ಸಿಪ್ - ೩೯

 

 

ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ....
 

ಹಿಂದಿನ ಸಿಪ್ 

 

ನಾನು ಫುಡ್ ರೆಪುಬ್ಲಿಕ್ ತಲುಪಿದಾಗ ಅಲ್ಲಿ ಜೀವನ್ ನ ಮನೆಯ ಐದು ಮಂದಿ ಮತ್ತು ನಮ್ಮ ಬಾಚ್ ನ ಮೂರನೇ ಇಎಲ್ಟಿಪಿ ಗ್ರೋಪ್ ನಲ್ಲಿ ಡ್ರೀಮ್ ಟೆಕ್ ಸೇರಿದ ಐವರು ಸೇರಿದ್ದರು. ಎಂದಿನಂತೆ ನಗು ಹೊರಡಲಿಲ್ಲ ಮುಖದಲ್ಲಿ ಕೃತಕ ನಗುವಲ್ಲೇ ಅಲ್ಲಿ ಇದ್ದ ಹತ್ತು ಮಂದಿಯನ್ನು ಕೈಕುಲುಕಿ ಹನ್ನೆರಡು ಮಂದಿಯ ವೋವಲ್ ಶೇಪ್ ನ ಟೇಬಲ್ ನ ಒಂದು ಮೂಲೆಯಲ್ಲಿ ಮನೆಯ ಯಜಮಾನನ ಪೋಸ್ನಲ್ಲಿ ಕುಳಿತೆ.

 

ಅಲ್ಲಿದ್ದ ಐದು ಇಎಲ್ಟಿಪಿ ಯಲ್ಲಿ ಮೂವರಿಗೆ ಪ್ರೊಮೋಷನ್ ಸಿಕ್ಕಿತ್ತು, ಇನ್ನೊಬ್ಬನಿಗೆ ಬಿ ಬ್ಯಾಂಡ್ ಸಿಕ್ಕಿತ್ತು ಕೊನಯವನು ಮಾತ್ರ ನನ್ನಂತೆ ಬರಿಗೈಯ ದಾಸನಾಗಿದ್ದ. ಸಂಜೆ ವರೆಗೆ ಸರಿಯಿದ್ದ ಅವಿನಾಶ್ ಈಗ ಒಂದು ಚೂರು ಚಿಂತೆಯಲ್ಲಿ ಇದ್ದವನಂತೆ ಕಾಣುತಿದ್ದ. ನಾನು ಅವನಲ್ಲಿ "ಏನಾಯ್ತು ...?"

"ಯಾಕೋ ಸರಿ ಕಾಣ್ತಾ ಇಲ್ಲ, ಎಲ್ಲ ಪೊಲಿಟಿಕ್ಸ್ ನ ಆಟ, ಹೀಗಾಗ ಬಾರದಿತ್ತು" ಎಂದ.

ಅವನ ಮಾತಿನ ಅರ್ಥ, ಅರ್ಹನಾದ ನನಗೆ ಸಿಗದ ರೆಕಾಗ್ನಿಶನ್ ಇನ್ನೊಬ್ಬರಿಗೆ ಸಿಕ್ಕಿದನ್ನು ನೋಡಿ ಅವನಿಂದ ಈ ಮಾತು ಹೊರಟದ್ದು ಎಂದು ಅರ್ಥೈಸಿಕ್ಕೊಂಡೆ. 

 

ಜೀವನ್ "ಯಾರ್ಯಾರಿಗೆ ಏನೇನು ಬೇಕೋ ತೆಕೊಳ್ಳಿ, ಇವತ್ತು ಎಲ್ಲ ನನ್ನ ಖರ್ಚಲ್ಲಿ ನನಗೆ ಒಂದು ವಿಸ್ಕಿಮೊದಲಿಗೆ" ಅಂದ.

ಅವಿನಾಶ್ ಆಗೊಮ್ಮೆ ಈಗೊಮ್ಮೆ ಇಳಿಸುತಿದ್ದವ ಇವತ್ತು ಯಾವುದಕ್ಕೂ ಆರ್ಡರ್ ಕೊಡದೇ ಸುಮ್ಮನಿದ್ದ, ಉಳಿದವರು ತಮ್ಮ ತಮ್ಮ ಐಟಂ ತರಿಸಿಕೊಂಡರು. ಕುಡಿಯದ ನಾನು ಯಾವುದಕ್ಕೆ ಆರ್ಡರ್ ಕೊಟ್ಟಿರಲಿಲ್ಲ. ಅವನು ನನ್ನಲ್ಲಿ "ಏನಾದ್ರೂ ತೆಗೆದುಕೋ..."

"ಸೋರಿ ಕಣೋ ಬಿಕ್ಷೆ ತೆಗೆದು ನನಗೆ ಅಭ್ಯಾಸ ಇಲ್ಲ" 

ಅವನು ಸುಮ್ಮನಾದ. ಕುಡುಕರ ತಂಡ ಕುಡಿಯಲು ಶುರು ಮಾಡಿತು.

 

ಅವರ ಮನೆಯ ಬಿಹಾರಿ ನೀರಜ್ "ಏನ್ .ಜೋಯ್" ಎನ್ನುತ್ತಾ ಎಂಜಾಯ್ ಮಾಡುತಿದ್ದ. ಅವನನ್ನು ಇತರರು ಹಿಂಬಾಲಿಸುತಿದ್ದರು.

ಜೀವನ್ ತನ್ನ ಬಾಟಲ್ ಮುಗಿಸಿದ ಅರ್ಧ ಗಂಟೆಯಲ್ಲಿ, ತನ್ನ ಪ್ರೇಮಿಯನ್ನು ಕುಡುಕ ಮಾಡಿದ ಶ್ರೇಯಸ್ಸು ನಮ್ಮ ಮಂಗಳೂರಿನ ಹುಡುಗಿಗೆ ಸೇರಬೇಕು ಅಂದುಕ್ಕೊಂಡೆ. ಜೀವನ್ ಗೆ ಒಂದು ಬದಿಯಲಿ ವಿರಹ , ಇನ್ನೊಂದು ಬದಿಯಲಿ ತನಗೆ ಮೂರು ವರ್ಷದಲ್ಲಿ ಒದಗಿದ ಎರಡು ಪ್ರೊಮೋಷನ್ ನ ಖುಷಿಯಲ್ಲಿ ಅವನು ಸಿಪ್ ಬೈ ಸಿಪ್ ಏರಿಸುತಿದ್ದ. ನಾನು ಮತ್ತು ಅವಿನಾಶ್ ಇಬ್ಬರೇ ಖಾಲಿ ಹೊಟ್ಟೆಯಲ್ಲಿ ಅವರ ಆಘೋಷಣೆ ನೋಡುತಿದ್ದೆವು. 

 

ಪ್ರೀತಿಯ ನೆನಪಾಗಿ, ಅವಳನ್ನು ಎಣ್ಣೆ ಪಾರ್ಟಿ ಯಲ್ಲಿ ಮಿಸ್ ಮಾಡ್ಕೊಳ್ತಾ ಕೈಯಲ್ಲಿ ಗ್ಲಾಸ್ ಹಿಡಿದು ಟೇಬಲ್ ನ ಹಿಂದೆ ಇರುವ ಬಾಲ್ಕನಿಗೆ ಹೋದ.

 

ಅವಿನಾಶ್ ನಿಗೆ ನಾನು "ತೆಕಳೋ  ಏನಾದ್ರೂ, ನನಗಾಗಿ ನಿನ್ನ ಹೊಟ್ಟೆಗೆ ಯಾಕಾಗಿ ಶಿಕ್ಷೆ ಕೊಡುತ್ತೀಯ...?" ಅಂದೆ.

ಅವಿನಾಶ್ " ಬಾಯ್, ಐ ಫೀಲ್ ಗಿಲ್ಟಿ ಫಾರ್ ಯು, ಜೀವನ್ ಚೂರು ಪ್ರಯತ್ನ ಪಟ್ರೆ ನೀನು ಇವತ್ತು ಸಂಭ್ರಮಿಸುತಿದ್ದಿ, ಅವನು ಅವನ ಬೇಳೆ ಬೇಯಿಸಿಕ್ಕೊಂಡ" ಅಂದ.

