಿದ, ನಮ್ಮ ಮಾತು ಮುಂದುವರೆದೆ ಇತ್ತು.
ಅಷ್ಟರಲ್ಲಿ ಅವಿನಾಶ್ "ವಾಟ್ ದಿ ಫುಕ್ !! ಜೀವನ್ ಏನೋ ಇದು ಹೋಗಿ ಹೋಗಿ ಒಂಬತಕ್ಕೆ ಪಾರ್ಟಿ ಇಟ್ಟಿದ್ದಿಯಾ...?"
ಜೀವನ್ "ಏನಾಯ್ತೋ, ಇಟ್ಸ್ ಫ್ರೈಡೆ , ಮೀಟಿಂಗ್ ಇರಲ್ಲ ರಾತ್ರಿ, ಅದಕ್ಕಾಗೆ ಇಟ್ಟೆ, ಎನಿ ಪ್ರಾಬ್ಲಮ್...?"
"ಯಾ ಬಿಗ್ ಪ್ರಾಬ್ಲಮ್,ಸೋರಿ ನಾನ್ ಬರಲ್ಲ"
"ಏನಾಯ್ತು...? ಸೋಮ್ತಿಂಗ್ ವ್ರೊಂಗ್" ಅಂದೆ ನಾನು.
"ಹೇ ಜೂನ್ ಒಂಬತ್ತು ಫಿಫಾ ಒಪೆನಿಂಗ್ ಸೆರಮನಿ ಕಣೋ,ಅದೂ ಜೆರ್ಮನಿಯಲ್ಲಿ, ಮತ್ತು ಜೆರ್ಮನಿ ಯ ಮೊದಲ ಮ್ಯಾಚು ಇದೆ, ನಂಗೆ ನಿನ್ ಪಾರ್ಟಿ ಗಿಂತ ಜೆರ್ಮನಿ ಪ್ರಿಯೋರಿಟಿ ನೇ ಹೆಚ್ಚು, ಸೊರ್ರಿ ಬಾಸ್" ಅಂದ ಅವಿನಾಶ್.
"ಅರ್ರೆ, ಗೊತಾಗ್ಲಿಲ್ಲ, ಎರಡಕ್ಕೆ ಯಾವುದೋ ಹಬ್ಬ ಇದೆ, ಇಲ್ಲಿ ಆ ದಿನ ನೋನ್ ವೆಜ್ ತಿನಲ್ಲ ಅಂತ ಹೇಳಿದ್ರು, ಅದಕ್ಕಾಗಿ ನಾನು ಮುಂದಿನವಾರಕ್ಕೆ ಪೋಸ್ಟ್ಪೋನ್ ಮಾಡ್ದೆ .." ಎಂದು ಒಂದು ಸುಳ್ಳು ಬಿಟ್ಟ ಜೀವನ್.
"ನಿಂಗೆ ನಾನು ಬರ್ಬೇಕಂತ ಇದ್ರೆ ಅವರಿಗೆ ವೆಜ್ ಪಾರ್ಟಿ ನೇ ಕೊಡು" ಅಂದ ಅವಿನಾಶ್.
ಜೀವನ್ "ನಿಂಗೆ ವೆಜ್ ಓಕೆ ನಾ ಹೇಳು" ಅಂದ ಅವನಲ್ಲಿ
"ಪಾರ್ಟಿ ಆಗಿ ವೆಜ್ಜಾ ... ಬೇಡ, ನೊಂವೆಜ್ಜ್ ಪಾರ್ಟಿ ನೇ ಆಗಬೇಕು, ಲುಕ್ ಫಾರ್ ಸಂ ಸಂಡೇ " ಅಂದ ಪ್ಯೂರ್ ನೋನ್ ವೆಜ್ಜ್ ಪಾರ್ಟಿ ಅವಿನಾಶ್.
"ಹೇ ಮಾಚ್ ಇರುವುದು ಸಂಜೆ ಆಲ್ವಾ ಪಾರ್ಟಿರಾತ್ರಿ ಬಂದು ಬಿಡು" ಅಂದೆ ನಾನು.
