ಸಿಪ್ - ೩೫

 

ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ....
 

ಹಿಂದಿನ ಸಿಪ್ 



ಟ್ರೈನ್ ಪ್ಲಾಟ್ಫಾರ್ಮ್ ತಲುಪುತಿದ್ದಂತೆ, ಅವರ ಮನೆಯ ಸಣ್ಣ ತಂಡ ನಮ್ಮ ಸ್ವಾಗತಕ್ಕೆ ಕಾದಿತ್ತು. ಆಕೃತಿಯ ತಂದೆ ಗೋಪಾಲನ್, ಚೆನ್ನೈನ ಒಂದು ಪ್ರತಿಷ್ಟಿತ ಮಳಿಗೆಯ ಮಾಲಕರಾಗಿದ್ದರು, ಮೂವರು ಅಣ್ಣ ತಮ್ಮಂದಿರ ಕೂಡು ಕುಟುಂಬ.

ಅಪ್ಪಟ ರೇಷ್ಮೆಯ ಜರಿ ಪಟ್ಟೆಯ ಧೋತಿ ತೊಟ್ಟ ನಿಲುವು, ಕಿವಿಯ ಬುಡದಲ್ಲಿ ಬಣ್ಣ ಕಳೆದುಕೊಳ್ಳುತಿರುವ ಕೂದಲು ಜಾರಿರುವ ಐವತ್ತೈದು ವರ್ಷಗಳಿಗೆ ಸಾಕ್ಷಿಯಂತಿತ್ತು. ಅವಳು ತನ್ನ ಕ್ಯಾರಿಬ್ಯಾಗ್ ಮತ್ತು ಕೈಯಲ್ಲೊಂದು ಸಣ್ಣ ಬ್ಯಾಗ್ ಹಿಡಿದು ಕೆಳಗಿಳಿದಳು. ೨೦ ಕೆ.ಜಿ ಭಾರದ ಟ್ರೋಲಿ ಎಳೆಯುತ್ತ ನಾನು ಅವಳ ಹಿಂದೆ ಇಳಿದೆ.

 ಪ್ಲಾಟ್ ಫಾರಂ ನಲ್ಲೇ ಅವಳು ಅವರ ಕಾಲನ್ನು ಚುಂಬಿಸಿ ಆಶೀರ್ವಾದ ಪಡಕ್ಕೊಂಡಳು. ತಂದೆ ತನ್ನ ಎತ್ತರಕ್ಕೆ ಬೆಳೆದ ಮಗಳನ್ನು ಆಲಂಗಿಸಿ ಆಶಿರ್ವದಿಸಿದನು. ನಂತರ ಅವರಲ್ಲಿ "ಅಮ್ಮ,ದೊಡ್ಡಪ್ಪ, ದೊಡಮ್ಮ, ಚಿಕ್ಕಪ್ಪ, ಚಿಕಮ್ಮ.. ಎಲ್ಲ ಎಲ್ಲಿ...?" ಎಂದು ಕೇಳಿದಳು. ಮನೆಯಲ್ಲಿನ ಅನ್ಯೋನ್ಯತೆ ಅವಳ ಮಾತಲ್ಲಿ ವ್ಯಕ್ತವಾಗುತ್ತಿತ್ತು.

ತಂದೆ "ಎಲ್ಲರು ಆರಾಮಾಗಿ ಇದ್ದಾರೆ, ನೀನು ಹೇಗಿದ್ದೀಯ ಮಗಳೇ.. ಸೊರಗಿ ಹೋಗಿದ್ದಿ ನೋಡು" ಎನ್ನುತ್ತಾ ಅವಳ ತಲೆಯ ಮೇಲಿನಿಂದ ತನ್ನ ಎರಡು ಕೈಯನ್ನು ತಿರುವುತ್ತ ನಿಟಿಕೆ ತೆಗೆದರು.
"ಇಲ್ಲಪ್ಪ.. ಎರಡು ವರ್ಷದಲ್ಲಿ ನಾಲ್ಕು ಕೆ.ಜಿ ಬೆಳ್ದಿದ್ದೇನೆ..." ಎಂದು ಅವರನ್ನು ಸಮಧಾನಿಸಿದರು.
ಅವರ ಜೊತೆಯಲ್ಲಿದ್ದ ಹತ್ತರ ಸಮೀಪದ ಹುಡುಗಿ, ಮತ್ತು ಹದಿನೈದರ ಹುಡುಗ "ಅಕ್ಕಾ ಹೇಗಿದ್ದೀಯ... ತುಂಬಾ ಮಿಸ್ ಮಾಡ್ಕೊಂದ್ವಿ.."ಎಂದರು.
ಅವಳು "ಐ ಟೂ .." ಎನ್ನುತ್ತಾ ಆ ಹುಡುಗಿಯ ತಲೆ ಸವರಿದಳು.

ಗಾಲಿಗಳಿರುವ ಟ್ರೋಲಿಯನ್ನು ಆದರ್ಶ್ ನನ್ನ ಕೈಯಿಂದ ಎಳೆದುಕ್ಕೊಂಡನು, ಅಕ್ಕನ ಭಾರವನ್ನು ಎಳೆದು ಆಡುವುದರಲ್ಲಿ ಖುಷಿ ಪಡುತಿದ್ದನು. ಆಕೃತಿ ತಂಗಿ ಪ್ರಕೃತಿ ಯೊಂದಿಗೆ ಏನೇನೋ ತಮಿಳಿನಲ್ಲಿ ಮಾತಾಡುತಿದ್ದಳು. ಪ್ರಕೃತಿ ಮನೆಯಲ್ಲಿ ತಯಾರಾಗುತಿದ್ದ ಭಕ್ಷ್ಯಗಳ ಕುರಿತು ವಿವರಣೆ ನೀಡುತಿದ್ದಳು.

ಗೋಪಾಲನ್ ನಮ್ಮನ್ನು ಎಂಟ್ರನ್ಸ್ ಗೆ ಬರುವಂತೆ ಹೇಳಿ ಮುಂದೆ ಹೋಗುತಿದ್ದರು. ಆದರ್ಶ್ ನನ್ನಲ್ಲಿ "ವೈಭವ್  ರೈಟ್" ಎಂದ.
"ಎಸ್ , ಹೌ ಡು ಯು ಕ್ನೌ ಅಬೌಟ್ ಮಿ ...?"ಅಂದೆ.
"ಅಕ್ಕ ನಿನ್ ಬಗ್ಗೆ ಹೇಳಿದ್ದಳು ಮೊನ್ನೆ ಬಂದಾಗ, ಏನೂ ಮಾತಾಡ್ಲಿ ಅದರಲ್ಲಿ ನೀನಿರ್ತಿದ್ದಿಯಾ ..." ಎಂದು ಮುಗುಳ್ನಕ್ಕ.