ಅಲ್ಲಿ ಹೊಶಲ್ಲಿ ಇದ್ದ ನೀರಜ್ "ವೈಭು ನಾನು ನಿನಗೆ ಆ ದಿನಾನೇ ಹೇಳಲಿಲ್ಲವೇ, ಪ್ರೊಮೋಷನ್ ನ ಕನಸು ಕಾಣಬೇಡ, ನಿನ್ನ ಮೇನೇಜರ್ ಕಿರಣ್ ಇರಬಹುದು, ಆದರೆ ಜೀವನ್ ಎಂಬ ಡ್ಯಾಮೆಜರ್ ನಿಮ್ಮಿಬ್ಬರ ನಡುವಲ್ಲಿ ಇದ್ದಾನೆ, ಹೇಳಿ; ಈಗ ನೋಡು ನಿನ್ನ ಕ್ಯಾರಿಯರ್ ಅನ್ನೇ ಹೇಗೆ  ಡ್ಯಾಮೆಜ್ ಮಾಡಿದ ಅಂದು, ಪೊಲಿಟಿಕ್ಸ್ ನ ತಾಯಿಬೇರು ಇವನೇ ..."ಎಂದು ವಿಸ್ಕಿಯನ್ನು ತನ್ನ ಗ್ಲಾಸಿಗೆ ಸುರಿದು ಅದಕ್ಕೆ ಸ್ಪ್ರೈಟ್ ಹದವಾಗಿ ಬೆರೆಸಿ ಸಿಪ್ ಏರಿಸಿದ.

ಅವಿನಾಶ್ "ಅವನು ನಿನ್ನನ್ನು ರೆಕಮೆಂಡ್ ಮಾಡಲಿಲ್ಲ, ರೆಕಮೆಂಡೆಶನ್ ದಿನ ನಾನು ನಿನ್ನ ಬಗ್ಗೆ ಕೇಳಿದಾಗ ಏನು ಹೇಳಿದ ಗೊತ್ತಾ 'ಪೋರ್ಟಲ್ ಅಲ್ಲಿ ನಾನು ಎಂಟ್ರಿ ಮಾಡಿ ಏನಾಗುವುದಿಲ್ಲ, ಮೇನೇಜರ್ ಆಶಿರ್ವಾದ ಬೇಕು' ಅಂತ, ನಂತರ ತನ್ನ ರೆಕಮೆಂಡೆಶನ್ ಮಾಡಲು  ಲಕ್ಷ್ಮಿ ಸರ್ ಬಳಿಗೆ ಓಡಿದ್ದ, ಆ ಮಹಾತ್ಮ"

 

"ಲಕ್ಷ್ಮಿ ಸರ್ ಮಾಡಿರುವರು ನನ್ನನ್ನು ರೆಕಮೆಂಡ್" ಎಂದು ನಾನು ನಡುವಲ್ಲಿ ನನಗನಿಸಿದ ವಿಚಾರ ಹೇಳಿದೆ.

ಅದಕ್ಕವನು "ಅವರೇಕೆ ನಿನ್ನನ್ನು ಖುದ್ದು ರೆಕೆಮೆಂಡ್ ಮಾಡ್ತಾರೆ, ನೀನೇನು ಅವರ ಹೈರರ್ಕಿ ಯಲ್ಲಿ ಬೀಳ್ತೀಯ, ಅವರಿಗೆ ಅವರ ಕೆಳಗಿರುವ ಜನರ ರೆಕೆಮೆಂಡೆಶನ್ ಮಾಡಲು ಪುರುಸೊತ್ತಿಲ್ಲ, ನೀನೊಬ್ಬ ಇದ್ದೀಯ, ಬೇರೆಯವರನ್ನು ನಂಬಿಕೊಂಡು. ಯಾರು ಯಾರಿಗೆ ಹೆಲ್ಪ್ ಮಾಡಲ್ಲ ಕಣೋ ಈ ಫೀಲ್ಡ್ ನಲ್ಲಿ, ಎಲ್ಲರು ಅವರ ಏಳಿಗೆ ನೋಡ್ತಾರೆ, ನೀನು ಅವರ ದಾರಿಯಲ್ಲಿ ನಡುವೆ ಬಂದರೆ ನಿದಾನಕ್ಕೆ ನಿನ್ನನ್ನು ಚಿವುಟಿ ಹಾಕ್ತಾರೆ, ಅದರ ಪರಿವು ನಿನಗಾಗದು, ಅಷ್ಟು ನಾಜೂಕಾಗಿ ತಮ್ಮ ಕೆಲಸ ಮಾಡುತ್ತಾರೆ" 

ಅವನಿಕೆ ನೀರಜ್ ಜೊತೆಯಾದ "ತಮ್ಮ, ಒಂದು ವಿಷಯ ಹೇಳ್ತೇನೆ ಕೇಳು, ಮೇಲಿನವರು ಇರ್ತಾರಲ್ಲ ಅವರ ಸೇವೆ ಯಾವತ್ತು ಮಾಡ ಬಾರದು, ನಿನ್ನ ಕೆಲಸ ಎಷ್ಟಿದೆಯೋ ಅಷ್ಟಕ್ಕೆ ಮಾತ್ರ ನಿನ್ನನ್ನು ಮೀಸಲಿಡಬೇಕು. ಮೇಲಿನವರ ಲೂಪ್ ಹೊಲಸ್ ಅನ್ನು ನೀನು ಹುಡುಕಿ ಅವರ ಮೇಲಿನವನಿಗೆ ಅದರ ಮನವರಿಕೆ ಮಾಡಬೇಕು ಆಗ ಆ ಮೇಲಿನವನಿಗೆ ನೀನು ಹತ್ತಿರ ಆಗ್ತೀಯ, ಹೈರಾರ್ಕಿಯಲ್ಲಿ ಎಷ್ಟು ಲೆವೆಲ್ ಮೇಲಿನ ವರೆಗೆ ನಿನ್ನ ಸಂಭಂದ ಇರುತ್ತೋ ಅಷ್ಟು ಮೇಲಕ್ಕೆ ನೀನು ಎರಬಹುದು, ಅದು ಬಿಟ್ಟು ಮೇಲಿನವರ ಎಂಜಲು ತಿನ್ನುತ್ತಾ ಸೇವೆ ಮಾಡುತ್ತಾ ಕುಳಿತರೆ ನಾಳೆ ನಿನ್ನ ಕೆಳಗಿನವರು ನಿನ್ನನ್ನು ಮೆಟ್ಟಿ ಮೇಲೆ ಹೋಗಿ ನಿನ್ನ ತಲೆಮೇಲೆ ಹೇಲ್ತಾರೆ! ತಿಳ್ಕೋ"

ಅವಿನಾಶ್" ನೀರಜ್ ಹೇಳಿದ್ದು ನೂರು ಪ್ರತಿಶತ ನಿಜ" ಎನ್ನುತ್ತಾ ನನ್ನನ್ನು ಸಮಾಧಾನಿಸಿದ.

 

ನೀರಜ್ ಮುಂದುವರಿಸಿದ "ಬಾಯ್ ಹೇಳ್ತೇನೆ ಕೇಳು, ನಾಳೆ ಆಫೀಸ್ ಗೆ ಹೋಗಿ, ಆ ಬೋಳಿ... ಗಳಿಗೆ ಪ್ರಾಜೆಕ್ಟ್ ಎಕ್ಸಿಟ್ ಬಿಸಾಡು, ಅಡಿಯಿಂದ ಅಲ್ಲಾಡಿಸು ಸಿಸ್ಟಮ್ ನ, ನೀನು ನಡುಗಿದರೆ ಮೇಲಿನವರು ನಡುಗಲೇ ಬೇಕು, ನೀನು ಬುಡ, ಅವರು ಮೇಲಿನ ಕವಲುಗಳು. ನೀನು ಅಲ್ಲಾಡಿದ್ರೆ ಮೇಲಿನವರು ಒಬ್ಬೊಬ್ಬರಾಗಿ ನಡಗುತ್ತಾರೆ. ಆಗ ಅವರಿಗೆ ಬುಡಕ್ಕೆ ಮಣ್ಣು ಹಾಕ ಬೇಕು ಎಂಬದರ ಅರಿವಾಗುತ್ತದೆ, ಇಲ್ಲನ್ತಾದ್ರೆ ಆವರು ಅಡ್ಡಾದಿಡ್ಡಿ ಬೆಳಿತಾರೆ, ನಿನ್ನನ್ನು ಇನ್ನೂ ಆಳಕ್ಕೆ ತಳ್ಳುತ್ತಾರೆ. ನೀನು ಬರೀ ಅವರ ಭಾರವನ್ನು ಹೊರಲು  ಮೀಸಲಿರ್ತೀಯಾ; ಒಮ್ಮೆ ಅಲ್ಲಾಡಿ ನೋಡು ಹೇಗೆ ಅವರು ನಿನ್ನ ಲೆವೆಲಿಗೆ ಬರ್ತಾರೆ, ಬುಡ ಅಲ್ಲಾಡಿದಾಗ ಎಲೆ ಕೆಳಗೆ ಬೀಳಲೇ ಬೇಕು, ಬೇರಿಗೆ ಅದು ಆಹಾರ ಆಗ್ಲೇ ಬೇಕು"

 

ಅವಿನಾಶ್ ಅವನ ಮಾತಿಗೆ "ಹೌದು , ನೀನು ಹಾಗೆ ಮಾಡು" ಎಂದು ಹೇಳಿದನು.

