ಸಿಪ್ - ೩೮

ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ....
 

ಹಿಂದಿನ ಸಿಪ್ 


ಬೆಳಗ್ಗೆ ಬಂದು ನನ್ನ ಜಿ. ಟಾಕ್ ಸ್ಟೇಟಸ್ ಅನ್ನು "ವೈಟಿಂಗ್ ಫಾರ್ ದಿ ಮೊಮೆಂಟ್ ಫಾರ್ ವ್ಹಿಚ್ ಐ ವಾಸ್ ವೈಟಿಂಗ್ ಫ್ರೊಂ ಪಾಸ್ಟ್ ಟು ಯೀರ್ಸ್" ಎಂದು ಸೆಟ್ ಮಾಡಿಕ್ಕೊಂಡೆ.
೨೦೦೫ ಇಎಲ್ಟಿಪಿ ಗ್ರೂಪ್ ನಲ್ಲಿದ್ದ ಪ್ರೊಮೋಷನ್ ಗೆ ಮೋಸ್ಟ್ ಡಿಸೆರ್ವ್ಡ್ ಕೆಂಡಿಡೆತ್ ನಾನಾಗಿದ್ದೆ. ಎಂಬ ವಿಶ್ವಾಸದಲ್ಲೇ ಆ ಸ್ಟೇಟಸ್ ಅನ್ನು ಹಾಕಿದ್ದೆ. ನಲ್ವತೈದು ಮಂದಿಯ ಬಾಚ್ ನಲ್ಲಿ ಎಲ್ಲರ ಕ್ಕಿಂತ ಮೊದಲು ನನಗೆ ಪ್ರಾಜೆಕ್ಟ್ ಅಸೈನ್ ಆಗಿತ್ತು, ಇದೆ ನನ್ನ ವಿಶ್ವಾಸದ ಮೂಲವಾಗಿತ್ತು. ಜೊತೆಗೆ ಎರಡು ವರ್ಷದಲ್ಲಿ ಪುಣೆ ಸೆಂಟರ್ ನ ಎಲ್ಲಾ ಆಗು ಹೋಗುಗಳಲ್ಲಿ ನಾನು ಮುಳುಗಿರುತಿದ್ದೆ. ಪ್ರಾಜೆಕ್ಟ್ ನಲ್ಲಿ ರೆವೆನ್ಯೂ ಗಳಿಸುವ ರಿಸೋರ್ಸ್ ಆಗಿ, ಪ್ರಾಜೆಕ್ಟ್ ಹೊರಗೆ ಆಕ್ಟಿವ್ ಪಾರ್ಟಿಸಿಪೆನ್ಸ್ ತೋರಿಸುವ ಹುಡುಗನಾಗಿ ಎನ್ನುವದು ನನ್ನ ಜೊತೆಗಿದ್ದ ಟ್ರಂಪ್ ಕಾರ್ಡ್ ಆಗಿತ್ತು.

ಉಟಕ್ಕೆ ಹೋದಾಗ ಎಲ್ಲರಲ್ಲೂ ಇದೆ ಮಾತು, "ನಿನ್ನದೇನೋ ಆಗುತ್ತೆ, ಒಂದುವರ್ಷ ಬೆಂಚಲ್ಲಿ ಇದ್ದ ನಮ್ಮದು ಏನೋ ಸಂಶಯ". ಇದು ನನ್ನನ್ನು ಮನಸಲ್ಲೇ ಉಬ್ಬುವಂತೆ ಮಾಡಿತ್ತು. ಜೊತೆಗೆ ಅವಿನಾಶ್, ಜೀವನ ತನ್ನ ಪೀರ್ ರೆಸೌರ್ಸ್ ಹೇಳಿ ನನ್ನ ಹೆಸರನ್ನು ಎಸ್ಕಲೆಟ್ ಮಾಡಿದ್ದರು.ಸೆಂಟರ್ ನ ಸಿನಿಯರ್ ಮೋಸ್ಟ್ ಟೆಕ್ನಿಕಲ್ ಸ್ಪೆಷಲಿಸ್ಟ್ ಲಕ್ಷ್ಮಿ ಸರ್ ಆತ್ಮೀಯರಾಗಿದ್ದರು. ಇನ್ನೇನು ಬೇಕು ರಾತ್ರಿಯ ಪಾರ್ಟಿ ಗೆ ಕಾರಣ.

ಗಂಟೆ ಮೂರು ಜಾರುತಿದ್ದಂತೆ, ಒಬ್ಬೊಬ್ಬರಿಗೆ ಬ್ಯಾಂಡ್ ಕನ್ಫರ್ಮೆಶನ್ ಮೇಲ್ ಬರಲು ಶುರುವಾಯಿತು. ಜೀವನ್ ತನಗೆ 'ಏ ಬ್ಯಾಂಡ್' ಬರುವುದಾಗಿ ಹೇಳಿದ.
"ಯು ಡಿಸೆರ್ವ್ ಇಟ್ !!" ಎನ್ನುತ್ತಾ ನಾನು ನನ್ನ ಮೇಲ್ ಬಾಕ್ಸ್ ಅನ್ನು ರೆಪ್ರೇಶ್ ಮಾಡ ತೊಡಗಿದೆ.

ಎರಡು ನಿಮಿಷದಲ್ಲಿ ಅವಿನಾಶ್ "ಬಿ ಬ್ಯಾಂಡ್" ಎಂದು ಕುಣಿದಾಡಿದ.
ಒಬ್ಬೊಬ್ಬರಾಗಿ ತನ್ನ ತನ್ನ ಬ್ಯಾಂಡ್ ಘೋಷಣೆ ಮಾಡಿಕೊಳ್ಳುತ್ತಾ, ಕ್ಯುಬಿಕಲ್ ನಿಂದ ಕ್ಯುಬಿಕಲ್ ನಲ್ಲಿ ಮೆರೆದಾಡುತಿದ್ದರು. ಅವರ ಜೊತೆಗೆ ನನ್ನನ್ನು ನಾನು ಹೋಲಿಸಿ ನೋಡಲಾರಂಬಿಸಿದೆ. ಎಲ್ಲರಕ್ಕಿಂತ ಮೇಲಿದ್ದೆ. ಮನಸ್ಸು ಹೇಳುತಿತ್ತು "ಬ್ಯಾಂಡ್ ಬಾರದಿದ್ದರೆ ತೊಂದರೆ ಇಲ್ಲ, ನಿನಗಾಗಿ ನಿನ್ನ ಪ್ರೊಮೋಷನ್ ಕಾಯ್ತಾ ಇದೆ" ಎಂದು.
ವಿಶ್ವಾಸ ಮೂಡುತಿತ್ತು.

