ಸಿಪ್ ೩೧

ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ....

 

ಹಿಂದಿನ ಸಿಪ್ 



ಪಾರ್ಕಿಂಗ್ ಲೋಟ್ ನಲ್ಲಿ ಬೈಕ್ ಇಟ್ಟು ನೆರೆದಿದ್ದ ನಲ್ವತ್ತು ಮಂದಿಯ ಗುಂಪನ್ನು ಸೇರಿದೆ, ಆಕೃತಿ ಮರೆಯಲ್ಲೇ ನನ್ನನ್ನು ಗಮನಿಸುತಿದ್ದಳು, ಎಲ್ಲರೆದುರು ನನ್ನೊಡನೆ ಸೇರುವುದನ್ನು ಇಷ್ಟಪಡದವಳಾಗಿದ್ದಳು. ತಿವಾರಿ "ಈ ಹುಡುಗೀರ ಮೇಕಪ್ ಮುಗಿಯುದೆ ಇಲ್ಲಾ ! ಇವರಿಂದಲೇ ಪ್ಲಾನ್ ಲೆಟ್ ಆಗುವ ಹಾಗಿದೆ, ಎಲ್ಲರನ್ನು ಒಂದು ಗಂಟೆ ಮುಂಚೆ ತಯಾರಿ ಮಾಡಬೇಕಿತ್ತು" ಎನ್ನುತಿದ್ದ ಅವನಷ್ಟಕ್ಕೆ. ಜನ ಎಲ್ಲ ಹುಡುಗೀರಿಗೆ ಇದೇ ಕಾರಣಕ್ಕೆ ಫೋನ್ ಮಾಡಿದ್ದ. ನಾನು ಅವಿನಾಶ್ ನನ್ನು ಸೇರಿದೆ.

ಟಾಪ್ ಟು ಬಾಟಮ್ ಅಡಿಡಾಸ್ ಪೋಷಾಕಿನಲ್ಲಿ ಮಿಂಚುತಿದ್ದ. ಹೊದ್ದ ಹಸಿರು ಜಾಕೆಟ್, ಮೇಲೆ ಹಳದಿಯ ಅಡಿಡಾಸ್ ನ ಮೂರು ಬರೆಗಳು. ಅದನ್ನು ನೋಡುತ್ತಾ ನಾನು "ಕ್ಯಾ ಭೈ ಜೆರ್ಮನ್ ಸೆ ಸೀಧಾ ಬ್ರೆಸಲಿಯನ್ ಬನೇ ಕ್ಯಾ ..? ಏಕ ಹೇ ಹಾರ್ ಮೇ " ಅಂದು ಅವನ ಕಾಲೆಳೆದೆ.
ಜಾಕೆಟ್ ಖರೀದಿಸುವ ಹೊತ್ತಿಗೆ ಅವನು ಇದನ್ನು ಗಮನಿಸಿರಲಿಕ್ಕಿಲ್ಲ, ಅವನು "ಅರೇ ಧ್ಯಾನ್ ನಹಿ ದಿಯಾ ಥಾ  ಭೈ, ಸಚ ಮೇ ಏ ಬ್ರಸಲಿಯನ್ ಜಾಕೆಟ್ ಲಗ ರಹ ಹೇ .. ಫುಕ್" ಎಂದು ಹತಾಶೆ ಪಟ್ಟ.
ನಾನು "ಅಬ್ ಎ ೪೯ ಕ್ಯಾ ಹೇ.. ಬ್ರೆಸಲ್ ಜೀತಾ ತ ಕ್ಯಾ ವರ್ಲ್ಡ್ ಕಪ್ ಅಂದೆ..?"
"ಸಾಲೊಂಕಿ ಔಕಾಥ್ ಕ್ಯಾ ತಿ ಉಸ್ ಟೈಮ್ ಮೇ , ಅಬ್ ಜಾಮ್ ಗಯೇ ಹೇ" ಎಂದ ಬ್ರೆಸಲ್ ನ ಕಟ್ಟಾ ವಿರೋದಿ ಅವಿನಾಶ್.
ಅವನು ಮುಂದುವರಿಸುತ್ತಾ "೪೯ ಅಡಿಡಾಸ್ ಸ್ಥಾಪನೆಯಾದ ವರ್ಷ ಮತ್ತು ಅಡಿಡಾಸ್ ನನ್ನ ಜೆರ್ಮನ್ ಟೀಮ್ ನ ಮೊದಲ ಫ್ರೆಂಚೈಸರ್, ೧೯೫೪ ರಲ್ಲಿ ಅಡಿಡಾಸ್ ಹೊರತಂದ ಮೊಳೆಗಳಿರುವ ಶೂ ನಿಂದ ನನ್ನ ಜೆರ್ಮನಿ ಮೊದಲ ಬಾರಿ ಫಿಫಾ ಗೆದ್ದಿತ್ತು. ಅದೂ ಹಂಗೆರಿಯೊಂದಿಗಿನ ವಿಜಯ, ೩ - ೨ ಗೋಲ್ಗಳ ಅಂತರದಲ್ಲಿ, ಅದೂ ಕೊನೆ ಗಳಿಗೆಯಲ್ಲಿ ಸಬ್ಸ್ಟಿಟ್ಯೂಟ್ ಆಗಿ ಆಡುತಿದ್ದ ದಿ ಬಾಸ್, ಹೆಮ್ಲೆಟ್ ಹೊಡೆದ ಗೋಲ್ ನಿಂದ !!" ಎಂದ , ತಾನೇ ಮೆಚ್ ಪ್ರತ್ಯಕ್ಸ್ಯವಾಗಿ ನೋಡಿದಂತೆ.

ಜಾಕೆಟ್ ಬಿಚ್ಚಿ ಸೊಂಟಕ್ಕೆ ಕಟ್ಟಿಕ್ಕೊಂಡ, ಒಳಗೆ ತೊಟ್ಟ ಬಿಳಿಯ ಅಡಿಡಾಸ್ ಜೆರ್ಮನ್ ಜೆರ್ಸಿ, ಶುಬ್ರವಾಗಿ ಕಾಣುತಿತ್ತು.
ನಾನು"ಬಾಯ್ ,ಆಪ್ ಕೆ ಪಾಸ್ ಜೋ ಜೆರ್ಮನ್ ಫೂಟ್ಬಾಲ್ ಕ ಡಾಟಾ ಬೇಸ್ ಹೇ ವೋ ಶಾಯದ್ ಉನ್ಕೆ ಪಾಸ್ ಭಿ ನಹಿ ಹೋಗ ಹಾಟ್ಸ್ ಆಫ್ " ಅಂದೆ.
ಅವನು ತನ್ನ ಜೆರ್ಸಿಯಲ್ಲಿ ದ್ದ ಮೂರು ನಕ್ಷತ್ರಗಳಿಗೆ ಒಮ್ಮೆ ಬೆರಳೋತ್ತುತ್ತ "ಎ ತೀನ್ ಸ್ಟಾರ್ಸ್ ಕಬ್ ೪ ಸ್ಟಾರ್ಸ್  ಬನೆಂಗೆ" ಅಂದ ಹತಾಶೆಯಲ್ಲಿ.