"ಎರಡು ವರುಷದಿಂದ ಸವೆಸಿದಾಗ ನನನ್ನು ರೆಕೊಗ್ನೈಸ್ ಮಾಡದವರು ನಾನು ಪ್ರಾಜೆಕ್ಟ್ ಎಗ್ಸಿಟ್ ಕೊಟ್ಟು ಬೆಂಚಲ್ಲಿ ಬಿದ್ದರೆ ಮೂಸುವರಾ ...? ಪ್ರಾಜೆಕ್ಟ್ ಏಕ್ಗ್ಸಿಟ್ ಕೊಟ್ಟು ನಾನು ಮಾಡುವುದಾದರೂ ಏನು...? ಇಷ್ಟು ದಿನ ಮಾಡಿದ ಕೆಲಸ ಸುಮ್ಮನೆ ನೀರಲ್ಲಿ ಮಾಡಿದ ಹೊಮದಂತಾಗುತ್ತದೆ. ಮಾಡಿದ ಒಳ್ಳೆ ಕೆಲಸಕ್ಕೆ ಪ್ರತಿಫಲ ಬಯಸುವುದು ತಪ್ಪಿಲ್ಲ ಅಲ್ಲ. ನಾಳೆ ಅವರನ್ನು ಕೇಳಿ ನೋಡ್ತೇನೆ, ನನಗೆ ಪ್ರೊಮೋಷನ್ ಬೇಕಂಥ ಹೇಳಿ ಇಲ್ಲ, ಎಲ್ಲಿಂದ ತಪ್ಪಾಗಿದೆ ಎಂದು ತಿಳಿಯಬೇಕು ಅಷ್ಟೇ !" ಎಂದು ನನ್ನ ಮಾತನ್ನು ಇಟ್ಟೆ. 

ನೀರಜ್ "ಗೆಳೆಯಾ ಒಂದು ಹೇಳ್ತೀನಿ ಕೇಳು, ನಾಳೆ ನೀನು ಯಾರಿಗಂತ ಕೇಳ್ತೀಯ...? ಒಬ್ಬರು ಇನ್ನೊಬ್ಬರ ಮೇಲೆ ದೂರುತ್ತಾರೆ, ಕೊನೆಗೆ ಸಿಸ್ಟೆಮೆ ಸರಿ ಇಲ್ಲ ಹೇಳಿ ಸಿಸ್ಟಮ್ ಮೇಲೆ ದೂರು ಹಾಕಿ ಜಾರಿ ಕೊಳ್ತಾರೆ, ಇದರಿಂದ ನಿನಗೇನೂ ಸಿಕ್ಕಿತು, ನಾನು ಹೇಳಿದ ತಾರಾ ಮಾಡು"

"ಬೆಂಚಲ್ಲಿ ಬಿದ್ದು ಮಾಡುವುದಾದ್ರು ಏನು..?"

"ಎರಡು ತಿಂಗಳು ಏನು ಮಾಡದೇ ಸಂಬಳ ಎಣಿಸು, ಆಗ ಇರುವ ಸಟಿಸ್ಫೆಕ್ಶನ್ ನೋಡು ಬೇರೆಯಾವುದರಲ್ಲಿ ಇರಲ್ಲ, ಊರು ಸುತ್ತು, ಓದಿ ನಿನ್ನ ಸ್ಕಿಲ್ ಲೆವೆಲ್ ಹೆಚ್ಚಿಸು; ಬೇರೆ ಕಂಪೆನಿಗೆ ಟ್ರೈ ಮಾಡು. ಮಿನಿಮಮ್ ೪೦% ಹೈಕ್ ಗೆ ಕೊರತೆ ಇಲ್ಲ, ಇವರು ನಿನಗೆ ಪ್ರೊಮೋಷನ್ ಕೊಟ್ರೆ ಅಬ್ಬಬ್ಬ ಎಂದರೆ ೨೦% ಸಿಕ್ಕ ಬಹುದು ಅದರಕ್ಕಿಂತ ಇದೆ ಒಳ್ಳೇದಲ್ಲ...? ಆಲೋಚನೆ ಮಾಡು"

ಅವನ ಮಾತಲ್ಲಿ ಸತ್ಯ ವಿತ್ತು. ನಾನು ನಕ್ಕೆ "ನೋಡೋಣ ನಾಳೆ ಏನಾಗ್ತದೆ ಹೇಳಿ" ಎಂದು ಸ್ಪ್ರೈಟ್ ಅನ್ನು ಕುಡಿಯುತ್ತ ಎದುರಿದ್ದ ಕಬಾಬ್ ಗೆ ಕೈ ಹಾಕಿದೆ. ಅವಿನಾಶ್ ಗೆ ಇದು ಚೂರು ನೆಮ್ಮದಿ ಒದಗಿಸಿತು. ಅವನು ನಮ್ಮಿಬ್ಬರಿಗೆ ಚಿಕನ್ ಬಿರಿಯಾನಿ ಆರ್ಡರ್ ಕೊಟ್ಟ.

ಜೀವನ ತನ್ನ ಕರೆ ಮುಗಿಸಿ ಬಂದ. ಮೆನ್ ಕೋರ್ಸ್ ನೆಡೆಗೆ ಗಮನ ಹರಿಸಿದ. ಬಿಲ್ ಪೇಯ್ ಮಾಡಿ ವೈಟರ್ ಗೆ ನೂರು ರೂ ಟಿಪ್ಸ್ ಕೊಟ್ಟ.

ಹೊರಗೆ ಬರಲು ನಮ್ಮ ಬಾಚ್ ನ ರಾಜ್ ನನ್ನ ಬಳಿ ಬಂದು "ಬಿಡೋ ವೈಭು ಲೈಟ್  ತೆಕೋ, ಇದೆಲ್ಲ ಆಗುತ್ತೆ" ಎನ್ನುತ್ತಾ ಬೆನ್ನು ಸವರಿದ.

ರಾಜ್ ಆ ತಿವಾರಿಯ ಹೈರರ್ಕಿಯಲ್ಲೇ ಬೀಳುತಿದ್ದ, ಕಳೆದ ಒಂದೂವರೆ ವರ್ಷ ಬೆಂಚಲ್ಲಿ ಇದ್ದು ಆರು ತಿಂಗಳ ಹಿಂದೆ ಆ ಪ್ರಕಾಶ್ ಸರ್ ನ ಪ್ರಾಜೆಕ್ಟ್ ನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದ. ನಿನ್ನೆ ಮಾಡಿದ ಅಲ್ಪ ಕೆಲಸಕ್ಕೆ ಬಿ ಬ್ಯಾಂಡ್ನೊಂದಿಗೆ ಇವತ್ತು ಪ್ರೊಮೋಷನ್ ಪಡೆದಿದ್ದ.

ಅವನ ಸಮಾಧಾನದ ಮಾತು ಕೇಳಲು ಕೋಪ ನೆತ್ತಿಗೀರಿತು "ಏನೋ ಸುಮ್ಮನಿರುವುದು...? ಎರಡುವರ್ಷ ತಿಕ್ಕಿದ್ದೆ ಬಂತು... ನೀನು ಎರಡುವರ್ಷ 24X7  ಕೆಲಸಮಾಡಿ ನೋಡು ಗೊತ್ತಾಗುತ್ತೆ, ನೋವು ಎಷ್ಟು ಗಾಡವಗಿರುತ್ತೆ ಹೇಳಿ, ಬಂದುಬಿಟ್ಟ ದೊಡ್ಡ ಸಮಾಜ ಸುಧಾರಕನಂತೆ ನನ್ನನ್ನು ಸುಧಾರಣೆ ಮಾಡಲು"

ಅವಿನಾಶ್ ನನ್ನ ಬಾಯಿ ಮತ್ತು ಕೋಪವನ್ನು ಮುಚ್ಚಿದನು. 

"ಬಾಯ್ ದೇಕೋ ನಾ, ಆಜ್ ಕಾಲ್ ಕೆ ಲೌನ್ದೋ ಕಿ ಬಾತ್ ಸನ್ ನ ಪಡ್ರಹಾ ಹೇ ಮುಜೆ ಸಾಲ ಅಸ್ ತಿವಾರಿಕೆ ವಜಹ ಸೆ !!" ಎಂದೆ.