ನನ್ನ ಮೌನವನ್ನು ಗುರುತಿಸಿ ಅವಿನಾಶ್ ನನ್ನ ಬಳಿ ಬಂದು "ಬಾರೋ, ಹೊರಗೆ ಹೋಗಿ ಬರೋಣ" ಎಂದು ನನ್ನನ್ನು ಸೀಟ್ ನಿಂದ ಮೇಲೆ ಎಬ್ಬಿಸಿದ.
ಒಲ್ಲದ ಮನಸ್ಸಿಂದ ಮೇಲೆದ್ದು ಅವನನ್ನು ಹಿಂಬಾಲಿಸಿದೆ. ದಾರಿಯಲ್ಲಿ ಸಿಕ್ಕ ತಲೆಗಳು "ವೈಭು.. ಏ ಬ್ಯಾಂಡ್...?" ಎಂದು ಪ್ರಶ್ನಿಸುತಿದ್ದರು. ಗಾಯದ ಮೇಲೆ ಉಪ್ಪು ಹಾಕಿದಂತಾಯಿತು. ಸುಮ್ಮನೆ ಆಸ್ ಯುಶ್ವಲ್ ಅವರಿಗೆ ತುಟಿ ಅರಳದಿದ್ದರೂ  ಬಲವಂತದಲ್ಲಿ ತುಟಿ ಅರಳಿಸಿ ನಗೆಯ ಉತ್ತರಕ್ಕೊಟ್ಟೆ. ಅವರು "ನಿಂಗೆ ಪ್ರೊಮೋಷನ್ ಬೇರೆ ಸಿಕ್ಕುತ್ತೆ, ನಮ್ಮಂತೆ ನೀನೇನು ಬೆಂಚ್ ಪಾರ್ಟಿ ಅಲ್ಲ ನೋಡು, ಸ್ಪೆಷಲ್ ಸ್ಕಿಲ್ ನ ಸ್ಪೆಷಲ್ ಪೆರ್ಸನ್" ಎನ್ನುತ್ತಾ ನನ್ನ ಮೇಲೆ ಬಾರದ ಐಶ್ವರ್ಯಕ್ಕೆ ಈರ್ಷೆ ಪಡುತಿದ್ದರು.
"ನಿಮಗೂ ಆಗುತ್ತೆ" ಎನ್ನುತ್ತಾ ಬಾಲ್ಕನಿ ಬಾಗಿಲು ತೆರೆದೆ.

ಕಾಫಿ ಹೀರುತಿದ್ದ ಬದಿಮನಿ ನನ್ನನ್ನು ನೋಡಿ, ನೋಡದವನಂತೆ ಒಳಗೆ ಬಂದ. ಎಂದಿನಂತೆ ಇದ್ದ ಅವನ ಈ ನಡುವಳಿಕೆ ನನಗೆ ಏನು ವಿಚಿತ್ರ ಎನಿಸಲಿಲ್ಲ. ಅವಿನಾಶ್ ಕೈಯಲ್ಲೊಂದು ಕಾಫಿ ಹಿಡಿದು ನನ್ನೆದುರು ಬಂದು ಟೇಬಲ್ ಮೇಲೆ ಕುಳಿತ.
"ಬಾಯ್, ಬ್ಯಾಂಡ್ ಸಿಕ್ಕಿಲ್ಲ ಎಂದು ಬೇಜಾರು ಮಾಡ ಬೇಡ ನಿನಗೆ ಶೂರ್ ಆಗಿ ಪ್ರೊಮೋಷನ್ ಸಿಗುತ್ತದೆ,ಪೋಸ್ಟ್ ಚೇಂಜ್ ಆಗುತ್ತದೆ" ಎನ್ನುತ್ತಾ ಕೈಯಲ್ಲಿದ್ದ ಕಪ್ ಮುಂದಕ್ಕೆ ಚಾಚಿದ. ಎರಡು ವರ್ಷಗಳಿಂದ ಜೊತೆಯಲ್ಲಿದ್ದರು ಒಂದು ದಿನಾನು ಅವನೊಂದಿಗೆ ಕಾಫಿ ಸವೆದಿರಲಿಲ್ಲ.

