ಸಿಪ್ - ೩೦

ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ....

 

ಹಿಂದಿನ ಸಿಪ್ 

 



ಡ್ರೀಮ್ ಟೆಕ್ ಪ್ರಗತಿಯ ಪಥದಲ್ಲಿ ಸಾಗುತಿತ್ತು,  ಕಳೆದ ವರ್ಷದ ಲಾಸ್ಟ್ ಕ್ವಾಟರ್ ನಲ್ಲಿ ಡ್ರೀಮ್ ಟೆಕ್ ಒಂದು ಪ್ರೈವೇಟ್ ಕಂಪನಿಯಿಂದ ಪುಬ್ಲಿಕ್ ಕಂಪೆನಿಯಾಗಿತ್ತು. ೨೦೦ ರ ಮುಖ ಬೆಲೆಯ ಶೇರ್ ಬಿಡುಗಡೆ ಯಾಗಿ ಮೂರನೇ ತಿಂಗಳಿಗೆ ೩೫೦ ದಾಟಿತ್ತು. ಇದರಿಂದ ಕಂಪೆನಿ ಆರ್ಥಿಕವಾಗಿ ಸದೃಡವಾಗಿ ತಳವೂರುತ್ತಾ ಮುನ್ನುಗುತ್ತಿತ್ತು. ತನ್ನ ನಂಬಿ ಇನ್ವೆಸ್ಟ್ ಮಾಡುತಿದ್ದ ಶೇರ್ ಹೊಲ್ದೆರ್ಗಳಿಗೆ ವರ್ಷಾಂತ್ಯದಲ್ಲಿ ಉತ್ತಮ ಡೆವಿಡೆಂಟ್ ಅನ್ನೇ ನೀಡಿದ್ದು ಮಾರ್ಕೆಟ್ ನಲ್ಲಿ ಡ್ರೀಮ್ ಟೆಕ್ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಲು ಸಹಾಯ ಮಾಡಿತು. ಪುಬ್ಲಿಕ್ ರೆಸ್ಪಾನ್ಸ್ ಮತ್ತು ಭಾರೀಯ ಮಾರುಕಟ್ಟೆಯಲ್ಲಿನ ಡ್ರೀಮ್ ಟೆಕ್ ನ ಸ್ಥಾನ ವಿದೇಶಿ ಕ್ಲೈಂಟ್ ಗಳನ್ನೂ ಸೆಳೆಯಲು ಸಹಕರಿಸುತಿತ್ತು. ಹಿಂದಿನ ಕ್ಲೈಂಟ್ಸ್ ಗಳನ್ನೂ ಡ್ರೀಮ್ ಟೆಕ್ ತನ್ನಲ್ಲೇ ಉಳಿಸಿ, ಹೊಸ ಕ್ಲೈಂಟ್ಸ್ ಗಳನ್ನೂ ತನ್ನ ತೆಕ್ಕೆಯಲ್ಲಿ ಸೇರಿಸುತ್ತಾ ಸಾಗಿತ್ತು.

ಬರುತ್ತಿರುವ ಹೆಚ್ಚಿನ ಕೆಲಸ, ರೆವೆನ್ಯೂ ಗೆ ಇಲ್ಲಿ ರಿಸೌರ್ಸ್ ಕೊರತೆ ಕಾಣದಂತೆ ಚೆನ್ನೈ ನಲ್ಲಿನ ಮುರುಗನ್ ತನ್ನ ಎಂಪ್ಲೋಯೀ ಸಂಕೆಯನ್ನು ಏರುಗತಿಯಲ್ಲೇ ಏರಿಸುತ್ತಾ ಸಾಗಿದ್ದ. ೨೦೦೬ ಮೊದಲ ಕ್ವಾಟರ್ ನಲ್ಲೆ ಇಲ್ಲಿವರೆಗಿನ ಇತಿಹಾಸದಲ್ಲಿ ಉತ್ತಮ ವ್ಯವಹಾರ ಮುಗಿಸಿತ್ತು. ಕಳೆದ ಸಾಲಿನಲ್ಲಿ ಮಿಲಿಯನ್ ಡಾಲರ್ ಕಂಪೆನಿ ಎಂದು ಕರೆಸಿಕೊಳ್ಳುತಿದ್ದ ಡ್ರೀಮ್ ಟೆಕ್ ಈಗ ಬಿಲಿಯನ್ ಕಂಪೆನಿ ಎಂದು ಕರೆಸಿಕೊಳ್ಳುವ ದಿನಗಳು ಸನ್ನಿಹಿತ ವಾಗಿದ್ದವು. ೨೦೦೬ ನ ಮೊದಲ ಕ್ವಾಟರ್ ನಲ್ಲಿ ಇದು ೫೦ ಮಿಲಿಯನ್ ಡಾಲರ್ ವ್ಯವಹಾರ ನಡೆಸಿತ್ತು.  ಚೆನ್ನೈನಿಂದ ನಡೆಯುವ ಆಲ್ ಹ್ಯಾಂಡ್ಸ್ ಮೀಟಿಂಗ್ ನಲ್ಲಿ 'ಈ  ಫಿನಂಶಿಯಲ್ ಯೀರ್ ನಲ್ಲಿ ಡ್ರೀಮ್ ಟೆಕ್ ಕ್ವಾಟರ್ ಬಿಲಿಯನ್ ಕಂಪೆನಿ ಯಾಗುವ ಪೂರ್ಣ ಸಾದ್ಯತೆ ಇದೆ' ಎಂದು ಬೀಗುತಿದ್ದ.

ಸಂತೃಪ್ತಿ ಉದ್ಯೋಗಿಗಳು ತಮ್ಮ ಫ್ರೆಂಡ್, ಸಂಭಂದಿಗಳನ್ನು ಡ್ರೀಮ್ ಟೆಕ್ ಗೆ ಎಳೆದುಕೊಳ್ಳಲು ಮುತುವರ್ಜಿ ವಹಿಸುತಿದ್ದರು, ರೆಫ್ಫೆರೆಲ್ ಇಂಟರ್ವ್ಯೂ ಮತ್ತು ವೀಕ್ ಎಂಡ್ ಇಂಟರ್ವ್ಯುಗಳು ಗಳು ಪುಣೆ ಸೆಂಟರ್ ನಲ್ಲೂ ಶುರುವಾದವು.  ಪುಣೆಯಲ್ಲಿ ನಾವು ಜೋಯಿನ್ ಆಗುತಿದ್ದಾಗ ಇದ್ದ ೨೮ ಮಂದಿ ಮತ್ತು ೨೦೦೫ ಯಿಎಲ್ಟಿಪಿ ಬಾತ್ಚ್ ನ ಒಟ್ಟು ೪೫ ಮಂದಿ  ಈಗ ೨೦೦೬ ಬಾಚ್ ಬಂದ ಮೇಲೆ ಸಿನಿಯರ್ ಗಳಾಗಿದ್ದರು. ಜುಲೈ ಮೊದಲ ವಾರದಲ್ಲಿ ಮತ್ತೆ ೬೦ ಮಂದಿಯ ಹೊಸ ಯಿಎಲ್ಟಿಪಿ ಜೋಯಿನ್ ಆಗಿ ಪುಣೆ ಸೆಂಟರ್ ನ ಗಣತಿ ೨೫೦ ಕ್ಕೆ ಏರಿತು.

ಡ್ರೀಮ್ ಟೆಕ್ ಹಿಂದಿನಿಂದಲೂ ಎಂಪ್ಲೋಯೀ ಫ್ರೆಂಡ್ಲಿ ಕಂಪೆನಿಯಾಗಿತ್ತು, ಈಗ ವಿದೇಶಿ ಡಾಲರ್ ಈ ರೀತಿ ಹರಿದು ಬರುತ್ತಿರಲು, ಇನ್ನು ಹೆಚ್ಚಿನ ಸವಲತ್ತುಗಳನ್ನು ನೀಡಲು ಶುರು ಮಾಡಿತ್ತು. ಪ್ರತಿ ತಿಂಗಳಿಗೆ ಗುಡ್ ಪೆರ್ಫಾರ್ಮಾರ್ ಅವಾರ್ಡ್ ಪ್ರತಿ ಮೊಡ್ಯುಲ್ ಗೆ, ಹಾಫ್ ಯೀರ್ಲಿ  ಸ್ಟಾರ್ ಪೆರ್ಫಾರ್ಮೆರ್, ಇಯರ್ಲಿ ಸ್ಪಾರ್ಕ್ ಆಫ್ ಪ್ರಾಜೆಕ್ಟ್, ಟೆಲೆಂಟ್ ಆಫ್ ಸೆಂಟರ್ ಹೀಗೆ ಹಲವು ಅವಾರ್ಡ್ ಗಳ ಘೋಷಣೆ ಮಾಡಿತು. ಪ್ರತಿಯೊಂದಕ್ಕೂ ನೂರರಿಂದ ಹತ್ತುಸಾವಿರದ ವರೆಗಿನ ಕೂಪನ್ ಕೊಡಲಾಗುತ್ತಿತ್ತು.ಇಂತಹ ಕೂಪನ್ಗಳು ಹೊರಗೆ ಉಪಯೋಗಿಸುಂತಿಲ್ಲ, ಅದರದೇ ಔಟ್ಲೆಟ್ ಗೆ ಹೋಗಿ ತೆಗೆದು ಕೊಳ್ಳ ಬೇಕು.