"ಓಕೆ ಸರಿ" ಎಂದು ಒಪ್ಪಿದ ಅವಿನಾಶ್.
*************
ಪ್ರೀತಿ ಬೆಂಗಳೂರಿಗೆ ಹೋದಾಗಿಂದ ಮತ್ತೆ ಜೀವನ್ ನ ಮುಖದಲ್ಲಿ ಕಳೆ ಮಾಯವಾಗಿತ್ತು, ಅವಳು ಬಂದ ಸೋಮವಾರ ಮತ್ತೆ ಹಳೆ ನಗೆ ಉತ್ಸಾಹ ಮೂಡಿತು.
ನೋಡ ನೋಡುತಿದ್ದಂತೆ ಒಂಬತ್ತನೇ ಶುಕ್ರವಾರವೂ ಬಂದು ಬಿಡ್ತು. ಎಲ್ಲರು ಶುಕ್ರವಾರದ ಮಸ್ತಿಯಲ್ಲಿರುವಾಗ, ಕರ್ನಲ್ ಇದ್ದಕ್ಕಿದ್ದಂತೆ ಬ್ಹೊಪೋರ್ಸ್ ಸಿಡಿಸಿದ್ದರು. ಕಳೆದವಾರ ಬೆಂಗಳೂರಿಗೆ ಟ್ರೈನಿಂಗ್ ಗೆ ಹೋದ ೬ ಮಂದಿಯ ಗ್ರೂಪ್ನಲ್ಲಿ ನಾಲ್ವರನ್ನು ಡ್ರೀಮ್- ಟೆಕ್ ನಿಂದ ಹೊರ ಹಾಕಿದ್ದರು ಕರ್ನಲ್. ಮದ್ಯಾಹ್ನ ವಾಗುತಿದ್ದಂತೆ ವಾರ್ತೆ ಹಿಡಿ ಸೆಂಟರ್ ಹರಡಿತು. ಹೊರ ಹಾಕಿದ ನಾಲ್ವರು ಯಾರು..? ಕಾರಣ ಏನು ಎಂದು ಎಲ್ಲ ಉಳಿದ ನೂರೆಂಟು ತಲೆಗಳು ಎಣಿಸಲು ಗುಣಿಸಲು ಶುರುಮಾಡಿದವು.
ಅದರಲ್ಲಿ ಪ್ರೀತಿಯ ಹೆಸರು ಇರಬಹುದೇ ಎಂದು ಜೀವನ್ ಚಿಂತೆಯಲ್ಲಿ ಮುಳುಗಿದ್ದ, ಪ್ರೀತಿನೂ ಆಫೀಸ್ ನಲ್ಲಿ ಇಲ್ಲದ್ದು ಅವನ ಚಿಂತೆಯನ್ನು ಇನ್ನೂ ಹೆಚ್ಚು ಮಾಡಿತ್ತು.
ಸಲ್ಪದರಲ್ಲೇ ಕರ್ನಲ್ ಒಫಿಶಲ್ ಆಗಿ ಅವರನ್ನು ತೆಗೆದು ಹಾಕಿದ ಎಂಬ ಮೇಲ್ ಕಳುಹಿಸಿದ.ಪ್ರಕಾಶ್ ಸರ್ ಮತ್ತು ಅವರ ಪತ್ನಿ ರಜನಿ, ಸಿನಿಯರ್ ಮೊಡ್ಯುಲ್ ಲೀಡ್ ರಂಜನ್ ಮತ್ತು ಯಿಎಲ್ಟಿಪಿ ಆಕೃತಿಯ ಕ್ಲಾಸ್ ಮೆಟ್ ವೆಧಾ ವಿಜಯನ್ ಆ ನಾಲ್ವರಾಗಿದ್ದರು.ಹೆಸರು ತಿಳಿಯುತ್ತಲೇ ಜೀವನ್ ಮೆಲ್ಲುಸಿರು ಬಿಟ್ಟ, ಅವಿನಾಶ್ ಒಪೆನಿಂಗ್ ಸೆರೆಮನಿ ಹೇಳಿ ರಜೆ ಹಾಕಿದ್ದು ಅವನಿಗೆ ತನ್ನ ಭಾವನೆಯನ್ನು ಪೂರ್ಣ ಪ್ರಮಾಣದಲ್ಲಿ ವ್ಯಕ್ತ ಪಡಿಸಲು ಸಹಾಯ ನೀಡುತ್ತಿತ್ತು. ಅಷ್ಟರಲ್ಲೇ ಪ್ರೀತಿ ನಮ್ಮ ಕ್ಯುಬಿಕಲ್ ಗೆ ಬಂದಳು.