ಕಪ್ ಅನ್ನು ತೆಕೊಳ್ಳದೆ "ನೀನು ಕುಡಿ, ನಾನು ತೆಕ್ಕೊಂಡು ಬರ್ತೇನೆ" ಅಂದೆ.
ಅದಕ್ಕವನು "ನಾನು ಕಾಫೀ ಟೀ ಕುಡಿಯಲ್ಲ, ನಿನಗಾಗೆ ತೆಕೊಂಡು ಬಂದದ್ದು" ಎಂದ.
"ಕುಡಿ ಮಗ್ನೇ, ನಾಟಕ ಸಾಕು, ಐ ಅಂ ಆಲ್ರೈಟ್ .. "ಎನ್ನುತ್ತಾ ಕಾಫಿ ಮಷಿನ್ ಕಡೆಗೆ ನಡೆದೆ.
ಅವನು "ಮಾ ಕಸಂ, ನಾನು ಕಾಫಿ ಕುಡಿಯಲ್ಲ, ಕುಡಿ" ಎಂದನು.
ನಾನು ಸಿಪ್ ಹೀರುತ್ತಿರಲು "ಬಾಲ್ಯದಲ್ಲಿ ಒಮ್ಮೆ ಮನೆಗೆ ನೆಂಟರು ಬಂದಾಗ ಅವರಿಗೆ ಇಟ್ಟ ಕಾಫ್ಫೀಯನ್ನು ನಾನು ಕುಡಿದಿದ್ದೆ, ಇದಕ್ಕೆ ಸೆರ್ವಿಸ್ ನಲ್ಲಿರುವ ನನ್ನ ತಂದೆ ಸರಿಯಾಗಿ ಹೊಡೆದರು, ಬೇಸರ ವೆನಿಸಿತು ಬಂದವರ ಎದುರಿಗೆ ಹೊಡೆದದ್ದು, ಅಂದಿನಿಂದ ನಾನು ಯಾವತ್ತು ಕಾಫಿ ಕುಡಿಯಲ್ಲ ಎಂಬ ನಿರ್ಧಾರಕ್ಕೆ ಬಂದೆ." ಅಂದ ಸೇರಿಯಸ್ಸ್ ಆಗಿಯೇ. ಮಾತಿನಲ್ಲಿನ ಭಾವ, ಧಾಟಿ, ನೋಡಿದರೆ ಅವನ ಮಾತಿನಲ್ಲಿ ಸತ್ಯವಿದೆ ಎಂದು ಗೊತ್ತಾಗುತ್ತಿತ್ತು.
ಅವನ ಮಾತನ್ನು ನಾನು ನಂಬಲಿಲ್ಲ ಎಂದೆಣಿಸಿ ಅವನು "ಮಾ ಕಸಂ ಭೈ ಸಚ್ ಬೋಲ ರಹಾ ಹೂನ್ ಮೇ ಪೀತಾ ಹಿ ನಹಿ ಕಾಫೀ ಟೀ ಸಬ್ , ಲೇಕಿನ್ ಕೋಯಿ ರೀಸನ್ ಪೂಚ ತೊಹ್ ಪಸಂದ್ ನಹಿನ್ ಹೇ ಬೋಲ್ತಾ ಹೂನ್, ಅಸಲಿ ರೀಸನ್ ಯಹಿ ಹೇ" ಅಂದ.

ನಾನು ಇನ್ನೊಂದು ಸಿಪ್ಪ್ ಹೀರಿದೆ. ಅವನು "ಇದೆಲ್ಲ ಇದ್ದಿದ್ದೆ, ಬೇಜಾರು ಮಾಡಬೇಡ, ಲೆಕ್ಕ ಪ್ರಕಾರದಲ್ಲಿ ನಿನಗೂ ಬ್ಯಾಂಡ್ ಸಿಕ್ಕ ಬೇಕಿತ್ತು, ಆದರೆ ಇಲ್ಲಿ ಈಗ ಹೆಚ್ಚಿನ ಎಂಪ್ಲೋಯೀ ಇದ್ದಾರೆ, ಮೇಲಿನವರಿಗೆ ಎಲ್ಲರನ್ನು ಸಮಾಧಾನಿಸುವ ಜವಾಬ್ಧಾರಿ ಇರುತ್ತದೆ, ಅದಕ್ಕಾಗಿ ಅವರು ಒಬ್ಬೊಬ್ಬರಿಗೆ ಒಂದರಂತೆ ಹಂಚಿರ್ತಾರೆ, ಅವನಿಗೆ ಏ ನನಗೆ ಬಿ ಮತ್ತು ನಿನಗೆ ಪ್ರೊಮೋಷನ್ ಕೊಟ್ಟಿರ್ತಾರೆ, ಚಿಲ್ ಮಗ" ಎಂದ.

ಮನಸ್ಸಿನ ಮೌನವನ್ನು ಗುರುತಿಸಿ, ಕಾಫಿಯ ನೆಪ ವೊಡ್ಡಿ ಸಮಾಧಾನಿಸುವ ಅವಿನಾಶ್ ಇಷ್ಟವಾದ, ಇಲ್ಲಿ ವರೆಗೆ ಅವನಲ್ಲಿ ಇಂತಹ ಆತ್ಮೀಯತೆ ನೋಡಿರಲಿಲ್ಲ, ಎಲ್ಲರೊಂದಿಗೆ ಬೆರೆಯುವ ಗುಣವಿತ್ತೇ, ವಿನಃ ಆತ್ಮೀಯ ಒಡನಾಟ ಮಾಡುವ ಸಾಮರ್ಥ್ಯ ಇದೆ ಎಂದು ಗೊತ್ತಿರಲಿಲ್ಲ.
ನಾನು " ದಿಲ್ ಜೀಥ್ಲಿಯಾ ಬಾಯ್ ಆಪ್ನೇ" ಎಂದೆ.
ಅದಕ್ಕವನು ಎಂದಿನ ಹುಡುಗಾಟದಂತೆ "ಇಸಿ ಕೋ ಕಿಸಿ ಲಡ್ಕಿ ನೆ ಬೋಲ ಥೋ ಮೇರೆ ಲೈಫ್ ಬನ್ ಜಾತಿ ಥಿ" ಎಂದು ನಕ್ಕ.
ಅವನ ಹುಚ್ಚಾಟಿಕೆಯ ಮಾತು ಮನಸ್ಸಿನಲ್ಲಿ ಅಸಮತೋಲನ ಇದ್ದರೂ ನಗೆ ಹೊರ ಹೊಮ್ಮಿಸಿತು.

ಒಳಗೆ ಬಂದು ಸಿಸ್ಟಮ್ ಅನ್ಲೋಕ್  ಮಾಡಿ ಇನ್ನೊಮ್ಮೆ ಮೇಲ್ ಬಾಕ್ಸ್ ಅನ್ನು ರೆಫ್ರೆಶ್ ಮಾಡಿದೆ, ಯಾವುದು ಹೊಸ ಮೇಲ್ ಗಳಿಲ್ಲ. ನನಗೆ ಬೆನ್ನು ಹಾಕಿ ಕುಳಿತ ಜೀವನ್ "ಹೇ ಬಾಯ್ ಸಾಗರ್ ಕಾ ಇಸ್ ಬಾರ್ ಬಿ ಹುವಾ ತೀನ್ ಸಾಲ್ ಮೇ ದೋ ಪ್ರೊಮೋಷನ್ ಹೋಗಯಾ ಉಸ್ಕ" ಎಂದ.