ವಯಸ್ಸಿಗೆ ಬಂದ ಹುಡುಗನಿಗೆ ಅವಳ ಮಾತು ಮತ್ತು ಅದರಲ್ಲಿ ಅಡಗಿದ ನನ್ನ ಪ್ರಸ್ತಾಪದ ಮಹತ್ವ ತಿಳಿದಿತ್ತು ಅನಿಸುತಿತ್ತು ಅವನ ಮಾತಿನಲ್ಲಿ.  ಅವನಿಗೆ ನಾನು ಮುಗುಳ ನಗೆಯ ಉತ್ತರ ಕೊಟ್ಟೆ.
ಅವನು "ನೀವು ಮಂಗಳೂರಿನಿಂದ ಅಲ್ಲಾ ...? ಹೇಗೆ ಮಂಗಳೂರು..?"
ಹುಡುಗನಿಗೆ ನನ್ನ ಎಲ್ಲ ವಿಚಾರ ಗೊತ್ತಿದೆ ಎನ್ನುತ್ತಾ "ಹೀಗೆ ಇದೆ ಚೆನ್ನೈನಂತೆ, ಇಷ್ಟೇ ಶೆಖೆ ಇರಬಹುದು, ಇದೆ ರೀತಿಯ ಕಡಲ ಹವಾಮಾನ" ಎಂದೇ.
ಅವನು "ನಿಮಗೆ ಕಡಲು ಇಷ್ಟವೇ...?" ಅಂದ.
ನಾನು "ಹೌದು, ಏಕಾಂತ ಬೇಕೆಂದಾಗ ಹೋಗಿ ಒಂಟಿ ತೀರದಲ್ಲಿ ಕಳೆಯುವುದು ನನ್ನ ಫೆವರಿಟ್ ಪಸ್ಟ್ ಟೈಮ್ ಅಂದೆ, ನಿಂಗೆ" ಎಂದು ಪ್ರಶ್ನೆ ಇಟ್ಟೆ.
ಅವನು "ನಂಗೂ, ಅಕ್ಕನಿಗೂ, ಪ್ರಕೃತಿಗೂ .." ಎನ್ನುತ್ತಾ ದನಿ ತಗ್ಗಿಸಿದ.
"ಏನಾಯ್ತು.. ?"
"ಆದ್ರೆ ಈಚೆಗೆ ಹೋಗಲು ಬಿಡುವುದಿಲ್ಲ ಮನೆಯಲ್ಲಿ... " ಎಂದ ನಿರಾಶೆಯಲ್ಲಿ.
"ಸ್ಟ್ರಿಕ್ಟ್ ಫ್ಯಾಮಿಲಿ ಅನ್ಸುತ್ತೆ" ಅಂದೆ.
ಅದಕ್ಕವನು "ಚೂರು ಹಾಗೆಯೇ, ಮನೆಯವರೊಂದಿಗೆ ಯಾವ ಮಸ್ತಿ ಬೇಕಾದರೂ ಮಾಡ ಬಹುದು, ಆದರೆ ಗೆಳೆಯರು, ತಿರುಗಾಟ ಎಲ್ಲ ಅಷ್ಟಕ್ಕಷ್ಟೇ" ಅಂದ.
"ಮಕ್ಕಳ ಬಗ್ಗೆ ಮನೆಯವರಿಗೆ ಕಾಳಜಿ ಅಷ್ಟೇ.." ಎಂದು ಅವನನ್ನು ಸಮಾಧಾನಿಸಿದೆ.
ಅವನು ನಕ್ಕ "ಒಮ್ಮೆ ಟುವೆಲ್ತ್ ಮುಗ್ದ್ರೆ ಸಾಕು ನಂತರ ಇಂಜಿನಿಯರಿಂಗ್ ಎಂದು ಮನೆಬಿಟ್ಟು ಸ್ವತಂತ್ರ ಹಕ್ಕಿ ಆಗಬಹುದು" ಎಂದು ನಕ್ಕ.
ನಾನು ಅವನಿಗೆ ನಗುವಲ್ಲಿ ಉತ್ತರಿಸಿದೆ.
ಅವನು "ಅಣ್ಣಾ, ನೀವು ಹೊಸ್ಟೆಲಾ ...?"
"ಹೌದು.. ಯಾಕೆ..?"
"ಫ್ರೀ ಹಕ್ಕಿಯಹಾಗೆ ಹಾರಾಡ್ಬಹುದಲ್ಲಾ... ಅದಕ್ಕೆ.."
"ಮನೆ ಎಷ್ಟೆಂದರೂ ಮನೇನೆ.. ಎಲ್ಲಿ ವರೆಗೆ ಹಾರ್ತೀಯ ರೆಕ್ಕೆ ಸುಸ್ತಾದಾಗ ಗೂಡು ಸೇರಲೇಬೇಕು..."
ಅವನು ಸುಮ್ಮನಾದ.
ನಾನು "ಎಂಜಾಯ್ ಯುವರ್ ಸ್ಕೂಲ್ ಡೇಸ್ ದೀಸ್ ಡೇಸ್ ವೊಂಟ್ ಕಂ ಬ್ಯಾಕ್.." ಅಂದೆ.

ಅವನು ಮೌನದಲ್ಲೇ ನಕ್ಕ. ಅವನ ಈ ಮೌನಕ್ಕೆ ಕಾರಣ ಮನೆಯವರು ಅವನ ಮೇಲೆ ಹೇರಿದ ಬೇಲಿ ಆಗಿತ್ತು.ಈ ಒರತ್ಹೋಡಾಕ್ಸ್ ಫ್ಯಾಮಿಲಿ ಅವನಿಗೆ ಶತ್ರು ವಾಗಿತ್ತು.

ಗೆಟ್ ಸಮೀಪಿಸುತಿದ್ದಂತೆ ಗೋಪಾಲನ್ ತನ್ನ 'ಹೊಂಡಾ ಸಿಟಿ' ಯಲ್ಲಿ ಹೊರ್ನ್ ಹೊಡೆದರು. ಕಾರಿನ ಭವ್ಯತೆ ಅವರ ಶ್ರೀಮಂತಿಕೆ ಸಾರುತಿತ್ತು. ಆದರ್ಶ್ ನ ಕೈಯಿಂದ ಟ್ರೋಲಿಯನ್ನು ನಾನು ಡಿಕ್ಕಿಯಲ್ಲಿ ಇಟ್ಟು ಮುಂದಿನ ಸೀಟ್ ಸೇರಿಕ್ಕೊಂಡೆ.
ಹಿಂದೆ ಮೂವರು ಸೋದರ ಸೋದರಿಯರು ಕುಳಿತುಕ್ಕೊಂಡರು.

ಅವರು ಕಾರ್ನಲ್ಲಿನ ಸಿಸ್ಟಮ್ ನಲ್ಲಿ ಮೆದುವಾಗಿ ಬಾರಿಸುತಿದ್ದ ವಯಲೀನ್ ಧನಿಯನ್ನು ಹೆಚ್ಚಿಸುತ್ತಾ ನನ್ನಲ್ಲಿ "ಡು ಯು ಲೈಕ್ ಕ್ಲಾಸಿಕಾಲ್ ..?" ಎಂದು ಇಂಗ್ಲಿಷ್ ನಲ್ಲಿ ಕೇಳಿದರು. ಆಶರ್ಯವಾಯಿತು. ತಮಿಳು ಮಾತು ಬಿಟ್ಟು ಅವರಿಗೆ ಬೇರೆ ಬರುವುದಿಲ್ಲ ಎಂಬ ನನ್ನ ಉಹೆ ತಪ್ಪಾಯಿತು.
"ಐ ಲೈಕ್ ಇಟ್ .." ಎಂದೆ. ಅವರು ದನಿಯನ್ನು ಮಿತವಾಗಿ ಏರಿಸಿದರು.
ನನ್ನಲ್ಲಿ "ನೇಮ್..?"
"ವೈಭವ್ ಕುಮಾರ್" ಅಂದೆ.

ಕಿಸೆಯಲ್ಲಿ ಚೆನ್ನೈ ತಲುಪಿದ ಬಳಿಕ ಸ್ವಿಚ್ ಆನ್ ಮಾಡಿದ ಮೊಬೈಲ್ ನಲ್ಲಿ "ಮುಂಬೆ ವಾ ..." ಶುರುವಾಯಿತು.
ನಾನು "ಏಕ್ಸ್ಯುಸ್ " ಎನ್ನುತ್ತಾ ಮೊಬೈಲ್ ಅನ್ನು ಕಿವಿಗೆ ಇಟ್ಟೆ.

"ಹ್ಯಾಪಿ ಬರ್ತ್ ಡೇ ಕಂದಾ" ಎಂದು ಟಿವಿ ನೋಡಿ ಕಲಿತ ಇಂಗ್ಲಿಷ್ ಸಂಸ್ಕೃತಿಯಲ್ಲಿ ಅಮ್ಮ ಕರೆ ಮಾಡಿದ್ದರು.
"ನಾನು ಥ್ಯಾಂಕ್ಸ್ ಅಮ್ಮಾ.. ಆಶಿರ್ವಾದ ಮಾಡು" ಎಂದೆ.
"ನಮ್ಮ ಆಶೀರ್ವಾದ ನಿನಗೆ ಯಾವಾಗಲು ಇದೆ ಕಂದಾ.. ಎಲ್ಲಿದ್ದಿಯಾ...? ಬೆಳಗ್ಗೆ ಇಂದ ಮಾಡ್ತಾ ಇದ್ದೆ, ಕರೆನೇ ತಾಗ್ತಿರಲಿಲ್ಲ, ನಂತರ ನಾನು ಇವರ ಹತ್ರ ಹೇಳಿದೆ ಶನಿವಾರ, ಏಳುವುದೇ ಹನ್ನೊಂದಕ್ಕೆ, ಮತ್ತೆ ಮಾಡೋಣ ಎಂದು... ಈಗ ಎದ್ದಿಯಷ್ಟೇ ನಾ ...?"
"ಇಲ್ಲಮ್ಮಾ, ಆಗ್ಲೇ ಎದ್ದೆ, ಚೆನ್ನೈ ನಲ್ಲಿ ಇದ್ದೇನೆ ಅಮ್ಮಾ, ನಮ್ಮ ಜೊತೆಗೆ ಜೋಯಿನ್ ಆದ ಆಕೃತಿ ಅಂತ ಇದ್ದಳಲ್ಲ ತಮಿಳ್ ಹುಡುಗಿ ಅವಳಿಗೆ ಚೆನ್ನೈ ಟ್ರಾನ್ಸ್ಫಾರ್ ಆಯಿತು. ಹಾಗೆ ಅವಳನ್ನು ಬಿಡಲು ಬಂದಿದ್ದೆ .." ಎಂದೆ
ಅವರು "ಒಳ್ಳೆ ಕೆಲಸ, ಯಾವಾಗ ಮರಳ್ತೀಯಾ...?"
"ನೋಡ್ಬೇಕು ಅಮ್ಮಾ, ಟ್ರೈನ್ ನ ಟಿಕೆಟ್ ವೈಟಿಂಗ್ ಲಿಸ್ಟ್ ನಲ್ಲಿದೆ, ಆದ್ರೆ ಇವತ್ತು, ಇಲ್ಲನ್ತಾದ್ರೆ ನಾಳೆ" ಅಂದೆ.
ಅವರು "ಸರಿ, ಅವಳನ್ನು ಅಲ್ಲಿ ಇಲ್ಲಿ ಬಿಡ ಬೇಡ ಮನೆಗೆ ಬಿಟ್ಟು ಮನೆಯವರನ್ನು ಭೇಟಿ ಯಾಗಿ ಬಾ.." ಅಂದರು.
"ನಾನು ಅವರ ಜೋತೆನೇ ಇದ್ದೆನಮ್ಮಾ, ಅವಳ ಅಪ್ಪ ಸ್ಟೇಶನ್ ಗೆ ಬಂದಿದ್ದರು ಅವರ ಜೊತೆ ಮನೆಗೆ ಹೋಗ್ತಾ ಇದ್ದೇನೆ"
"ಸರಿ, ತಂದೆ ಬಂದಮೇಲೆ ಮತ್ತೆ ಕರೆ ಮಾಡ್ತೇನೆ, ನಿನ್ನ ಎಲ್ಲ ಕನಸು ನೆರವೇರಲಿ" ಎನ್ನುತ್ತಾ ಕರೆ ಮುರಿದರು.