ಅವನನ್ನು ಬಿಟ್ರೆ ಪುನಃ ಜ್ಯಾನೋದಯದ ಒಳಗೆ ಕೂಡುತ್ತಾನೆ ಹೇಳಿ ನಾನು "ಬಾಯ್ ಜೀವನ್ ಎಲ್ಲೋ..?"
"ಯಾವಾಗಿಂದ ಹಿಂದೆ ಹುಡುಗಿ ಸಿಕ್ಕಿದಳೋ, ಆವಾಗಿಂದ ನನ್ನನ್ನು ಹಿಂದಿನ ಸೀಟ್ ನಿಂದ ಹೊರ ದೂಡಿದ್ದಾನೆ, ಸಾಲ!!" ಅಂದ.
ನಾನು ಸುಮ್ಮನಿದ್ದೆ, ಅವನು "ಮೇರೆ ಸಾಥ್ ಜೆರ್ಮನಿ ಹೇ, ಅಡಿಡಾಸ್ ಶೂ ಥಾ, ಜೋಗ್ಗಿಂಗ್ ಕರ್ತೆ ಪಹುಂಚಾ !!" ಅಂದ
"ಅಡಿಡಾಸ್, ಜೆರ್ಮನ್ ಕಾ ಹೇ ಕ್ಯಾ ..?" ಅಂದೆ ನಾನು.
ಅವನು "ಓರ್ ಕ್ಯಾ, ಇಸಿಲಿಯೇ ಮೇ ಅಡಿಡಾಸ್ ಹಿ ಪೆಹಂತಾ ಹೂಂ" ಎನ್ನುತ್ತಾ ಕಾಲಲ್ಲಿ ತೊಟ್ಟ ಹೊಸ ಅಡಿಡಾಸ್ ಟ್ರಾಕ್ ಶೂ ಅನ್ನು ನನಗೆ ತೋರಿಸಿದ.
"ತು ಓರ್ ತೇರ ಜೆರ್ಮನಿ" ಎಂದು ಮುಗುಳ್ನಕ್ಕೆ.
ಅವನು ನಗುತ್ತಾ, "ಮೆಹಂಗಾ ಹೇ, ಲೇಕಿನ್ ಜೆರ್ಮನಿ ಕೆ ಲಿಯೇ ಜಾನ್ ಹಾಸಿರ್ ಹೇ" ಎನ್ನುತ್ತಾ ಶೂಗೆ ಮೆತ್ತಿಕೊಂಡ ಸೆಗಣಿ ತೆಗೆದ.

ಒಪ್ಪಿಗೆ ಇಟ್ಟ ೪೬ ಮಂದಿಯಲ್ಲಿ ೪೪ ಮಂದಿ ತಲುಪಿಯಾಗಿತ್ತು ಪ್ರೀತಿ ಮತ್ತು ಜೀವನ್ ಇನ್ನೂ ಬಂದಿರಲಿಲ್ಲ; ತಿವಾರಿ ಎಲ್ಲರನ್ನು ಬಸ್ ಏರಿ ಕುಳಿತುಕೊಳ್ಳಲು ಹೇಳಿದರು, ಹುಡುಗೀಯರೆಲ್ಲ ಒಬ್ಬೊಬ್ಬರಾಗಿ ಬಸ್ ಹತ್ತಿದರು. ಜೀವನ್ ನ ಅಪಾಚೆ ಹಾರಿ ಬರುವುದು ಕಾಣುತಿತ್ತು. ನಾನು ಕೆಳಗೆ ನಿಂತುಕ್ಕೊಂಡೆ. ಉಳಿದವರು ಒಬ್ಬೊಬ್ಬರಾಗಿ ಬಸ್ ಏರಿದರು. ಪ್ರೀತಿಯನ್ನು ಬಸ್ ನ ಹತ್ತಿರ ಬಿಟ್ಟು ಬೈಕ್ ಪಾರ್ಕಿಂಗ್ ಲೋಟ್ ನಲ್ಲಿ ಇಡಲು ಹೋದ.

ಟೈಟ್ ಟೈಟ್ ಜೀನ್ಸ್ನಲ್ಲಿ ನಲ್ವತೈದು ಕೆಜಿ ಯ ಶರೀರ ಸುಂದರವಾಗೇ ಕಾಣುತಿತ್ತು.ಹಿಂದಿನ ಸಲುಗೆಯಲ್ಲೇ "ಸೂಪರ್ ಕಾಣ್ತಾ ಇದ್ದೀಯ" ಅಂದೆ.
"ಓಯ್, ದೇವದಾಸ, ನಿನ್ ಕಂಮೆಂಟ್ ಹೇಳಲಾ ಅವಳ್ಗೆ..." ಅಂದಳು ಚೊಲ್ಲು ಚೋಲ್ಲಾಗಿ.

ಮೊದಲಿಗೆ ಅವಳು ಬಸ್ಸೇರಿದಳು, ಹಿಂದೆ ನಾನು. ಮುಂದೆ ಹುಡುಗೀರೆಲ್ಲ ಜೋಡಿ ಜೋಡಿಯಾಗಿ ಕುಳಿತಿದ್ದರು, ಹಿಂದೆ ಇಎಲ್ಟಿಪಿ ತಮ್ಮ ಬಾಚ್ ನವರೋಟ್ಟಿಗೆ ಕುಳಿತಿದ್ದರು. ಎಲ್ಲರ ಹಿಂದೆ ಮದುವೆಯಾದ ಐಟಿ ತಲೆಗಳು, ಹ್ಹಿಂದಿನ ಕೊನೆಯ ಸಾಲಿನಲ್ಲಿ ನನ್ನಂತಹ ಅಬ್ಬೇಪಾರಿಗಳು, ಹಿಂದಿನ ಸೀಟ್ನಿಂದ ಅವಿನಾಶ್ ನನ್ನನ್ನು ಕರೆದ.

ನಡುವಲ್ಲಿ ಒಂದು ಸೀಟ್ ನಲ್ಲಿ ತನ್ನ ಬ್ಯಾಗ್ ಅನ್ನು ಕೆರಿಯರ್ ನಲ್ಲಿ ಇಡುತಿದ್ದ ಪ್ರೀತಿಯಲ್ಲಿ "ಏಕ್ಚ್ಯುಸ್" ಎನ್ನುತ್ತಾ ಅವಳನ್ನು ದಾಟಿ ಹಿಂದೆ ಹೋಗಲು ಪ್ರಯತ್ನಿಸಿದೆ.

ಮೇಲೆ ಬ್ಯಾಗ್ ಇಟ್ಟು, ಪ್ರೀತಿ ಎರಡು ಕೈಗಳನ್ನು ಆ ಬದಿ ಈ ಬದಿಗೆ  ಕೊಟ್ಟು ನಿಂತು ಕೊಂಡಳು. ಇಬ್ಬರ ನಡುವೆ ಎರಡೇ ಸೆಂಟಿ ಮೀಟರ್ ದೂರ. ಅವಳು "ಎಲ್ಲಿ ಹಿಂದೆ ಹೋಗ್ತೀಯಾ...? ಇಲ್ಲೇ ಕೂತ್ಕೋ" ಅಂದಳು.
ಮುಜುಗರ ವೆನಿಸಿತು."ಹೇ, ಜೀವನ್ ಬರ್ತಾನೆ, ಅವನ ಜೊತೆಗೆ ಕೂರು" ಅಂದೆ.
ಅವಳು ನನ್ನ ಮುಖವನ್ನು ಕೈಯಲ್ಲಿ ಒತ್ತುತ್ತಾ "ಟೂ, ಇಂಟೆಲಿಜೆಂಟ್, ನಾನು ಈ ಸೀಟ್ ನಲ್ಲಿ ಹೇಳಿದಲ್ಲ ಅಲ್ಲಿ .." ಎನ್ನುತ್ತಾ ಬಲಗಡೆಯ ಸೀಟ್ ನ ಕಡೆಗೆ ತನ್ನ ಕಣ್ಣನ್ನು ತಿರುಗಿಸಿದಳು.