ಸಾಗರ್ ಅವರ ಬಾಚ್ ನ ಹುಡುಗ, ಅವಿನಾಶ್ ಮತ್ತು ಜೀವನ್ ನೊಂದಿಗೆ ಆತ್ಮೀಯನಾಗಿದ್ದ, ತನ್ನ ಜೊತೆ ಇದ್ದವನು ತನಗಿಂತ ಎದುರು ಹೋದದನ್ನು ನೋಡಿ ಜೀವನ್ ಹೊಟ್ಟೆಕಿಚ್ಚು ಪಡುತಿದ್ದ.
ಅವಿನಾಶ್ "ಸಾಲೆ , ತೇರ ಏ ಜೆಲಸಿ ಕಾ ದಿಮಾಗ್ ಕಭಿ ಸುಧರೆಗಾ ನಹಿನ್, ಅವನ ಕೆಲಸಕ್ಕೆ ಅವನಿಗೆ ಬೆಲೆ ಸಿಕ್ಕಿದೆ, ಸುಮ್ನೆ ಹಾಗೆ ಮಾತಾಡಬೇಡ" ಎನ್ನುತ್ತಾ ಅವಿನಾಶ್ ಆಫೀಸ್ ಕಮ್ಯುನಿಕೆಟರ್ ನಲ್ಲಿ ಸಾಗರ್ ಗೆ ವಿಶ್ ಮಾಡಿದ.

ಒಬ್ಬನು ತನಗಿಂತ ಮುಂದೆ ಹೋದದನ್ನು ನೋಡಿ ಜೀವನ್ ನ ಅಸೂಯೆಯ ಜ್ವಾಲಾಮುಖಿ ಸ್ಪೋಟಿಸಿತ್ತು. ಅವನು ತನ್ನೆಲ್ಲ ಬಾಚ್ ನವರನ್ನು ಕಾನ್ಫೆರೆನ್ಸ್ ನಲ್ಲಿ ಸೇರಿಸಿ ಎಲ್ಲರಲ್ಲಿ ಇವತ್ತಿನ ಅಪ್ದೆಟ್ಸ್ ಕೇಳಲು ಶುರು ಮಾಡಿದ.
ಚಾಟ್ ನಲ್ಲಿದ್ದ ೧೪ ಮಂದಿಯಲ್ಲಿ ೬ ಮಂದಿಗೆ ಆಗಲೇ ಪ್ರೊಮೋಷನ್ ಆರ್ಡರ್ ಬಂದಿತ್ತು. ಅದನ್ನು ತಿಳಿದಂತೆ ಇನ್ನು ಹೆಚ್ಚಿನ ಪ್ರಮಾಣದ ಅಸೂಯೆಯ ಲಾವಾರಸ ಹೊರ ಹೊಮ್ಮಿಸಿದ.
ಅವರಿಗೆ ಉತ್ತರಿಸುವುದು ಬಿಟ್ಟು "ಸಾಲೆ ಕುಚ್ ಕರ್ತೆ ನಹಿ ಪ್ರೊಮೋಷನ್ ಪೆ ಪ್ರೊಮೋಷನ್ ಲೇ ರಹೇ ಹೇ" ಎನ್ನುತ್ತಾ ಗೊಣಗುತಿದ್ದ.
ಅವಿನಾಶ್ "ಇವನೆಂದೂ ಉದ್ಧಾರ ಆಗಲ್ಲ " ಎಂದ.
ಅದು ಅವನಿಗೆ ಕೋಪ ಇನ್ನಷ್ಟು ಏರಿಸಿತು "ಅವನು, ಸಾಲೆ, ನಾನು ಐ.ಐ.ಟಿ  ಕಂ ಮೇನೇಜ್ಮೆಂಟ್ ಸ್ಟುಡೆಂಟ್ ಈಗ ನನ್ನನ್ನು ಬರಿ ಬಿ.ಯಿ ಮಾಡಿದವರು, ವರ್ಷವಿಡಿ ಬೆಂಚಲ್ಲಿ ಇದ್ದವರು ಮೀರಿಸಿದರು ಎಂದರೆ ಅಸೂಯೆ ಪಡದೇ ಏನು ಮಾಡ ಬೇಕು, ಈ ತಿವಾರಿ ಪೊಲಿಟಿಕ್ಸ್ ಆಡುತಿದ್ದಾನೆ, ನಿನಗೇನೂ ಇನ್ನೆರಡು ತಿಂಗಳಲ್ಲಿ ಎಂಬಿಏ  ಹೇಳಿ ಹೊರಟು ಹೋಗ್ತೀಯ, ನಾನು ಇನ್ನು ಒಂದು ವರ್ಷ ಸಾಯಬೇಕು" ಎಂದ ತುಸು ಕೊಪದಲ್ಲೇ.

ಅವರ ಜಗಳ ನಡೆಯುತಿದ್ದಾಗ ನಾನು ನನ್ನ ಮೇಲ್ ಮೇಲೆ ಕೆಳಗೆ ಮಾಡುತಿದ್ದೆ, ಆಶಾಕಿರಣದ ಬೆಳಕಿನ ಪ್ರತೀಕ್ಷೆಯಲ್ಲಿದ್ದೆ.

ನಮ್ಮ ಬಾಚ್ ನಲ್ಲಿದ್ದ ಒಬ್ಬೊಬ್ಬರಿಗೆ ಆಗಿ ಪ್ರೋಮೊಶನಲ್ ಲೆಟರ್ ಬರಲು ಶುರುವಾಯಿತು, ನನ್ನ ರೆಫ್ರೆಶ್ ಮಾಡುವ ಫ್ರೀಕ್ವೆನ್ಸಿ ನು ಹೆಚ್ಚಿತು.

ಆರಾದರೂ, ಯಾವುದೇ ಮೇಲ್ ಇಲ್ಲ.