ಗೋಪಾಲನ್ "ಕನ್ನಡಿಗ...? ಮಂಗಳೂರು ಸ್ಲಾಂಗ್ ..!!" ಅಂದ.
"ಹೌ ಡು ಯು ಕ್ನೌ ಅಬೌಟ್ ದಿಸ್ "ಅಂದೆ.
ಅವರು "ನಾನು ಕೆ. ಆರ್. ಯಿ. ಸಿ ಪಾಸ್ದ್ ಔಟ್, ನಂತರ ಐ. ಐ. ಎಂ. ಬಿ  ಒಟ್ಟಿನಲ್ಲಿ ಶೈಕ್ಷಣಿಕ ಜೀವನ ಕರ್ನಾಟಕದಲ್ಲೇ, ಕನ್ನಡವನ್ನು ಬೆಂಗಳೂರು ಸ್ಲಾಂಗ್ ನಲ್ಲೂ ಮಂಗಳೂರುಸ್ಲಾಂಗ್ ನಲ್ಲೂ ಮಾತಾಡ ಬಲ್ಲೆ" ಅಂದರು.

ಚೆನ್ನೈನಲ್ಲಿ ಕನ್ನಡ ಮಾತನಾಡುವರನ್ನು ಪಡೆದು ಖುಷಿಯಾಯಿತು, ಅದರಕ್ಕಿಂತ ಹೆಚ್ಚಾಗಿ ಅವರು ಆಕೃತಿಯ ತಂದೆ ಯಾಗಿರುವುದಕ್ಕೆ ಹೆಚ್ಚಿನ ಸಂಭ್ರಮಿಸಿದೆ.
ಅವರಲ್ಲಿ "ಮತ್ತೆ .. ಬ್ಯುಸಿನೆಸ್ಸ್ ..?" ಅಂದೆ.
ಅದಕ್ಕವರು "ನಾನು ಜ್ಯಾನಕ್ಕಾಗಿ ಓದಿದೆ, ಮನೆಯವರು ಕಳಿಸಿದ್ದು ಬರೇ ಜ್ಞಾನ ಸಂಪಾದನೆಗೆ, ನಂತರ ನಾನು ಅಣ್ಣನ ದಾರಿಯನ್ನೇ ಆರಿಸಿದೆ."
"ಅಂದ್ರೆ ದೊಡ್ಡ ಬ್ಯುಸಿನೆಸ್ಸೇ ಇರ್ಬೇಕು."
"ಏನೋ, ದೇವರ ದಯೆಯಲ್ಲಿ  ನಡೆಯುತ್ತಿದೆ, ಅಣ್ಣ ಗಣಪತಿ ತಂದೆಯೋಟ್ಟಿಗೆ ಶುರು ಮಾಡಿದ ಬ್ಯುಸಿನೆಸ್ಸ್, ಅವನು ಹೆಚ್ಚು ಕಲಿಯಲಿಲ್ಲ, ನಮ್ಮಿಬ್ಬರನ್ನು ಕಲಿಸಲು ಅವನು ಯಾವುದೇ ರೀತಿಯಲ್ಲಿ ಪ್ರತಿರೋಧ ಒಡ್ಡಲಿಲ್ಲ. ನಾನು ಐ .ಐ ಎಂ  ಮಾಡಿಕ್ಕೊಂಡೆ, ತಮ್ಮ ಷಣ್ಮುಗನ್ ಸಿ. ಎ ಮುಗಿಸಿದ. ಬಳಿಕ ಅವನು ಬೆರೆಯವರ ಕೈ ಕೆಳಗೆ ಸಂಬಳಕ್ಕೆ ಕೈ ಚಾಚುವುದಕ್ಕಿಂತ ಬೇರೆಯವರಿಗೆ ಸಂಬಳ ನೀಡಲು ಕೈ ಚಾಚುವುದರಲ್ಲಿ ಏನೋ ಧನ್ಯತೆ ಇದೆ ಎಂದು ಹೇಳುತ್ತಾ ನಮ್ಮಿಬ್ಬರನ್ನು ತನ್ನ ಜೊತೆಗೆ ಸೇರಿಸಿಕ್ಕೊಂಡ. ವ್ಯವಹಾರ ಚಾಕಚಕ್ಯತೆ ಅವನಲ್ಲಿತ್ತು, ಮೇನೇಜ್ಮೆಂಟ್ ನನಗೆ ತಿಳಿದಿತ್ತು, ತಮ್ಮನಲ್ಲಿ ಅಕೌಂಟೆಂಟ್ ಜ್ಞಾನ ಚೆನ್ನಾಗೆ ಇತ್ತು. ಹಳೆಯ ಮಳಿಗೆಯನ್ನು ವಿಸ್ತರಿಸುತ್ತಾ ಬಂದೆವು. ಮೂರು ಜನ ಕೆಲಸಗಾರರಿದ್ದವರು, ಇವತ್ತು ನೂರು ದಾಟಿದ್ದಾರೆ ಎಂದು ಹೇಳಲು ಹೆಮ್ಮೆ ಯಾಗುತ್ತದೆ" ಅಂದರು.

"ಐ ಫೀಲ್ ಪ್ರೌಡ್ ಅಬೌಟ್ ಯು ಸರ್, ಸರಸ್ಪತಿ ಮತ್ತು ಲಕ್ಷ್ಮಿ ಕೃಪೆ ಸಂಪೂರ್ಣವಾಗಿ ನಿಮಲ್ಲಿ ಇದ್ದರೂ, ಇಷ್ಟೊಂದು ಸೀದಾ- ಸಾಧ ವ್ಯಕ್ತಿತ್ವ ತಮ್ಮದಾಗಿಸಿದ್ದಿರಿ"ಎಂದೆ.
ಅವರು "ಹಣ ಬರುತ್ತೆ ಹೋಗುತ್ತೆ, ಹಣಕ್ಕಿಂತ ಮನುಶತ್ವ ಮುಕ್ಯ ಅಲ್ಲವಾ..?"  ಅಂದರು.
"ಹೌದು, ಇಷ್ಟೊಂದು ಸ್ಥಿತಿವಂತರು ಎಂದು ಗೊತ್ತಿರಲಿಲ್ಲ, ಆಕೃತಿ ಇವತ್ತಿನ ಹೆಣ್ಣಿಗೆ ಮಾದರಿ ಒಂದು ಚೂರು ಆಡಂಬರ ವಿಲ್ಲ, ದೊಡ್ಡಸ್ತಿಕೆಯ ಪರಿವಿಲ್ಲ. ಇಲ್ಲಿ ವರೆಗೆ ನನ್ನಲ್ಲಿ ಹಲವು ವಿಚಾರ ಹಂಚಿದ್ದಾಳೆ ಆದರೆ ತನ್ನ ಹಿನ್ನಲೆ ತಿಳಿಸಲೇ ಇಲ್ಲ" ಎನ್ನುತ್ತಾ ಸೀಟ್ನಿಂದ ಹಿಂದೆ ತಿರುಗಿ ನೋಡಿದೆ.