ಆಕೃತಿ ನಮ್ಮಿಬ್ಬರ ಆಟ ನೋಡಲಾರದೆ ಕನ್ನಡಿಯೋಳಗಿಂದ ಹೊರನೋಡುತಿದ್ದಳು. ಪ್ರೀತಿಯ ಸಲುಗೆಗೆ ನನ್ನ ಸಲುಗೆ ಸೇರಿ ಅವಳ ಗಲ್ಲ ಹಿಡಿದು "ಬಾರ್ಬಿ, ಯು ಟೂ ಇಂಟೆಲಿಜೆಂಟ್  ಅಂದೆ." ಬಲಬದಿಯಲ್ಲಿ ಕೂತ ಆಕೃತಿಯ ಕೋಪ ನೆತ್ತಿಗೇರಿತ್ತು, ದೃಷ್ಟಿಹೋರಗಿತ್ತು, ನನ್ನ ಎಡಕೈ ಹಿಡಿದು ಎಳೆದಳು. ನಾನು ಅಲ್ಲೇ ಕುಸಿದೆ. ಅವಳ ಬದಿಯಲ್ಲಿ ಕುಳಿತುಕ್ಕೊಂಡೆ.

ಬೈಕ್ ನಿಲ್ಲಿಸಿ ಜೀವನ್ ಒಳಗೆ ಸೇರಿದ್ದರೂ, ಸಿಗರೆಟ್ ಸೇದಲು ಹೋದ ೬ ಮಂದಿ ಇನ್ನೂ ಬಸ್ ಏರಿರಲಿಲ್ಲ. ತಿವಾರಿಯ ಬಸ್ ನ ಬಾಗಿಲಿಗೆ ಹೋಗಿ ಅವರನ್ನು ಒಳಗೆ ಕರೆದ. ಕೈಯಲ್ಲಿದ್ದ ಫುಫ್ಫ್ ಕೆಳಗೆ ಎಸೆದು ಜೇಬಿನಲ್ಲಿದ್ದ ಮಿಂಟ್ ಬಾಯಿಗೆ ಹಾಕುತ್ತ ಆ ಆರು ಮಂದಿ ಒಳ ಬಂದರು.

ತಿವಾರಿ ನಮ್ಮ ಹಿಂದಿನ ಸೀಟ್ನಲ್ಲಿ ಕುಳಿತುಕ್ಕೊಂಡ, ಪಕ್ಕದಲ್ಲಿ ರಾಕೇಶ್ ಸರ್ ಕುಳಿತಿದ್ದರು.ಬಸ್ ಹತ್ತುತ್ತಾ ಸತೀಶ್ ಮತ್ತು ಕಿರಣ್ ಏನನ್ನೋ ಬಸ್ ನ ಕೆರಿಯರ್ ನಲ್ಲಿ ಇಡುವುದನ್ನು ಗಮನಿಸಿದ ತಿವಾರಿ ಅವರಲ್ಲಿ ಅದೇನು ಎಂದು ಕೇಳಿದ.
ಸತೀಶ್ "ಚಳಿಗೆ ಮದ್ದು, ಮಂಜಿನ ನಡುವೆ ದೇಹಕ್ಕೆ ಇಂಜೆಕ್ಷನ್ !!" ಅಂದ
ತಿವಾರಿ " ಪ್ಲೀಸ್, ಕೀಪ್ ಥಟ್ ಹೀಯರ್ ಓನ್ಲಿ, ವೀ ಆರ್ ಗೋಯಿಂಗ್ ದೇರ್ ಟು ಎಂಜಾಯ್ ದಿ ವಕೆಶನ್, ಗರ್ಲ್ಸ್ ಆರ್ ಹಿಯರ್" ಎಂದು ಆರ್ಡರ್ ಕೊಟ್ಟೆ ಬಿಟ್ಟ.
ಮೇಲಿಟ್ಟ ಎರಡು ರಟ್ಟಿನ ಪೆಟ್ಟಿಗೆಯ ಒಳಗಿದ್ದ ವಿದೇಶಿ ಬ್ರಾಂಡ್ ನ ಮದ್ಯದ ಬಾಟಲ್ ಅನ್ನು ಸತೀಶ್ ಉಪಾಯ ವಿಲ್ಲದೆ ಮೇಲೆ ಆಫೀಸ್ ನಲ್ಲಿ ಇಟ್ಟು ಬರಲು ಬಸ್ ನಿಂದ ಕೆಳಗಿಳಿದ.

ಪುಣೆಯನ್ನು ಬಿಟ್ಟು ಬಸ್ ಹೊರಗಿನ ಹೈ ವೆ ಯಲ್ಲಿ ಹೋಗುತಿತ್ತು. ಬಲಬದಿಯ ಸೀಟ್ ನಲ್ಲಿ ಜೀವನ್ ತೂಗುತಿದ್ದ, ಅವನ ಬಲ ಭುಜದ ಮೇಲೆ ಪ್ರೀತಿ ಒರಗಿ ಮಲಗಿದ್ದಳು. ಎಡಬದಿಯ ಸೀಟ್ನಲ್ಲಿ ಆಕೃತಿ ನನ್ನ ಭುಜದ ಮೇಲೆ ತನ್ನ ತಲೆ ವಾಲಿಸಿದ್ದಳು, ನನಗು ನಿದ್ದೆ ಹತ್ತುತಿತ್ತು ಅವಳ ತಲೆಗೆ ನಾನು ತಲೆ ವಾರಿಸಿಕ್ಕೊಂಡು ಮಲಗಿದೆ. ಕನಸುಗಳು 'ಮ್ಯುಚಲ್ ಇಂಡ್ಕ್ಟೆನ್ಸ್' ಆಗುತಿದ್ದವು. ಕಣ್ಣ ರೆಪ್ಪೆಗಳು ಒಂದಕ್ಕೊಂದು ಅಪ್ಪಿ ಮುದ್ದಾಡುತಿದ್ದವು.

ಬಸ್ ಒಂದು ಡಾಬದ ಬಳಿ ನಿಂತುಕ್ಕೊಂಡಿತು, ತಬ್ಬಿದ್ದ ಕಣ್ಣ ರೆಪ್ಪೆಗಳು ಅಪ್ಪುಗೆ ಬಿಚ್ಚಿಕ್ಕೊಂಡವು, ಹೆಗಲನ್ನು ತಬ್ಬಿ ಮಲಗಿದ್ದ ಅವಳ ಕೆನ್ನೆ ಇನ್ನು ಗಟ್ಟಿಯಾಗಿ ಒತ್ತಿ ನೀಲಿ ಟೀ ಶರ್ಟ್ ಅನ್ನು ಮುದ್ದಿಸುತಿತ್ತು. ಸಿಗಾರ್ ಪಾರ್ಟಿ ಗಳು ಮೊದಲು ಬಸ್ಸಿಂದ ಇಳಿದು ಹೋಗೆ ಸುಟ್ಟಲು ಜಾಗ ಹುಡುಕಿಕೊಂಡರು. ಒಬ್ಬೊಬ್ಬರಾಗಿ ಹುಡುಗರು ಕೆಳಗಿಳಿಯುತಿದ್ದರೆ, ಹುಡುಗಿಯರು ಅಳಸಿಹೋದ ಲಿಪ್ಟಿಕ್ ಮೇಲೆ ಇನ್ನೊಂದು ಕೊಟ್ ಹಚ್ಚಿ ಪಾವ್ ಭಾಜಿ, ವಡಾ ಪಾವ್ ತಿನ್ನಲು ತುಟಿಯನ್ನು ಸಜ್ಜುಗೊಳಿಸುತಿದ್ದರು.