ತಬ್ಬಿಕೊಂಡ ಹಿತ ವೆನಿಸಿತು. ಜೀವನ ಗೆ ಲೈಟಾಗಿ ನನ್ನ ಪ್ರೋಮೊಷನ್ನು ಕಸಿದಕ್ಕೆ ಗಿಲ್ಟ್ ಫೀಲ್ ಆಗಲು ಶುರುವಾಯಿತು. ಮಾತು ಹೊರಡಿಸದೆ ಅವನು ಕೊರಗುತಿದ್ದ.

ಅವರೆಲ್ಲರನ್ನು ಬಿಟ್ಟು ನಾನು ನನ್ನ ದಾರಿ ಹಿಡಿದೆ. ಆಕೃತಿಗೆ ಕರೆ ಮಾಡಿ ಮನದಲ್ಲಿ ಎದ್ದ ತ್ಸುನಾಮಿಯನ್ನು ಶಾಂತ ಗೊಳಿಸಿದೆ.

 

********************

 

 

ನಿದ್ದೆ ಹತ್ತಿತು, ನಿನ್ನೆ ವರೆಗೆ ಬೀಳುತಿದ್ದ ಪ್ರೊಮೋಷನ್ ನ ಕನಸು ಇವತ್ತು ಬೀಳಲಿಲ್ಲ; ಬೆಳಗ್ಗೆ ಬೇಗನೆ ಎಚ್ಚರವಾಯಿತು. ಎದ್ದು ನನ್ನನು ಇವತ್ತಿನ ಯುದ್ದಕ್ಕೆ ಸಜ್ಜು ಮಾಡಿಕ್ಕೊಂಡೆ. ಆಫಿಸ್ ಗೆ ಬೇಗನೆ ತಲುಪಿದೆ.

ಲಕ್ಕಿ ಇನ್ನೂ ತನ್ನ ಪಾಳಿಯಲ್ಲಿದ್ದ "ಬಾಯ್ ಆಪ್ಕಾ ಪ್ರಮೋಶನ್ ಹುವಾ ಕ್ಯಾ?" ಎಂದ ಆಸೆಯಲ್ಲಿ. ಬಾಗಿಲ ಒಳಗೆ ಕೊಲಿಗ್ಸ್ ಕೇಳುವ ಅಸೂಯೆಯ ಧಾಟಿ ಇವನಲ್ಲಿ ಇರಲಿಲ್ಲ, ಬದಲಿಗೆ ಗೆಳೆತನದ ಸಲುಗೆ ಇತ್ತು ಅವನ ಮಾತಿನಲ್ಲಿ, ಮತ್ತು ಅವನಿಗೆ ಗೊತ್ತಿತ್ತು ನನ್ನ ಕೆಲಸದ ಪರಿ, ಎರಡು ವರ್ಷದಿಂದ ಪ್ರತಿದಿನ ನನ್ನನು ನನ್ನ ಮೇನೇಜರ್ ಕ್ಕಿಂತ ಚೆನ್ನಾಗಿ ಇವನು ಗುರುತಿಸಿದ್ದ. 

"ನಹೀನ್ ಬಾಯ್" ಎಂದು ತುಟಿ ಅಗಲಿಸಿದೆ. ನಿನ್ನೆಯಂತೆ ಇದು ಪೋರ್ಸ್ ಫುಲ್ ಆಗಿ ಅಗಲಿಸಿದ್ದಲ್ಲ, ಅವನ ಸಲುಗೆಗೆ ಅದಾಗಿಯೇ ತೆರೆದುಕೊಂಡದ್ದು.

"ಅಚ್ಚೋಕೋ ಜಮಾನ ನಹೀನ್ ಬಾಯ್" ಎಂದ ಆ ಚೀನೀ ಕಣ್ಣನ್ನು ಇನ್ನು ಸಣ್ಣದು ಮಾಡಿ.

 

ಬಂದು ಸಿಸ್ಟಮ್ ಲಾಗಿನ್ ಮಾಡಿ, ಎರಡು ವರ್ಷ ನಾನು ಮಾಡಿದ ಕೆಲಸದ ಮೇಲೆ ವಿಶ್ಲೇಷಣೆ ಶುರು ಮಾಡಿದೆ. ಒಂದೊಂದಾಗಿ ಯುದ್ದಕ್ಕೆ ಅಸ್ತ್ರ ಸಿದ್ದಮಾಡಿಕ್ಕೊಂಡೆ. ಮೊದಲ ದಿನದ ಮನ್ಯುಲೈಫ್ ಪ್ರಾಜೆಕ್ಟ್ ಇಂದ ಹಿಡಿದು ನಿನ್ನೆ ಮೊನ್ನೆ ವರೆಗೆ ನಡೆಯುತಿದ್ದ ಸೀಮನ್ಸ್ ನ ಪ್ರಾಜೆಕ್ಟ್ ವರೆಗೆ ಮಾಡಿರುವ ಕೆಲಸಗಳನ್ನು ಒಂದು ವರ್ಡ್ ಫೈಲ್ ನಲ್ಲಿ ಸೇರಿಸುತ್ತಾ ಹೋದೆ. ಇನ್ನೊಂದು ಎಕ್ಸೆಲ್ ನಲ್ಲಿ ಕಂಪೆನಿಗೆ ನಾನು ತಂದುಕೊಟ್ಟ ರೆವೆನ್ಯುವನ್ನು ಹಾಕಿದೆ. ಕಳೆದ ೨೦ ತಿಂಗಳಲ್ಲಿ   ೨೩೪೬ ಗಂಟೆಗಳು !!

 

೨೩೪೬ ಗಂಟೆಗಳು, ಗಂಟೆಗೆ ೩೬ ಡಾಲರ್ ೮೪೪೫೬ ಡಾಲರ್ !!೪೪.೫ ಕರೆನ್ಸಿ ವಾಲ್ಯೂ ನ ಪ್ರಕಾರ ೩೭,೫೮,೨೯೨ ರೂಪಾಯಿಗಳು !!!

ನನ್ನ ಪಾಲಿಗೆ ಸಿಕ್ಕಿದ್ದು ಅದರ ಬರಿ 10% ಎಂದು ತಿಳಿಯಲು ಬೇಜಾರಾಯಿತು.

 

ಜೀವನ್,ಕಿರಣ್, ತಿವಾರಿ, ಬದಿಮನಿ ಪ್ರತಿಯೊಬ್ಬರ ಸ್ಟೇಟಸ್ ಅನ್ನು ನೋಟಿಸ್ ಮಾಡಲು ಸ್ಟೇಟಸ್ ನೋಟಿಫಿಕೇಶನ್ ಆನ್ ಇಟ್ಟೆ.

 

ಸಲ್ಪ ಸಮಯದಲ್ಲೇ, ಅವಿನಾಶ್ ಕ್ಯುಬಿಕಲ್ ಗೆ ಬಂದ.ಜೊತೆಗೆ ಜೀವನ್ ನೂ ಇದ್ದ, ಆದರೆ ಎಂದಿನಂತೆ ಅವನ ಜೊತೆಗೆ ನನ್ನೊಂದಿಗಿನ ಸಲುಗೆ ಇರಲಿಲ್ಲ.

"ಕೈಸೆ ಹುವಾ ಬಾಯ್..? ಸೋಯಾ ನಹಿ ಕ್ಯಾ...?" ಅಂದ ಅವಿನಾಶ್ ವರಗಿದ್ದ ಚೇರ್ ತಿರುಗಿಸುತ್ತಾ.

"ಕನಸು ಇದ್ರೆ ನಿದ್ದೆ ಬೀಳಲ್ಲ, ಕನಸೇ ಮುಗಿದು ಹೋಯ್ತು ಅಂದ್ರೆ ನಿದ್ದೆಗೆ ಯಾವ ಅಡ್ಡಿ, ಸರಾಗಾಗಿ ನಿದ್ದೆ ಬಂತು, ತುಂಬಾ ದಿನದ ನಂತರ !!"   

"ಇವತ್ತಿಗೆ ಏನು ಪ್ಲಾನ್ಸ್ ...?"

"ಮುಹೂರ್ತಕ್ಕೆ ಕಾಯ್ತಾ ಇದ್ದೇನೆ, ರಣರಂಗ ಕ್ಕೆ ಸಜ್ಜಾಗಿದ್ದೇನೆ, ಶತ್ರು ಫೀಲ್ಡ್ ಗೆ ಎಂಟ್ರಿ ಕೊಡುವುದಷ್ಟೇ ಬಾಕಿ" ಎಂದೆ.

ಅವನು "ಬಾಯ್ ಆಜ್ ಹೈಯರ್ ಲೆವೆಲ್ ಕೆ ಆಯೆಂಗೆ ನಹೀನ್, ವರ್ಕ್ ಫ್ರೊಂ ಹೋಂ ಕ ಬಹಾನ ಬನಾತೆ ಹುಯೆ ಘರ್ ಪೆ ಸಡೆ ರಹೆಂಗೆ.."

