ಸಿಪ್ - ೩೭

 

ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ....
 

ಹಿಂದಿನ ಸಿಪ್ 



ಡಿ - ಫ್ಯಾಕ್ಟರ್ - ೨೦೦೬ ನಲ್ಲಿ ಮತ್ತೆ ಪುನಃ ಬದಿಮನಿ ನನಗೆ ಹೋಸ್ಟ್ ಮಾಡಲು ಹೇಳಿದ. ೯೬ ರಲ್ಲಿ ಶುರುವಾದ ಕಂಪೆನಿಗೆ ಹತ್ತರ ಸಂಭ್ರಮ. ಚೆನ್ನೈನ ಮುರುಗನ್ ತನ್ನ ಮೂರು ಸೆಂಟರ್ ಗಳಿಗೂ ಸಮವಾಗಿ ದೇಣಿಗೆ ನೀಡಿದ್ದರು. ಮೇಲಾಗಿ ಕಂಪೆನಿಯ ಫೈನೆಂಶಿಯಲ್ ಸ್ಟೇಟಸ್ ಚೆನ್ನಾಗೆ ಇತ್ತು. ಇದು ಹಣವನ್ನು ಹೊಳೆಸಲು ಯಾವುದೇ ಒತ್ತಡ ಒಡ್ದಲಿಲ್ಲ.

"ಏನಿದ್ದರೇನು...? ಯಾರಿದ್ದರೇನು ...?ನಮ್ಮವರು ಎಂಬವರು ನಮ್ಮ ಜೊತೆ ಇಲ್ಲದಿದ್ದರೆ .. ಆಗ ಸ್ವರ್ಗವು ನರಕದಂತೆ "

ಬದಿಮನಿಗೆ ನಾನು "ಈ ವರ್ಷದ  ಯಿಎಲ್ಟಿಪಿ ಗಳಿಗೆ ನೆರ್ವಹಣೆಯ ಹಾರ ಭಾರ ಕೊಡಿ" ಎಂದು ಸೀಧಾ ಅವರ ಪ್ರೊಪೋಸಲ್ ಅನ್ನು ತಳ್ಳಿದೆ. ಅವರು ಕಳೆದ ವರ್ಷದಂತೆ ಬೆಣ್ಣೆ ಹಚ್ಚಲು ಶುರುಮಾಡಿದರು . ಆದರೆ ಒಮ್ಮೆ ಬೆಣ್ಣೆಯ ಆಸೆ ತೋರಿಸಿ ಕೈ ಒರೆಸಿಕೊಂಡದನ್ನು ಮರೆಯದೇ , ಅವರಿಗೆ ಬಾಗಲಿಲ್ಲ. ನಂತರ ಅವರು ಯಾರನ್ನೋ ಹಿಡಿದು ಬೆಣ್ಣೆ ಮುಕ್ಕಿಸಿದರು.

ಹೊಸ ಬಾಚ್ ನಲ್ಲಿ ಹಿಂದಿನ ಹುರುಪಿರಲಿಲ್ಲ,ನನ್ನಲ್ಲೂ ; ಹೊಸ ಇಎಲ್ಟಿಪಿ ಎಲ್ಲರೂ ಲೋಕಲ್ ನವರಾಗಿದ್ದರು ಅದಕ್ಕೆ ಅವರು ಮನೆ,ಗೆಳೆಯರು ಎಂಬ ಅವರದ್ದೇ ಆದ ಪ್ರಿಯೋರಿಟಿ ಕಂಡುಕೊಂಡಿದ್ದರು. ನನಗೆ ಆಕೃತಿ ಇಲ್ಲದಿರುವುದರಿಂದ ಏಕಾಂತವೇ ಪ್ರಿಯೋರಿಟಿ ಯಾಗಿತ್ತು. ಡೆಸ್ಕ್ ನ ಮೇಲೆ ಇಟ್ಟಿರುವ ಅವಳ ಉಡುಗೊರೆ, ಮತ್ತು ಬಿಟ್ಟು ಹೋಗಿರುವ ಕುರುಹನ್ನು ದಿನಕ್ಕೆ ನೂರು ಬಾರಿ ಸವರುತ್ತ ಮುದ್ದಿಸುತಿದ್ದೆ. ಡಿಸೆಂಬರ್ ಕೊನೆಯವಾರದಲ್ಲಿ ಕಳೆದ ವರ್ಷದಂತೆ ಕ್ಲೈಂಟ್ ಶುಟ್ ಡೌನ್ ಇರುವಾಗ ಏಕಾಂತ ಇನ್ನು ಹೆಚ್ಚಾಗಿ ಕಾಡ ತೊಡಗಿತು.