ಸಲ್ಪದರಲ್ಲಿ ಜೀವನ್ "ಮೇಲ್ ಬಂತು" ಎಂದು ತನಗೆ ಬಂದ ಪ್ರೊಮೋಷನ್ ಆರ್ಡರ್ ಅನ್ನು ಪ್ರಿಂಟ್ ಗೆ ಕೊಟ್ಟ.
ಪ್ರಿಂಟರ್ ನಿಂದ ಹೊರ ಬಂದ ಪೆಪೆರ್ ಹಿಡಿದು ಹೊಸ ಪೇಯ್ ಸ್ಕೇಲ್ ನೋಡುತ್ತಾ, 'ತುಂಬಾ ಕಮ್ಮಿ..' ಎಂದು ಹತಾಶ ನಾಗುತಿದ್ದ. ಅವಿನಾಶ್ ತಲೆಗೆ ಹೊಡೆದುಕ್ಕೊಂಡ, ಏನನ್ನು ಹೇಳಲಿಲ್ಲ, ಮಾತಾಡಿದರೆ ಜೀವನನ್ ನ  ಉತ್ತರಕ್ಕೆ ಗುರಿಯಾಗ ಬೇಕು ಎನ್ನುವುದನ್ನು ಅವನು ಅರ್ಥೈಸಿಕೊಂಡಿದ್ದ.

ನಿಧಾನಕ್ಕೆ ಕತ್ತಲು ಆವರಿಸಿತು, ಮನಸಲ್ಲೂ ಮೇಲಿನವರು ಉಗುಳಿದ ಹೋಗೆ ಆವರಿಸುತ್ತ ಹೋಯಿತು.ಮೇಲಿನವರ ಪೊಲಿಟಿಕ್ಸ್ ನಲ್ಲಿ ನನ್ನ ಟ್ರಂಪ್ ಕಾರ್ಡನ್ನು ಅಡಗಿಸಿ ಇಟ್ಟಿದ್ದರು, ಎಲ್ಲ ನನ್ನ ಬಳಿ ಇದ್ದು ಸೋಲು ಸಿಕ್ಕಿದೆ ಎಂಬುದು ಖಚಿತವಾಗುತ್ತ ಹೋಯಿತು.

ಡೆಸ್ಕ್ ನಿಂದ ಎದ್ದು ಸೀದಾ ಐ ಕಾರ್ಡ್  ಹಿಡಿದು ಫ್ಲಾಟ್ ಸೇರಿದೆ. ಮನೆಒಳಗೆ ಇರಲು ಮನಸ್ಸಾಗಲಿಲ್ಲ, ಟೆರೆಸ್ ಗೆ ಬಂದೆ ಮೇಲೆ ಚಂದಿರ ನನ್ನನ್ನು ನೋಡಿ ನಗುತಿದ್ದ. ಒಳಗಿನಿಂದ ಬಿಕ್ಕಳಿಕೆಯ ಅಲೆ ಉಮ್ಮಳಿಸಿ ಬರುತಿತ್ತು. ಪೂರ್ಣ ಚಂದಿರನನ್ನು ನೋಡಿ ಅದು ಭೋರ್ಗರೆವ ಕಡಲಂತೆ ಅಪ್ಪಳಿಸುತಿದ್ದವು ರೆಪ್ಪೆಯ ಬಂಡೆಗೆ. ಟೆರೆಸ್ ನಲ್ಲಿ ನಿಶಾಚರಿ ಪ್ರೇಮಿಗಳು ತಮ್ಮ ಲೈನ್ ಎಸ್ಟಾಬ್ಲಿಶ್ ಮಾಡಲು ಶುರು ಮಾಡಿದ್ದವು. ಒಬ್ಬಬ್ಬೋರು ಎನ್ನುತ್ತಾ ಮೊಬೈಲ್ ನಲ್ಲಿ ಮಾತನಾಡಲು ಮೇಲೆ ಬಂದವರ ಸಂಕೆ ಹತ್ತಕ್ಕೆ ಏರಿತು.

ಜಾರುವ ಕಂಬನಿ ಯಾರಿಗೂ ಕಾಣಿಸುತ್ತಿರಲಿಲ್ಲ, ಆದರೆ ಬಿಕ್ಕಳಿಗೆ ಬೇರೆಯವರಿಕೆ ಕೇಳಿಸುತಿತ್ತು. ಏಕಾಂತ ಬೇಕೆನಿಸಿತು. ಮತ್ತೆ ಕೆಳಗೆ ಓಡಿದೆ. ರೂಮಿಗೆ ಬಂದು ಸೀದಾ ಬಾತ್ರೂಮಿನಲ್ಲಿ ಕುಳಿತು ಅಳಲಾರಬಿಸಿದೆ. ಜಾರುತಿದ್ದ ಹನಿಗಳು ಬೆಳಗಿಂದ ಒಣಗಿದ್ದ ನೆಲದಲ್ಲಿ ಮೊದಲ ಮಳೆಯಂತೆ ಒಂದೊಂದಾಗಿ ಹರಡಿಕೊಳ್ಳುತಿದ್ದವು, ಅದರ ಸಂಭ್ರಮ ನನ್ನಿಂದ ನೋಡಲಾಗಲಿಲ್ಲ. ಶವರ್ ತಿರುಗಿಸಿದೆ.

ಫಾರ್ಮಲ್ ಪೇಂಟ್, ಶರ್ಟ್, ಶೂನಲ್ಲೇ ಅಳು ಮುಂದುವರಿದಿತ್ತು. ಮನಸ್ಸು ಇದ್ದ ಬದ್ದವರಿಗೆ ಶಾಪ ಹಾಕುತಿತ್ತು, ದಿನ ದೀಪ ಹಚ್ಚುವ ದೇವರಿಂದ ಹಿಡಿದು ಆಫೀಸ್ ಅನ್ನು ಕ್ಲೀನ್ ಮಾಡುವ ರೂಂ ಬಾಯ್ಗಳ ವರೆಗೆ ಅದರ ಮಿತಿ ವಿಸ್ತರಿಸಿತ್ತು. ಜಗತ್ತಲ್ಲಿ ಪ್ರತಿಯೊಬ್ಬನು ಶತ್ರುವಂತೆ ಭಾಸವಾಗಲು ಶುರುವಾದವು. ಬಿಕ್ಕಳಿಕೆ ಹೆಚ್ಚಿತು, ಮನ ಬಿಚ್ಚಿ ಅತ್ತೆ. ದೇಹದಲ್ಲಿನ ನೀರು ಖಾಲಿಯಾಗುವ ವರೆಗೆ ಅತ್ತೆ. ಮತ್ತೆ ಶವರ್ ನ ನೀರಿಗೆ ಬಾಯೊಡ್ಡಿ ಕಣ್ಣೀರಿನ ಸುಧೆ ಯ ಧಾರೆ ಹೆಚ್ಚಿಸಿಕೊಂಡೆ.