ನಡೆದ ವಿಚಾರ ಅವಳಲ್ಲಿ ಕೇಳಿ ತಿಳಕ್ಕೊಂಡೆವು.
ಅವಳು ಒಂದು ವಾರದಲ್ಲಿ ನಡೆದ ವಿಚಾರ ಕ್ಯುಬಿಕಲ್ ದಾಟಿ ಹೊರ ಹೋಗದಂತೆ ಕನ್ನಡದಲ್ಲಿ ಹೇಳುತಿದ್ದಳು.
"ಇಲ್ಲಿಂದ ೬ ಮಂದಿ ಹೋಗಿದ್ದೆವಲ್ಲ, ಅಕೊಮೊಡೆಶನ್ ಮತ್ತು ರೀ ಎಂಬೆರ್ಸ್ಮೆಂಟ್ ನೀಡುವುದಾಗಿ ಡ್ರೀಮ್ ಟೆಕ್ ಬರವಸೆ ನೀಡಿತ್ತು, ಸಿಕ್ಕ ಸಮಯವನ್ನು ಉಪಯೋಗಿಸಲು ದೊಡ್ಡ ತಲೆಯ ಈ ಇಬ್ಬರು ಇದ್ದ ಬದದಕ್ಕೆಲ್ಲ ಕಂಪೆನಿ ಹಣ ಖರ್ಚು ಮಾಡಿದರು, ಸಾಲದಕ್ಕೆ ರಿಎಂಬೆರ್ಸ್ ಮಾಡಿಸುವಾಗ ಫೇಕ್ ಬಿಲ್ಲು ಇಟ್ರು, ನಿಜಕ್ಕೂ ಅಗತ್ಯ ಇದದ್ದು ೧೦೦೦ ರುಪಾಯಿ ಆದ್ರೇ ಇವರು ೨೦೦೦ ಖರ್ಚು ಮಾಡಿದರು ಬಿಲ್ಲು ತೋರಿಸುವಾಗ ೩೫೦೦ ತೋರಿಸಿದರು, ಉಪಾಯದಿಂದ ಹಣ ಮಾಡಲು ಹೋಗಿ ಅಪಾಯಕ್ಕೆ ಸಿಲುಕಿದರು." ಅಂದ್ಲು
ಜೀವನ್ ಅವಳಲ್ಲಿ "ನೀನು, ಮತ್ತು ಶ್ರೀಷಾ ಹೇಗೆ ಪಾರಾದ್ರಿ..? ನೀವೆಲ್ಲ ಒಟ್ಟಿಗೆ ಇದ್ರಲ್ಲಾ ..?"
"ಇಲ್ಲಿಂದ ಹೋದದ್ದು ಒಟ್ಟಿಗೇನೆ, ಆದ್ರೇ ಅಲ್ಲಿ ಹೋದ ಮೇಲೆ ನಾನು ನನ್ನ ಹಳೆ ಹಾಸ್ಟೆಲ್ ನಲ್ಲಿ ಉಳಕ್ಕೊಂಡೆ, ಶ್ರೀಶ ಗಂಡನ ಮನೆಯಲ್ಲಿದ್ಲು, ಆದಕಾರಣ ನಾವು ಅಪ್ ಡೌನ್ ಬಿಟ್ಟು ಉಳಿದ ಯಾವುದೇ ಬಿಲ್ ಅನ್ನು ರಿ ಎಂಬೆರ್ಸ್ ಗೆ ಕಳಿಸಿರಲಿಲ್ಲ, ಪುಣ್ಯಕ್ಕೆ ನಾನು ಫ್ರೆಂಡ್ಸ್ ಜೊತೆ ಇರುವ ಅಂತ ಆಲೋಚನೆ ಮಾಡ್ದೆ, ಇಲ್ಲನ್ತಾದ್ರೆ ಇವತ್ತು ನಾನು ಪುನಃ ಮನೆ ಸೇರಬೇಕಿತ್ತು" ಏದುಸಿರು ಬಿಡುತ್ತ ಅಂದ್ಲು.