'ಕೆಲಸವಿಲ್ಲದ ತಲೆ ಬೇಡದ ಆಲೋಚನೆಗಳ ಗೋಡೌನ್ '  ಇಲ್ಲ ಸಲ್ಲದ ಆಲೋಚನೆಗಳು. ಮತ್ತೆ ಅದೇ ಹಳೆಯ ನೆನಪು, ಕಾಫಿಯ ಪರಿಮಳ, ಬೈಟು ನ ಸಿಹಿ ನೆನಪಾಗುತಿತ್ತು. ಆದರೆ ಅದನ್ನು ಪೂರೈಸಲು ಅವಳ ಕೊರತೆ ಪರಿಪರಿಯಾಗಿ ಕಾಡುತಿತ್ತು.

ಅವಳು ಚೆನ್ನೈನ ನಮ್ಮ ಬ್ರಾಂಚ್ ನಲ್ಲಿ ಇದ್ದಿದ್ದಾದರೆ ಕನಿಷ್ಠ ಪಕ್ಷ ಅವಳೊಂದಿಗೆ ಆಫೀಸ್ ಕ್ಯಾಮ್ಯುನಿಕೆಟರ್ ನಲ್ಲಿ ಲಲ್ಲೆ ಹೊದಿಯ ಬಹುದಿತ್ತು, ಆದರೆ ಹೋಗಿರುವುದು ಕ್ಲೈಂಟ್ ಲೋಕೇಶನ್ ಅಲ್ಲಿ ಅವಳಿಗೆ ಸಂಪರ್ಕಿಸಲು ಸಾದ್ಯವಿಲ್ಲ. ಕೆಮೆರಾ ಮೊಬೈಲ್ ಅನ್ನು ಆಫೀಸ್ ಪ್ರಿಮೈಸಿಸ್ ನೊಳಗೆ ಬಿಡರು. ಜಿ-ಟಾಕ್ ನಲ್ಲಿ ಮಾತಾಡುವ ಎಂದರೆ ಅಲ್ಲೂ  ಅದಕ್ಕೆ ಗ್ರಹಣ.

ಆಫೀಸ್ ನ ಒಂಬತ್ತು ಗಂಟೆ ಕಳೆಯುವುದೆಂದರೆ ಒಂದೊಂದು ದಿನವು ಜೈಲಿನಂತೆ. ಆ ಬದಿಯಲ್ಲಿ ಜೀವನ್ ನೂ ವಿರಹದಲ್ಲಿ ಬೆಂಡಾಗಿ ಹೋಗಿದ್ದ, ಪ್ರೀತಿಯನ್ನು ಬೆಂಗಳೂರು ಕ್ಲೈಂಟ್ ಲೋಕೇಶನ್ ಗೆ ಕಳುಹಿಸಿದ್ದರು.

ಜೀವನ್ ಶುಕ್ರವಾರದ ಸಂಜೆ "ಬಾಯ್ ಕಣೋ, ಇನ್ನು ನಿನ್ನನ್ನು ನೆಕ್ಷ್ತ ವರ್ಷ ಮೀಟ್ ಆಗ್ತೇನೆ" ಎಂದು ಬ್ಯಾಗ್ ಹೆಗಲಿಗೆರಿಸಿದ.
"ಏನಪ್ಪಾ ಸುಡ್ದನ್ ಆಗಿ ಹೊರಟಿ,ಎಲ್ಲಿ ಹೋಗ್ತಾ ಇದ್ದೀಯ...?"
"ನ್ಯೂ ಇಯರ್ ಸೆಲೆಬ್ರೇಟ್ ಮಾಡಲು,ಗೋವಾ ಗೆ"
"ನಂಗೆ ಮೊದಲು ಹೇಳಿದ್ರೆ ನಾನು ಬರ್ತಿದ್ನಲ್ಲೋ...  ಜೈಲಂತೆ ಆಗ್ತಾ ಇದೆ ಆಫೀಸ್" ಅಂದೆ.
ಅವನು "ನಿನ್ನೆ ಫ್ರೆಂಡ್ ಕಾಲ್ ಮಾಡಿ ಹೇಳಿದ, ಹಾಗೆ ಒಮ್ಮೆಲೇ ತಯಾರಾಗಿ ಹೊರಟೆ, ಕಾಲೇಜ್ ಫ್ರೆಂಡ್ಸ್ ಗಳೆಲ್ಲ ಬರ್ತಾರೆ ಅಂತೆ ಹಾಗೆ ಅವರನ್ನು ಭೇಟಿಯಾದ ಹಾಗು ಆಗುತ್ತೆ, ಸಮಯ ಕಳ್ದಾಗು ಆಗುತ್ತೆ ಎಂದು ಹೊರಟೆ"
"ಹ್ಯಾಪಿ ಜೆರ್ನಿ , ಹ್ಯಾಪಿ ನ್ಯೂ ಯೀರ್ ಬಡೀ .. ಎಂಜಾಯ್ "ಎನ್ನುತ್ತಾ ಅವನನ್ನು ಬಿಟ್ಟು ಕೊಟ್ಟೆ.