"ಸಾಲೆ, ಬಾರದೆ ಏನು ಮಾಡ್ತಾರೆ, ಇವತ್ತಲ್ಲ ನಾಳೆ ಬರಲೇ ಬೇಕು, ಲೇಟಾಗಿ ಬಂದ್ರೆ ಅವರಿಗೆ ಕಷ್ಟ" ಎಂದೆ.

ನನ್ನ ಮಾತಿನಲ್ಲಿ ಹಿಂದಿನ ಎಂದಿಕಿಂತ ಜಾಸ್ತಿಯಾದ ದನಿಯಿತ್ತು. ಆಫೀಸ್ ನ ಒಳಗಿದ್ದ ಕೆಲವೊಂದು ತಲೆಗೂ, ಹೊರಗಿನ ಲಕ್ಕಿಗೂ ಕೇಳುವಂತೆ ಇತ್ತು.

ಕ್ಯುಬಿಕಲ್ ದಾಟಿ ಹೋಗುತಿದ್ದ ತಿವಾರಿಯ ಕಿವಿಗಳಿಗೆ ಇದು ರಣಕಹಳೆ ಯಾಗಿತ್ತು.

 

ಅವರನ್ನು ಗಮನಿಸಿದ ನನ್ನಲ್ಲಿ, ಯಾಕಾದರೂ ಈ ರೀತಿ ಕಿರುಚಿದೆ ಎಂದು ಪ್ರಶ್ನೆ ಮೂಡಿತು. ಹೌದು ವಟ ವಟ ಮಾಡ್ತಾ ಇರ್ಬೇಕು ಬಾವಿಯಲ್ಲಿರುವ ಪಾರಿವಾಳದಂತೆ. ಆಗ ಮಾತ್ರ ಹೊರನಿನವರ ಗಮನಕ್ಕೆ ತನ್ನ ಆವಾಸದ ಸುಳಿವು ಸಿಗುವುದು. ಮೌನದ ಮೈನಾದಂತೆ ಪೊಟರೆ ಸೇರಿದರೆ ಯಾರ ಗಮನಕ್ಕೆ ಬಾರದು, ಬಾವಿಯಲ್ಲಿ ಬರೇ ಪಾರಿವಾಳ ಇದೆ ಎಂದುಕೊಳ್ಳುತ್ತಾರೆ ಹೊರಗಿನ ಜನ.

 

ಒಂದು ಕುರಿ ಬಂದಾಗಿತ್ತು ಹಸಿದ ಹೆಬ್ಬುಲಿಯ ಬೋನಿಗೆ, ಒಂದು ಸಾಕಿರಲಿಲ್ಲ ಉಳಿದ ಮೂರು ಕುರಿಗಳ ಪ್ರತೀಕ್ಷೆಯಲ್ಲಿತ್ತು ಈ ಹಸಿದ ದೇಹ.ಮತ್ತೆ ಆಫೀಸ್ ಕಮ್ಯುನಿಕೆಟರ್ ನೋಡಿದೆ.

 

ಹನ್ನೊಂದು ಮೊವತ್ತಕ್ಕೆ ಎಲ್ಲರು ಬಂದಾಗಿತ್ತು.

 

ಔಟ್ ಲುಕ್ ನಲ್ಲಿ ಮೀಟಿಂಗ್ ಬುಕ್ ಮಾಡಿದೆ. ಆದರೆ ನನಗೆ ಕಾನ್ಫ್ರೆನ್ಸ್ ರೂಂ ಬುಕ್ ಮಾಡುವ ಅಧಿಕಾರ ವಿರಲಿಲ್ಲ. ನಿನ್ನೆ ಪ್ರೊಮೋಷನ್ ಸಿಕ್ಕಿ ೩.೨ ಆಗಿದಿದ್ದರೆ ಈ ಸ್ವಾತಂತ್ರವೂ ನನಗೆ ಸಿಕ್ಕುತ್ತಿತ್ತು. ಅದಕ್ಕಾಗಿ ಸೀದಾ ತಿವಾರಿಗೆ ಪಿಂಗ್ ಮಾಡಿ,ಹಾಯ್ ಹಲ್ಲೋ ಹೇಳದೆ ಸೀಧಾ ಮಾತಿಗೆ ಬಂದೆ" ಐ ವಾಂಟ್ ಟು ಬುಕ್ ಅ ಕಾನ್ಫ್ರೆನ್ಸ್ ರೂಂ ಫಾರ್ ೬ ಪಿಪಲ್" ಎಂದು ಟೈಪ್ ಮಾಡಿದೆ.

ಮೊದಲ ಶೆಲ್ ಗೆ ನಡುಗಿ ಹೋಗಿದ್ದ ಆ ತಿವಾರಿ "ಮೇ ಐ ಕ್ನೋ ದಿ ರೀಸನ್ ಫಾರ್ ಕಾನ್ಫ್ರೆನ್ಸ್ "ಎಂದು ಉತ್ತರ ಬಂತು.

" ಯು ಕ್ನೌದಿ ರೀಸನ್, ವೈ ಆರ್ ಯು ಅಸ್ಕಿಂಗ್ ವಿಥ್ ಮಿ" ಎಂದು ಪ್ರಾಜೆಕ್ಟ್ ಮೇನೇಜರ್ ಎಂಬ ರೆಸ್ಪೆಕ್ಟ್ ಮರೆತು ಪಿಂಗ್ ಮಾಡಿದೆ.

 

ಒಂದು ರಜೆಗೆ ಅಪ್ಲೈ ಮಾಡಿದರೆ ಮೂರು ವಾರ ಕ್ಯುಬಿಕಲ್ ಗೆ ಓಡಿಸುತಿದ್ದ ಈ ಮೆನೆಜೆರ್ ಮಾರನೆ ನಿಮಿಷದಲ್ಲಿ ಕ್ಯುಬಿಕಲ್ ನಲ್ಲಿ ಇದ್ದ.

ಹೆಗಲ ಮೇಲೆ ಕೈಹಾಕಿ ಆತ್ಮೀಯನಂತೆ ಪೋಸ್ ಕೊಟ್ಟ,  ಭುಜವನ್ನು ಅಲ್ಲಾಡಿಸಿ ಅವನ ಕೈ ಜಾರಿಸಿದೆ "ಇದರ ಅಗತ್ಯ ನನಗಿಲ್ಲ, ತೇಗಿ ಕೈ" ಎಂದು ಸೀದಾ ಮಾತು ಹೊರಗಿಟ್ಟೆ.

"ಬಾ ಮಾತಾಡುವ.. ಅ ಕಪ್ ಆಫ್ ಕಾಫಿ ..?" ಎಂದು ಪ್ರಶ್ನೆ ಇಟ್ಟ.

"ನನ್ನ ಜೊತೆ ಕಾಫಿ ಕುಡಿಯುವ ಆತ್ಮೀಯತೆ ನಿನ್ನೆಗೆ ಮುಗ್ದು ಹೋಯ್ತು.. ಸೋರಿ ಮಾತಾಡ್ಲಿಕ್ಕೆ ಪುರಸೊತ್ತು ಇದೆಯಾ ಹೇಳು" ಅಂದೆ ಔಟ್ ಬಾಕ್ಸ್ ನಲ್ಲಿರುವ ಮೀಟಿಂಗ್ ಬೂಕಿಂಗ್ ನ ಪೇಜ್ ಓಪನ್ ಮಾಡುತ್ತಾ.

ಟು ಲಿಸ್ಟ್ ನಲ್ಲಿದ್ದ ಇನ್ನು ನಾಲ್ಕು ಮಂದಿಯ ಹೆಸರನ್ನು ಓದಿದ. ಅವಿನಾಶ್, ಜೀವನ್, ಬದಿಮನಿ ಮತ್ತು ನಮ್ಮ ರಿಪೋರ್ಟಿಂಗ್ ಮೇನೇಜರ್ ಕಿರಣ್ ನ ಹೆಸರಿತ್ತು ಅಲ್ಲಿ.

 

ಕೈ ಹಿಡಿದು ಸೀಟ್ನಿಂದ ಮೇಲೆ ಎಬ್ಬಿಸಿದ "ಬಾ, ಮಾತಾಡೋಣ" ಅಂದ.

ಇಬ್ಬರ ಒನ್ -ಟು-ಒನ್ ಮೀಟಿಂಗ್ ನಡೆಯುವ ರೂಂ ಗೆ ಕರಕ್ಕೊಂಡು ಹೋದ.

"ಏನಾಯ್ತು" ಎಂದು ಮಾತು ಶುರುವಾಯ್ತು.