ನನ್ನನ್ನು ನೋಡುತ್ತಾ "ಹೌ ಇಸ್ ದಿ ಸುರ್ಪ್ರೈಸ್...?" ಎಂದಳು.
ನಾನು ನಗುವಲ್ಲೇ ಉತ್ತರಿಸುತ್ತ ಮುಂದೆ ತಿರುಗಿದೆ. ಗೋಪಾಲನ್ ಮುಂದುವರೆಸಿದರು. ಅವಳಿಗೆ ಕಲಿಯುವುದರಲ್ಲಿ ಪೂರ್ಣ ಸ್ವಾತಂತ್ರ ಕೊಟ್ಟಿದ್ದೆವು, ಮನ ಬರೇ ವಿದ್ಯಾರ್ಚನೆಯಲ್ಲಿ ಇರಬೇಕು ಎನ್ನುವುದು ನಮ್ಮ ಸಿದ್ದಾಂತ, ಅದಕ್ಕಾಗಿಯೇ ಇವರನ್ನು ಯಾವುದೇ ಹೊರಗಿನ ವಾತಾವರಣಕ್ಕೆ ಹಾರಿಹೋಗಲು ಬಿಟ್ಟು ಕೊಡಲಿಲ್ಲ. ಸಂಗೀತ , ನೃತ್ಯ, ಈಜು ಪ್ರತಿಯೊಂದನ್ನು ಈ ಮೂವರಿಗೆ ಕಲಿಸಿಕೊಟ್ಟೆವು. ಆದ್ರೆ ಇದು ಬರಿ ಮನೆ, ಶಾಲೆ ಮತ್ತು ಏಕಾಡೆಮಿ ಇಷ್ಟಕ್ಕೆ ಸೀಮಿತ, ಗೆಳೆಯರ ಸಳಾವಳಿ ಇಲ್ಲ, ಎಲ್ಲಿ ಬೇರೆಯವರೊಡನೆ ಬೆರೆತರೆ ಹಾಳಾಗುತ್ತರೋ ಎಂಬ ಭಯ ಅಣ್ಣನಲ್ಲಿತ್ತು. ಅದಕ್ಕೆ ಇವರ ಪ್ರತಿಯೊಂದು ಇಷ್ಟ ನೆರವೇರಿಸುತ್ತಾ ಮನೆ ಸಂಭಂದಿಕರು ಎಂಬ ನಾಕಾಭಂದಿ ಹಾಕುತಿದ್ದ.

ಇವಳಿಗೆ ಕ್ಯಾಂಪಸ್ ಆದಾಗ ಕಂಪೆನಿ ಸೇರುವುದು ಬೇಡ ಅಂದಿದ್ದ, ಆಗ ಮನೆಯ ಎಲ್ಲರು "ಚೆನ್ನೈ ನಲ್ಲೇ ಅಲ್ಲ, ಕಾಲೇಜ್ ಗೆ ಹೋಗುವ ತರಾನೆ ಹೋಗಿ ಬರಲಿ, ಇನ್ನೇನೋ ಮದುವೆ ಮಾಡಿ ಬಿಡ್ತೇವೆ ಅಲ್ಲಿ ವರೆಗೆ ಅವಳು ಅವಳ ಜೀವನ ಅನುಭವಿಸಲಿ" ಎಂದು ಅವನನ್ನು ಒಪ್ಪಿಸಿದರು.

ಪುಣೆಗೆ ಟ್ರಾನ್ಸ್ಫಾರ್ ಆದಾಗ ಎಲ್ಲರು ಬೇಡ ಎಂದರು. ನಾನು ಮತ್ತು ಇವಳ ಚಿಕಮ್ಮ "ಹೋಗ್ಲಿ, ಈಗ ಮದುವೆ ಯಾಗುವ ಗಂಡು ಹುಡುಗಿಯ ಹಿನ್ನಲೆ ಗಿಂತ ಕರೆಂಟ್ ಸ್ಟೇಟಸ್ ನೋಡ್ತಾನೆ" ಎಂದು ಅವರನ್ನು ಸಮಾಧಾನಿಸಿ  ಕಳುಹಿಸಿದ್ದೆವು.
ಅವಳು ಗಳಿಸಿದ್ದು ಅವಳಿಗೆ, ನಮ್ಮದೂ ಅವಳದೇ. " ಎನ್ನುತ್ತಾ ಗೇರ್ ಬದಲಿಸಿದರು.

ಮನೆಯಿಂದ ಮತ್ತೆ ಕರೆ ಬಂತು. ತಂದೆಯವರ ಆಶೀರ್ವಾದ ಪಡೆದು ಮೊಬೈಲ್ ಅನ್ನು ಸೈಲೆಂಟ್ ಗೆ ಹಾಕಿ ಜೇಬಲ್ಲಿ ಇಳಿಸಿದೆ.
ಅವರು "ತಮಿಳ್ ರಿಂಗ್ ಟೋನ್... ತಮಿಳು ಬರುತ್ತಾ..?" ಅಂದ.
"ಇಲ್ಲ ಬರುಲ್ಲ, ಹಾಡು ಕೇಳ್ತೇನೆ, ಈ ಹಾಡು ಹಿಡಿಸಿತು, ಅದಕ್ಕೆ ರಿಂಗ್ ಟೋನ್ ಇಟ್ಕೊಂಡಿದ್ದೇನೆ" ಅಂದೆ.

ಹಿಂದೆ ಆದರ್ಶ್ "ಅಕ್ಕಾ ಆ ಮೂವಿ ಚೆನ್ನಾಗಿದೆ ಅಂತೆ, ದೊಡ್ಡಪ್ಪನನ್ನು ಒಪ್ಸು ಹೋಗೋಣಾ, ನಿನ್ ಫೆವರಿಟ್ ಸೂರಿಯನ ಮೂವಿ, ಪ್ಲೀಸ್ ಅಕ್ಕ"ಅಂದ.
ಇದನ್ನು ಕೇಳುತ್ತ ಗೋಪಾಲನ್ ನನ್ನಲ್ಲಿ "ಇಂಟರೆಸ್ಟ್ ಇದೆಯಾ...? ತಮಿಳ್ ಚಿತ್ರ ನೋಡ್ತೀಯಾ..?"
"ಘಜನಿ, ಒಂದೇ ನೋಡಿದ್ದು, ಹಿಡಿಸಿದ ಸುರಿಯಾ ..."
ಅವರು " ಆಕ್ಟಿಂಗ್ ಮಟ್ಟಿಗೆ ಎರಡನೇ ಮಾತಿಲ್ಲ, ನಿನಗೆ ನೋಡ್ ಬೇಕು ಅನ್ಸಿದ್ರೆ ನೀವು ನಾಲ್ಕು ಜನ ಹೋಗಿ ಬನ್ನಿ" ಅಂದರು.
ಹಿಂದಿನಿದ ಆದರ್ಶ್ "ಥ್ಯಾಂಕ್ಸ್ ದೊಡ್ಡಪ್ಪಾ" ಎಂದು ಖುಷಿ ಪಟ್ಟ.
"ಎಲ್ಲಿ ಹೋಗೋಣ ಅಕ್ಕಾ...? ಥಿಯೇಟರ್ ಸುಜ್ಜೆಸ್ಟ್ ಮಾಡು" ಅಂದ.
ನಾನು "ಸಿಟಿ ಸೆಂಟರ್ ನ ಐನೊಕ್ಸ ಚೆನ್ನಾಗಿದೆ, ಅಲ್ಲೇ ಹೋಗೋಣ " ಘಜನಿ ಅಲ್ಲೇ ನೋಡಿದನ್ನು ನೆನಪಿಸಲು ಇನ್ನೊಂದು ಸಂಜೆ ಯಾಯಿತು ಎಂದುಕೊಳ್ಳುತ್ತ ಹೇಳಿದೆ. ಅದಕ್ಕವನು ಸರಿ ಎಂದ.
"ವೈಭವ್ ನಿನಗೆ ಚೆನ್ನೈ ಗೊತ್ತಾ" ಅಂದರು ಗೋಪಾಲನ್.
"ಎರಡು ತಿಂಗಳು ಇಲ್ಲೇ ಇದ್ದೆನಲ್ಲಾ, ಆಕೃತಿ ಯೋಟ್ಟಿಗೆ ಜೋಯಿನ್ ಆಗಿದ್ದು, ಹಾಗೆ ಸಲ್ಪ ಸಲ್ಪ ಗೊತ್ತು" ಎಂದೆ.
"ಹಾಗೋ, ಡ್ರೈವಿಂಗ್ ಬರುತ್ತಾ...?"
"ಬರುತ್ತೆ, ಆದ್ರೆ ಕಾರ್ ಹಿಡಿದು ಚೆನ್ನೈ ಸುತ್ತುವಷ್ಟು ರೋಡ್ ಜ್ಞಾನ ಇಲ್ಲ"ಅಂದೆ.
 "ಹಾಗಾದ್ರೆ ನಿಮಗೆ ಒಂದು ಡ್ರೈವರ್ ಜೊತೆ ಮಾಡುತ್ತೇನೆ, ಅವನ ಜೊತೆಗೆ ಸುತ್ತುವಿಯಂತೆ ಚೆನ್ನೈ, ಮತ್ತೆ ನಿನ್ ಟಿಕೆಟ್ ಚಿಂತೆ ಬಿಟ್ಟು ಬಿಡು ನಾಳೆ ಸಂಜೆ ಆ ವ್ಯವಸ್ತೆ ಮಾಡಿಸ್ತೇನೆ. ಎರಡು ದಿನ ಚೆನ್ನೈ ಸುತ್ತಿ ಹೋಗುವಿಯಂತೆ" ಎಂದರು 
"ಥ್ಯಾಂಕ್ಸ್ ಅಂಕಲ್" ಎಂದೆ.
ಅವರು "ಥಾಂಕ್ಸ್ ನಿನಗೆ ಕೊಡ್ಬೇಕು ನಾವು, ಬಿಸಿನೆಸ್ ಹೇಳಿ ಬ್ಯುಸಿ ಆಗಿದ್ದ ನಮಗೆ ಯಾವುದೇ ಚಿಂತೆ ಆಗದಂತೆ ನಮ್ಮ ಮಗಳನ್ನು ಇಲ್ಲಿ ವರೆಗೆ ತಂದು ಒಪ್ಪಿಸಿದ್ದಿಯಲ್ಲ ಅದಕ್ಕೆ"
"ಫ್ರೆಂಡ್ಸ್ ಅಂದ ಮೇಲೆ ಇಷ್ಟೂ ಮಾಡದಿದ್ರೆ ಹೇಗೆ..?" ಎನ್ನುತ್ತಾ ಮುಗುಳ್ನಕ್ಕೆ.