ಟಿ.ಟಿ ಆಡಿ ಬಂದ ಅವಿನಾಶ್ ನನ್ನಲ್ಲಿ "ಜೀವನ್ ಹೋದ್ನಾ...?" ಅಂದ.
"ಹೌದು "
ನನ್ನಲ್ಲಿ "ಮಗಾ ಚಾನ್ಸ್ ಹೊಡಿತಾ ಇದ್ದಾನೆ, ಗೋವಾಕ್ಕೆ ಹೊರಟ ಅಚಾನಕ್ಕಾಗಿ..."
"ಗೆಳೆಯರು ಬರ್ತಾರೆ ಅಂತೆ ಅಲ್ಲಾ ...? ಇರ್ಲಿ ಬಿಡು ಎಂಜಾಯ್ ಮಾಡ್ಲಿ"
"ಗೆಳೆಯರು ಇಲ್ಲ , ಯಾರು ಇಲ್ಲ ... ಎಲ್ಲಾ ಸುಳ್ಳು.. ಎಣ್ಣೆ ಪಾರ್ಟಿಯ ಆಸೆಯಲ್ಲಿ ನಾನು ಅವನಲ್ಲಿ ನಾನೂ ಅವನೊಂದಿಗೆ ಬರುತ್ತೇನೆ ಎಂದು ಹೇಳಿದೆ ನಿನ್ನೆ ರಾತ್ರಿ, ಆಗ ಅವನ ಗುಟ್ಟು ರಟ್ಟಾಯಿತು."
"ಏನೋ ಗುಟ್ಟು ...?"
"ಅದೇ , ಆ ಪ್ರೀತಿಯನ್ನು ಭೇಟಿಯಾಗಲು ಹೋಗ್ತಿದ್ದಾನೆ"
"ಇರಲಿ ಬಿಡೋ, ವಿರಹಿ ಮನ ಬಯಸುತ್ತೇ ಸಾಂಘ್ಯ..."
"ಭೇಟಿ ಮಾದುವುಡಿದ್ರೆ ಬೆಂಗಳೂರಿಗೆ ಹೋಗಬೇಕಿತ್ತು, ಅದು ಬಿಟ್ಟು ಅವಳನ್ನು ಗೋವಾಕ್ಕೆ ಕರೆಯುವ ಅಗತ್ಯ ಏನಿತ್ತು..?"
ಮೌನದಲ್ಲಿದ್ದೆ. ಅವನು "ವಯಸ್ಸಿನ ಚಟ ಇಬ್ಬರಿಗೂ, ಹಾಸ್ಟೆಲ್ ನಲ್ಲಿ ಇರುವ ಅವಳಿಗೆ ಅಲ್ಲಿ ಬಟ್ಟೆ ಬಿಚ್ಚಲು ಸಾದ್ಯವಿಲ್ಲ, ಅದಕ್ಕೆ ಇವನನ್ನು ಗೋವಾಕ್ಕೆ ಕರೆದಿದ್ದಾಳೆ, ಇವ ಜೊಲ್ಲು ಸುರಿಸುತ್ತ ಹೋಗಿದ್ದಾನೆ, ನ್ಯೂ ಯೀರು ಇಲ್ಲ ಎಂತದ್ದು ಇಲ್ಲ, ಬರಿ ರಾತ್ರಿಯ ಮೆರವು, ಅಷ್ಟೇ.."
ತನ್ನನ್ನು ಬಿಟ್ಟು ಹೋದ ರೂಮೇಟ್ ನ ಮೇಲೆ ಅವಿನಾಶ್ ಕೋಪಗೊಂಡಿದ್ದ. ನಾನು "ಹಾಗೇನು ಇಲ್ಲ...ನಿಂಗೆ ಗೊತ್ತಿರುವ ಹಾಗೆ ಮಾತಾದ ಬೇಡ" ಎಂದೆ.