ದೊಡ್ಡ ಅಮೌಂಟ್ ನ ಕೂಪನ್ ಸಿಕ್ಕವರು ಬ್ರಾಂಡೆಡ್ ನ ಸರಕು ತೊಟ್ಟು ಮೆರೆಯುತಿದ್ದರು ಆದರೆ ಸಣ್ಣ ಮುಖಬೆಲೆಯ ಕೂಪನ್ ಗಳು ನುನ್ಗಲಾಗದ ತುತ್ತು ಪಡೆದವರು ಕೈಯಲ್ಲಿನ ಕೂಪನ್ ನೊಂದಿಗೆ ತಮ್ಮ ಕ್ರೆಡಿಟ್ ಕಾರ್ಡ್ ನಲ್ಲಿ ಬ್ರಾಂಡೆಡ್ ಆಗಿ ಪರಿವರ್ತನೆ ಗೋಳ್ಳುತಿದ್ದರು.

ತನ್ನ ಎಂಪ್ಲೋಯೀ ಗಳ ಬರ್ತ್ ಡೇ ದಿನ ಬರ್ತ್ ಡೇ ಬಾಶ್ ಎಂಬ ಹೊಸ ಕೊಂಸೆಪ್ಟ್ ಚೆನ್ನೈ ನಿಂದ ಹೊರಬಿದ್ದಿತ್ತು. ಅಲ್ಲಿ ೪೦೦೦ ಜನರಿದ್ದುದರಿಂದ ಅಲ್ಲಿ ಪ್ರತಿ ತಿಂಗಳ ಕೊನೆಯ ಶುಕ್ರವಾರ ಗ್ರಾಂಡ್ ಫುನ್ಕ್ಶನ್ ಎರೆಂಜ್ ಮಾಡುತಿದ್ದರು, ಆ ತಿಂಗಳು ಜನ್ಮ ದಿನ ಇರುವ ಎಲ್ಲ ಎಂಪ್ಲೋಯಿಗಳಿಗೆ ಕಂಪೆನಿ ಪರವಾಗಿ ಗಿಫ್ಟ್ ಕೊಟ್ಟು ದೊಡ್ಡದಾದ ಕೇಕ್ ಕತ್ತರಿಸಿ ಸಂಭ್ರಮಿಸುತಿದ್ದರು. ಇಲ್ಲಿ ಅದನ್ನು ಬದಿಮನಿ ಮೊಡಿಫೈ ಮಾಡಿ ತಿಂಗಳ ಬದಲಿಗೆ ಪ್ರತಿ ವಾರಾಂತ್ಯಕ್ಕೆ ಸೆಲೆಬ್ರೇಶನ್ ಇಟ್ಟಿದ್ದ. ಪ್ರತಿ ಶುಕ್ರವಾರದ ಸಂಜೆ ಸ್ನಾಕ್ಸ್ ನೊಂದಿಗೆ ಕೇಕ್ ಹಂಚಲು ಶುರು ಮಾಡಿದ್ದ.

ಟೀಮ್ ಔಟಿಂಗ್ ಇಂತಹವ್ವುಗಳಲ್ಲಿ ಇನ್ನೊಂದು ಅದ್ಯಾಯ ವಾಗಿತ್ತು, ಪ್ರಾಜೆಕ್ಟ್ ಮನೆಜೆರ್ ತನ್ನ ಕೆಳಗೆ ಇರುವ ಎಲ್ಲ ಬೇರನ್ನು ಉಣಿಸಿ, ಕುಣಿಸಿ, ತನ್ನ ಹೈರಾರ್ಕಿಯಲ್ಲಿ ಪರಸ್ಪರ ಅಂಡರ್ ಸ್ಟ್ಯಾಂಡಿಂಗ್ ಹೆಚ್ಚಿಸುವ ಸಲುವಾಗಿ ಚೆನ್ನೈಯಲ್ಲಿನ ಎಚ್. ಆರ್ ಹೆಡ್ ರಘುರಾಮ್ ರಾವ್ ಇದನ್ನು ಗೊಷಿಸಿದ್ದರು.

ಈ ತಿಂಗಳು ಪ್ರತಿ ಎಮ್ಪ್ಲೊಯೇಗೆ ಈ ಕ್ವಾಟರ್ ಮತ್ತು ಹಿಂದಿನ ಕ್ವಾಟರ್ ಸೇರಿದೊಡ್ಡ ಮೊತ್ತವೊಂದು ಪ್ರಾಜೆಕ್ಟ್ ಮೆನೆಜೆರ್ ಬಿಮಾರಿಯ ಅಕ್ಕೌಂಟ್ ನಲ್ಲಿ ಜಮಾ ಆಗಿತ್ತು. ನಮ್ಮ ಪ್ರಾಜೆಕ್ಟ್ ಮೆನೆಜೆರ್ ಅವರೇ ಆಗಿದ್ದರೂ ಇತರ ವಿಷಯಗಳಲ್ಲಿ ಅವರು ನಮ್ಮೊಂದಿಗೆ ಮೂಗು ತೂರಿಸುತ್ತಿರಲಿಲ್ಲ. ಇವತ್ತು ಇದಕ್ಕಿದ್ದಂತೆ ನಮ್ಮ ಕ್ಯುಬಿಕಲ್ ಗೆ ಬಂದು "ಟೀಮ್ ಔಟಿಂಗ್ ಗೆ ಪ್ಲೇಸ್ ಸುಜ್ಜೆಸ್ಟ್ ಮಾಡಿ" ಎಂದು ಮೂವರಲ್ಲಿ ಕೇಳಿದರು.

ಅವಿನಾಶ್ ಹಿಂದೆ ಸ್ಪೋರ್ಟ್ಸ್ ಇವೆಂಟ್ ಎಂಗೇಜ್ ಮಾಡಿ ಹೆಸರು ಸಂಪಾದಿಸಿದ್ದ, ಕಳೆದ ವರ್ಷದ ಡಿ- ಫ್ಯಾಕ್ಟರ್ ನಿಂದ ಸೆಂಟರ್ನಲ್ಲಿ ನನ್ನನ್ನು ಗುರುತಿಸಲು ಶುರುಮಾಡಿದ್ದರು, ಮತ್ತು  ಹೊಸದಾಗಿ ಶುರುವಾದ ಬರ್ತ್ ಡೇ ಬಾಶ್ ಅನ್ನು ನೆರವೇರಿಸುತಿದ್ದ ಜೀವನ್ ಕೂಡ ತನ್ನ ಇವೆಂಟ್ ಒರ್ಗನೈಸೇಶನ್ ನ ಸ್ಕಿಲ್ ತೋರಿಸಿ ಬಿಟ್ಟಿದ್ದ ಈ ಮೂರು ತಿಂಗಳಲ್ಲಿ. ತಿವಾರಿ ಇವತ್ತು ಇಲ್ಲಿ ವಕ್ಕರಿಸಲು ಇದು ಮುಕ್ಯ ಕಾರಣವಾಗಿತ್ತು. ಮೊದಲು ಹೆಸರು ಕೇಳುತಿದ್ದರೆ ಸಿಡಿಮಿಡಿ ಗೋಳ್ಳುತಿದ್ದ ಜೀವನ್ ಅಪ್ಪ್ರಿಸಲ್ ಬಳಿಕ ಶಾಂತ ನಾಗಿದ್ದ.

ಅವನಾಗಿಯೇ "ಎಷ್ಟು ದಿನದ್ದು..? ಬಡ್ಜೆಟ್ ಎಷ್ಟು...?" ಅಂದ.
ಅವರು "ಐನೂರರಂತೆ ನನ್ನ ಅಂಡರ್ ಇರುವ ೨೮ ಮತ್ತು ಪ್ರಕಾಶ್ ಸರ್ ನೋಡುತಿದ್ದ ಪ್ರಾಜೆಕ್ಟ್ ನ ೮ ಮಂದಿ ಮತ್ತು ನಿನ್ನೆ ಜೋಯಿನ್ ಆದ ಯಿಎಲ್ಟಿಪಿ ಯಲ್ಲಿ ೧೨ ಸೇರಿ ಒಟ್ಟಿಗೆ ೪೯ ಮಂದಿಯ ೫೦೦ ರು ನನ್ನ ಅಕೌಂಟಿಗೆ ಬರುತ್ತದೆ"
"ಅಂದ್ರೆ ೨೫೦೦೦ ದೊಡ್ಡ ಅಮ್ಮೌಂಟ್ ಇದೆ" ಅಂದ ಜೀವನ್.
"ಹೌದು, ಒಂದು ಒಳ್ಳೆ ಪ್ಲಾನ್ ಮಾಡು ಒಂದು ದಿನ ಎರಡು ದಿನ , ಎಷ್ಟು ದಿನವಾದ್ರೂ ಪರವಾಗಿಲ್ಲ, ಒಂದು ಬಾರಿಗೆ ಎಲ್ಲರು ಸೇರಿ ಗಮ್ಮತ್ ಮಾಡಿ ಬರಬೇಕು, ರಜೆ ನಾನು ಕೊಡಿಸುವ "  ಎಂದ ವಿಶ್ವಾಸದಲ್ಲಿ ಆ 9.X