"ಏನಾಯ್ತು ಹೇಳಿ ಗೊತ್ತಿಲ್ವಾ ನಿಮಗೆ; ಏನಾಯ್ತು ಅಂತ ನಾನು ಕೇಳಬೇಕು ನಿಮ್ಮಲ್ಲಿ"

"ಅದು ಬಿಡು; ಅವರ್ನೆಲ್ಲ ಯಾಕಾಗಿ ಇನ್ವೈಟ್ ಮಾಡಲು ಹೋಗಿದ್ದಿ, ಇಬ್ಬರು ಡಿಸ್ಕುಸ್ ಮಾಡಿದ್ರೆ ಸಾಲ್ದ...?"

"ಸೋರಿ ಸರ್, ಆಗಲ್ಲ, ಒಬ್ಬೊಬ್ಬರ ಎದುರು ನನಗೆ ಅಳಲು ಕಣ್ಣೇರು ಉಳ್ದಿಲ್ಲ, ೨೩ ವರ್ಷದಲ್ಲಿ ಒಮ್ಮೆಯಾದರು ಹೊರಹಾಕದೆ ಭಂದಿಯಾಗಿದ್ದ ಕಣ್ಣೇರು ನಿನ್ನೆ ಹರಿದು ಮುಗ್ದು ಹೋಯ್ತು.!!"

"ಚಿಲ್ ವೈಭು !!" ಎಂದು ಎದುರು ಕುಳಿತ ತಿವಾರಿ ಮೇಜಿನ ಮೇಲಿದ್ದ ನನ್ನ ಕೈಯನ್ನು ಸವರಿದ.

ಅವನ ಸ್ಪರ್ಶದಿಂದ ನನ್ನನ್ನು ಬಿಡಿಸಿಕೊಂಡೆ.

 

"ನಿಮ್ಮಂತೆ ನನಗೆ ಮಾತಾಡಲು ಬರುವುದಿಲ್ಲ, ತನ್ನ ತಪ್ಪನ್ನು ಇನ್ನೊಬ್ಬರ ಮೇಲೆ ಹಾಕಲು ಗೊತ್ತಿಲ್ಲ, ನನಗೆ ಯಾವ ಲೆವಲಲ್ಲಿ ತಪ್ಪಾಗಿದೆ ಎಂದು ತಿಳಿಯ ಬೇಕು ಅದಕ್ಕಾಗಿ ಅವರನ್ನು ಎಲ್ಲ ಕರೆದದ್ದು ಕಾನ್ಫ್ರೆನ್ಸ್ ಗೆ, ಆಫ್ತ್ರೋಲ್ ನಾನು ನಿಮ್ಮಂತೆ ಮೇನೇಜ್ಮೆಂಟ್ ಕುಲ ಅಲ್ಲ ನೋಡಿ, ಸಾಮಾನ್ಯದ BE ಹುಡುಗ"

ಅವನು ಬೆರಳನ್ನು ಟೇಬಲ್ ಗೆ ಬಡಿಯುತ್ತ ನನ್ನ ಮಾತು ಕೇಳುತಿದ್ದ.

ನಾನು ಮುಂದುವರಿಸಿದೆ."ಎಲ್ಲರ ಎದುರು ಮಾತಾಡಿದರೆ, ಅವರವರು ಮಾಡಿದ ಪ್ರಯತ್ನ ಹೇಳುತ್ತಾರೆ, ವರ್ಚ್ಯಲ್ ಎಂಟ್ರಿ ಆಗಿರುವ 'ಸಿಸ್ಟಮ್' ಎನ್ನುವ ದೂರದ ವಸ್ತುವನ್ನು ದೂಷಿಸುವುದು ತಪ್ಪುತ್ತದೆ" ಎಂದೆ.

"ಐ ಟ್ರೈಡ್ ಮೈ ಲೆವೆಲ್ ಬೆಸ್ಟ್ ಫಾರ್ ಯು ವೈಭು"

"ಅದೂ ಗೊತ್ತಾಗ್ತಿತ್ತು ಉಳದ ಐದು ಮಂದಿಯನ್ನು ನೀವು ಮೀಟಿಂಗ್ ಗೆ ಕರದ್ರೆ" ಎಂದೆ ಕೋಪದಲ್ಲಿ; ಎಚ್ ಆರ್ ಬದಿಮನಿಯನ್ನು ಇದೆ ಕಾರಣಕ್ಕೆ ಲಿಸ್ಟ್ ಗೆ ಸೇರಿಸಿದ್ದೆ, ಅವರಿಗೆ ಎಲ್ಲಾ ಆಗು ಹೋಗುಗಳ ಪರಿವಿರುತ್ತದೆ.

 

 "ಚಿಲ್ ವೈಭು ಇದೆಲ್ಲ ನಡೆಯುತ್ತೆ, ನೀನಿನ್ನೂ ಐ.ಟಿ ಜೀವನದ ಎರಡನೇ ವರ್ಷದಲ್ಲಿ ಇದ್ದೀಯ, ಇಂತಹ ಹಲವು ಕೇಸ್ ನೋಡಿದ್ದೇನೆ ನನ್ನ ೧೦ ವರ್ಷದ ಅನುಭವದಲ್ಲಿ"

"ನೀವು ನಿಮ್ಮ ಈ ಹತ್ತು ವರ್ಷದಲ್ಲಿ ಇಂತಹ ಹತ್ತು ಕೇಸ್ ನೋಡಿರ ಬಹುದು, ಆದರೆ ನನ್ನಂತಹ ವಿಚಿತ್ರ ಕೇಸ್ ನೋಡಿರ್ಲಿಕ್ಕೆ ಸಾದ್ಯ ಇಲ್ಲ"

"ಯಾಕೋ ಈ ರೀತಿ ಮಾತಾಡ್ತೀಯ..?"

"ಆಶ್ಚರ್ಯ ಆಯ್ತಲ್ಲ ನನ್ನ ಬಾಯಿಯಿಂದ ಕಟೋರ ಮಾತುಗಳನ್ನು ಕೇಳಿ, ಪಾಪದ ಹುಡುಗ ಅವನ ಪಾಡಿಗೆ ಯಿಯರ್ ಫೋನ್ ಹಾಕಿ ಕೆಲಸದಲ್ಲಿ ಮುಳುಗಿರ್ತಾನೆ, ಕರ್ದಾಗ ಶನಿವಾರ ಭಾನುವಾರ ಅನ್ನದೆ ಆಫೀಸ್ ಬರ್ತಾನೆ , ಊರಿಗೆ ಹೋಗ್ತೇನೆ ಅಂದಾಗ ಕಾಮ್ಪೋಫ್ ಕೊಟ್ರೆ ಸಂತೋಷ ಪಡ್ತಾನೆ …. ಇದೆ ಅಲ್ಲ ನನ್ನ ಬಗ್ಗೆ ನಿಮಗಿದ್ದ ಅಭಿಪ್ರಾಯ

.

ಒಂದು ತಿಳ್ಕೊಳ್ಳಿ ವರ್ಷದಿಂದ ಶಾಂತವಾಗಿರುವ ಜ್ವಾಲಾಮುಖಿ ಪರ್ವತ ಸ್ಪೋಟಿಸಿದರೆ ಜೀವಂತ ಜ್ವಾಲಾಮುಖಿ ಗಿಂತ ಘೋರ ವಾಗಿರ್ತದೆ. ಕಾಲ ಬಂದಾಗ ಸ್ಪೋಟಿಸುತ್ತದೆ, ಹತ್ತಿರ ಇದ್ದ ಎಲ್ಲಾ ಪರ್ವತಗಳನ್ನು ತನ್ನ ಜ್ವಾಲೆಯಲ್ಲಿ ತಿಂದು ಬಿಡುತ್ತದೆ."

"ವೈಭು ನೀನು ಈ ರೀತಿ ಮಾತಾಡಿದರೆ, ಜೀವನ್ ನೊಂದಿಗೆ ರೂಂ ಹಂಚುವ ಅವಿನಾಶ್ ನನಗೆ ಏನು ಹೇಳ್ಬೇಕು, ಅವನ ಫೀಲಿಂಗ್ಸ್ ಹೇಗಿರಬಹುದು..?ಒಟ್ಟಿಗೆ ಇದ್ದವನಿಗೆ ತನ್ನಷ್ಟೇ ಕೆಲಸ ಮಾಡಿದವನಿಗೆ ಪ್ರೊಮೋಷನ್ ಬ್ಯಾಂಡ್ ಎಲ್ಲಾ ಸಿಕ್ಕಾಗ ಅವನ ಕಥೆ ಹೇಗಾಗಿರ್ಬೇಕು..?"