ಎಂಟು ಸಮೀಪಿಸುತಿದ್ದಂತೆ "ಯಾಕಾದರೂ ನಾನು ಮರಕುವೆ, ಅಸಲಿಗೆ ನಾನು ಯಾವುದೇ ಆಕಾಂಕ್ಷೆ ಇಟ್ಟು ಐ.ಟಿ  ಪ್ರವೇಶಿಸಿದಲ್ಲ, ಆಸೆಯೇ ಧುಖಕ್ಕೆ ಮೂಲ"  ಎಂಬ ಮಹಾಪುರುಷನ ಧ್ಯೇಯ ವಾಕ್ಯ ನೆನಪಾಯಿತು.ಕಣೀರು ಒರೆಸಿಕೊಂಡೆ. ಬಟ್ಟೆ ಬಿಚ್ಚಿ ದೇಹದಲ್ಲಿ ಉಳಿದ ಕಣ್ಣೀರಿನ ಉಪ್ಪಿನಂಶವನ್ನು ಸೋಪಿನಿಂದ ತೊಳೆದುಕ್ಕೊಂಡೆ.

ಮನಸ್ಸು ಭಾರವಾಗಿತ್ತು, ಶಾಂತವಾಗಲು ಬಯಸುತಿತ್ತು,ಧ್ಯಾನದ ಅಗತ್ಯ ಅದಕ್ಕಿತ್ತು. ದೇವಸ್ತಾನದ ನೆನಪಾಗಿ ಅಲ್ಲಿ ಹೋದೆ. ಮೊದಲಿಗೆ ದೇವರಿಗೆ ಬೇಡದೆ ಬಂದ ಭಾಗ್ಯಕ್ಕೆ ಕೃತಜ್ಞತೆ ಒಪ್ಪಿಸಿ ಧ್ಯಾನಕ್ಕೆ ಕುಳಿತೆ.ಎಂಟು ಮೊವತ್ತಕ್ಕೆ ದೇವಸ್ತಾನ ಮುಚ್ಚಲು ದೀಕ್ಷಿತರು ಬಂದು ಎಬ್ಬಿಸಿದರು.

ಕಣ್ಣು ಬಿಡಲು ನಾನು ಸಂಜೆಯ ಎಲ್ಲ ಕಶ್ಮಲ ಗಳಿಂದ ದೂರವಾಗಿದ್ದೆ. ಸ್ವಿಚ್ ಆಫ್ ಮಾಡಿ ಇಟ್ಟ ಮೊಬೈಲ್ ಅನ್ನು ಆನ್ ಮಾಡಿ ಫ್ಲಾಟ್ ನೆಡೆಗೆ ಹೆಜ್ಜೆ ಮುಂದುವರಿಸಿದೆ.
 
ಫೋನ್ ರಿಂಗಣಿಸಿತು, ಅವಿನಾಶ್ ಕರೆ ಮಾಡಿದ್ದ "ಕಹಾನ್ ಹೋ ಭೈ, ಫೋನ್ ನಹಿ ಊಟಾ ರಹಾ ಥಾ, ನಿನ್ನ ರೂಂ ಗೆ ಹೋದರೆ ಬೀಗ ಹಾಕಿತ್ತು, ಎಲ್ಲಿದ್ದಿಯ...?"
"ಅಣ್ಣ ಹೆದರಬೇಡ ಅಣ್ಣಾ, ಜೀವಂತ ಇದ್ದೇನೆ, ಏನು ಹೆಚ್ಚು ಕಮ್ಮಿ ಮಾಡ್ಕೊಂಡಿಲ್ಲ, ದೇವಸ್ತಾನದಲ್ಲಿದ್ದೆ ಅದಕ್ಕೆ ಸ್ವಿಚ್ ಆಫ ಇತ್ತು, ಏನು ಕರೆ ಮಾಡಿದ್ದು..?"
"ಏನಿಲ್ಲಾ, ನಿನ್ನನ್ನು ಮಾತಾಡಿಸುವ ಹೇಳಿ ಕರೆ ಮಾಡಿದ್ದು, ತಾಗಲಿಲ್ಲ, ನೀನು ನೊಂದಿದ್ದಿ, ಹಾಗೆ ಮನೆಗೆ ಹೋಗಿ ಮಾತಾಡಿಸೋಣ ಎಂದು ಮನೆಗೆ ಬಂದೆ, ಅಲ್ಲೂ ಇರಲಿಲ್ಲ, ಹೆದರಿಕೆ ಆಯ್ತು... ಏನಾದ್ರೂ" ಅಂದ ಅವಿನಾಶ್
"ಏನು ಆಗಲ್ಲ"
ಅಷ್ಟರಲ್ಲಿ ಅವನ ಜೊತೆಗಿದ್ದ ಜೀವನ್ ಅವನ ಕೈಯಿಂದ ಮೊಬೈಲ್ ಕಸಿದು "ಬಾರೋ ಫುಡ್ ರಿಪಬ್ಲಿಕ್ ಗೆ, ಊಟ ಮುಗಿಸಿ ಹೋಗುವಿಯಂತೆ" ಅಂದ.

ದ್ಯಾನದಿಂದ ಇಳಿದ ಕೋಪ ಇವನ ಮಾತು ಕೆಳುತಿದ್ದಂತೆ ಮತ್ತೆ ಏರಿತು, ಇವನಿಂದಲೇ ನನ್ನ ಪ್ರೊಮೋಷನ್ ತಪ್ಪಿತ್ತು ಎನ್ನುವುದು ಶವರ್ ನ ಕೆಳಗೆ ನನಗಾದ ಜ್ಯಾನೋದಯ ವಾಗಿತ್ತು.
ಕೋಪ ಹೊರ ಹಾಕೆನು ಎಂಬ ನಿರ್ಧಾರ ತೆಕೊಂಡಿದ್ದೆ, ಆ ಕಾರಣಕ್ಕೆ ಅವನಲ್ಲಿ "ಸರಿ ಇನ್ನು ಹದಿನೈದು ನಿಮಿಷದಲ್ಲಿ ಅಲ್ಲಿ ಇರ್ತೇನೆ" ಎಂದೆ.
ಅವನು "ನಮಗೆ ಲೆಟ್ ಆಗುತ್ತದೆ, ಹತ್ತಕ್ಕೆ ಅಲ್ಲಿರು"ಎಂದ.