ಹಿಂದೆ ಒಂದು ರಜೆಗೆ ಮನೆಗೆ ಹೋಗುವಾಗ ಬಿಲ್ಲಿಂಗ್ ಎಂದು ಹರ್ಕೊಳ್ತಿದ್ದ ಈ ಬಿಮಾರಿ ಇವತ್ತು ಐವತ್ತು ಎಂಪ್ಲೋಯಿಗೆ ಒಂದೇ ದಿನ ಶುಟ್ಡೌನ್ ಮಾಡಲು ಹಸಿರು ನಿಶಾನಿ ತೋರಿಸಿದ್ದು ನನಗೆ ಸರಿ ಕಾಣಲಿಲ್ಲ.
"ಸರ್ ವೀಕ್ ಎಂಡ್ ಹಾಕೋಣ, ಯಾಕಾಗಿ ವೀಕ್ ಡೇಸ್ ನಲ್ಲಿ ಪ್ರಾಜೆಕ್ಟ್ ನಿಲ್ಲಿಸಬೇಕು..? ಬೆಕಂತಾದ್ರೆ ಫ್ರೈಡೆ ಒಂದು ದಿನನೂ ಸೇರಿಸೋಣ, ಫ್ರೈಡೆ ಹೇಗೂ ಕೆಲಸ ಮಾಡುವುದು ಅಷ್ಟಕಷ್ಟೇ" ನಾನು ದನಿ ಗೂಡಿಸಿದೆ.
"ಎಸ್ ವೈಭವ್ ಇಸ್ ಕರೆಕ್ಟ್ ವೀ ವಿಲ್ ಪ್ಲಾನ್ ಫಾರ್ ಫ್ರೈಡೆ ಅಂಡ್ ಸಟರ್ಡೇ, ಸುಂಡೆ ಬಂದು ಎಲ್ಲ ರೆಸ್ಟ್ ತೆಕೊಂಡು ಮಂಡೆ ಇಂದ ಎಲ್ಲ ಫ್ರೆಶ್ ಆಗಿ ಮತ್ತೆ ಕೆಲ್ಸಕ್ಕೆ ಸೇರಬಹುದು" ಅಂದು ನನಗೆ ಒಮ್ಮತ ಇಟ್ಟ ಬದಿಯಲ್ಲಿದ್ದ ಅವಿನಾಶ್.
ಇಬ್ಬರ ನಿರ್ಣಯ ತಿವಾರಿಗೂ, ಜೀವನ್ಗೂ ಸರಿ ಕಂಡಿತು.
ತಿವಾರಿ "ಪ್ಲೇಸ್ ಸುಜ್ಜೆಸ್ಟ್ ಮಾಡಿ"ಅಂದ.
ಅಷ್ಟರಲ್ಲಿ ಅವಿನಾಶ್ "ವಾಟ್ ಅಬೌಟ್ ಮಹಾಬಲೇಶ್ವರ್ ..? ಎರಡು ದಿನದ ಪ್ಲಾನ್ ಸರಿಯಾಗಿರುತ್ತೆ" ಅಂದ.
ಹಿಂದೆ ಒಮ್ಮೆ ಮಹಾಬಲೇಶ್ವರ್ ಸುತ್ತಿದ್ದ ಜೀವನ್ "ಹೌದು, ಜುಲೈ ಕರೆಕ್ಟ್ ಟೈಮ್, ಮಹಾಬಲೇಶ್ವರ್ ಸುತ್ತಲು" ಎಂದು ಇನ್ನೊಂದು ಓಟ್ ಹಾಕಿದ.
ತಿವಾರಿ "ಕರೆಕ್ಟ್, ದೆನ್ ವಿಲ್ ಫೈನಲೈಸ್ ದಿ ಡೇ, ಇಟ್ ಶುಡ್ ಬಿ ಬೈ ೧೫ಥ್  ಆಫ್ ಜುಲೈ, ಎಲ್ಸ್ ಕಂಪೆನಿ ವೊಂಟ್ ರೀಮ್ಬೆರ್ಸ್ ಮೈ ಅಮ್ಮೌಂಟ್" ಅಂದ.
"ಈ ವೀಕೆಂಡ್ ..?" ಅಂದ ಅವಿನಾಶ್.

ತಿವಾರಿ "ನೋ, ನಾನು ಬೆಂಗಳೂರಿಗೆ ಹೋಗುವನಿದ್ದೇನೆ, ಪ್ರಕಾಶ್ ಸರ್ ನ ಪ್ರಾಜೆಕ್ಟ್ ಟೆಕ್ ಓವರ್ ಮಾಡಿಕೊಳ್ಳಲು, ವಿಲ್ ಪ್ಲಾನ್ ಫಾರ್ ಸೆವೆಂತ್, ಯೆಯಿಥ್ ನೈಂತ್ ಆಫ್ ಜುಲೈ" ಅಂದ.
ಅವಿನಾಶ್ "ನೋ,.. ಇಟ್ಸ್ ಮೈ ಡೇ" ಎಂದು ಚೀರಿದ ಅವಿನಾಶ್.
ಗೊಂದಲದಲ್ಲಿ ತಿವಾರಿ" ವ್ಹಾಟ್ ..?"
"ಇಟ್ಸ್ ಫಿಫಾ ಫೈನಲ್, ಮೈ ಬಲಾಕ್ ಗೊನ ರೊಕ್ ಆನ್ ಥಟ್ ಡೇ" ಕ್ವಾಟರ್ ಫೈನಲ್ ನಲ್ಲಿ ನಿನ್ನೆ ಅರ್ಜೆಂಟೀನ ವನ್ನು ಗೆದ್ದ ಉತ್ಸಾಹದಲ್ಲಿ, ಅವನ ಉತ್ಸಾಹಕ್ಕೆ ಕಾರಣ ಜರ್ಮನಿ ಗಿಂತ ನಿನ್ನೆ ಬಲಾಕ್ ಹೊಡೆದ ಪೆನಾಲ್ಟಿ ಶೂಟೌಟ್ ಹೇಳಿದರೆ ತಪ್ಪಾಗಲಾರದು.
ಅಷ್ಟರಲ್ಲಿ ಜೀವನ್ "ಫೈನಲ್ ಸುಂಡೆ ಮಗನೇ, ನಾವು ಬಂದಾಗುತ್ತೆ, ಚಿಲ್ ಮಗಾ" ಎಂದು ಸಮಾಧಾನಿಸಿದ ಅವನನ್ನು.

ಜೀವನ್ ಮುಂದುವರಿಸಿದ "ಫ್ರೈಡೆ ಇಲ್ಲಿಂದ ೬ ಕ್ಕೆ ಹೋಗೋಣ ೯:೩೦ ಕ್ಕೆ ಅಲ್ಲಿ ತಲುಪುತ್ತೇವೆ, ದಾರಿಯ ನಡುವಲ್ಲಿ ಸ್ನಾಕ್ಸ್ ಮುಗಿಸುವ, ನಂತರ ಒಂದು ದಿನ ಪೂರ್ತಿ ಅಲ್ಲಿ ಸುತ್ತಿ, ರಾತ್ರಿ ಟೆಂಟ್ ಕಟ್ಟಿ ಕೆಂ ಫೈರ್ ಎಲ್ಲ ಮಾಡಿ ಮಲಗೋಣ, ಮರುದಿನ ದೇವಸ್ತಾನ, ಮಾಪ್ರೋ ಎಲ್ಲ ಮುಗಿಸಿ ರಾತ್ರಿ ಒಳಗೆ ಇಲ್ಲಿ ತಲುಪಬಹುದು" ಅಂದ.
ತಿವಾರಿ "ಉಳಕೊಳ್ಳಲು ಏನ್ ವ್ಯವಸ್ತೆ...?"
"ಅಲ್ಲಿ ಬೇಕಾದಷ್ಟು ಕ್ಯಾಂಪ್ ಅರೆಂಜ್ ಮಾಡುವವರಿರ್ತಾರೆ, ಇಂಜಿನಿಯರಿಂಗ್ ಫೈನಲ್ ಯೀರ್ ನಲ್ಲಿ ನಾವು ಹೋಗಿದ್ವಿ, ಒಂದು ದಿನ ಸಂಜೆ ಇಂದ ಮಾರನೆ ಸಂಜೆ ವರೆಗೆ ಅವರೇ ಎಲ್ಲ ಎರೆಂಜ್ ಮಾಡ್ತಾರೆ, ಆಗ ೬೦೦/-ಚಾರ್ಜ್ ಮಾಡ್ತಿದ್ರು, ಈಗ ಹೆಚ್ಚಂದ್ರೆ ೭೫೦/- ಚಾರ್ಜ್ ಮಾಡ ಬಹುದು.ಒಟ್ಟು ತಲೆಗೆ ೧೦೦೦-೧೨೫೦/- ಖರ್ಚು ಬರಬಹುದು"
"ನೋ ವರಿ, ಐ.ಟಿ ಯವರಿಗೆ ೧೦೦೦ ಏನು ದೊಡ್ಡ ಮೊತ್ತ ಅಲ್ಲ" ಎಂದ ತಿಂಗಳಿಗೆ ಆರಂಕೆ ಸಂಬಳ ತಿನ್ನುತಿದ್ದ ತಿವಾರಿ.
ಅಷ್ಟರಲ್ಲಿ ಅವಿನಾಶ್ "ಮತ್ತೆ ಫಾಲ್ಸ್ ಹೋಗಲಿಕ್ಕೆ ಇಲ್ವಾ, ಖುಲೇ ಬಾದಲ್ ಕೆ ನೀಚೆ, ಖುಲೇ ನಹಾನ ಹೇ ಮುಜೆ" ಅಂದ ಹಲ್ಲು ಕಿರಿಯುತ್ತಾ.
ತಿವಾರಿ "ಸಬ್ ದೇಖೆಂಗೆ..." ಎನ್ನುತ್ತಾ ಜೀವನ್ ನಲ್ಲಿ "ನಿನ್ನತ್ರ ಆ ಕ್ಯಾಂಪ್ ನವರ ನಂಬರ್ ಇದ್ರೆ ನಂಗೆ ಕೊಡು, ನಾನು ಮಾತಾಡ್ತೇನೆ" ಅಂದ.
"ಜೀವನ್, ಕೇಳಿ ಹೇಳ್ತೇನೆ"ಅಂದ.
ಅವರು "ಸೊ ನಾನು ಪ್ರೊಪೋಸಲ್ ಚೆನ್ನೈಗೆ ಕಳಿಸ್ತೇನೆ ಜುಲ್ಲೈ ಸೆವೆಂತ್ ಯೆಯಿಥ್ ಫೈನಲ್ ಅಲ್ಲ" ಅಂದ.
ನಾವು," ಶೂರ್" ಎನ್ನಲು ಅವರು ಕ್ಯುಬಿಕಲ್ ಬಿಟ್ಟರು.