"ಅವರಿವರ ಮಾತು ಹೇಳದೆ ಸಲ್ಪ ಸುಮ್ನಿರ್ತೀರಾ, ಕೇಳಿ ಇಲ್ಲಿ .... ಕಳೆದ ಎರಡು ವರ್ಷದಿಂದ ನಿಮ್ಮ ಜೊತೆಗಿದ್ದವ ಕಳೆದ ಐದು ಆರು ತಿಂಗಳ ವರೆಗೆ 'ಗೆಳೆಯ ಬೆಂಚಲ್ಲಿ ಕೂತು ಕೂತು ಸಾಕಾಯಿತು, ಒಮ್ಮೆ ಪ್ರಾಜೆಕ್ಟ್ ಗೆ ಬಿದ್ರೆ ಸಾಕಂತ ಆಗಿದೆ' ಎನ್ನುವವನು ನಿನ್ನೆ ಅಚಾನಕ್ಕಾಗಿ ಬಂದು 'ಬೆಟರ್ ಲುಕ್ ನೆಕ್ಸ್ಟ್ ಟೈಮ್' ಅಂದಾಗ ನನ್ನ ಪರಿಸ್ತಿತಿ ಹೇಗಾಗಿರ್ಬೇಕು ...? ನೀವೇ ಆಲೋಚನೆ ಮಾಡಿ"

"ಅವರಿವರನ್ನು ಯಾಕೋ ಕಂಪೇರ್ ಮಾಡ್ತೀಯ..?"

"ಅವರಿವರು ಹೇಳಿದರೆ ನೋಯುತ್ತಿರಲಿಲ್ಲ, ಹೇಳಿದ ಜನ ನಿಮ್ಮ ಹೈರಾರ್ಕಿ ಯಲ್ಲಿ ಇದಿದ್ದಕ್ಕೆ ಮನಸ್ಸಿಗೆ ನೋವಾಗಿದ್ದು"

"ಯಾರು...?"

"ನಿಮಗೆ ಗೊತಿಲ್ವಾ ನೀವು ಯಾರ ಹೆಸರಿಗೆ ಪ್ರೊಮೋಷನ್ ಯಾರ್ ಹೆಸರಿಗೆ ಕೊಮ್ಪೋಫ್ ಎಂಬ ಚೆಂಬು ಕೊಟ್ಟಿದ್ದಿರಿ ಹೇಳಿ, ನಾಟಕ ಸಾಕು ಮಾಡಿ" ಎಂದೆ.

ಕಟೋರ ಮಾತಿಗೆ ಮೌನವಾಯಿತು ಅವನ ಹತ್ತು ವರ್ಷದ ಅನುಭವದ ನಾಲಗೆ.

ಸಲ್ಪ ತಡೆದು ಅವನು "ಈಗ ಹೊಸ ಸ್ಚೀಮ್ ಒಂದು ಬಂದಿದೆ, ನಿನಗೆ ಗೊತ್ತಿರ ಬಹುದು..."

"ಸಾಕು ನಿಲ್ಲಿಸ್ರಿ ಸ್ಕೀಮ್ ಗೀಂ ಎಲ್ಲಾ .. ಎಲ್ಲಾ ಗೊತ್ತು ಕಣ್ರೀ ಇದೆಲ್ಲ ಬೆಣ್ಣೆಯ ಜಾಗಕ್ಕೆ ಚೀಸ್ ಹಚ್ಚುವ ಸ್ಕೀಮ್ ಅಷ್ಟೇ... ಹೇಳ್ತೇನೆ ಕೇಳಿ ೨೦೦೫ ರಲ್ಲಿ ಇದ್ದ ೨೬೬೮ ಎಂಪ್ಲೋಯೀ ಗಳ ಸಂಕೆ ಎರಡು ವರ್ಷದಲ್ಲಿ ಇವತ್ತಿಗೆ ೪೮೦೯ ಆಗಿದೆ, ಅಪ್ರ್ರೈಸಲ್ ವರೆಗೆ ಕನ್ಸಿಡರ್ ಮಾಡಿದರೆ ಬರೋಕ್ ಬರಿ ೨೫೦೦ ಮಂದಿ ಎಲಿಜಿಬಲ್ ಇದ್ದರು, ಅದಕ್ಕಾಗಿ ಕೆಲವರಿಗೆ ತುಪ್ಪ , ಹಲವರಿಗೆ ಈ ಮೊಣಕೈಯ ಬೆಣ್ಣೆ ಯ ಸ್ಕೀಮ ಶುರುಮಾಡಿದ್ದು." ಪ್ರತಿಯೊಂದಕ್ಕೂ ಫ್ಯಾಕ್ಟ್ ಫಿಗರ್ ರೆಡಿ ಮಾಡಿಕೊಂಡಿದ್ದೆ ಎಚ್ ಆರ್ ನೋಡನೆಯ ಅಸ್ತ್ರವಾಗಿ ಉಪಯೋಗಿಸಲು. ಇಲ್ಲಿ ಉಪಯೋಗಕ್ಕೆ ಬಿತ್ತು.

ಅವ ನನ್ನ ಮಾತಿನಿಂದ ಅಲ್ಲಾಡಿದ್ದ, ಅವನನ್ನು ಅರ್ದಕ್ಕೆ ಬಿಡುವ ಮನಸಾಗಲಿಲ್ಲ ನಾನು ಮುಂದುವರಿಸಿದೆ "ಆಯ್ತು ನಿಮ್ಮ ಆ ಚೀಸ್ ನ ಆಸೆ ನನಗು ಇದೆ ಎಂದಿಟ್ಟು ಕೊಳ್ಳೋಣ, ಆದರೆ ಅದು ನಾನು ಕೆಲಸ ಮಾಡಿ ತಂದುಕೊಟ್ಟ ೮೪೪೫೬ ಡಾಲರ್ ಎದುರಿಗೆ ಏನೂ ಅಲ್ಲ.

ಇನ್ನು ನೆನಪಿರ ಬಹುದು ನಿಮಗೆ ಆ ದಿನ ಜೀವನ್ ಗಾಗಿ ನಾನು ನಿಮ್ಮ ಜೊತೆ ಜಗಳ ಆಡಿದ್ದು, ಬಳಿಕ ನಾನು ನನ್ನಲ್ಲಿ ಗಿಲ್ಟ್ ಫೀಲ್ ಮಾಡಿಕೊಂಡಿದ್ದೆ ಆದಿನ, ಆದರೆ ಇವತ್ತು ಈ ರೀತಿ ಮಾತಾಡಿದರು ಗಿಲ್ಟ್ ಫೀಲ್ ಆಗಲ್ಲ ಯಾಕೆ ಹೇಳಿ, ಇಲ್ಲಿ ನನ್ನ ತಪ್ಪಿಲ್ಲ, ಬೇರೆಯವರ ತಪ್ಪು ಅರ್ತೈಸುವ ಛಲ ಮಾತ್ರ !!"

ಮೌನದಲ್ಲಿದ್ದ.

ನಾನು "ಆಯಿತು ಸರ್ ನನಗೆ ಹೇಳಬೇಕಾದ ವಿಚಾರ, ಇನ್ನು ನೀವು ಹೋಗಬಹುದು"

"ಸೋರಿ ವೈಭು, ನನ್ನ ಮಟ್ಟಿಗೆ ಪ್ರಯತ್ನಿಸಿದೆ, ಆದರೆ ಮೇಲಿನವರು .. ಸಿಸ್ಟಮ್ ನಲ್ಲಿ ಎಲ್ಲೋ ಲೋಪ ಸಂಭವಿಸಿದೆ"

"ಆ ಮಾತನ್ನು ಆಡುವ ಅಧಿಕಾರ ನಿಮಗಿಲ್ಲ, ನಿಮ್ಮ  ನನ್ನ ನಡುವಿನ ನಾಲ್ಕು ಮಂದಿಯನ್ನು ಇಲ್ಲಿ ನೀವು ಬರಲು ಬಿಟ್ಟು ಅವರ ಎದುರಿಗೆ ಈ ಮಾತು ಹೇಳಿದರೆ ಅದಕ್ಕೊಂದು ಮೌಲ್ಯ ವಿತ್ತು. ಈಗ ಇದು ಬರೀ ಬೊಗಳೆ ಅನ್ಸುತ್ತೆ ಸೋರಿ ಸರ್ .. ನನಗೆ ಬೇರೆ ಕೆಲಸ ಇದೆ ನೀವು ಹೋಗ ಬಹುದು..."

ಭುಜ ತಟ್ಟಿದ " ನೋಡೋಣಾ ಏನಾಗ್ತದೆ ಹೇಳಿ, ಇನ್ನೊಮ್ಮೆ ಎಸ್ಕಲೇಟ್  ಮಾಡ್ತೇನೆ.."