ಭುಜವನ್ನು ನಿದಾನವಾಗಿ ಅಲುಗಿದೆ, ನಿದ್ದೆಯಲ್ಲಿದ್ದ ಆಕೃತಿ ಕೈಯನ್ನು ತನ್ನ ದಿಮ್ಭು ಎಂದು ತಬ್ಬಿ ಕೊಂಡಳು. ಎರಡು ಕೈಯಿಂದ ಸುತ್ತುವರಿಸಿದಳು.ಬಸ್ ಎಲ್ಲ ಖಾಲಿಯಾಗಿತ್ತು, ಜೀವನ್ ನಮ್ಮನ್ನು ನೋಡಿ  ನೋಡದವನಂತೆ ಅವನ ಪಾಡಿಗೆ ಕೆಳಗಿಳಿದನು, ಹಿಂದೆಯೇ ನಿದ್ದೆಯಿಂದ ಎದ್ದು ತಯಾರಾದ ಪ್ರೀತಿ "ವಾಹ್ ಕ್ಯಾ ಪೋಸ್ ಹೇ , ಒಂದು ಫೋಟೋ ವೈಭು" ಎಂದು ಮೊಬೈಲ್ ಅನ್ನು ಮುಂದೆ ಚಾಚಿದಳು.

"ನನಗೆ ಶೇರ್ ಮಾಡುವುದಾದರೆ ಮಾತ್ರ" ಅಂದೇ ನಾನು ತಗ್ಗಿದ ದನಿಯಲ್ಲಿ.
ಅವಳು "ನಿನಗಾಗಿಗೆ, ಮಂಗಾ "ಎಂದಳು. ಅವಳಿಂದ ಮಂಗಾ, ಆಕೃತಿಯಿಂದ ಡಂಬು ಎಂದು ಕರೆಸಿಕೊಳ್ಳುವುದು ನನಗೆ ಹಿತ ವೆನಿಸುತಿತ್ತು.

ನಾನು "ಸರಿ ಗೂಬೆ" ಅಂದು ಭುಜದಲ್ಲಿ ಜಾರಿದ್ದ ಆಕೃತಿಯ ತಲೆ ಮೇಲೆ ನನ್ನ ತಲೆ ವಾಲಿಸಿದೆ. ಪ್ರೀತಿ ಫೋಟೋ ಕ್ಲಿಕ್ಕಿಸಿದಳು.ಫೋಟೋ ನೋಡುತ್ತಾ ಮುಗುಳ್ನಕ್ಕಳು "ನೈಸ್ ಪೈರ್!! ಐ ಫೀಲ್ ಜೆಲಸ್ ಆನ್ ಯು" ಎಂದಳು.
"ಓಯ್ ಗೂಬೆ!!" ಅಂದೇ.
ಅವಳು "ಸೋರಿ ಸೋರಿ"ಎನ್ನುತ್ತಾ ಮುಂದೆ ಓಡಿದಳು.
ನಾನು "ಹೇ ಗೂಬೆ ಪ್ಲೀಸ್ ಡೋಂಟ್ ಶೋ ದಿಸ್ ಟು ಎನಿ ಒನ್" ಅಂದೇ.
ಅವಳು "ಇಲ್ಲ ಮಂಗಾ..." ಎನ್ನುತ್ತಾ ತಿರುಗಿ ನೋಡಿ ಥಂಬ್ಸ್ ಅಪ್ ಮಾಡಿ ಕಣ್ಣು ಮುಚ್ಚಿದಳು, ಕಣ್ಣಲ್ಲಿ ಏನೋ ಹತಾಶೆ ಕಾಣುತಿತ್ತು. ಮತ್ತೆ ಕಣ್ಣು ತೆರೆದು "ಆಲ್ ದಿ ಬೆಸ್ಟ್ ಮಂಗಾ, ಬರಲ್ವಾ ಕೆಳಗೆ" ಅಂದ್ಲು.
"ಬೇಡ ಅನ್ಸುತ್ತೆ, ಇಲ್ಲೇ ಹಾಯಾಗಿದೆ" ಅಂದೇ.
ಅವಳು "ಯು ಕೇರಿ ಆನ್" ಎನ್ನುತ್ತಾ ಬಸ್ಸಿಂದ ಕೆಳಗಿಳಿದಳು.

ಖಾಲಿ ಬಸ್ನಲ್ಲಿ ಭುಜದ ಮೇಲೆ ಒರಗಿರುವ ಖಾಲಿ ಹಣೆಯನ್ನು ನೋಡುತಿದ್ದೆ. ಇಲ್ಲಿವರೆಗೆ ನೋಡದ ಹಣೆ. ಪ್ರತಿದಿನ ಬಿಂದಿ ಇಟ್ಟು, ಕೂದಲು ಮೂಡುವಲ್ಲಿ ಗಂಧ ಹಚ್ಚಿ ಬರುತಿದ್ದ ಹಣೆ. ಇವತ್ತು ಖಾಲಿಯಾಗಿತ್ತು. ಬಿಂದಿಯೇ ಹುಡುಗೀರ ಸೌಂದರ್ಯ ಹೆಚ್ಚಿಸುತ್ತದೆ ಅಂದುಕ್ಕೊಂಡಿದ್ದ ನನಗೆ ಅಚಾನಕ್ಕಾಗಿ, ಬಿಂದಿ ಒಂದು ಓಬ್ಸ್ಟೆಕಲ್ ತಾರಾ ಭಾವನೆ ಮೂಡಲಾರಂಬಿಸಿತು. ಮುತ್ತಿಡಲು ಹೋದಾಗ ಅದು ಬಾರಿಕೆಡ್ ತಾರಾ ನಡುವೆ ಬರುತಿತ್ತು.

ಖಾಲಿ ಹಣೆಯ ಮೇಲೆ ಪ್ರೀತಿ ಉಕ್ಕುತಿತ್ತು, ಏಕಾಂತವು ಜೊತೆಗಿತ್ತು. ಹೊರಗೆ ನೋಡಿದೆ, ಇಳಿದ ಎಲ್ಲರ ಗಮನ ತಮ್ಮ ತಮ್ಮ ಓಡಾಪಾವ್, ಮಿಸಲ್ ಪಾವ್ ಕಡೆಗೆ ಇತ್ತು, ನಾನು ಖಾಲಿ ಹಣೆಯನ್ನು ಮುದ್ದಿಸಲು ಖಾಲಿ ಬಸ್ಸಿನಲ್ಲಿ ಪೂರ್ಣ ಸ್ವಾತಂತ್ರ  ನಾಗಿದ್ದೆ. ಎರಡಿಂಚಿನ ಹೇಲಿಪ್ಯಾಡ್ ಎರಡು ಪಕ್ಕೆಯ ಹೆಲಿಕಾಫ್ಟರ್ ನ ನಿರೀಕ್ಷೆಯಲ್ಲಿದಂತೆ ಬಾಸವಾಗುತಿತ್ತು. ಒಂದೇ ಕ್ಷಣದಲ್ಲಿ ಹೆಲಿಕಾಪ್ಟರ್ ಅನ್ನು ಲ್ಯಾಂಡ್ ಮಾಡಿದೆ.