ಮನೆಗೆ ಕರೆ ಮಾಡಿ ಸಿಕ್ಕದ ಪ್ರೊಮೋಷನ್ ಕುರಿತು ಹೇಳಿದೆ. ಅವರಿಗೆ ತನ್ನ ಮಗನಿಗೆ ಪ್ರೊಮೋಷನ್ ಸಿಕ್ಕಿಲ್ಲ ಎನ್ನುವುದಕ್ಕಿಂತ ಅವನ ಜೊತೆಯಲ್ಲಿದ್ದ ಹೆಚ್ಚಿನವರಿಗೆ ಪ್ರೊಮೋಷನ್ ಸಿಕ್ಕಿತು ಎಂಬುದರಲ್ಲಿ ಹೆಚ್ಚಿನ ನೋವಿತ್ತು. ಮಾತನಾಡಿದರೆ ನನ್ನನ್ನು ಅಳಿಸುತ್ತಾರೆ ಎಂದು ಗೊತ್ತಿತ್ತು ಅದಕ್ಕೆ ನಾನು ಹೊರಗಿದ್ದೇನೆ ಎಂದು ಕರೆ ಕಟ್ ಮಾಡಿದೆ.

ತಿಂಗಳ ಬೆಳಕಿನಲ್ಲಿ ಬೀದಿ ಬೀದಿ ಅಲೆಯುತ್ತ, ಹಿಂದಿನ ಬಯಲಿಗೆ ಬಂದೆ, ಅದೇ ಬಂಡೆ ಹಿಂದೆ ಜ್ಯಾನೋದಯ ಆದ ಬಂಡೆ. ಅದರ ಮೇಲೆ ಕುಳಿತು ಓಡುತ್ತಿರುವ ಮೋಡಗಳನ್ನು ಓದತೊಡಗಿದೆ. ಕರಗುತ್ತಿರುವ ಚಂದ್ರನನ್ನು ವಿಶ್ಲೆಶಿಸುತಿದ್ದೆ.

 


ಆಕೃತಿಗೆ ಇವತ್ತು ಕರೆ ಮಾಡಿರಲಿಲ್ಲ ಎಂಬುವುದನ್ನು ಮರೆತಿದ್ದೆ. ಅವಳಾಗೇ ಕರೆ ಮಾಡಿ "ಕಂಗ್ರಾಟ್ಸ್ ವೈಭು"
ಮೌನದಲ್ಲೇ ಇದ್ದೆ "ಥ್ಯಾಂಕ್ಸ್ ಹೇಳೋ ಡಂಬು, ಅಟ್ಲೀಸ್ಟ್ ಬಿ ಬ್ಯಾಂಡ್ ಆದರು ಸಿಕ್ಕಿತಲ್ಲ" ಅಂದಳು.
ಅವಳು ಎಲ್ಲದರಿಂದ ದೂರವಾಗಿದ್ದಳು, ಅವಳಿಗೆ ಇಲ್ಲಿ ನಡೆದ ಸತ್ಯ ಸಂಗತಿಯ ಸುಳಿವಿರಲಿಲ್ಲ. ನಾನು "ಯಾರು ಹೇಳಿದ್ದು ನನಗೆ ಬಿ ಹೇಳಿ ...?"
"ದೇವಕಿ.. ಅವಳಿಗೆ ಪ್ರೋಮೊಷನ್ನು ಸಿಕ್ತಂತೆ"
"ಹ್ಮ್ಮ್, ನಿಂದು ಏನಾಯ್ತು...?"
"ಏನು ಇಲ್ಲ ಕಣೋ, ಹೇಗಾದ್ರು ಕೊಡ್ತಾರೆ, ಒಂದು ವರೆ ವರ್ಷದಿಂದ ಬೆಂಚಲ್ಲಿ ಇದ್ದ ಪಾರ್ಟಿ ಗೆ ಪ್ರೊಮೋಷನ್ ಬ್ಯಾಂಡ್...?"
"ಹೇ, ರಾಜ ನಂಗು ಏನೂ ಕೊಟ್ಟಿಲ್ಲ ಕಣೇ, ಎರಡು ವರ್ಷದಿಂದ ನಾನು ಕೆಲಸ ಮಾಡಿದ್ದೆ ಬಂತು" ಅಂದೆ ನಿರಾಶೆಯಲ್ಲಿ.
"ಮತ್ತೆ ದೇವಕಿ..?"
"ಪುಣೆಯಲ್ಲಿ  ಸುದ್ದಿ ಹಬ್ಬಿದೆ ಅಷ್ಟೇ, ನಿಜಕ್ಕೂ ನನಗೆ ಏನು ಸಿಕ್ಕಿಲ್ಲ, ನೋ ಬ್ಯಾಂಡ್ , ನೋ ಪ್ರೊಮೋಷನ್"
"ಹೇಗೆ ಹೀಗಾಯ್ತ್ಹೋ, ಯು ವಾಸ್ ಅ ಡಿಸೆರ್ವಿಂಗ್ ಕೆಂಡಿಡೆತ್"
"ಯಾರಿಗೆ ಗೊತ್ತು, ಆ ಬೋಳಿ...." ಮೊದಲಬಾರಿಗೆ ನನ್ನ ಬಾಯಿಯಿಂದ ಅಂತ ಮಾತು ಹೊರ ಬಿತ್ತು. ಆಕೃತಿಗೂ ಇದು ಒಮ್ಮೆ ಶಾಕ್ ಕೊಟ್ಟಿತು.
ಆಕೃತಿ "ವೈಭು, ಚಿಲ್ .. ಏನು ಆಗಲ್ಲ"
"ನಾಳೆ ಅವರಿಗೆ ಮಾಡ್ತೇನೆ ನೋಡು, ನಂಗೆ ಯಾವ ನಾಯಿ... ನನ್ನ ತುತ್ತನ್ನು ಎಳ್ದಿದ್ದಾನೆ ಅಂತ ತಿಳಿಬೇಕು... ಮತ್ತೆ ಅವನಿಗೆ ಮಾಡ್ತೀನೆ... ನೋಡು" ಅಂದೆ.
ಅವಳು "ವೈಭು, ಚಿಲ್, ನೀಯಾಕೋ ಇಷ್ಟು ಬದಲಾದಿ...?"
"ಬದಲಾಗಿಲ್ಲ, ಈಗ ಬದಲಾಗ್ತಾ ಇದ್ದೇನೆ, ಕ್ಲಾಸ್ ಹೀರೋ ಆಗಿ ಮೆರ್ದೆ, ಪ್ರಯೋಜನ ವಾಗಿಲ್ಲ ಈಗ ಮಾಸ್ಸ್ ಹೀರೋ ಆಗಿ ಪ್ರಯತ್ನ ಪಡ್ತೇನೆ, ಕಳಕೊಳ್ಲಿಕ್ಕೆ ಏನೂ ಇಲ್ಲ, ಎಲ್ಲಿಂದ ತಪ್ಪಾಗಿದೆ ಅಂತ ಗೊತ್ತಾಗುವ ವರೆಗೆ ಆ ನಾಯಿಗಳನ್ನು ನಾನು ಬಿಡಲ್ಲ"
"ಚಿಲ್ ವೈಭು, ಚಿಲ್ ಎಲ್ಲ ನಡೆಯುತ್ತೆ"
"ಎಲ್ಲ ನಡ್ದೆ ನಡಿಯುತ್ತೆ... ನಾಳೆ ನಿನ್ನ ವೈಭು ವೈಭು ಆಗಿರಲ್ಲ, ಬದಲಾಗ್ತಾನೇ , ಕೆಂಡ ಖಾರ್ತಾನೆ, ಕಾಲೆಳೆದವರನ್ನು ಸುಡ್ತಾನೆ"