"ಮತ್ತೆ ಈಗ..?"
"ಏನೀಗ, ಡ್ರೀಮ್ ಟೆಕ್ ನಿಂದ ಗೆಟ್ ಪಾಸ್ , ಕರ್ನಲ್ ರೂಡ್ ಆಗಿ ನಿಮ್ ದಾರಿ ನೀವು ನೋಡ್ಕೊಳ್ಳಿ ಎಂದು ಹೇಳಿ ತೆಗದು ಬಿಸಾಡಿದ್ರು"
"ಶ್ಚೆ !! ಹೀಗಾಗ್ ಬಾರದಿತ್ತು, ದೊಡ್ದವರೆನೋ ಬಚಾವಾಗ್ತಾರೆ, ಆದ್ರೇ ವೆಧಾಳ ಕಥೆ ಮುಗೀತು, ಮೊದಲ ಕಂಪೆನಿಯಲ್ಲೇ ಬ್ಲಾಕ್ ಡಾಟ್, ತಪ್ಪು ಮಾಡಿದ್ದು ಯಾರೋ, ಅನುಭವಿಸುವವಳು ಅವಳು"
"ಅದಕ್ಕೆ ಹೇಳುವುದು, ಕ್ರೆಡಿಟ್ಸ್ ಬಂದ್ರೆ ಬರೇ ಮೆನೆಜೆರ್ ಗೆ ಬರುತ್ತೆ, ಬೈಗಳು ಬಂದ್ರೆ ಹಿಡಿ ಟೀಮ್ ಕೇಳ ಬೇಕಾಗುತ್ತೆ, ನೋಡು ಅವಳು ಆ ಫೇಕ್ ಬಿಲ್ ಕೊಡಲ್ಲ ಅನ್ನುವ ಹಾಗೆ ಇರ್ಲಿಲ್ಲ, ಅವನು ಹೇಳಿದ ಹಾಗೆ ನಡೀ ಬೇಕಿತ್ತು, ಪಾಪ ವೇಧ" ಅಂದಳು ಪ್ರೀತಿ ಧುಖದಲ್ಲಿ.
ಸಂಜೆ ಆಗುತಿದಂತೆ ನಾಲ್ವರಿಂದಲೂ ಲಾಸ್ಟ್ ಡೇ ಅಟ್ ಡ್ರೀಮ್ ಟೆಕ್ ಮೇಲ್ ಬಂತು. ಸಲ್ಪದರಲ್ಲೇ ಅವರ ಇ-ಮೇಲ್ ಐಡಿ ಡಿಲೀಟ್ ಆದವು.
ನಾನು ಮತ್ತು ಆಕೃತಿ ಬೈಕ್ ಏರಿ ಮ್ಯಾನ್ಗ್ರೋವ್ ಗಾರ್ಡೆನ್ ತಲುಪುವಾಗ ಜೀವನ್ ತನ್ನ ಲಿಸ್ಟ್ ನಲ್ಲಿದ್ದ ೧೨ ಮಂದಿಯೊಂದಿಗೆ ಅಲ್ಲಿ ತಲುಪಿದ್ದ. ಲಿಸ್ಟ್ ನಲ್ಲಿದ್ದ ಪ್ರಕಾಶ್ ಸರ್ ಕಾಣುತಿರಲಿಲ್ಲ, ಯಾರು ಅವರನ್ನು ಸಂಪರ್ಕಿಸುವ ಕೆಲಸಕ್ಕೆ ಹೋಗಲಿಲ್ಲ, ಇನ್ನೊಬ್ಬ ಅವಿನಾಶ್ ಅಲ್ಲಿರಲಿಲ್ಲ. ಅವನ ಮಾಚ್ ಆಗಲೇ ಶುರು ವಾಗಿತ್ತು. ಬರುವ ಸೂಚನೆ ಇರಲಿಲ್ಲ ಹೇಳಿ ಎಲ್ಲರು ತಮ್ಮ ತಮ್ಮ ಆರ್ಡರ್ ಕೊಡಲು ಮುಂದಾದರು.