ಮನಸ್ಸು ಪುಣೆಯಲ್ಲಿರಲಿಲ್ಲ ಅದು ಆಕೃತಿಯೊಂದಿಗೆ ಮಹಾಬಲೇಶ್ವರ್ ನ ಮಂಜಿನಲ್ಲಿ ಕಳೆದು ಹೋಗಿತ್ತು, ಶುಕ್ರವಾರ ವೇಧಳನ್ನು ಕಂಪೆನಿಯಿಂದ ಹೊರಹಾಕಿದ್ದು ಇವಳಿಗೆ ಅದೃಷ್ಟ ಒದಗಿಸಿಕೊಟ್ಟಿತ್ತು, ಇವಳು ಅವಳ ಸ್ತಾನ ಪದೆದುಕೊಂಡಿದ್ದಳು, ಒಂದು ವರ್ಷದಿಂದ  ಖಾಲಿ ಕೂತು, ತಿಂದು ಬೋಡ್ದಾದ ತಲೆಗೆ ಕೆಲಸ ಮಾಡುವ ಭಾಗ್ಯ ಒದಗಿ ಬಂದಿತ್ತು. ಆ ಬದಿಯಲ್ಲಿ ಜೀವನ್ ಪ್ರೀತಿಗೆ ಪಿಂಗ್ ಮಾಡಿ ಏಳು ಎಂಟರ ಪ್ಲಾನ್ಸ್ ಹೇಳುತಿದ್ದ, ನಾನು ಅದನ್ನೇ ಮಾಡುತಿದ್ದೆ, ಮೂರನೇ ವ್ಯಕ್ತಿ ಅವಿನಾಶ್ ತನ್ನ ಜೆರ್ಮನಿ ಕಪ್ ಎತ್ತುವ ಕನಸು ಕಾಣುತಿದ್ದನು.

ಆಕೃತಿಗೆ 'ಆ ಕಪ್ ಆಫ್ ಕಾಫಿ' ಯ ಆಮಂತ್ರಣ ಇಟ್ಟು ಅವಿನಾಶ್ಗೆ ಗೊತ್ತಾಗದಂತೆ ಕ್ಯುಬಿಕಲ್ ಬಿಟ್ಟು ಬಾಲ್ಕನಿಗೆ ಬರಲು ಅಲ್ಲಿ ಪ್ರೀತಿ ಜೀವನ್ ಸಿಪ್ ಹೀರಲು ಶುರು ಮಾಡಿದ್ದರು. ನಾಲ್ವರು ಕೂತು ಸಿಪ್ ಇಳಿಸಲು ಶುರುಮಾಡಿದೆವು, ಮನಸ್ಸು ಮಂಜಿನಲ್ಲಿ ವಿಹರಿಸುತಿತ್ತು.

**************


ನಾಲ್ಕರ ಮಂಗಳವಾರ ಅವಿನಾಶ್ ರಜೆಯಲ್ಲಿದ್ದ. ಸೀಮನ್ಸ್ ನ ಪ್ರಾಜೆಕ್ಟ್ ನಡೆಯುತ್ತಿತ್ತು ನಮ್ಮ ಮೊಡ್ಯುಲ್ ನಲ್ಲಿ, ಅವರಿಗೂ ಅಂದು ದೊಡ್ಡ ದಿನವಾಗಿತ್ತು, ಕ್ಲೈಂಟ್ ರೋಬರ್ಟ್ ಇಲ್ಲಿನ ಸಂಜೆ ಆರಕ್ಕೆ ಮೀಟಿಂಗ್ ಮುಗಿಸಿ ಸೈನ್ ಔಟ್ ಆಗಿದ್ದ, ಮುಂದಿನ ಉಪ್ದೇಟ್ಸ್ ನಮಗೆ ಕೊಟ್ಟು ಬೇಗನೆ ಕಾಲ್ ಮುಗಿಸಿದ್ದ. ಅವನಿಗೂ ಪ್ರಾಜೆಕ್ಟ್ ಗಿಂತ ಅಂದಿನ ಸಂಜೆಯ ಮಾಚೇ ಪ್ರಿಯೋರಿಟಿ ಆಗಿತ್ತು. ಜೀವನ್ ಕಾಲ್ ಮುಗಿಯುತಿದ್ದಂತೆ ಮನೆ ಸೇರಿದ. ನನ್ನನ್ನು ಜೊತೆಗೆ ಕರೆದಿದ್ದ, ಆಕೃತಿಯನ್ನು ಬಿಟ್ಟು ಹೋಗಲು ಮನಸಿಲ್ಲದೇ ನಾನು "ಮಾಚ್ ಶುರು ವಾಗುವುದರಲ್ಲಿ ತಲುಪುತ್ತೇನೆ" ಎಂದು ಅವನನ್ನು ಕಳುಹಿಸಿಕೊಟ್ಟಿದ್ದೆ.

ಆಕೃತಿಯಲ್ಲಿ ಕೇಳಲು ಇನ್ನು ಅರ್ದ ಗಂಟೆ ಹಿಡಿಯುತ್ತೆ ಅಂದಳು, ಫೂಟ್ಬಾಲ್ ಬಗ್ಗೆ ಅಲ್ಪ ಸಲ್ಪ ಜ್ಞಾನದ ನನಗೆ ಈ ಒಂದು ಗಂಟೆಯಲ್ಲಿ ಜ್ಞಾನ ಹೆಚ್ಚಿಸುಲು ಗೂಗಲ್ ನಲ್ಲಿ ಕೆಲವು ಲಿಂಕ್ ತೆರೆದು ಓದಲು ಕುಳಿತೆ. ಫಿಫಾ ಇತಿಹಾಸ, ಜೆರ್ಮನಿ ಸೇರಿದಂತೆ ಇತರ ತಂಡಗಳ ಪೆರ್ಫಾರ್ಮನ್ಸ್, ಇಂಗ್ಲೀಶ್ ಕೌಂಟಿ ತಂಡಗಳು, ಇಪಿಎಲ್ ಕಾನ್ಸೆಪ್ಟ್, ಯುರೋ ಕಪ್ ಎಲ್ಲ ಓದಲು ಈ ಒಂದು ಗಂಟೆ ನೆರವಾಯಿತು. ಅಲ್ಪ ಜ್ಞಾನ ಸಂಪಾದನೆಯೊಂದಿಗೆ ಆಕೃತಿಯನ್ನು ಹಾಸ್ಟೆಲ್ ನಲ್ಲಿ ಬಿಟ್ಟು ನಾನು ಜೀವನ್ ನ ಫ್ಲಾಟ್ ತಲುಪಿದೆ.

3BHK ಮನೆಯಲ್ಲಿ ೫ ಮಂದಿ ಜೊತೆಯಾಗಿ ಅಲ್ಲಿ ಇರುತಿದ್ದರು, ಜೀವನ್, ಅವಿನಾಶ್ ನಮ್ಮ ಆಫೀಸ್ ನವರಾದರೆ ಉಳಿದ ಮೂವರು ಇವರ ಕೊಲ್ಲೆಜ್ ಮೇಟ್ಸ್ ಗಳು ಇಲ್ಲಿ ಪುಣೆಯ ಬೇರೆ ಕಂಪೆನಿಯಲ್ಲಿ ಕೆಲಸದಲ್ಲಿದ್ದರು. ನಾನು ಅಲ್ಲಿ ತಲುಪುವಾಗಲೇ ಮಾಚ್ ಶುರುವಾಗಿತ್ತು. ಮೇಚ್ ನ ೧೮ ನಿಮಿಷಗಳು ಆಗಲೇ ಮುಗಿದಿತ್ತು.