ಅವನು "ನಿನಗಿಂತ ಅವನು ನನಗೆ ಚೆನ್ನಾಗಿ ಗೊತ್ತು ಕಣೋ, ಕಳೆದ ಮೂರು ವರ್ಷದಿಂದ ಅವನೊಂದಿಗೆ ಇದ್ದೇನೆ, ಕೆಲಸಕ್ಕೆ ಸೇರುವ ಹೊಸದರಲ್ಲಿ ಪಕ್ಕಾ ಗಾಂಧೀ ತಾರಾ ಆಡುತಿದ್ದ, ನನಗಿಂತ ಹೆಚ್ಚಿನ ಸಂಬಳ ಬರುತಿದ್ದರೂ, ಜಿಪುಣಾಸಿ ಬುದ್ದಿ ಬಿಟ್ಟಿರಲಿಲ್ಲ. ಮೊದಲಬಾರಿಗೆ ಮನೆಗೆ ಹೋಗುವಾಗ ಪ್ಹೂತ್ಪಾಥ್ ಮೇಲಿನ ಬಟ್ಟೆ ಖರೀದಿಸಿ ಅದನ್ನು ಬ್ರಾಂಡೆಡ್ ಮಳಿಗೆಯ ಕವರಿನಲ್ಲಿ ಹಾಕಿ ಮನೆಯವರಿಗೆ ಕೊಟ್ಟಿದ್ದ, ಆ ಮಟ್ಟಿನ ಜಿಪುಣಾಸಿ ಈಗ ಪ್ರೀತಿಯಲ್ಲಿ ಬಿದ್ದ ಮೇಲೆ ಅಡ್ಡಾದಿಡ್ಡಿ ಖರ್ಚು ಮಾಡುತಿದ್ದಾನೆ. ವೀಕೆಂಡ್ ಒಂದರಲ್ಲೇ ಇಬ್ಬರ ಖರ್ಚು ಹಲವು ಸಾವಿರಕ್ಕೆ ತಲುಪಿರುತ್ತದೆ."
"ಇರಲಿ ಬಿಡೋ"
"ಏನೋ.. ಹಿಂದೆ ನಾವು ರೂಮನಲ್ಲಿ ಬಾಟಲ್ ಹೊಡಿಯುವಾಗ, ಹೊಡೆಯದ ಇವನೊಬ್ಬ ಮಾಡುವ ಜಗಳ, ಆಡುವ ಮಾತು ಕುಡಿದ ಕಿಕ್ಕನ್ನು ಇಳಿಸುತಿತ್ತು, ಇಂತಹವನು ಈಗ ಶನಿವಾರ ರಾತ್ರಿ ರೂಮಲ್ಲಿ ಇರುವುದೇ ಇಲ್ಲ, ಅವಳ ಜೊತೆ ಹಾರ್ಡ್ ರೊಕ್ , ಪುಬ್ಬ್ ಹೇಳಿ ಸುತ್ತುತಿರುತ್ತಾನೆ, ಶನಿವಾರ ಮನೆ ಬಿಟ್ಟವ ಭಾನುವಾರ ರಾತ್ರಿ ಮನೆ ಸೇರುತ್ತಾನೆ, ಈ ವಿಷಯ ನಿಂಗೆ ಗೊತ್ತಾ ...?