ಅಷ್ಟರಲ್ಲೇ "ಜೀವನ್" ಎಂದು ಅವನು ಪ್ರತ್ಯಕ್ಷನಾದ. ಜೆರ್ಮನ್ ಜರ್ಸಿ ತೊಟ್ಟು ಅಲ್ಲಿ ತಲುಪಿದ್ದ ಅವಿನಾಶ್, ಮುಖದಲ್ಲಿ ಎದ್ದು ಕಾಣುತಿದ್ದ ಹರುಷ ಹೇಳುತಿತ್ತು ಜರ್ಮನಿ ಅವತ್ತಿನ ಪಂದ್ಯ ಗೆದ್ದಿದೆ ಎಂದು.
ಆದರೂ ಜೀವನ್ ಅವನಲ್ಲಿ "ಕ್ಯಾ ಹೋಗಯ ಭಾಯ್" ಅಂದ.
ಅವನು "ಕೋಸ್ಟರಿಕಾ ಕೋ ೪-೨ ಸೆ ಹರಾಯ !!" ಅಂದ ತಾನೇ ಆಡಿ ಗೆದ್ದಂತೆ.
"ಚಾರ್ ಕೆ ಚಾರ್ ಬಿ ಬಲಾಕ್ ನೇ ಮಾರೆ ಕ್ಯಾ" ಎಂದು ಕಾಲೆಳೆದ ಜೀವನ್.
ಅವನ ಉತ್ಸಾಹ ಮರೆಯಾಗಿತ್ತು" ಸಾಲೋನೆ ಉಸ್ಸೆ ಖಿಲಾಯ ನಹಿನ್, ರಂಡ್ ಕೆ ಪಿಲ್ಲೆ ಹೇ ಸಬ್" ಎಂದ ಹತಾಶೆಯಲ್ಲಿ.
ಕೂಡಿದ್ದ ಹುಡುಗರಿಗೆ ಅವನ ಮಾತಿನ ಅರ್ಥ ತಿಳೀತು. ಇದ್ದ ಹುಡುಗಿಯರು ಇನ್ನೂ ಅರ್ಥ ಹುಡುಕುತಿದ್ದರು, ಅಸಲಿಗೆ ಅವರಿಗೆ ಫಿಫಾ, ಬಲಾಕ್, ಜೆರ್ಮನಿ ಯಾವುದರ ಪರಿವಿರಲಿಲ್ಲ, ಅವರು ಬಂದ ಸೂಪ್ ಮೆಯುವುದರಲ್ಲಿ ತಮ್ಮ ಗಮನ ಕೆಂದ್ರಿಕರಿಸಿದ್ದರು.
ನಾನು "ಕೋಯಿ ಬಾತ್ ನಹಿನ್ ಭಾಯಿ, ನೆಕ್ಸ್ಟ್ ಮೇಚ್ ಮೇ ಬಲಾಕ್ ಚಾರ್ ಗೋಲ್ ಮರೇಗಾ" ಅಂದೆ.
ಅವನು ಮುಗುಳ ನಕ್ಕ. ಆಕೃತಿ "ಬೈ ದ ಬೈಹು ಇಸ್ ಬಲಾಕ್...?" ಅಂದಳು.
ಎಲ್ಲರು ಮೌನದಲ್ಲಿದ್ದರು, ನಾನು ಕಣ್ಣಲ್ಲೇ ಬಾಯಿಮುಚ್ಚಿ ಸೂಪ್ ಕುಡಿ ಎಂದು ಸಜ್ನೆ ಮಾಡಿದೆ.
ಮುಂದಿನ ಸಿಪ್
ಪ್ರತಿಕ್ರಿಯೆ (1)