ಮನದಲ್ಲಿನ ಪ್ರವಾಹ ಅವಳ ಮನಕ್ಕೆ ಸಾಗುತಿತ್ತು.ಮುಂದಿನ ಮೂರು ಕ್ಷಣದ ವರೆಗೆ ಪ್ರವಾಹ ನಿರಂತರವಾಗಿತ್ತು. ಕಣ್ಣು ಮುಚ್ಚಿ ಒಳಗಿನ ಹರಿವನ್ನು ಗಮನಿಸುತಿದ್ದ ಮನಸ್ಸು ಕಣ್ಣು ತೆರೆದಾಗ ಕೆಳಗೆ ಎರಡು ಕಣ್ಣುಗಳು ತೆರೆದಿದ್ದವು. ಅವ್ವು ನನ್ನನ್ನೇ ದಿಟ್ಟಿಸಿ ನೋಡುತಿದ್ದವು, ಅವ್ವೂ ಒಳಗಿನ ಹರಿವಿಗೆ ಮರಳಾಗಿದ್ದವು..

ನಾಲ್ಕು ಕಣ್ಣು ಎಲ್ಲಿ ಉಳಿದ ಎಂಬತ್ತು ದೃಷ್ಟಿಗೆ ಸಿಕ್ಕಿತೋ ಎಂದು ಹೆದರಿದವು ಮರು ಕ್ಷಣ, ಒಲ್ಲದ ಮನಸ್ಸಿಂದ ತುಟಿ ಹಣೆಯಿಂದ ಟೆಕ್ ಓಫ್ಫ್ ಆಯಿತು. ಅವಳು ಮೆಲ್ಲನೆ "ಇಟ್ ವಾಸ್ ಅಮಸಿಂಗ್ ಫೀಲಿಂಗ್" ಅಂದಳು.
"ಯಾ ಇಟ್ ವಾಸ್, ಯು ವಾಂಟ್ ಟು ಹೇವ್ ಸೋಮ್ಥಿಂಗ್ ..?" ಅಂದೆ

ಗಂಡಿನ ಮನಸ್ಸು ಬೇಗ ಹೊರಬರುತ್ತದೆ ಇಂತಹ ಸುಖ ದಿಂದ; ಆದರೆ ಹೆಣ್ಣು ಮನಸ್ಸು ಅದರಲ್ಲೇ ಸುತ್ತುತಿರುತ್ತದೆ.

ಅವಳು "ನೀನು ಬೇಕು" ಅಂದಳು.
ನಾನು ಸಂಪೂರ್ಣವಾಗಿ ಹೊರಬಂದು "ಓಯ್ , ಹಸಿದ ಹೊಟ್ಟೆಗೆ ಏನಾದ್ರೂ ಬೇಕಾ ಎಂದು ಕೇಳಿದ್ದು, ಹಸಿದ ಮನಸ್ಸಿಗೆ ಮತ್ತು ವಯಸ್ಸಿಗೆ ವಿಚಾರಿಸಿದ್ದು ಅಲ್ಲ" ಅಂದೆ.
ಅವಳು "ಇಲ್ಲಿ ಮಿಸಲ್ ಪಾವ್ ಫೇಮಸ್ ಅಂತೆ, ತಿಂದು ನೋಡೋಣ, ಮತ್ತೆ ಅ ಬೈ ಟು ಕಾಫಿ !!" ಎಂದಳು.

ಇಬ್ಬರು ಬಸ್ನಿಂದ ಇಳಿದೆವು, ಕೆಲವರು ತಮ್ಮ ಆರ್ಡರ್ ತೆಗೆದು ಹೊರಗೆ ಹಾಕಿರುವ ಟೇಬಲ್ ನಲ್ಲಿ ಕುಳಿತು ತಿನ್ನುತಿದ್ದರು, ಹೆಚ್ಚಿನವರು ಇನ್ನು ತಮ್ಮ ಸರದಿಗಾಗಿ ಕಾಯುತಿದ್ದರು. ಆಕೃತಿ ಒಂದು ಟೇಬಲ್ ನಲ್ಲಿ ಕುಳಿತಳು, ನಾನು ಸರದಿಯಲ್ಲಿ ನಿಂತೇ.

ಲವಲ್ಲಿ ಬಿದ್ದಾಗ ಹುಡುಗ ಹುಡುಗಿಗಾಗಿ ವೈಟರೂ ಆಗ್ಬೇಕು, ಡ್ರೈವರೂ ಆಗಬೇಕು!!

ಹತ್ತುನಿಮಿಶದಲ್ಲಿ ನನ್ನ ಆರ್ಡರ್ ತರಲು ಹೆಚ್ಚಿನವರು ಎರಡನೇ ಪ್ಲೇಟ್ ಮೆಲ್ಲುತಿದ್ದರು, ಎರಡು ಮಿಸಲ್ ಪಾವ್, ಒಂದು ಓಡಾ ಪಾವ್ ನೊಂದಿಗೆ ಹೊಟ್ಟೆ ತುಂಬಿಸಿ ಕಾಫಿ ಮಾಡುವನಲ್ಲಿ ಹೋಗಿ ಕಾಫಿ ಕೇಳಿಕ್ಕೊಂಡೆ, ಅವನು "ಸಾಬ್ ಛಾಯ ಹಿ ಮಿಲೇಗಾ" ಅಂದ.
ಆಕೃತಿಗೆ ಕಾಫಿ ಗಿಂತ ಟೀ ನೇ ಪ್ರಿಯ, ಅವಳು ನನಗಾಗಿಯೇ ಅದನ್ನು ಕಾಫಿ ಗೆ ಬದಲಾಯಿಸಿದ್ದಳು, ನಾನು ಅವನಿಗೆ ಒಂದು ಗ್ಲಾಸ್ ಕೊಡುವಂತೆ ಹೇಳಿದೆನು.

ಒಂದೂವರೆ ಇಂಚಿನ ಗಾಜಿನ ಗ್ಲಾಸ್, ಅದರಲ್ಲಿ ಒನ್ ಬೈ ಟು ಮಾಡಿದರೆ ಅರ್ದ ಗುಟುಕು ಗಂಟಲಲ್ಲಿ ಇಳಿಬಹುದು, ಗ್ಲಾಸ್ ನ ಸೈಜ್ ನೋಡಿ ಅವನಲ್ಲಿ ಇನ್ನೊಂದು ಗ್ಲಾಸ್ ಟೀ ಗೆ ಆರ್ಡರ್ ಮಾಡಿ ಇನ್ನೊಂದು ಮೂರು ರುಪಾಯಿ ಕೊಟ್ಟೆ.