ಅವಿನಾಶ್ ನಲ್ಲಿ "ಬಲಾಕ್ ಖೇಲ್ ರಹಾ ಹೇ ಕ್ಯಾ" ಅಂದೇ.
"ಹೌದು , ಜಸ್ಟ್ ಒಂದು ಗೋಲ್ ಮಿಸ್ ಆಯಿತು ಈಗಷ್ಟೆ " ಅಂದ ನಿರಾಶೆಯಲ್ಲಿ.

ಇಟಲಿಯ ಡಿಫೆಂಡರ್ ಗಳು ತುಂಬಾನೆ ಸ್ಟ್ರಾಂಗ್ ಆಗಿದ್ದರು, ಐದು ಡಿಫೆಂಡರ್  ಗಳ ಎದುರು ನಾಲ್ಕು ಜೆರ್ಮನ್ ಸ್ಟ್ರೈಕರ್ ಗೋಲ್ ಬಾರಿಸಲು ಹೆಣಗುತಿದ್ದರು. ಎಲ್ಲರಗಿಂತ ಬಫ್ಫೂನ್ ಆತ್ಮಸ್ತೈರ್ಯ ಜೆರ್ಮನಿಗೆ ತನ್ನ ಮೊದಲಅರ್ಧದ ವರೆಗೆ ಒಂದು ಗೋಲ್ ಬಾರಿಸಿದಂಗೆ ಹಿಡಿದಿಟ್ಟಿತ್ತು.

ಫಸ್ಟ್ ಹಾಲ್ಫ್ ಆಗುತಿದ್ದಂತೆ ಅವಿನಾಶ್ "ಸಾಲ,ಬಫ್ಫುನ್ ಕ್ಯಾ ಕೀಪಿಂಗ್ ಕರ್ ರಹಾ ಹೇ, ಏಕ ನಹಿ ಹೋನೇ ದಿಯಾ" ಅಂದ ನಿಟ್ಟಿಸುರು ಬಿಡುತ್ತಾ.

ಜೆರ್ಮನಿ ಫೂಟ್ಬಾಲ್ ಇತಿಹಾಸದಲ್ಲಿ ಮೇಚ್ ಶುರುವಾದ ಮೊದಲ ಹದಿನೈದು ನಿಮಿಷದಲ್ಲಿ ಗೋಲ್ ಬಾರಿಸುವುದು ವಾಡಿಕೆ ಯಾಗಿತ್ತು, ಬಲವಾದ ಸ್ಟ್ರೈಕರ್ ಜೆರ್ಮನಿಯ ಅಸ್ತ್ರವಾಗಿತ್ತು, ಆದರೆ ಇವತ್ತು ಬಫ್ಫುನ್ ಎದುರಿಗೆ ಎಲ್ಲರು ಕೈಚೆಲ್ಲಿ ಕುಳಿತಿದ್ದರು. ಇಲ್ಲಿ ಅವಿನಾಶ್ಗೂ ಮೇಚ್ ನಲ್ಲಿ ಜರ್ಮನಿ ಎಲ್ಲೋ ಹಿಡಿತ ಕಳಕ್ಕೊಂಡಿದೆ ಎಂಬ ಚಿಂತೆ ಕಾಡಲಾರಂಬಿಸಿತು.

ಫ್ರಿಡ್ಜ್ ನಿಂದ ತಂಪಾದ ನೀರು ತಂದು ಕುಡಿಯುತ್ತ ಕುದಿಯುವ ಕೋಪವನ್ನು ತಣ್ಣಗೆ ಮಾಡುತಿದ್ದ, ಮಾಚ್ ತನ್ನ ದ್ವಿತಿಯಾರ್ದವನ್ನು ಮುಗಿಸಿತ್ತು, ಎರಡು ಟೀಮ್ ಗಳ ನಡುವೆ ಸಮಬಲದ ಘರ್ಷಣೆ ನಡೆಯುತ್ತಿತ್ತು. ೯೦  ನಿಮಿಷದ ಅವಧಿ ಮುಗಿದು ಹದಿನೈದು ನಿಮಿಷದ ಏಕ್ಷ್ಟ್ರ ಟೈಮ್ ಔಟ್ ನಲ್ಲಿ ಎರಡೂ ತಂಡಗಳ ಸಮ ಪ್ರದರ್ಶನ.

ಅವಿನಾಶ್ ಈಗ ಆರಾಮಾಗಿದ್ದ "ಓರ್ ಏಕ ಟೈಮ್ ಔಟ್ ಬಚಾಲಿಯ ತೊಹ್ ಮೇಚ್ ಅಪನಾ" ಎಂದು ಕುಣಿದಾಡಿದ. ಜೆರ್ಮನ್ ನವರು ಏನು ಸಾಧಿಸಿದ್ದರೂ ಅದು ಮೊದಲಾರ್ಧದಲ್ಲಿ ಇಲ್ಲವೇ ಕೊನೆಯ ಪೆನಾಲ್ಟಿ ಶೂಟೌಟ್ ನಲ್ಲಿ ಎಂದು ಎರಡು ತಿಂಗಳಿನ ಅವನ ಅನಾಲಿಸಿಸ್ ನಲ್ಲಿ ನಾನು ಅರ್ಥ ಮಾಡಿಕ್ಕೊಂಡಿದ್ದೆ.
ನಾನು "ಹಾಂ ಇವತ್ತು ಬಲಾಕ್ ಪೆನಾಲ್ಟಿ ಶೂಟೌಟ್ ನಲ್ಲಿ ಇನ್ನೊಂದು ಗೋಲ್ ಹೊಡಿತಾನೆ" ಅಂದಾಗ ಅವನ ಮುಖ ಇನ್ನೂ ಅರಳಿತು.

ಮೇಚ್ ಕೊನೆಯ ಎಕ್ಷ್ತ್ರ ಟೈಮ್ ನಲ್ಲಿ ನಡೆಯುತ್ತಿತ್ತು ೧೧೯ನೆ ನಿಮಿಷಕ್ಕೆ ಅಚಾನಕ್ಕಾಗಿ ಪ್ರತ್ಯಕ್ಷನಾದ ಫಾಬಿಯೋ ಗ್ರೋಸ್ಸೋ ಬಾಲ್ ಅನ್ನು ಎಲ್ಲರ ಕಣ್ಣು ಕಾಲುಗಳಿಂದ ತಪ್ಪಿಸಿ ಲೆಹ್ಮನ್ ನ ಕೈಜಾರಿಸಿ ಗೋಲ್ಪೋಸ್ಟ್ ನೊಳಗೆ ತೂರಿಸಿದ.

ಫ್ಲಾಟ್ ಇಡಿ ಮೌನ ಆವರಿಸಿತು, ಟಿವಿಯಲ್ಲಿ ಕಮೆನ್ಟೆಟರ್ 'ಥಾಟ್ ವಾಸ್ ಅ ಅಮೆಸಿಂಗ್ ಗೋಲ್' ಎಂದು ಬೊಬ್ಬೆ ಹೊಡೆಯುತಿದ್ದ.ಅವಿನಾಶ್ ಪೂರ್ಣ ಮೌನದಲ್ಲಿ ಮುಳುಗಿದ್ದವ ಅವರ ಸಂಬ್ರಮ ಆಚರಣೆ ನೋಡುತ್ತಾ "ಲೆಹ್ಮನ್ ಮಾದರ್ ಚೋದ್, ಇಸಕೇ ಜಗಹ ಮೆ ಮೇ ಹೋತಾ ತೋ ಭಿ ಬಚಾ ಲೇತಾ" ಎಂದು ಬೊಬ್ಬೆ ಹಾಕಿದ.

ಲೆಹ್ಮನ್ , ಒಲಿವೆರ್ ಖಾನ್ ನನ್ನು ಹಿಂದೆ ತಳ್ಳಿ ತನ್ನ ಹೆಸರನ್ನು ಸೆಲೆಕ್ಟ್ ಮಾಡಿಸಿಕೊಂಡಿದ್ದ.

ಮಾಚ್ ಸೋತಾಗ, ಇಲ್ಲ ಆಟಗಾರ ವಿಫಲ ನಾದಾಗ ಟೀಮ್ ನಲ್ಲಿ ಇದ್ದವರನ್ನು ಧೋಶಿಸುತ್ತಾರೆ, ಟೀಮ್ ನಲ್ಲಿ ಆಡದವರ ಅದೃಷ್ಟ ಆ ದಿನಕ್ಕೆ ಚೆನ್ನಾಗಿರುತ್ತದೆ, ಆ ದಿನ ಎಲ್ಲರೂ ಅವರನ್ನು ಪ್ರಶಂಶಿಸುತ್ತಾರೆ, ಮಿಸ್ ಮಾಡ್ಕೊಳ್ತಾರೆ , ಅವನಿದ್ದರೆ ಹೀಗಾಗುತ್ತಿರಲಿಲ್ಲ ಎಂದು ಸ್ಮರಿಸುತ್ತಾರೆ.