ನಿನ್ನೆದುರಿಗೆ ಸಾಚಾ ತಾರಾ ಆಡ್ತಾನೆ, ಯಾಕಂದ್ರೆ ಮನೆಯವರಿಗೆ ಅವನ ಅಸಲಿತನ ಗೊತ್ತಾಗುವ ಹೆದರಿಕೆ ಅವನಿಗೆ. ಅವರದಿಬರ್ದು ಎಲ್ಲ ಮುಗ್ದು ಹೋಗಿದೆ. ನೀನು ಅಂದು ಕೊಂಡಂತೆ ಇಬ್ಬರ ನಡುವಲ್ಲಿ ಪ್ರೇಮ ಎಗ್ಗಿಲ್ಲದೆ ನಡೆಯುತ್ತಿದೆ. ಇಬ್ಬರು ಸೇರಿ ಲೀವಿಂಗ್ ಟುಗೆದರ್ ವರೆಗೂ ಹೋಗಿದ್ದರು, ಆದರೆ ನಾವು ಬಯಸಿದ್ದು ಒಂದು ದೈವ ಕೊಟ್ಟದ್ದು ಒಂದು ಅಂತಾರಲ್ಲ ಹಾಗಾಯ್ತು , ಅವಳಿಗೆ ಲಕ್ಷ್ಮಿ ಸರ್ ಮತ್ತೆ ಬೆಂಗಳೂರಿಗೆ ಅಟ್ಟಿದರು. ಅವನು ನಮ್ಮ ಫ್ಲಾಟ್ ನಲ್ಲೆ ಬಿದ್ದುಕೊಂಡ.
ಅವನು ದೊಡ್ಡ ಹರಾಮಿ ಕಣೋ, ಎದುರಿಗೆ ಚೆನ್ನಗಿರ್ತಾನೆ ಮನಸೊಳಗೆ ಹಾಕುವ ಗಂಟು ಯಾರಿಗೂ ಕಾಣಿಸಲ್ಲ" ಎಂದ ಅವಿನಾಶ್ ಕೋಪದಲ್ಲಿ.

ಮುಗ್ದ ಲುಕ್ ಕೊಡುತಿದ್ದ ಜೀವನ್ ನ ಇನ್ನೊಂದು ಮುಖ ನನ್ನೆದುರಿಗೆ ಅನಾವರಣ ವಾಯಿತು. ಮೊದಲಿಗೆ ನಂಬಿಕೆ ಬಾರದಿದ್ದರೂ ಕೆಲವು ಶನಿವಾರದ ಸಂದರ್ಭಗಳನ್ನು ತಾಳೆ ಹಾಕಿದಾಗ ಅವನ ಮಾತಿನಲ್ಲಿನ ನಿಜದ ವ್ಯಾಪ್ತಿ ತಿಳಿಯಿತು.
"ಇಟ್ಸ್ ಓಕೆ ಡ, ಅವನ ಲೈಫ್ ಇರ್ಲಿ ಹಾಗೆ, ನಂಗೆ ನಿಂಗೆ ಏನಾದ್ರೂ ಪ್ರಾಬ್ಲಮ್ ಇದೆಯಾ...?" ಅಂದೆ.
ಅವನು ಸುಮ್ಮನಾದ.

ಅವನ ಗಮನ ಬೇರೆಡೆಗೆ ಹಾರಿಸಲು "ಬಾಯ್ ತೇರ ಕೇಟ್ ಕ ಕ್ಯಾ ಹುವಾ..? ಕಬ ಹೇ ರಿಸಲ್ಟ್ ..?"
"ಜನ್ ಥರ್ಟೀನ್ಥ್ ಕೋ ಆಯೇಗಾ, ಥರ್ಟೀನ್ ಮೈ ಲಕ್ಕಿ ನಂಬರ್ , ಈ ಬಾರಿ ನನ್ನ ಲುಕ್ ಹೇಗಿದೆ ಎಂದು ನೋಡಬೇಕು"
"ಥರ್ಟೀನ್ ... ಬಲಾಕ್ !!" ಅಂದೆ.
ಬಲಾಕ್ ನ ಹೆಸರು ಕೇಳುತ್ತಲೇ ಅವನ ಮುಖ ಅರಳಿತು, ಕೋಪ ಕರಗಿತು.


*******************
 

ಜನವರಿ ೧೩ ಕ್ಕೆ ಟ್ರೇನಿಂಗ ನಲ್ಲಿ ಕೂತಿದ್ದೆವು ನಾವು ಮೂವರು, ಇವನಿಗೆ ಯಾವುದು ತಲೆಗೆ ಹೋಗುತ್ತಿರಲಿಲ್ಲ, ಸಂಜೆ ಬರಬೇಕಿದ್ದ ರಿಸಲ್ಟ್ ಕುರಿತು ಚಿಂತಾಗ್ರಂತ ನಾಗಿದ್ದ. ಇಂತಾದ್ರಲ್ಲಿ ಮಧ್ಯಾಹ್ನ ವೆ ರಿಸಲ್ಟ್ ಹೊರಹಾಕಿತು ವೆಬ್ಸೈಟ್. ತನ್ನ ನಂಬರ್ ಅನ್ನು ಹಾಕಿ ರಿಸಲ್ಟ್ ನೋಡಿಕ್ಕೊಂಡ ೯೪.೫೬ ಪೆರ್ಸೇನ್ಟೈಲ್ ಸಿಕ್ಕಿತ್ತು ಅವಿನಾಶ್ಗೆ ಕಡೆ ಗಳಿಗೆಯಲ್ಲಿ ಮಾಡಿದ ಪ್ರಯತ್ನಕ್ಕೆ.