ಕಾರು ಮನೆಯ ಗೆಟ್ ನೋಳಗಿತ್ತು. ಎರಡನ್ತಸ್ತಿನ ಭವ್ಯ ಬಂಗಲೆ. ಕಾರು ನಿಲ್ಲುತಿದ್ದಂತೆ, ತುಳಸಿಯ ಪಕ್ಕದ ಕ್ರೋಟನ್ ಕತ್ತರಿಸುತಿದ್ದ ಮಾಲಿ ಬಂದು ಡಿಕ್ಕಿಯಲ್ಲಿದ್ದ ಅವಳ ಟ್ರೋಲಿ ಹಿಡಿದು ಒಳ ನಡೆದ. ಎಲ್ಲರು ನಗುನಗುತ್ತ ನನ್ನನ್ನು ಸ್ವಾಗತಿಸಿದರು.ಮೊದಲ ಭೇಟಿಯಲ್ಲೇ ಮನೆಯವರಿಗಿ ಇಷ್ಟು ಹತ್ತಿರನಾದೆನು ಎನ್ನುತ್ತಾ ಮನ ಹಿಗ್ಗುತಿತ್ತು. ಆಕೃತಿ ಮನೆಯ ಪ್ರತಿ ಹಿರಿಯರ ಕಾಲಿಗೆ ಮುಟ್ಟಿ ನಮಸ್ಕರಿಸುತಿದ್ದಳು. ಅವಳ ಆಚಾರ ಕಂಡು ಬೆರಗಾದೆ.

ಗೋಪಾಲನ್ ಆದರ್ಶ್ನಲ್ಲಿ "ಗೆಸ್ಟ್ ರೂಂ ತೋರಿಸೋ... ಫ್ರೆಶ್ ಆಗಿ ಬರಲಿ ಅವನು" ಎಂದರು.
ಆದರ್ಶ್ ನನ್ನನ್ನು ಮೇಲ್ಮಾಳಿಗೆಗೆ ಕರಕ್ಕೊಂಡು ಹೋದ.

ಅವ ಹೊರ ಹೋಗುತಿದ್ದಂತೆ ಆಕೃತಿಯ ಮನೆಯವರ ಭವ್ಯತೆ, ಮತ್ತು ಅವಳ ನಿರಾಡಂಬರ ಜೀವನ ಶೈಲಿ ವಿರುದ್ದ ದಿಕ್ಕಿನಲ್ಲಿರುವುದನ್ನು ಮನಗೊಂಡು ಆಶರ್ಯಪಟ್ಟೆ. ಶ್ರೀಮಂತಿಕೆ ಅಲ್ಲಿ ತುಂಬಿ ತುಳುಕುತ್ತಿತ್ತು, ಆದರೆ ಅವಳಲ್ಲಿ ಅದು ಒಂದು ದಿನವೂ ಗಮನಿಸಿರಲಿಲ್ಲ, ಅವಳೂ ಒಂದು ದಿನವೂ ತನ್ನ ಹಿನ್ನಲೆ ನನ್ನಲ್ಲಿ ಹೇಳಿರಲಿಲ್ಲ.

************* 

 
ಸ್ನಾನ ಮಾಡಿ ಕೆಳಗೆ ಬಂದೆ. ಆಕೃತಿಯು ತನ್ನ ನಿತ್ಯ ಕರ್ಮ ಮುಗಿಸಿ ದೇವರ ಕೋಣೆಯಲ್ಲಿ ಧೂಪ ಹೊತ್ತಿಸಿ, ತಲೆಯಲ್ಲಿನ ಮುಂಡಾಸು ಬಿಚ್ಚದೆ ನನ್ನ ಎದುರಿನ ಚೇರ್ ಮೇಲೆ ಕುಳಿತುಕ್ಕೊಂಡಳು. ವ್ಯವಹಾರಿಕ ಜೀವನದಲ್ಲಿ ಕಳೆದು ಹೋಗಿದ್ದ ನಮ್ಮ ಸಂಸ್ಕೃತಿ ಅವಳಲ್ಲಿ ಬಿಂಬಿತವಾಗುತಿತ್ತು. ಜನ್ಮದಿನದ ನೆನಪಾಗಿ ನಾನು ಅವಳಲ್ಲಿ "ಇಲ್ಲಿ ಪಕ್ಕದಲ್ಲಿ ಯಾವುದಾರು ದೇವಸ್ತಾನ ಇದೆಯೇ ..?" ಎಂದು ಕೇಳಿದೆ.

ಅವಳು "ಇದೆ ಯಾಕೋ...? ಈಗ ಸುಡ್ದನ್ ಆಗಿ ...?"
"ಬರ್ತ್ ಡೇ ಅಲ್ಲಾ, ಒಮ್ಮೆ ದೇವರಿಗೆ ಸೆಲ್ಯೂಟ್ ಹೊಡೆದು ಬರುವ ಹೇಳಿ"
"ಸದ್ಯಕ್ಕೆ, ದೇವರ ಕೋಣೆಯಲ್ಲಿ ಮುಗಿಸು, ನಂತರ ದೇವಸ್ತಾನಕ್ಕೆ ಹೋದರಾಯಿತು. ಅಂದಳು"

ಎದುರಿದ್ದ ದೇವರ ಕೋಣೆಗೆ ಹೋಗಿ ಬತ್ತಿ ಹಚ್ಚಿ ಮನದ ನಿವೇದನೆ ಇಟ್ಟು ಬಂದೆ.

ಮನೆಯ ಮೂವರು ಸೊಸೆಯರು, ಮನೆಗೆ ಬಂದ ಮಗಳನ್ನು ಮತ್ತು ಅತಿಥಿಯ ಆರೈಕೆಯಲ್ಲಿ ಮುಳುಗಿದ್ದರು. ಬೇಡ ಬೇಡ ಎಂದರೂ ಒಬ್ಬಬ್ಬರಾಗಿ ಒಂದರ ಹಿಂದೆ ಒಂದರಂತೆ ಬಡಿಸುತಿದ್ದರು. ಇಬ್ಬರ ಹೊಟ್ಟೆ ತುಂಬುವಷ್ಟರಲ್ಲಿ, ಪ್ರಕೃತಿ, ಆದರ್ಶ್ ಬಂದು ಎಂಟು ಸೀಟಿನ ಡೈನಿಂಗ್ ನಲ್ಲಿ ನಮ್ಮ ಪಕ್ಕಕ್ಕೆ ಕುಳಿತುಕ್ಕೊಂಡರು.

ಮೊದಲಿನವನಿಗೆ ಮಕ್ಕಳಿರಲಿಲ್ಲ, ಆಕೃತಿಯ ಹೆತ್ತವರಿಗೆ ಅವಳೊಬ್ಬಳೆ, ಸಣ್ಣವನಿಗೆ ಒಂದು ಗಂಡು ಒಂದು ಹೆಣ್ಣು, ಆದರೂ ಮೂವರು ಸೋದರರು ಮತ್ತು ಸೋದರಗಿತ್ತಿಯರು ಎಲ್ಲರಿಗೆ ಸರಿಯಾದ ಪ್ರಮಾಣದ ಪ್ರೀತಿ ಧಾರೆ ಎರೆಯುತಿದ್ದರು. ಮಕ್ಕಳು ಎಲ್ಲರನ್ನು ಏಕ ರೀತಿಯಲ್ಲಿ ಪ್ರೀತಿಸುತಿದ್ದರು.