ಈಗ ಜೆರ್ಮನ್ ಟೀಮ್ ನಲ್ಲಿ ಎಲ್ಲರೂ ಅಟಾಕಿಂಗ್ ಆಗಿ ಆಡುತಿದ್ದರು. ಇನ್ನೂ ಉಳಿದ ೨ ನಿಮಿಷದಲ್ಲಿ ಗೋಲ್ ಹೊಡೆದು ಟೀಮ್ ಅನ್ನು ಫೈನಲ್ ಗೆ ತಲುಪಿಸುವ ಜವಾಬ್ದಾರಿ ಅವರ ಮೇಲಿತ್ತು, ಜೊತೆಗೆ ಹೋಂ ಕ್ರೌಡ್ ನ ಬೆಂಬಲವೂ ಅವರ ಜೊತೆಗಿತ್ತು, ಎಲ್ಲರೂ ಬುಫ್ಫುನ್ ಮೇಲೆ ಒಂದೇ ಸಮವಾಗಿ ಧಾಳಿಗಿಳಿದರು.

ಇನ್ನೊಂದು ಗೋಲ್ ಕಡೆ ನಿಮಿಷದಲ್ಲಿ ಬಂತು, ಅದು ಜೆರ್ಮನಿಯಿಂದ ಆಗಿರದೆ ಇಟಲಿಯಿಂದ ಬಾರಿಸಲಾಗಿತ್ತು. ಗೋಲ್ ಬಾರಿಸಿದ  ಅಲೆಸೆಂಡ್ರೋ ಡೆಲ್ ಪಿರೋ ಖುಷಿಯಲ್ಲಿ ತನ್ನ ಜೆರ್ಸಿ ತಲೆಗೆ ಸುತ್ತುತ್ತಾ ಗೌನ್ಡ್ಗೆ ಎರಡು ಸುತ್ತು ಬರುತಿದ್ದ.
ನೆರೆದಿದ್ದ  ಪ್ರೇಕ್ಷಕರು ಜೆರ್ಮನ್ ಟೀಂ ನ ಆಟಗಾರರು ತಲೆ ಮೇಲೆ ಕೈ ಹೊತ್ತು ಗ್ರೌಂಡ್ ನ ದೊಡ್ಡ ಪರದೆಯಲ್ಲಿ ಬರುತಿದ್ದ ರಿಪ್ಲೈ ನೋಡುತಿದ್ದರು, ಗೋಲಿ ಗೋಲ್ ಪೋಸ್ಟ್ ನ ಕಂಬಕ್ಕೆ ತನ್ನ ಶೂ ನಿಂದ ಒದ್ದು ಕೋಪ ತೀರಿಸಿಕೊಳ್ಳುತಿದ್ದ.

ಇಲ್ಲಿ ಸೇರಿದ್ದ ಐವರ ಕಣ್ಣು ಇನ್ನೂ ಟಿವಿ ಪರದೆಯ ಮೇಲಿತ್ತು, ಅವಿನಾಶ್ ಏನಾಯ್ತು ಎಂದು ನಂಬಲಾಗದೆ ಇನ್ನೂ ಒಳಗೆ ಸೇರಿದ್ದ.
ಅವನ ಪಕ್ಕಕ್ಕೆ ಹೋಗಿ "ಬಾಯ್ ಕೋಯಿ  ಬಾತ್ ನಹಿ, ಹೋತ ಹೇ ... ೨೦೧೦ ಮೇ ಬಲಾಕ್ ಮಾರೇಗ..." ಎಂದೆ.
ಅವನ ಬಾಯಿಂದ ಮಾತು ಹೊರಡಲಿಲ್ಲ. ಮೌನದಲ್ಲಿದ್ದ.
ಜೀವನ್ ನಲ್ಲಿ "ನಾನು ಹೋಗ್ತೇನೋ, ಜೋಶಿಯ ಡಬ್ಬಾ ನನ್ನನ್ನು ಕಾಯ್ತಿದೆ" ಎಂದು ಕಳಚಿಟ್ಟ ಶೂ ತೊಟ್ಟೆ.

ಅವಿನಾಶ್ ಚೇರ್ನಿಂದ ಎದ್ದವನೇ ಸೀದಾ ಬಾತ್ರೂಂ ಸೇರಿಕ್ಕೊಂಡ.
 
ಸಂಕಟ ಹೆಚ್ಚಾದಾಗ, ಏಕಾಂತ ಬೇಕೆಂದಾಗ ಮೊದಲು ನೆನಪಾಗುವ ಸ್ಥಳ  ಬಾತ್ರೂಮ್, ಯಾರು ನೋಡಲಾರರು , ಬರಲಾರರು!!.

ಅವನು ತಿರುಗಿ ಬಂದ ನಂತರ ಹೋಗೋಣ ಅಂದುಕ್ಕೊಂದು ಮತ್ತೆ ಶೂ ಕಳಚಿದೆ.

ಒಳಗೆ ಸೇರಿದವನೇ ಗೋಡೆಗೆ ಬಡಿದು ತನ್ನ ದುಃಖ ಹೊರ ಹಾಕುತಿದ್ದದ್ದು ಕೇಳುತಿತ್ತು, ಕ್ಷಣದಲ್ಲೇ ಶವರ್ ನಿಂದ ಕೆಳಗೆ ಬೀಳುತಿದ್ದ ನೀರು ಅವನು ಕಣ್ಣಿರನ್ನು ಜಾರಿಸಲು ಕಂಡುಕ್ಕೊಂದ ಮಾರ್ಗದ ಸುಳಿವು ನೀಡುತ್ತಿತ್ತು. ಆ ನೀರಿನ ನಡುವೆ ಸಣ್ಣದಾಗಿ ಬಿಕ್ಕಳಿಕೆ ಕೇಳುತಿತ್ತು.

ಹತ್ತು ನಿಮಿಷದಲ್ಲಿ ಎಲ್ಲವು ಮೌನವಾಯಿತು. ಇನ್ನೂ ಅವನು ಹೊರಬಂದಿರಲಿಲ್ಲ, ಜೀವನ್ ನನ್ನಲ್ಲಿ "ನೀನು ಹೋಗು, ಅವನು ಜ್ಯಾನೋದಯ ಮಾಡ್ಕೊಳ್ತಾ ಇದ್ದಾನೆ, ಎಲ್ಲ ಶಾಂತ ಅದಮೇಲೆ ಅವನಾಗಿಯೇ ಹೊರ ಬರ್ತಾನೆ" ಅಂದ.

ಹನ್ನೊಂದಕ್ಕೆ ನಾನು ಮನೆಬಿಟ್ಟರು ಅವನಿಗೆ ಜ್ಞಾನೋದಯ ವಾಗಿರಲಿಲ್ಲ, ಅವನ ಹುಚ್ಚು ಜೆರ್ಮನ್ ಪ್ರೇಮ ನೋಡಿ ಒಮ್ಮೆ ನಗು, ಇನ್ನೊಮ್ಮೆ ಅವನ ಮೇಲೆ ಹೆಮ್ಮೆ ಮೂಡುತ್ತಿತ್ತು.


************************
 
 
ಚಿಟಪಟ ಮಳೆ ಬೀಳುತ್ತಿತ್ತು, ಮೇಲೆ ಹೊದ್ದ ಜಾಕೆಟ್ ಮೆಲ್ಲನೆ ಭಾರವಾಗುತಿತ್ತು, ಬೈಕ್ ಆಕೃತಿಯ ಹಾಸ್ಟೆಲ್ ಕಡೆಗೆ ಓಡುತ್ತಿತ್ತು, ಮನಸ್ಸು ಪುಣೆ ಬಿಟ್ಟು ಮಹಾಬಲೇಶ್ವರ್ ಸೇರಿತ್ತು. ಕಣ್ಣಲ್ಲಿ ರಾತ್ರಿಯ ನಿದ್ದೆಯ ತೂಕಡಿಕೆ ಇನ್ನೂ ಕಮ್ಮಿ ಆಗಿರಲಿಲ್ಲ.