ಏಲಕ್ಕಿ, ಶುಂಟಿ, ಪರಿಮಳ ಮೂಗಿಗೆ ಬಡಿಯುತ್ತಿತ್ತು, ಹನಿಹನಿಯಾಗಿ ಒಳಗೆ ಎಳೆದು ಕೊಳ್ಳುತಿದ್ದೆ, ಕಣ್ಣುಗಳು ಎದುರು ಕುಳಿತವ್ವುಗಳಲ್ಲಿ ಕಳೆದು ಹೋಗಿದ್ದವು. ಅವಳು ಒಂದು ಕ್ಷಣ ಕ್ಕೆ ಮೇಲೆ ಎಳೆಯುವುದನ್ನು ನಿಲ್ಲಿಸಿ, ಗ್ಲಾಸನ್ನು ಎಕ್ಸ್ಚೆಂಜ್ ಮಾಡಲು ಹೇಳಿದಳು, ಬದಲಾಯಿಸಿಕ್ಕೊಂಡು ಮತ್ತೆ ಸಿಪ್ ಮೇಲೆಳೆದೆವು, ಈ ಸಿಪ್ಗಳು ಇನ್ನೂ ಸಿಹಿಯಾಗಿದ್ದವು.

ತಿವಾರಿ "ಇಟ್ಸ್ ಅಲ್ರೆಡಿ ೭:೩೦, ಹುರಿ ಅಪ್ !!" ಎನ್ನುತ್ತಾ ಬಸ್ ಹತ್ತಿದ.
ಒಬ್ಬೊಬ್ಬರಾಗಿ ಕೈಯಲ್ಲಿನ ಪ್ಲೇಟ್ ಗ್ಲಾಸನ್ನು ಸಿಂಕಿಗೆ ಹಾಕಿ ಅವರನ್ನು ಹಿಂಬಾಲಿಸಿದರು. ನಾನು ಅವಳಲ್ಲಿ ಗ್ಲಾಸ್ ಕೇಳಿದೆ.

ಡ್ರೈವರ್ ವೈಟರ್ ಆಗಿದ್ದೆ, ಕ್ಲೀನರ್ ಆದರೆ ತಪ್ಪೇನು ..??

ಅವಳು "ನೋ, ನೀನು ಎಂಜಲು ತೆಗೆಯ ಬಾರದು, ಗಂಡನ ಎಂಜಲು, ಹೆಣ್ಣು ತೇಗಿ ಬೇಕು, ಕೊಡೊ ನಿನ್ ಗ್ಲಾಸ್" ಎಂದು ನನ್ನ ಕೈಯಿಂದ ಗ್ಲಾಸ್ ಕಸಿದುಕೊಂಡಳು.

ಪ್ಲೇಟ್, ಗ್ಲಾಸನ್ನು ಸಿಂಕ್ ನಲ್ಲಿ ಹಾಕಿ ಕೈತೊಳೆದು ಬರಲು ನಾನು ಭುವಿ ಬಿಟ್ಟು ಒಂದು ಫೂಟ್ ಮೇಲೆ ಹಾರುತಿದ್ದೆ.

 

 *************

 

ಅವಳು ಮನೆಯಿಂದ ಬಂದ ಕರೆಗೆ ಉತ್ತರಿಸುತಿದ್ದಳು. ಮನೆಯವರಿಗೆ ಅವಳು ಮಹಾಬಲೇಶ್ವರ್ ಪಯಣದ ಬಗ್ಗೆ ಸುಳಿವು ಕೊಟ್ಟಿಲ್ಲ ಎಂಬುದು ಅವಳು ಮಾತನಾಡುವ ವರಸೆಯಿಂದ ತಿಳಿಯುತ್ತಿತ್ತು, ಅವಳು ಅವರಿಗೆ ತಾನು ಹಾಸ್ಟೆಲ್ ನಲ್ಲಿ ಇರುವಂತೆ ಉತ್ತರಿಸುತಿದ್ದಳು.

ಕಾಲ್ ಕಟ್ ಮಾಡಿದ ಮೇಲೆ ನಾನು ಅವಳಲ್ಲಿ "ಮನೆಯಿಂದಲಾ...?" ಅಂದೆ.
ಅವಳು "ಇಲ್ಲ, ಯು ಎಸ್ ನಿಂದ ಸುನಿಲ್" ಅಂದಳು.
ನಾನು "ಸಾಕಮ್ಮಾ, ನಾನು ನಿನ್ ತರಹ ಪೋಸ್ಸೇಸ್ಸಿವ್ ಪಾರ್ಟಿ ಅಲ್ಲಾ, ಏನಂತೆ ಮನೆಯಲ್ಲಿ" ಎಂದು ಮಾತು ಮುಂದುವರಿಸಿದೆ.
ಅವಳು "ಏನಿಲ್ಲ, ಮುದ್ದಿನ ಮಗಳ ನೆನಪಯ್ತಂತೆ ತಂದೆಗೆ, ಅದಕ್ಕೆ ಬೆಡಿಂದಲೇ ಕರೆ ಮಾಡಿದ್ರು...!"
"ಏನಪ್ಪಾ ಅಂತ ಒನ್ಸ್ ಇನ್ ಸುಡನ್, ಮಗಳ ನೆನಪಾದದ್ದು ಮಾನವನಿಗೆ ...? ಮಗಳ ಮಾಡುವೆ ಕನಸು ಬಿತ್ತಂತೆಯಾ...?" ಎಂದು ಕೇಳಿದೆ.

"ಎಸ್, ಕನಸು ಬಿತ್ತಂತೆ, ಜರಿ ಸೀರೆಯಲ್ಲಿ, ಕೈಯಲ್ಲಿ ಗುಲಾಬಿ ಗೊಂಡೆ ಹಿಡಿದು ಅವರ ಕಾಲ್ಗೆ ಹಣೆ ಒತ್ತಿ ಅವರನ್ನು ಬಿಟ್ಟು ಹೋದಂತೆ ಕನಸು ಬಿತ್ತಂತೆ, ಅದು ಬಿಡು ನಿಂಗೆ ಹೇಗೆ ಗೊತ್ತಾಯ್ತು..?"

"ಮತ್ತೆ ಏನಿರುತ್ತೆ ಹೆತ್ತರಿಗೆ ಕನಸಿನಬಾಗಿಲು ತೆಗೆಯಲು ಕಾರಣ...? ಮೊದಲು ಸಂಪಾದನೆ, ನಂತರ ಮಡದಿ ಮಕ್ಕಳು, ನಂತರ ಮಕ್ಕಳ ವಿದ್ಯಾಭ್ಯಾಸ, ಮುಂದೆ ಮಕ್ಕಳ ಉದ್ಯೋಗ , ಮುಂದೆ ಅವರ ಮದುವೆ, ಮಮ್ಮಕ್ಕಳು... ಹೀಗೆ ನಡೆಯುತ್ತೆ ಕನಸಿನ ಸರಣಿ" ಅಂದೆ.

ಅವಳು ಮುಗುಳ್ನಕ್ಕಳು" ಯಾ, ಹೌದು, ಅವರು ಹೇಳುತಿದ್ದರು ಮುಂಜಾನೆ ಬಿದ್ದ ಕನಸು ಆದಷ್ಟು ಬೇಗ ನೆರವೆರುತ್ತೆ ಅಂತ, ಅದಕ್ಕೆ ಅವರು ಖುಷಿ ಪಡುತಿದ್ದರು, ಮರು ಕ್ಷಣ ನೀನು ಇಷ್ಟು ಬೇಗ ನಮ್ಮನ್ನು ಬಿಟ್ಟು ಹೋಗ್ತೀಯ, ಎನ್ನುತ್ತಾ ವ್ಯಾಕುಲ ರಾದರು" ಎನ್ನುತ್ತಾ ಆಕೃತಿಯ ಕಂಟವು ತುಂಬಿ ಬಂತು.