ನಮ್ಮ ತಿಂಡಿ ಮುಗಿಯುವಷ್ಟರಲ್ಲಿ ಸಣ್ಣ ತಮ್ಮ ತನ್ನ ಶಟಲ್ ಆಟ ಮುಗಿಸಿ, ರೆಕೆಟ್ ಬೀಸುತ್ತ ಒಳಗೆ ಬಂದ. ನನ್ನನ್ನು ನೋಡಿ ಮುಗುಳ ನಗುತ್ತಾ "ಗುಡ್ ಮಾರ್ನಿಂಗ್" ಅಂದ. ಹಿತ ವೆನಿಸಿತು. ನಗು ಮುಖದಲ್ಲೇ ಅವರನ್ನು ವಂದಿಸಿದೆ.
ಮನೆಯ ಹೆಂಗಸರಲ್ಲಿ ಕೊನೆಯವರಿಗೆ ಇಂಗ್ಲಿಷ್ ಬರುತಿತ್ತು, ಉಳಿದವರೆಲ್ಲ ತಮಿಳ್ ಬಿಟ್ಟು ಬೇರೆ ಬರುತಿರಲಿಲ್ಲ. ದೊಡ್ಡವರು ಆದರ್ಶ ನಲ್ಲಿ ನನ್ನನ್ನು ಲೀವಿಂಗ್ ರೂಮ್ನಲ್ಲಿ ಕುಳ್ಲಿಸಿ ಟಿವಿ ಹಾಕಿ ಕೊಡುವಂತೆ ಹೇಳಿದರು.

ತಿಂಡಿ ಮುಗಿಸಿ ನಾನು, ಆದರ್ಶ್ ಟಿವಿ ವೀಕ್ಷಿಸುತ್ತಾ ಕುಳಿತುಕೊಂಡೆವು. ಮೂವರು ಅಣ್ಣ ತಮ್ಮಂದಿರು ತಮ್ಮ ತಮ್ಮ ರೂಂ ನಲ್ಲಿ ಸ್ನಾನ ಮುಗಿಸಿ ದೇವರ ಕೋಣೆಗೆ ಬಂದು ಪ್ರಾರ್ಥನೆ ಮುಗಿಸಿದರು. ದೊಡ್ಡ ಅಣ್ಣ ದೇವರಿಗೆ ಆರತಿ ಬೆಳಗಿದರು. ಕೈಯಲ್ಲಿನ ಗಂಟೆ ಸದ್ದಿಗೆ ಮನೆಯಲ್ಲಿನ ಎಲ್ಲ ತಲೆಗಳು ದೇವರಕೋಣೆ ಎದುರಿಗೆ ನಡೆ ಬಿಟ್ಟು ನಿಂತು ಕೊಂಡರು, ಆದರ್ಶ್ ರಿಮೋಟ್ ನನಗೆ ಕೊಡುತ್ತ ಅತ್ತ ಓಡಿದ. ಅವರ ದಿನಚರಿ ಮತ್ತು ಅನ್ಯೋನ್ಯತೆ ನೋಡಲು ನಾನು ಟಿವಿ ಆರಿಸಿ ಅವನನ್ನು ಹಿಂಬಾಲಿಸಿದೆ.

ಆರತಿಯನ್ನು ಅವನು ಮೊದಲು ತಮ್ಮಂದಿರಿಗೆ ಕೊಟ್ಟು, ನಂತರ ಮನೆಯ ಹೆಂಗಸರಿಗೆ ಕೊಟ್ಟ. ಪ್ರತಿಯೊಬ್ಬರೂ ತನಗಿಂತ ವಯಸಲ್ಲಿ ದೊಡ್ಡವರ ಕಾಲಿಗೆ ಬಿದ್ದು ಆಶೀರ್ವಾದ ಪಡಕ್ಕೊಂಡರು. ಗಣಪತಿ ನನ್ನಲ್ಲಿ ಆರತಿ ತಂದಾಗ ಅದನ್ನು ತೆಗೆದು ಅವರ ಕಾಲಿಗೆ ಬಿದ್ದು ಆಶೀರ್ವಾದ ಕೇಳಿದೆ.

ನನ್ನ ಈ ಗುಣ ಅವರಿಗೆ ಹಿಡಿಸಿತು ಅನ್ಸುತ್ತೆ, ಅವರು "ಊರಿನ ಹುಡುಗನಾ ..?" ಎಂದು ನನ್ನನು ಕೇಳಿದರು.
"ಹೌದು "ಅಂದೆ.
"ನಗರದವರಿಗೆ ಇಂತ ಸಭ್ಯತೆ ಎಲ್ಲಿ ಬರುತ್ತದೆ..." ಎನ್ನುತ್ತಾ ಆರತಿಯನ್ನು ಹೊರ ತಂದು ತುಳಸಿಕಟ್ಟೆಯಲ್ಲಿ ಆರಿಸಿದರು.
ಆದರ್ಶ್ ಮನೆಯ ಎಲ್ಲರ ಕಾಲು ಹಿಡಿದು, ನನ್ನ ಕಾಲಿಗೆ ಬೀಳಲು ಮುಂದಾದ, ಮುಜುಗುರ ಎನಿಸಿತು. "ಇಟ್ಸ್ ಓಕೆ ಬ್ರೋ, ಸಿಟ್ ಹೀರ್ "ಎನ್ನುತ್ತಾ ರಿಮೋಟ್ ಅನ್ನು ಅವನಿಗೆ ಕೊಟ್ಟೆ.
ಅವನು ಚಾನೆಲ್ ಬದಲಿಸಿದ, ದೊಡ್ಡಪ್ಪ ಬಳಿಯಲ್ಲಿ ಬಂದದ್ದು ನೋಡಿ ಸೀಧಾ ನ್ಯೂಸ್ ಚಾನೆಲ್ ನಂಬರ್ ಒತ್ತುತ್ತಾ ರೆಮೊಟನ್ನು ಅವರ ಕೈಗೆ ಕೊಟ್ಟು ಅವರ ಬಳಿಯಲ್ಲಿ ನಿಂತುಕ್ಕೊಂಡನು.

ದೊಡ್ಡಣ್ಣ ನನ್ನಲ್ಲಿ "ವೈಭವ್.. ಹೇಗಿದ್ದಿಯಾ...? ಚೆನ್ನೈ ಹಿಡಿಸ್ತಾ..?"
"ಹಮ್ " ಎಂದೆ.
ಅವರು "ಬಾ ತಿಂಡಿ ತಿಂತಾ ಮಾತಾಡೋಣ" ಅಂದರು.
ನಾನು "ಆಗ್ಲೇ ಮುಗ್ಸಿದೆ, ನೀವು ತಿನ್ನಿ, ನಾನು ನಿಮಗೆ ಮಾತಾಡುತ್ತಾ, ಕಂಪೆನಿ ಕೊಡ್ತೇನೆ" ಅಂದೆ.
"ಆರಾಮಾಗಿ ಟಿ.ವಿ ನೋಡು, ಒಂಬತಕ್ಕೆ ಇಮಾಮ್ ಬರ್ತಾನೆ, ನೀವು ನಾಲ್ಕು ಮಂದಿ ಸುತ್ತಾಡಿ ಬನ್ನಿ, ರಾತ್ರಿ ಎಂಟಕ್ಕೆ ಮನೆಯಲ್ಲಿ ಇರ್ಬೇಕು, ಒಟ್ಟಾಗಿ ರಾತ್ರಿ ಡಿನ್ನರ್ ಮಾಡೋಣ ಆವಾಗಲೇ ಮಾತಾಡುವೆ" ಎಂದರು.
ನಾನು 'ಸರಿ'ಎಂದು ಅವರ ಕೈಯಿಂದ ರಿಮೋಟ್ ಇಸ್ಕೊಂಡೆ.

ಒಂಬತ್ತಕ್ಕೆ ಸರಿಯಾಗಿ ನಾವು ನಾಲ್ಕು ಮಂದಿ ಸೇನ್ಟ್ರೋನಲ್ಲಿ ಕುಳಿತು, ಚೆನ್ನೈ ಸುತ್ತಲು ಶುರುಮಾಡಿದೆವು. ಮೊದಲಿಗೆ ಆಕೃತಿ ತನ್ನ ನೆಚ್ಚಿನ ಕೃಷ್ಣನ ದೇವಸ್ತಾನಕ್ಕೆ ಕರಕ್ಕೊಂಡು ಹೋದಳು. ಅದಾದ ಬಳಿಕ ಒಂದು ಮಾಲ್ ನಿಂದ ಇನ್ನೊಂದು ಮಾಲ್ ನಲ್ಲಿ ವಿಂಡೌ ಶಾಪಿಂಗ್ ಮಾಡಿದೆವು. ಅದರ ನಡುವಲ್ಲಿ ಅವಳು ನನಗೆ ಬರ್ತ್ ಡೇ ಗಿಫ್ಟ್ ಪ್ರೆಸೆಂಟ್ ಮಾಡಿದಳು.