ಕಳೆದ ಎರಡು ದಿನದಿಂದ ಒಂದು ಕ್ಷಣನು ಪುರಸೊತ್ತು ಇರಲಿಲ್ಲ, ನಾಲ್ಕನೇ ತಾರೀಕಿನಂದು ಅವಿನಾಶ್ ಸೆಮಿಫೈನಲ್ ಹೇಳಿ ರಜೆ ಹಾಕಿದ್ದ, ನಂತರದ ಭುದವಾರ ಬರಲೇ ಇಲ್ಲ ಆಫೀಸ್ ಕಡೆಗೆ, ಜೆರ್ಮನಿ ಸೋಲಿನಲ್ಲಿ ಜರ್ಜರಿತನಾಗಿದ್ದ ಜನ, ನಿನ್ನೆ  ಆಫೀಸ್ ಗೆ ಬಂದವನು ಒಂದಕ್ಕೆ ಎರಡು ಟೈಪಿಸುತಿದ್ದ. ಎಂ.ಬಿ.ಎ , ಜಿ ಆರ್ ಇ  ಗೆ ತಯಾರಿ ಮಾಡುತಿದ್ದ ಹುಡುಗ ನಿನ್ನೆ ಪ್ರೈಮರಿ ಸ್ಕೂಲ್ ನಲ್ಲಿ ಬರೆಯುತಿದ್ದಂತೆ ಇಂಗ್ಲಿಷ್ ನಲ್ಲಿ ತಪ್ಪು ತಪ್ಪು ಗ್ರಾಮರ್ ಬಳಸುತಿದ್ದ. ಇವನ ಈ ಬದಲಾವಣೆ ಜೀವನ್ ಗೆ ಹಿಡಿಸದೆ ಅವನಲ್ಲಿ "ಬಾಯ್ , ನಿನ್ನ ಐ.ಡಿ ಕಾರ್ಡ್ ಬಿಟ್ಟು ಹೋಗು, ನಾನು ಸಂಜೆ ಸ್ವೈಪ್ ಮಾಡುತ್ತೇನೆ ನೀನು ಮನೆಗೆ ಹೋಗಿ ರೆಸ್ಟ್ ತೇಗಿ" ಎಂದು ಅವನನ್ನು ಬೆಳಗ್ಗೆನೇ ಮನೆಗೆ ಕಳುಹಿಸಿದ್ದ.

ಅವನು ಮನೆಯಲ್ಲೇ ಕುಳಿತು ಜೆರ್ಮನಿಯ ಸೋಲಿಗೆ ಕಾರಣ ವಿಶ್ಲೆಶಿಸುತಿದ್ದ, ಇಲ್ಲಿ ಆಫೀಸಿನಲ್ಲಿ ನಾವಿಬ್ಬರು ಅವನ ಸಂಪೂರ್ಣ ಕೆಲಸ ನಮ್ಮ ಕೆಲಸದ ಜೊತೆಗೆ ತಲೆಮೇಲೆ ಎಳೆದುಕ್ಕೊಂಡಿದ್ದೆವು.ರಾತ್ರಿ ಒಂದರ ವರೆಗೆ ಅಲ್ಲಿದ್ದು ಡೆಲಿವರಿ ಕೊಟ್ಟು ಆಫೀಸ್ ಬಿಟ್ಟಿದ್ದೆವು. ಬೆಳಗ್ಗೆ ಐದಕ್ಕೆ ಅವನು ಕರೆ ಮಾಡಿ ನನ್ನನ್ನು ಎಬ್ಬಿಸಿದ್ದ "ಅಂತು ಇಂತೂ ಹುಡುಗ ಮೊದಲಿನಂತಾದ" ಎಂದು ಅವನನ್ನು ಮಾತನಾಡಿಸಿದ್ದೆ.

ಇವತ್ತಿಯ ವೇಷ ಭೂಷಣ ಮಾಮೂಲಿ ಶುಕ್ರವಾರಕ್ಕಿಂತ ಚೂರು ಭಿನ್ನವಾಗಿತ್ತು. ಆಫೀಸ್ ನಲ್ಲಿ ಹಾಕಲು ಸಾದ್ಯವಿರದಂತಹ ವರ್ಡಿನ್ಗ್ಸ್ ನ ಟಿ- ಶರ್ಟ್ ಮತ್ತು ಶೆಡ್ಸ್ ಜೀನ್ಸ್ ಹಾಕಿ, ಯೋ ಆಗಿ ಕಾಣುವ ಪ್ರಯತ್ನ ಮಾಡಿದ್ದೆ ತಕ್ಕ ಮಟ್ಟಿಗೆ. ಅವಳ ಹಾಸ್ಟೆಲ್ ಗೆ ಬಂದು ಅವಳಿಗೆ ಕರೆ ಕೊಟ್ಟೆ. ನಿಮಿಷಾರ್ಧದಲ್ಲಿ ಅವಳು ಕೆಳಗಿದ್ದಳು.

ಹತ್ತಡಿ ದೂರದಲ್ಲಿ ಎರಡೇ ಇಂಚಾಗಿ ಕಾಣುತಿದ್ದ ಅವಳನ್ನು ಮೇಲಿನಿಂದ ಕೆಳಗೆ ತನಕ ನೋಡಿದೆ. ಪೂರ್ಣ ಬದಲಾಗಿದ್ದಳು, ಸಲ್ವಾರ್ ಕಳಚಿ ಜೀನ್ಸ್ ತೊಟ್ಟಿದ್ದಳು, ದೇಹದ ಉಬ್ಬುತಗ್ಗುಗಳು ಗಮನಕ್ಕೆ ಬರುವಂತ ಟಿ- ಶರ್ಟ್ ತೊಟ್ಟಿದ್ದಳು. ಸಲ್ವಾರ್ನಲ್ಲಿ ಎರಡಿಂಚು ಕುಳ್ಳಗೆ ಕಾಣುತಿದ್ದ ದೇಹ ಇವತ್ತು ಟೈಟ್ ಜೀನ್ಸ್ ನಲ್ಲಿ ನನಗಿಂತ ಉದ್ದಕ್ಕೆ ಬೆಳೆದಂತೆ ತೋರುತಿದ್ದಳು. ಜಾಕೆಟ್ ನ ಜಿಪ್ ಮೇಲೇರಿಸಿ ಸುಧಾರಿಸಿಕ್ಕೊಂಡೆ. ಕನ್ನಡಕವನ್ನು ಮೇಲೇರಿಸಿ ಇನ್ನೊಮ್ಮೆ ಅವಳನ್ನು ನೋಡಿದೆ, ಅಸ್ಪಷ್ಟವಾಗಿದ್ದ ಆಕೃತಿಯ ಆಕೃತಿ ಹತ್ತಿರ ಬರುತಿದ್ದಂತೆ ಸ್ಪಷ್ಟವಾಗಿ ಕಂಡಳು.

ಕಣ್ಣರಳಿತು, ಮನ ಕುಣಿಯಿತು. ಇನ್ನೂ ಹತ್ತಿರ ಬಂದು ನನ್ನಿಂದ ಬರೇ ಕೆಲವು ಮಿಲ್ಲಿ ಮೀಟರ್ ದೂರದಲ್ಲಿ ನಿಂತು "ಡಂಬು ಹೇಗೆ ಕಾಣ್ತಾ ಇದ್ದೇನೆ..?" ಅಂದ್ಲು.
"ಅಮೆಸಿಂಗ್, ಇಲ್ಲಿ ವರೆಗೆ ಎಲ್ಲಿದ್ಲು ಈ ಅಪ್ಸರೆ..?" ಅಂದೆ.
ಚೂರು ನಾಚುತ್ತಾ ಅವಳು "ನಡಿ ನಡಿ " ಎಂದು ಬೈಕ್ ಏರಿದಳು.
ನಾನು "ಆಕೃತಿಗಾಗಿ ಬೈಕ್ ತಂದಿದ್ದು, ಅಪ್ಸರೆ ಬರ್ತಾಳೆ ಅಂತ ಗೊತಿದ್ರೆ ಪಲ್ಲಕ್ಕಿನೇ ತರ್ತಿದ್ದೆ, ಆಕೃತಿ ಎಲ್ಲಿ ..? " ಅಂದು ಹಿಂದೆ ಕುಳಿತ ೨೧ ನೇ ಶತಮಾನದ ನಾರಿಯಲ್ಲಿ ಕೇಳಿದೆ.
 "ಓಯ್, ಯಾವಾಗ್ಲೂ ಫಾರ್ಮಲ್ ನಲ್ಲಿ ಅಜಿತ್ ನಂತೆ ಕಾಣುತಿದ್ದವ ಅಚಾನಕ್ಕಾಗಿ ಸುರಿಯಾ ಆಗಿದ್ದೀಯ ..? ಏನು ನಂಗೆ ಸವತಿ ತರುವ ವಿಚಾರನಾ..?" ಎಂದು ತಲೆಗೆ ತದುಕಿದಳು, ತುಂತುರು ಮಳೆಗೆ ಸಾರಿಸಿದ್ದ ಜೆಲ್ ಜಿಡ್ಡು ಜಿಡ್ದಾಗಿತ್ತು, ಕೈ ಜಾರಿಸುತ್ತಾ "ಯಜಮಾನ್ರು ಇವತ್ತು ಜೆಲ್ಲು ಹಾಕೊಂಡು ಬಂದಿದ್ದಾರೆ, ಶೂರ್ ಇಎಲ್ಟಿಪಿ ಯಲ್ಲಿ ಒಂದು ವಿಕೆಟ್ ಡಮಾರ್" ಅಂದಳು.
ನಾನು "ನೀನೇನು ಕಮ್ಮಿ ಇಲ್ಲ, ಶ್ರಿದೆವಿಯಿಂದ ಡೈರೆಕ್ಟ್ ಕತ್ರೀನ ಆಗಿದ್ದಿಯ ಎಷ್ಟು ಮಂದಿಯ ಮೂಳೆ ಮುರಿಬೇಕೋ ನಾನು ಇವತ್ತು" ಅಂದೆ.
ಅವಳು " ನಿಂದು ಓವರ್ ಆಯ್ತು, ಒಟ್ನಲ್ಲಿ ಇಬ್ಬರು ಚೆನ್ನಾಗಿ ಕಾಣ್ತೀವಲ್ಲ, ನಡಿ, ಗಾಡಿ ಸ್ಟಾರ್ಟ್ ಮಾಡು" ಅಂದ್ಲು.