 

ಮೊದಲಿಗೆ ಖುಷಿ ಪಟ್ಟ, ನಂತರ "ಇಷ್ಟು ಒಳ್ಳೆ ಪೆರ್ಸೇನ್ಟೈಲ್  ಬೀಳುತ್ತದೆ ಎಂದು ಗೊತ್ತಿದ್ದರೆ ನಾನು 'ಏ+' ಗ್ರೇಡ್ ಕಾಲೇಜ್ ಫಾರಂ ಫೈಲ್ ಮಾಡ್ತಿದ್ದೆ, ಸುಮ್ನೆ ಟ್ರೈಲ್ ನೋಡಲು ಕೊಟ್ಟ ಪರೀಕ್ಷೆ ಇಷ್ಟು ಒಳ್ಳೆ ಅಂಕ ಬಂತಲ್ಲಾ" ಎಂದು ಕೊರಗಿದ.

 

ಜೀವನ್ ಅವನಿಗೆ "ಅವೈಲೆಬಲ್ ಇರುವವ ಕಾಲೇಜ್ ಪ್ರೋಸ್ಪೆಕ್ಟಾಸ್ ತುಂಬು" ಅಂದ.

 

ಅವನು ಗೂಗಲ್  ನಲ್ಲಿ ದೇಶದ ಪ್ರತಿಷ್ಟಿತ ಬಿಸಿನೆಸ್ ಸ್ಕೂಲ್ ಗಳ ಸೈಟ್ ತೆರೆದು ಅಲ್ಲಿಅರ್ಜಿ ಸಲ್ಲಿಸಲು ನೋಡಿದ, ಆದರೆ ಅವೆಲ್ಲವೂ ತಿಂಗಳ ಹಿಂದೆಯೇ ತಮ್ಮ ಅಪ್ಲಿಕೇಶನ್ ಪ್ರೋಸೆಸ್ಸ್ ಅನ್ನು ನಿಲ್ಲಿಸಿದ್ದವು.

 

ನಂತರ ಅವುಗಳ ಕೆಳಗಿನ ಕಾಲೇಜ್ ಗಳನ್ನು ಪಟ್ಟಿ ಮಾಡಿ ಅವನ್ನು ನೋಡಿದ, ಅಲ್ಲೂ ಅದೇ ರೀತಿಯ ಉತ್ತರ ವಿತ್ತು.  ನಿರಾಶೆಗೊಂಡು "ಈ ವರ್ಷ ಹಾಳಾಯ್ತು, ಬರುವ ವರ್ಷ ಕಷ್ಟ ಪಟ್ಟು ತಯಾರಿ ನಡೆಸಿದ್ರೂ ಇಷ್ಟು ಒಳ್ಳೆ ಪೆರ್ಸೇನ್ಟೈಲ್  ಸಿಗುತ್ತದೆ ಎಂಬ ವಿಶ್ವಾಸವಿಲ್ಲ, ಸಿಕ್ಕ ಬಿ - ಗ್ರೇಡ್ ಕಾಲೇಜ್ ಗೆ ಸೇರ್ತೇನೆ" ಅಂದ.

 

ಜೀವನ್ ಅವನಿಗೆ "ಎಂ.ಬಿ.ಏ  ನಾಮ್ಕಾ ವಾಸ್ತೇ ಮಾಡಬೇಡ, ಲೆಟ್ ಆದ್ರೂ ಪರವಾಗಿಲ್ಲ, ಒಳ್ಳೆ ಇನ್ಸ್ಟಿಟ್ಯುಶನ್ ನಿಂದ ಮಾಡು" ಎಂಬ ಸಲಹೆ ಕೊಟ್ಟ.

 

ಆದರೂ ಅವನು ಎರಡು ಕಾಲೇಜ್ ನ ಫಾರಂ ಸಾವಿರ ಮತ್ತು ಸಾವಿರದ ಎಂಟುನೂರು ರುಪಾಯಿ ಕಟ್ಟಿ ಫಿಲ್ ಮಾಡಿಕ್ಕೊಂಡ.

 

ಮುಂದಿನ ಸಿಪ್