"ಹೆಣ್ಣಿಗೆ ಅಪ್ಪ ಅಮ್ಮನಗಿಂತ ಹತ್ತಿರ ವಾಗಿರ್ತಾರೆ ಮತ್ತು ಗಂಡಿಗೆ ಅಮ್ಮ ಅಪ್ಪನ ಗಿಂತ ಹೆಚ್ಚು ಪ್ರಿಯಳಾಗಿರ್ತಾಳೆ. ಹೆಣ್ಣಿಗೆ ಅಪ್ಪ ಮೊದಲ ಬಾಯ್ ಫ್ರೆಂಡ್, ಮೊದಲ ಹೀರೋ ಎಲ್ಲಾನೂ, ಆದೇ ಗಂಡಿಗೆ ಅಮ್ಮ ಕೊನೆವರೆಗೂ ಬರಿಯ ಅಮ್ಮ ಆಗಿರ್ತಾರೆ, ಅವರ ಪಾಲಿಗೆ ಗರ್ಲ್ ಫ್ರೆಂಡ್, ಹೆರೊಯಿನ್ ಬೇರೆ ಯಾರೋ ಆಗಿರ್ತಾರೆ!!  "

ಅವಳ ತಲೆಯನ್ನು ಒರೆಸುತ್ತಾ, ಅವಳ ಮನಸನ್ನು ಬೇರೆಡೆಗೆ ಎಳೆಯಲು ಪ್ರಯತ್ನಿಸಿದೆ "ಹೇ, ರಾಜ ನಿನ್ನ ರಿಂಗ್ ಟೋನ್ ಸೂಪರ್ ಇದೆ, ಒಮ್ಮೆ ಹಾಡು ಕೇಳಿಸು" ಅಂದೆ.
ಅವಳು "ಸೂಪರ್ ಇದೆ, ನೀನು ಕೇಳಲೇ ಬೇಕು, ನಿಂಗೆ ತುಂಬಾ ಹಿಡಿಸುತ್ತೆ, ಸೈಲೆಂಟ್ ಸಾಂಗ್" ಎನ್ನುತ್ತಾ ಮೊಬೈಲ್ ನಲ್ಲಿ ಆ ಹಾಡನ್ನು ಹುಡುಕಿ, ಪ್ಲೇ ಮಾಡಿದಳು.

ಹಾಡು ಕೇಳುವಾಗ, ಅದನ್ನು ಆಸ್ವಾದಿಸುವಾಗ ಏಕಾಂತ ಬೇಕು, ಅವಳು ಹತ್ತಿರ ಇದ್ದರೂ, ಶುರುವಾದ ಸಾಲಿಗೆ ಅರ್ಥ ತಿಳಿಯದಿದ್ದರೂ, ಅಲ್ಲಿಂದ ಬರುತಿದ್ದ ಸ್ಲೋ ಮ್ಯುಸಿಕ್ ನೊಳಗೆ ಸೇರಿಹೋದೆ. ಹಿಂದಿನ ಗದ್ದಲಗಳು ಸರಿಯಾಗಿ ಕೇಳಲು ಬಿಡುತ್ತಿರಲಿಲ್ಲ. ಇವಳು ಹತ್ತಿರ ವಾದಾಗಿಂದ ಯಾವಾಗಲು ಜೋತೆಯಲ್ಲಿರುತಿದ್ದ ಯಿಯರ್ ಫೋನ್ ಅನ್ನು ಮರೆತಿದ್ದೆ. ಮನಸ್ಸಾದಾಗ ಲೌಡ್ ಸ್ಪೀಕರ್ನಲ್ಲಿ 'ಒರು ಮಾಲೈ' ಹಾಕಿ ಕುಣಿಯುತಿದ್ದೆ. ಇವತ್ತು ಬೀಟಿಲ್ಲದ ಆ ಮೌನ ಹಾಡನ್ನು ಅನುಭವಿಸಲು ಯಿಯರ್ ಫೋನ್ ನ ಕೊರತೆ ಕಾಣುತಿತ್ತು.

ನಾನು ಅವಳಲ್ಲಿ "ಹೇ ಯಿಯರ್ ಫೋನ್ ಇದ್ರೆ ಕೊಡೆ, ಐ ವಾಂಟ್ ಟು ಲಿಸ್ತೆನ್ ಇಟ್ ಪ್ರೋಪೆರ್ಲಿ, ಲವ್ದ್ ಇಟ್" ಅಂದೆ.
ಅವಳು "ನಂಗೆ ಗೊತ್ತಿತ್ತು, ನಿಂಗೆ ಇದು ಇಷ್ಟ ಆಗುತ್ತೆ ಅಂತ, ಲಿರಿಕ್ಸ್ ಅರ್ಥ ತಿಳ್ದ್ರೆ ನೀನು ಇನ್ನೂ ಇಷ್ಟ ಪಡ್ತೀಯ, ಟ್ರಾನ್ಸ್ಲೆಟ್ ಮಾಡಲಾ ...?" ಅಂದಳು.
ಹಾಡಿನ ಸಂಗೀತದಲ್ಲಿ ಮುಳುಗಿದ್ದ ನಾನು "ನೋಡ್ ಒಮ್ಮೆ ಮನಸಲ್ಲಿ ಕುಳಿತುಕೊಳ್ಳಲಿ, ನಂತರ ವರ್ಡಿಂಗ್ಸ್, ನಂತರ ಮೀನಿಂಗ್ !! ಐ ನೀಡ ಅ ಯಿಯರ್ ಫೋನ್ " ಅಂದೆ.
ಅವಳು "ಮ್ಯೂಸಿಕ್ ಅನ್ನು ಇಷ್ಟು ಇಷ್ಟ ಪಡುವವನೇ ನಂಗೆ ಬೇಕಾದವನು!" ಅಂದದ್ದು ಹಿನ್ನಲೆಯಲ್ಲಿ ಕೇಳಿಸುತಿತ್ತು.

ಒಮ್ಮೆ ಹಾಡು ಮುಗಿಯುತಿದ್ದಂತೆ, ಪೋಸ್ ಮಾಡಿ ನನ್ನ ಮೊಬೈಲ್ ಗೆ ಕಳುಹಿಸಲು ಬ್ಲೂ ತೂಥ್ ಆನ್ ಮಾಡಿದೆ.ಹಾಡನ್ನು ನನ್ನ ಮೊಬೈಲ್ ಗೆ ಟ್ರಾನ್ಸ್ಫರ್ ಮಾಡಿದೆ. ನಡುವಲ್ಲಿ ಪಕ್ಕದ ಸೀಟ್ನಲ್ಲಿ ಪ್ರೀತಿ ಕಣ್ಣಿಗೆ ಬಿದ್ದಳು. ಈಚೆಗೆ ಅವಳಿಗೂ ಏಕಾಂತ ಪ್ರಿಯವಾಗಿತ್ತು, ಅವಳು ಆಫೀಸ್ ನಲ್ಲಿ ಒಂಬತ್ತೂ ಗಂಟೆ ಕಿವಿಗೆ ಯಿಯರ್ ಫೋನ್ ಹಾಕಿ ಕಳೆದು ಹೋಗುತಿದ್ದಳು. ಅವಳಲ್ಲಿ "ಗೂಬೆ, ಯಿಯರ್ ಫೋನ್ ಕೊಡೆ..." ಅಂದೆ.
ಅವಳು "ಒಂದು ನಿಮಿಷ " ಅನ್ನುತ್ತ ಮೇಲಿನ ಬ್ಯಾಗ್ ನಿಂದ ಯಿಯರ್ ಫೋನ್ ತೆಗೆದು ಕೊಡಲು ತನ್ನ ಸೇರ್ವೆಂಟ್ ಜೀವನ್ ನನ್ನು ಸೀಟ್ ನಿಂದ ಎಬ್ಬಿಸಿದಳು.
ನನ್ನಲ್ಲಿ ತಿರುಗಿ "ಬ್ಲೂ ಟೂಥ್ ಆನ್ ಮಾಡೋ, ಡಾವೆನ್ಸಿಯ ಪೋರ್ಟ್ರೈಟ್ ಕಳುಹಿಸ್ತೇನೆ" ಅಂದಳು.
"ಆನ್ ಇದೆ, 'ಒರುಮಾಲೈ' ಡಿವೈಸ್ ನೆಮ್ "ಅಂದೆ.