ಅವಳು ಮೌನದಲ್ಲಿದ್ದಳು, ನನ್ನ ಮಾತುಗಳು ಇಗಲೇ ಜ್ವಾಲೆ ಉಗುಳುತಿದ್ದವು.
ನಾಳೆ ಏನಾಗ ಬಹುದೋ ಎಂದು ಅವಳು ಹೆದರಿದ್ದಳು. ಅವಳ ಮೌನ ಗಮನಕ್ಕೆ ಬಂದು ನಾನು ಶಾಂತನಾಗಿ
"ರಾಜ, ಅಸ್ತಿತ್ವ ತೋರಿಸದಿದ್ದರೆ ಅವರಿಗೆ ಗೊತ್ತಾಗಲ್ಲ, ನಾಡಿದರಿಂದ ನಿನ್ನ ವೈಭು ವೈಭು ವಾಗೆ ಇರ್ತಾನೆ, ನಾಳೆಗೆ ಒಂದು ದಿನ ನನಗೆ ಕ್ಷಮೆ ಇರಲಿ"
"ಸರಿ, ಆದರೆ ಯಾರನ್ನು ಎಳೆಯಲು ಹೋಗಬೇಡ ಪ್ಲೀಸ್ ವೈಭು"
"ಇಲ್ಲ ನಂಗೆ ಸತ್ಯ ತಿಳಿ ಬೇಕಿದೆ, ಯಾರಿಂದ ತಪ್ಪು ಸಂಭವಿಸಿದೆ ಎಂದು ಆ ಬಳಿಕ ನಿನ್ನ ವೈಭು ಮತ್ತೆ ಹಳೆಯ ವೈಭು ಆಗ್ತಾನೆ"
"ಸರಿ, ಲವ್ ಯು ಕಣೋ, ಮಿಸ್ಸಿಂಗ್ ಯು ಲೋಟ್"
"ಐ ಟು ಕಣೇ... ಮತ್ತೆ ಹೇಗೆ ಆಯ್ತು ಇವತ್ತಿನ ದಿನ ...?"
"ಅದೇ ಬೋರಿಂಗ್, ಒನ್ ಮೋರ್ ಡೇ ವಿಥೌಟ್ ಅ ಕಾಫಿ, ಇಟ್ಸ್ ೧೫೮ ಲಾಂಗ್ ಡೆಯ್ಸ್..." ಎಂದಳು.  ಅವಳನ್ನು ಚೆನ್ನೈ ನಲ್ಲಿ ಬಿಟ್ಟು ಬಂದ ನಂತರ ಶುರುವಾದ ಕೌಂಟ್ ಡೌನ್ ಇವತ್ತು ತನ್ನ ಅಂಕೆಯನ್ನು ೧೫೮ ಕ್ಕೆ ಏರಿಸಿತ್ತು.
"ಲವ್ ಯು ರಾಜಾ ... ಉಮ್ಮಾ ..." ಎನ್ನುತ್ತಾ ಮೊಬೈಲ್ ನ ಮೈಕ್ ಗೆ ಮುತ್ತಿಟ್ಟೆ. ಅಲ್ಲಿ ಅವಳು ಮುತ್ತಿಟ್ಟಳು.

"ಕ್ಯಾಬ್ ಮನೆಗೆ ತಲುಪಿತು, ಬಾಯ್" ಎನ್ನುತ್ತಾ ಕರೆ ಕತ್ತರಿಸಿದಳು.

ತಿಂಗಳಿಗೆ ಒಂದು ದಿನ ಅವಳ ಮನೆಗೆ ಕರೆ ಮಾಡಿ ಎಲ್ಲ್ಲರ ಜೊತೆ ಮಾತನಾಡುತ್ತೇನೆ, ಪ್ರತಿ ದಿನ ಅವಳು ಮನೆಗೆ ಹೋಗುವಾಗ ಕರೆ ಮಾಡುತ್ತಾಳೆ. ರಾತ್ರಿ ರೂಂಗೆ ಬಾಗಿಲು ಹಾಕಿದ ಬಳಿಕ ನಾನು ಕರೆ ಮಾಡುತ್ತೇನೆ. ಇದು ಕಳೆದ ೧೫೮ ದಿನದಿಂದ ರೂಡಿಯಾಗಿ ಬಂದ ನಮ್ಮ ದಿನಚರಿಯಾಗಿತ್ತು.

ಮುಂದಿನ ಸಿಪ್