ಪುಟ್ಟದೊಂದು ಕ್ರಿಸ್ಟಲ್ ಪ್ರತಿಮೆ ಕೊಡುತ್ತಾ, "ನಾಳೆಯಿಂದ ನನ್ನ ಅನುಪಸ್ತಿತಿಯಲ್ಲಿ ಇದು ನಿನ್ನ ಜೊತೆಗೆ ಇರುತ್ತದೆ, ನನ್ನ ಪ್ರತಿರೂಪ ಇದು"  ಅಂದಳು ಆದರ್ಶ್ ಪ್ರಕೃತಿ ತಮಗೆ ಬೇಕಾದ ಆಟಿಕೆಗಳನ್ನು ಹುಡುಕುತ್ತಿರುವಾಗ. ಆದರ್ಶ್ ಫಿಫಾ ಸಿ.ಡಿ ಖರೀದಿಸಿದ, ಪ್ರಕೃತಿ ಒಂದು ಬಾರ್ಬಿ ಡೋಲ್ ಅನ್ನು ಹೆಕ್ಕಿಕ್ಕೊಂಡಳು.

ಮದ್ಯಾಹ್ನ ಸಮೀಪಿಸುತಿದ್ದಂತೆ ನಾನು "ಲಂಚ್ ಗೆ ಯಾವುದಾದರು ಪ್ಲೇಸ್ ಸುಜ್ಜೆಸ್ಟ್ ಮಾಡು.." ಎಂದೆ ಆದರ್ಶ್ ನಲ್ಲಿ.
ಅವನು "ಅದೇ ಅನ್ನ ಸಾಂಬಾರು ತಿಂದು ಬೋರ್ ಆಗಿ ಹೋಗಿದೆ, ಪಿಜ್ಜಾ ತಿನ್ನೋಣ" ಅಂದ.

ಅವನಿಕೆ ಪ್ರಕೃತಿಯು ಜೊತೆಯಾದಳು. ರೆಸ್ಟೋರೆಂಟ್ ಹುಡುಕುವ ಕೆಲಸ ಇಲ್ಲ ವಾಯಿತು. ಸೆಂಟ್ರಲ್ ನ ಮೇಲ್ ಮಾಳಿಗೆಯ ರೂಫ್ ಫ್ಲೂರ್ ನಲ್ಲಿನ ಪಿಜ್ಜಾ ಹುಟ್ ನಲ್ಲಿ ಆರ್ಡರ್ ಕೊಟ್ಟೆವು. ತಿಂದು ಮುಗಿಸಿ ಎರಡರ "ಸಿಲ್ಲುನೋರು ಕಾದಲ್" ಷೋ ಗೆ ಟಿಕೆಟ್ ತೆಗೆದುಕ್ಕೊಂಡೆವು.

ನಾಲ್ಕು ಟಿಕೆಟ್ಗಳು ಒಂದೇ ಸಾಲಿನಲ್ಲಿರದೇ ಮೂರು ಪ್ಲುಸ್ ಒಂದು ಆಗಿ ಸಿಕ್ಕಿದ್ದವು.
ಮೂರನ್ನು ಅವರಿಗೆ ಕೊಟ್ಟು ಅವರ ಹಿಂದಿನ ಸಾಲಿನಲ್ಲಿ ಇನ್ನೊಂದು ಮೂಲೆಯಲ್ಲಿ ನಾನು ಕುತ್ಕೊಳ್ಳುವ ಮಾತಾಯಿತು. ಆದರ್ಶ್ "ಅಣ್ಣಾ ನೀನು ಅವರೊಟ್ಟಿಗೆ ಕುಳಿತುಕೋ, ಹುಡುಗೀರು ನಾನಾದರು ಹುಡುಗ ಹಿಂದೆ ಕುಳಿತುಕೊಳ್ಳುತ್ತೇನೆ" ಅಂದ.
ನನ್ನ ಮನಸ್ಸಿನ ಭಾವನೆ ಅವನಿಗೆ ಅರ್ಥವಾಗಿತ್ತು, ಆದರೆ ಕಾರಣ ಮಾತ್ರ ಬೇರೆ ಕೊಟ್ಟಿದ್ದ. ನಾನು ಸರಿ ಎಂದೆ. ಒಂದು ಬದಿಯಲ್ಲಿ ಪ್ರಕೃತಿ, ಅವಳ  ಬದಿಯಲ್ಲಿ ಆಕೃತಿ ಈಚೆಗೆ ನಾನು ಕುಳಿತುಕ್ಕೊಂಡೆ.

ಚಿತ್ರ ಶುರುವಾದಾಗ, ಹಿಡಿ ಮಲ್ಟಿ ಪ್ಲೆಕ್ಸ್ ಸಿಳ್ಳೆಗಳು ಏರಿದವು. ಪ್ರಕೃತಿ ಚಿತ್ರದಲ್ಲಿ ಮುಳುಗಿದ್ದಳು. ಆಕೃತಿ ನನ್ನಲ್ಲಿ ಮುಳುಗಿದ್ದಳು. ಕೈಗಳು ಭಂದಿಯಾಗಿದ್ದವು. ಮೊದಲಾರ್ಧ ಮುಗಿಯುವರೆಗೆ ಕುಂಡವಿ ಮತ್ತು ಗೌತಂ ನ ನಡುವಿನ ಮದುವೆಯ ನಂತರದ ಪ್ರೇಮವನ್ನು ಇಬ್ಬರು ಆಸ್ವಾದಿಸುತಿದ್ದೆವು. ಅವಳು ಕೆಲವೊಂದು ಸೀನ್ ಆಗುವಾಗ "ನೀನು ಇದೆ ರೀತಿ ಇರ್ಬೇಕು" ಎನ್ನುತಿದ್ದಳು. ಅವಳ ಮಾತಿನ ಕಚಗುಳಿ ಖುಷಿ ಕೊಡುತ್ತಿತ್ತು.

ಇಂಟರ್ವಲ್ ಆದ ಬಳಿಕ ಬಂದ ಐಶು, ಇವಳಲ್ಲಿ ಚೂರು ಇರುಸು ಮುರುಸು ಮೂಡಿಸಿತು, ನನ್ನಲ್ಲಿ "ನಿನಗೆ ಯಾರಾದ್ರು ಕಾಲೇಜ್ ಲೈಫ್ ನಲ್ಲಿ ಇದ್ರಾ...?" ಎಂದು ಪ್ರಶ್ನೆ ಕೇಳಿದಳು.
ನಾನು "ನನಗೆ ಡೈರಿ ಬರೆಯುವ ಅವಶ್ಯಕತೆ ಇಲ್ಲ, ಅವಳು ಬರೇ ಕೆಲವು ಪುಟಕ್ಕೆ ಮೀಸಲಿದ್ದಳು, ಆ ಪುಟಗಳನ್ನೂ ನಿನ್ನಲ್ಲಿ ತೆರೆದಿಟ್ಟಿದ್ದೇನೆ.." ಅಂದೆ.
ಅವಳು "ಕೃಪಾ..?"
ನಾನು "ಹೌದು, ಇನ್ನ್ಯಾರು ಇಲ್ಲ..." ಅಂದೆ.
ಅವಳ ಕಣ್ಣರಳಿತು. ಹಿನ್ನಲೆಯಲ್ಲಿ "ಮುಂಬೆ ವಾ " ಹಾಡು ಮನಸ್ಸಿಗೆ ಮುದ ನೀಡಿತು, ಜೊತೆಗೆ ನಾಳೆಯಿಂದ ಕಳೆಯ ಬೇಕಾದ ಒಂಟಿತನದ ಸಂಗಾತಿ ಈ ಹಾಡು ಎಂಬ ಭಾವ ಮೂಡಿಸುತ್ತಿತ್ತು.

ಸಿನೆಮಾ ಮುಗಿದ ಬಳಿಕ, ಮರಿನಾ ಬೀಚ್ ನಲ್ಲಿ ಅಲೆದಾಡುತ್ತಾ ಕತ್ತಲು ಆವರಿಸಲು ಮನೆ ಸೇರಿದೆವು. ಮನೆಯ ಹೆಂಗಸರು ರಾತ್ರಿಯ ಉಟಕ್ಕೆ ತಯಾರಾಗಿದ್ದರು. ಕಾಫೀ ತಂದು ನನಗೆ ಕೊಡುತ್ತ ಆಕೃತಿಯ ಅಮ್ಮ ನನ್ನಲ್ಲಿ ಸಿನೆಮಾದ ಬಗ್ಗೆ ವಿಚಾರಿಸಿದರು ಅವರದೇ ತಮಿಳ್ ನಲ್ಲಿ. ನಾನು ಕೈಸಜ್ನೆ ಯಲ್ಲಿ ಅವರಿಗೆ ಉತ್ತರಿಸಿದೆ.