ಅವಳು "ಒಂದು ಅನಿವಾಸಿ ಕನ್ನಡಿಗನ ಕೊಲೆ ಆಯಿತು, ಕನ್ನಡ ಪ್ರೇಮಿ ಭಾಶಾಂತರಿ ಯಾದ!!" ಎನ್ನುತ್ತಾ ನಕ್ಕಳು. ಬದಿಯಲ್ಲಿದ್ದ ಆಕೃತಿಗೂ ಅವಳ ಮಾತಿನ ಅರ್ಥ ತಿಳಿಯಿತು, ಅವಳು ತಿರುಗಿ ಪ್ರೀತಿಗೆ ಸ್ಮೈಲ್ ಕೊಟ್ಟಳು.

ಅವಳ ಮೊಬೈಲ್ ನಿಂದ ನನ್ನದಕ್ಕೆ ಫೋಟೋ ಪಾಸ್ ಆಗುತಿತ್ತು, ಗೆಳತಿಯ ಚೀಲದಲ್ಲಿ ಅನ್ವೇಷಿಸಿ ಜೀವನ್ ಯಿಯರ್ ಫೋನ್ ಹೊರ ತೆಗೆದು ನನಗೆ ಕೊಟ್ಟು ಸೀಟ್ ನಲ್ಲಿ ಕುಳಿತುಕ್ಕೊಂಡ.

ರೆಸೀವ್ದ್ ಫೈಲ್ ನಲ್ಲಿದ್ದ ಹಾಡನ್ನು ನನ್ನ ಪ್ಲೇ ಲಿಸ್ಟ್ ಗೆ ಏಡ್ ಮಾಡುತ್ತಾ, ಯಿಯರ್ ಫೋನ್ ಕಿವಿಗೆ ಸಿಕ್ಕಿಸಿದೆ, ಮೆಲ್ಲನೆ ಮ್ಯುಸಿಕ್ ಶುರುವಾಯಿತು, ಶ್ರೇಯಾ ಘೋಶಾಲ್ ಹಾಡಲು ಶುರುಮಾಡಿದಳು.
'ಮುನ್ಬೆ  ವಾ, ಏನ್ ಅನ್ಬೇ ವಾ  ...'

ರಿಸೀವ್ದ್ ಫೈಲ್ ನಲ್ಲಿ ಅವಳು ಅಪ್ಪಿ ನನ್ನ ಹೆಗಲ ಮೇಲೆ ಮಲಗಿರುವ ಚಿತ್ರ ನನ್ನ ಕಣ್ಣ ಮುಂದೆ ಇತ್ತು,  ಎಡ ಕೈಯಿದ ಪಕ್ಕಕ್ಕೆ ಕುಳಿತಿದ್ದ ಆಕೃತಿಗೆ ಕೈಯಲ್ಲಿದ್ದ ಫೋಟೋ ನೋಡಲು ದೃಷ್ಟಿ ಫೋಟೋ ಬಿಟ್ಟು ಹೋಗದಂತೆ, ಕೈಯಿಂದಲೇ ಸಜ್ನೆ ಮಾಡಿದೆ. ನಾಲ್ಕು ಕಣ್ಣುಗಳು ಫೋಟೋ ನೋಡುತ್ತಿತ್ತು, ನಾನು ಶ್ರೇಯಾಳ ಕಂಟದಲ್ಲಿ ಮುಳುಗಿದ್ದೆ, ಅವಳು ಮನಸಲ್ಲೇ 'ಮುನ್ಬೆ  ವಾ, ಏನ್ ಅನ್ಬೇ ವಾ  ... ' ಹಾಡುತಿದ್ದಳು.

ಮರು ಕ್ಷಣಕ್ಕೆ ಕಿವಿ ಮೌನವಾಯಿತು, ಶಫಲ್ ಮಾಡ್ ನಲ್ಲಿದ್ದ ಮ್ಯೂಸಿಕ್ ಪ್ಲೇಯರ್, ಡ್ಯಾಡಿ  ಯಾಂಕಿ ಯ ಯಾವುದೋ ರೇಪ್ ಗೆ ತಿರುಗಿತು. ಮನಸ್ಸು ಪುನಃ ಬಸ್ ನೊಳಗೆ ತಲುಪಿತು. ಫೋಟೋದಿಂದ ಹೊರಬಂದೆ.
ಅವಳು "ಅದನ್ನು ಸೆಂಡ್ ಮಾಡೋ ಅಂದ್ಲು"

ನಾನು ಅದನ್ನು ಅವಳಿಗೆ ಕಳುಹಿಸಿ ಅದನ್ನು ಮೊಬೈಲ್ ನ ವಾಲ್ ಪೇಪರ್ ಮಾಡಿಸಿಕ್ಕೊಂಡೆ, ಮತ್ತೆ ಪುನಃ ಪ್ಲೆಯ್ ಲಿಸ್ಟ್ ಗೆ ಹೋಗಿ ಹಾಡನ್ನು ಮತ್ತೆ ಹಾಕಿ, ರಿಪೀಟ್ ಸಿಂಗಲ್ ಟ್ರಾಕ್ ಮಾಡಿದೆ.

ಸಂಪೂರ್ಣವಾಗಿ ಹಾಡಲ್ಲಿ ಮುಳುಗಿದ್ದೆ, ಬಸ್ ನಲ್ಲಿ ನಡೆಯುತಿದ್ದ ಯಾವುದೇ ವಿದ್ಯಮಾನ ನನ್ನ ಗಮನಕ್ಕೆ ಬರುತ್ತಿರಲಿಲ್ಲ. ಆಕೃತಿ ಯ ಬಲಕೈ ನನ್ನ ಬಲಕೈ ಜೋಡಿಸಿದ್ದವು, ಎಡಕೈ ಗಳೆರಡರಲ್ಲಿ ಜೋಡಿ ಜೀವಗಳು ಒಂದನ್ನೊಂದು ಮುದ್ದಿಸುತ್ತ ಮಲಗಿದ್ದವು, ನಾಲ್ಕು ದೃಷ್ಟಿ ಆ ಪೋರ್ಟ್ರೈಟ್ ನೊಳಗೆ ಸೇರಿದ್ದವು.

 
 


 
 
ಮುಂದಿನ ಸಿಪ್