ನ್ಯೂಟ್ರಲ್ ನಿಂದ ಫಸ್ಟ್ ಗೇರ್ ಗೆ ಹಾಕುತ್ತ ಕ್ಲುಚ್ ಬಿಟ್ಟೆ, ಗೊತ್ತಿದ್ದೂ ಗೊತ್ತಿದು ಅಕ್ಸಲೆಟರ್ ಫುಲ್ ಕೊಟ್ಟು ಒಮ್ಮೆಲೇ ಕ್ಲುಚ್ ಬಿಟ್ಟೆ, ಎರಡು ಕ್ಷಣಕ್ಕೆ ಅವಳ ಉಬ್ಬುತಗ್ಗುಗಳು ಚಪ್ಪಟೆಯಾದವು, ಗಾಡಿ ವೇಗ ಪಡಕ್ಕೊಂಡಿತು. ಇನ್ನೊಮ್ಮೆ ತಲೆಗೆ ತದುಕಿ "ಬದ್ಮಾಶ್!" ಎನ್ನುತ್ತಾ ಸಂಪೂರ್ಣ ಬಳಸಿ ಕುಳಿತಳು.

ಆರಾಮಾಗಿ ಗಾಡಿ ಮಂಜಿನ ನಡುವೆ ಸಾಗುತಿತ್ತು, ಮನ ಇನ್ನೂ ದೂರದ ಪಯಣ ಬಯಸುತಿತ್ತು, ತಿವಾರಿ ಬಿಟ್ಟರೆ ಮಹಾಬಲೇಶ್ವರ್ ವರೆಗೆ ಬೈಕನಲ್ಲೇ ಪಯಣಿಸುವ ಮನಸ್ಸಾಯಿತು. ಹಿಂದೆ ಕುಳಿತ ಅವಳ ಕೈಯಲ್ಲಿ ಇನ್ನೊಮ್ಮೆ 'ಬದ್ಮಾಶ್' ಎಂದು ಕರೆಸಿಕ್ಕೊಳ್ಳುವ ಮನಸ್ಸಾಯಿತು. ಕ್ಲುಚ್ ಹಿಡಿದು ಬಿಡುವ ಮೊದಲೇ ಅವಳು ನನ್ನು ಪೂರ್ಣ ತಬ್ಬಿ ನಡುವೆ ಗಾಳಿ ಸುಳಿದಂತೆ ಕುಳಿತು ಬಿಟ್ಟಳು. ಹಿಂದೆ ತಿರುಗಿ ಅವಳನ್ನು ನೋಡುವ ಮನಸ್ಸಾಯಿತು. ಹೆಡ್ಲೈಟ್ ಬಿಳುತಿದ್ದಲ್ಲಿ ಮಾತ್ರ ಬೆಳಕು ಸುತ್ತಲು ಕತ್ತಲು, ಸೈಡ್ ಮಿರರ್ ನಲ್ಲಿ ಅವಳ ಸ್ವಂದರ್ಯ ಆಸ್ವಾದಿಸುವ ಎಂದರೆ ಬೆಳಕಿನ ಕೊರತೆ. ಮೇಲಾನೆ ಕ್ಲುಚ್ ಬಿಟ್ಟೆ, ಅವಳು ಇನ್ನೂ ಹತ್ತಿರವಾಗುತಿದ್ದಳು. ಕಿವಿಯ ಬಳಿ ಬಂದು "ನಿಜವಾಗಲು ನಾನು ಸರಿಯಾಗಿ ಕಾಣ್ತಾ ಇದ್ದೆನಾ..?" ಅಂದ್ಲು.
"ನಿಜ, ಹುಡುಗರಿಗೆ ಕಿಚ್ಚು ಹೊತ್ತಿಸುವ ಹಾಗೆ ಕಾಣ್ ತಿದ್ದಿಯ" ಅಂದೆ.
ಅವಳು "ಥ್ಯಾಂಕ್ಸ್ ವೈಭು, ಲವ್ ಯೌ" ಎಂದು ಅಲಿಂದಲೇ ಬಲ ಕೆನ್ನೆಗೆ ಮುತ್ತಿಟ್ಟಳು.
"ಐ ಟೂ" ಅಂದೆ.

ಅವಳದ್ದು ನನ್ ತರಾನೆ ಒರು ಮಾಲೈ ರಿಂಗಣಿಸುತಿತ್ತು ಮೊಬೈಲ್ ಘಜನಿಯ ಭೇಟಿ ಆದ ನಂತರ, ಇವತ್ತು ಅವಳ ಮೊಬೈಲ್ ಹೊಸ ರಾಗದಲ್ಲಿ ಹಾಡುತ್ತಿತ್ತು. ನನಗೆ ಮೊಬೈಲ್ ರಿಂಗಣಿಸಿದಂತಾಯಿತು. ಅವಳು ಎಲ್ಲೋ ಕಳೆದು ಹೋಗಿದ್ದಳು.
ನಾನು "ಓಯ್, ಮೊಬೈಲ್ " ಅಂದೆ.
ಆ ಟೈಟ್ ಜೀನ್ಸ್ ನ ಎದುರುಗಡೆಯ ಪಾಕೆಟ್ ನಿಂದ ಅವಳು ಕೂತಲ್ಲೇ ಅದನ್ನು ಹೊರ ತೆಗೆಯಲು ಪ್ರಯತ್ನಿಸಿದಳು,ಕೈ ಹಾಕಲು ಸಾದ್ಯವಿಲ್ಲ ದಷ್ಟು ಬಿಗಿಯಾಗಿ ಆ ಜೀನ್ಸ್ ಅವಳನ್ನು ಬಂಧಿಸಿತ್ತು,ನಾನು ಬೈಕ್ ಬದಿಗೆ ತಂದು ನಿಲ್ಲಿಸಿದೆ ಅವಳು ಒಳಗಿಂದ ಮೊಬೈಲ್ ತೆಗೆಯುವಾಗ ಆ ಕರೆ ನಿಂತಿತ್ತು.

ಅವಳು ಮಿಸ್ ಕಾಲ್ ನೋಡಿ "ತಿವಾರಿ ಸರ್ ಕರೆ ಮಾಡಿದ್ದು, ಇಟ್ಸ್ ೬ :೧೦  ವೈಭು "ಅಂದ್ಲು. ಮರು ಪ್ರಯತ್ನಿಸಿದಳು, ಕರೆ ಕೂಡಲಿಲ್ಲ.
ನಾನು "ಇನ್ನೇನೋ ತಲುಪಿ ಬಿಟ್ವಿ ಕೂತ್ಕೋ " ಅಂದೆ. ಮತ್ತೆ ಕುಳಿತು ಕ್ಕೊಂಡಳು.
ನಾನು "ಒರುಮಾಲೈ ಬದಲಾಯಿಸಿದಿ ಯಲ್ಲ .. ರೀಸನ್ ...?"
"ಆ ಒಂದು ಸಂಜೆ ಯಾವಾಗಲೋ ಬಂದಾಯ್ತು, ಈಗ ನೀನು ಬೇಕು ಅನ್ಸುತ್ತೆ, ನೀನು ಕಣ್ ಮುಂದೆ ಇರ್ಬೇಕು ಅನ್ಸುತ್ತೆ, ಅದಕ್ಕೆ ಹೊಸ ಹಾಡು ಹಾಕಿದೆ"
"..?"
"ಮುಂಬೆ ವಾ ,.. ಏನ್ ಅನ್ವೇ ವಾ... ಎದುರು ಬಾ ನನ್ನ ಪ್ರಾಣವೇ ಬಾ ..." ಎಂದಳು.
"ಸೌಂಡ್ಸ್ ಗುಡ್" ಅಂದೆ.
ಅದಕ್ಕವಳು "ಸೂಪರ್ ಇದೆ ಲಿರಿಕ್ಸ್ , ಆದ್ರೆ ನಿಂಗೆ ಅರ್ಥ ಆಗಲ್ಲ ಅಲ್ಲ" ಅಂದ್ಲು.
"ಟ್ರಾನ್ಸ್ ಲೆಟರ್  ನೀನಿದ್ದಿಯಲ್ಲಾ" ಅಂದೆ.ಮತ್ತೆ ಮುಗುಳನಕ್ಕಳು.

ಬೈಕ್ ಐ.ಟಿ ಪಾರ್ಕ್ ನ ಬಿಲ್ಡಿಂಗ್ ನಂಬರ್ ೧೧ ರ ಎದುರಿತ್ತು. ಅಲ್ಲಿ ಆಗ್ಲೇ ಜನ ಸೇರಿ ಆಗಿತ್ತು.

ಮುಂದಿನ ಸಿಪ್