ಶನಿವಾರದ ರಾತ್ರಿ ಅವರು ಹೊರ ಉಟಕ್ಕೆ ಹೋಗುವುದು ವಾಡಿಕೆ. ಎಂಟಕ್ಕೆ ಮೂರೂ ಮಳಿಗೆಗಳನ್ನು ಮುಚ್ಚಿದ ನಂತರ ಊಟಕ್ಕೆ ಅಣ್ಣ ತಮ್ಮಂದಿರು ಅಣಿಯಾದರು, ಮೂರು ಫ್ಯಾಮಿಲಿ ಮೂರು ಕಾರ್ ನಲ್ಲಿ ಹೊರಟು ರೆಡಿಯಾದವು. ಆಕೃತಿ ತನ್ನ ಅಪ್ಪ ಅಮ್ಮನ ಜೊತೆಗೆ ಬೆಳಗ್ಗೆ ನಾವು ಊರು ಸುತ್ತಿದ ಸೇನ್ಟ್ರೋ  ಹತ್ತಿದಳು. ಪ್ರುಕ್ರುತಿ ಅವಳ ಅಪ್ಪ ಅಮ್ಮನನ್ನು ಹಿಂಬಾಲಿಸಿ ಎಸ್ಟೀಮ್ ಏರಿದಳು.

ನನ್ನನ್ನು ಮತ್ತು ಆದರ್ಶ್ ನನ್ನು ದೊಡ್ಡಪ್ಪ ಗಣಪತಿ ತಮ್ಮ ಹೋಂಡ ಸಿಟಿ ಯಲ್ಲಿ ಕುಳ್ಳಿರಿಸಿದರು. ಮೂರು ಕಾರ್ ಗಳು ಜೊತೆಗೆ ಗೆಟ್ ಬಿಟ್ಟವು.

ಮೊದಲೇ ಬುಕ್ ಮಾಡಿಕ್ಕೊಂಡ ರೂಂ ನೊಳಗೆ ಸೇರಿಕೊಂಡೆವು, ಆಕೃತಿ ಆಗಲೇ ಅಲ್ಲಿ ತಲುಪಿದ್ದಳು. ಸಲ್ಪದರಲ್ಲಿ ಪ್ರುಕ್ರುತಿ ತನ್ನ ತಂದೆ ತಾಯಿಯೊಂದಿಗೆ ತಲುಪಿದಳು. ಎಲ್ಲರೂ ಟೇಬಲ್ ನ ಸುತ್ತಲು ಜೋಡಿ ಜೋಡಿಯಾಗಿ ಕುಳಿತುಕ್ಕೊಂಡರು. ನನಗೆ ಆದರ್ಶ್ ಜೋಡಿಯಾಗಿದ್ದ, ಆಕೃತಿಗೆ ಪ್ರಕೃತಿ.

ಸಲ್ಪದರಲ್ಲಿ ಅರ್ದ ಅಡಿ ಎತ್ತರದ ಕೇಕ್ ಅನ್ನು ಟೊಪ್ಪಿ ತೊಟ್ಟ ವೈಟರ್ ತಂದು ನಡು ಟೇಬಲ್ ಮೇಲೆ ಇಟ್ಟ, ಪಕ್ಕದಲ್ಲಿದ್ದ ಗಣಪತಿ "ಹೇಗಿದೆ ಸುರ್ಪ್ರೈಸ್..?" ಅಂದ.
ಎದುರು ಕುಳಿತಿದ್ದ ಆಕೃತಿ ಎಡೆಗೆ ದೃಷ್ಟಿ ಹಾಯಿಸಿದೆ. ಅವಳೇ ಇದರ ಹಿಂದಿನ ಕರ್ತು ಎನ್ನುವುದು ನನ್ನ ನೋಟದಲ್ಲಿ ಮನವರಿಕೆ ಯಾಗುತ್ತಿತ್ತು.
ಅವಳು ತಾನಲ್ಲ ಎಂದು ಕುತ್ತಿಗೆ ಎಡಕ್ಕೂ, ಬಲಕ್ಕೂ ತಿರುಗಿಸಿದಳು.
ಗಣಪತಿಯವರಲ್ಲಿ "ಥ್ಯಾಂಕ್ಸ್ ಫಾರ್ ದಿ ಸುರ್ಪ್ರೈಸ್ " ಅಂದೆ.
ಅವರು "ನಿಮ್ಮಿಬ್ಬರ ಸಂಭಾಷಣೆ ಬೆಳಗ್ಗೆ ಗಮನಿಸಿದೆ, ನಮಗಾಗಿ ಇಷ್ಟು ಮಾಡಿದ ನಿನಗೆ ನಿನ್ನ ಹುಟ್ಟು ಹಬ್ಬದಂದು ಸಣ್ಣ ಉಡುಗೊರೆ ಕೊಡದಿದ್ರೆ ಹೇಗಾಗುತ್ತೆ ಎಂಬುವುದು ಮನದಲ್ಲಿ ನಾಟಿತು, ಹೇಗೂ ಶನಿವಾರ ಹೊರಗೆ ಊಟಕ್ಕೆ ಬರುತ್ತೇವೆ ಅದರಲ್ಲೇ, ನಿನಗೊಂದು ಟ್ರೀಟ್ ಅರೆಂಜ್ ಮಾಡಲು ಯೋಚಿಸಿದೆ. ಹ್ಯಾಪಿ ಬರ್ತ್ ಡೇ ವೈಭವ್, ನಿನ್ನೆಲ್ಲ ಕನಸು ನೆರವೇರಲಿ" ಎಂದರು.

ಅವರ ಮಾತು ನನಗೆ ತುಂಬಾ ಪ್ರಿಯ ವೆನಿಸಿತು, ಮಾತು ಹೊರಡಲಿಲ್ಲ "ಥ್ಯಾಂಕ್ಸ್ ಅ ಲೋಟ್" ಅಂದೆ.

ಕೇಕ್ ಅನ್ನು ಕತ್ತರಿಸಿ ಮೊದಲಿಗೆ ಅವರಿಗೆ ತಿನ್ನಿಸಿದೆ. ನಂತರ ಪಕ್ಕದಲ್ಲಿದ್ದ ಆದರ್ಶ್ಗೆ.. ಯಾರಿಗೂ ಡೌಟ್ ಬಾರದಂತೆ ಆಕೃತಿಗೆ ಕೊನೆಯ ತುಂಡನ್ನು ತಿನ್ನಿಸಿದೆ. ಅವಳು ತನ್ನ ಬಾಯಲ್ಲಿನ ಕೇಕ್ ಅನ್ನು ನನಗೆ ತಿನ್ನಿಸಿದಳು.

ಊಟ ಮುಗಿಸಿ, ಫಿಂಗರ್ ಬೌಲ್ ನಲ್ಲಿ ಕೈ ತೊಳೆಯಲು ಗಣಪತಿ ನನ್ನಲ್ಲಿ "ವೈಭವ್ ನೀನು ಮಹಾಬಲಿ ಪುರಂ ನೋಡಿದ್ದಿಯಾ..?"ಎಂದರು.
ನಾನು "ಇಲ್ಲ, ಹೋಗಲಿಕ್ಕೆ ಆಗ್ಲಿಲ್ಲ, ಹಿಂದೆ ಇಲ್ಲಿ ಇರುವಷ್ಟು ದಿನ" ಅಂದೆ.

ಅವರು ಮನೆಯ ಹೆಂಗಸರಲ್ಲಿ ನಾಳೆಗೆ ಮಹಾಬಲಿಪುರಂ ಕುರಿತು ವಿಚಾರಿಸಿದಾಗ ಎಲ್ಲರೂ ಒಪ್ಪಿದರು. ಅವರು "ನಾಳೆ ಬೆಳಗ್ಗೆ ಒಂಬತ್ತರ ಒಳಗೆ ಮಹಾಬಲಿಪುರಂ, ಸಂಜೆ ಒಳಗೆ ಮನೆಗೆ ಒಪಾಸ್ಸಗೋಣ.. ರಾತ್ರಿ ಎಂಟಕ್ಕೆ ನಿನ್ನ ಬಸ್ ಟಿಕೆಟ್ ಮಾಡಿಸಿದ್ದೇನೆ. ಏನಂತೀಯ ..?" ಎಂದು ನನ್ನ ಒಪ್ಪಿಗೆ ಕೇಳಿದ.
ನಾನು "ಸರಿ ಎಂದೆ"

ಮೊದಲ ದಿನದಲ್ಲೇ ಅವಳ ಮನೆಯವರಿಗೆ ಇಷ್ಟು ಹತ್ತಿರವಾದೆನಾ ಎಂದು ದಿಂಬನ್ನು ತಬ್ಬಿಕೊಳ್ಳುತ್ತಾ ಪ್ರಶ್ನೆ ಇಡುತಿದ್ದೆ, ದಿಂಬಿನ ಬದಿಯಲ್ಲಿ "ಮುಂಬೆ ವಾ ಮುಂಬೆ ವಾ" ಹಾಡು ಕೆಳಗೆ ತನ್ನ ರೂಂ ನಲ್ಲಿ ಮಲಗಿರುವ ಅವಳಿಗೆ ಮೇಲಿನ ರೂಂ ನ ಒಂಟಿತನ ನೀಗಲು ಆಮಂತ್ರಿಸುತಿತ್ತು.

 

ಮುಂದಿನ ಸಿಪ್