"ಸುಮ್ನೆ ಸಾಕ್ ಮಾಡ್ತೀರ.. ಮಾಡ ಬೇಕಾದ ಹೊತ್ತಿಗೆ ಮಾಡ್ಲಿಲ್ಲ.. ಇಗ ಏನು ಮಾಡ್ತೀರ... ಸುಮ್ನೆ ನಿಮ್ಮ ತಪ್ಪನ್ನು ಒಪ್ಪಿ... ನನ್ನೆದುರಿಗೆ ಸಾದ್ಯ ವಿಲ್ಲದಿದ್ದರೆ ಕನಿಷ್ಠ ಪಕ್ಷ ನಿಮ್ಮ ಮನಸಾಕ್ಷಿ ಎದುರಿಗೆ ಸೋಲನ್ನು ಒಪ್ಪಿ"

 

ಅವನು ಸುಮ್ಮನಾದ. ಅವನನ್ನು ಗೆದ್ದ ಖುಷಿಯಲ್ಲಿ ಮನಸ್ಸು ಸಂತೋಷ ಪಟ್ಟಿತು.

"ಥಾಂಕ್ ಯು ವೆರಿ ಮಚ್ !! ರೆಡಿಯಾಗಿ ಎಲ್ಲಾ ಮೌನಗಳು ಯಾವಾಗಲು ಮೌನವಾಗೇ ಇರುವುದಿಲ್ಲ, ಸ್ಪೋಟಿಸಿದಾಗ ಅದನ್ನು ಎದುರಿಸುವ ಸಾಮರ್ಥ್ಯ ಇರಬೇಕು;ಮೌನ ಮತ್ತು  ಮೌನಿಯನ್ನು ಆಧರಿಸು ಇನ್ನುಮ್ಮುಂದೆ" 

ಮೌನದಲ್ಲೇ ಅವನು ಹೊರಗೆ ನಡೆದ.

ಗಂಟಲಿ ನ  ಪಸೆ ಆರಿತ್ತು ಹತ್ತುವರ್ಷದ ಅನುಭವವನ್ನು ಅಳಿಸಿಹಾಹುವ ಎರಡು ವರ್ಷದ ಅನುಭವಕ್ಕೆ, ಕಾಫಿ ಇಳಿಸಲು ಬಾಲ್ಕನಿಗೆ ಹೋದೆ. ಅಲ್ಲಿ ಲಕ್ಷ್ಮಿ ಸರ್ ನನ್ನನ್ನು ನೋಡಿ "ಸೋರಿ ವೈಭು, ನನ್ನ ಕೈಲಾದ್ರೆ ನಾನು ಮಾಡ್ತಿದ್ದೆ."

ಅವರ ಸ್ಪಂದನೆ ಹಿಡಿಸಿತು, ನಾನು "ಹೌದು ಸರ್, ಟೆಕ್ನಿಕಲ್ ಮೇನೇಜರ್ ಗೆ ಗೊತ್ತಿರ್ತದೆ ತಲೆ ಓಡಿಸುವ ಮೆದುಳಿನ ಬೆಲೆ, ಮೇನೇಜ್ಮೆಂಟ್ ಲೆವೆಲ್ ನವರಿಗೆ ಬರಿ ಪೊಲಿಟಿಕ್ಸ್ ಗೊತ್ತಿರುತ್ತೆ. ಬಣ್ಣದ ಟೊಪ್ಪಿ ಇಡುವುದನ್ನು ಬಿಟ್ಟು ಬೇರೆ ವಿಚಾರ ಅವರ ಮನಸಲ್ಲಿ ಮೂಡಲ್ಲ"

ಭುಜವನ್ನು ಒರೆಸುತ್ತಾ "ಚಿಲ್ ವೈಭು, ಬಿ ಪೋಸ್ಸಿಟಿವ್" ಎಂದರು.

"ನಿಮಗೆ ಗೊತಲ್ಲ ಸರ್, ಇಲ್ಲಿ ಜೋಯಿನ್ ಆದ ಮೊದಲ ದಿನದಿಂದ ನನ್ನ ಜೊತೆಗೆ ಇದ್ದೀರಿ, ನಿನ್ನೆ ಮೊನ್ನೆ ಬಂದವರ ಕೈಯಲ್ಲಿ ನಾನು ಕಲಿಯಬೇಕಾದೆ ಇವತ್ತು" ಎಂದು ಹೇಳಲು ಕಣ್ಣಲ್ಲಿ ಕಣೀರು ಹೊರ ಬಂತು. ಮೊದಲ ಬಾರಿಗೆ ಇನ್ನೊಬ್ಬರು ನನ್ನ ಕಣ್ಣೀರು ನೋಡುವಂತಾಯಿತು.

ಲಕ್ಷ್ಮಿ ಸರ್ "ಬಾ ಕೆಳಗೆ ಹೋಗೋಣ, ಹೊರಗೆ ಹೋಗೋಣ, ಒಂದು ಧಂ ಇಲ್ಲ, ಪೆಗ್ ಹಾಕೋಣ ಜೊತೇಲಿ, ನಿನ್ನ ಎಲ್ಲಾ ನೋವು ಹೊರ ಹಾಕು" ಎಂದ.

"ಥಾಂಕ್ಸ್ ಸರ್, ಆದ್ರೆ ಅದರ ಅಗತ್ಯ ನನಗಿಲ್ಲ ಅನ್ಸುತ್ತೆ, ಮಾತಾಡದೆ ಇದ್ದ ಮೌನವನ್ನು ಇನ್ನು ಮೂವರ ಮುಂದೆ ಉಗುಳಿದರೆ ಅದೂ ತಾನಾಗಿಯೇ ಕಮ್ಮಿಯಾಗುತ್ತದೆ" ಎಂದೆ.

"ಹೀಗಿರಬೇಕು... ಮಾತಾಡು, ಅವರ ತಪ್ಪಿನ ಅರಿವು ಅವರಿಗೆ ಮೂಡಿಸು" ಎನ್ನುತ್ತಾ ತನ್ನ ಕಾಫಿ ಕಪ್ ಅನ್ನು ನನ್ನದಕ್ಕೆ ತಾಗಿಸಿ 'ಚೀರ್ಸ್' ಎಂದರು.

ಅವರ ಸಂಭಾಷಣೆ ಮನಸ್ಸಿಗೆ ತುಂಬಾ ನಾಟಿತು. ಇನ್ನೊಂದು ಜೀವ ಕೊರಗುವ ಹೃದಯದ ಸಂಗಾತಿಯಾದ.

ಒಳಬರಲು ಬದಿಮನಿ ತನ್ನ ರೂಮ್ಗೆ ಕರಕ್ಕೊಂಡು ಹೋದ.

"ಎನಲೇ ಸಂಣ್ ಹುಡುಗ ತರಾ ಆಡ್ತಿಯಲ್ಲ ...?"

ಮೌನದಲ್ಲಿದ್ದೆ."ಲಕ್ಷ್ಮಿ ಸರ್ ಬಳಿಯಲ್ಲಿ ಯಾಕೆ ಕಣ್ಣೀರಿಟ್ಟೆ..?"

"ಅದೂ ಜೊತೆಯಾದ ಸಂಗಾತಿಯ ಖುಷಿಗೆ ಬಂತು"

"ನೋಡು ವೈಭು, ನಿನ್ನನ್ನು ನಾನು ಯಾವತ್ತು ನಮ್ಮವನು ಎಂಬ ದೃಷ್ಟಿಯಲ್ಲೇ ನೋಡಿದ್ದು, ಕನ್ನಡಿಗನೆಂಬ ಅಭಿಮಾನ ಮೊದಲಿಗೆ ನಿನ್ನನ್ನು ನನಗೆ ಆತ್ಮೀಯ ನೆನೆಸಿತು. ಯಾರಲ್ಲಿ ಹೇಳದ ಗುಟ್ಟು ನಿನ್ನಲ್ಲಿ ಹೇಳ್ತೇನೆ ಕೇಳು

 

ಈ ಸೆಂಟರ್ ನಲ್ಲಿ ಆಗುವ ಪ್ರತಿಯೊಂದು ಆಗು ಹೋಗು ನನಗೆ ಗೊತ್ತು ಹೇಳ್ತೇನೆ ಕೇಳು .. ನೀನು ಪ್ರೊಮೋಷನ್ ಗೆ ಡಿಸೆರ್ವ್ ಕೆಂಡಿಡೆಟ್ ಆಗಿದ್ದಿ, ಈ ವರ್ಷದಿಂದ ಅಲ್ಲ ಮಂಗ್ಯ, ಕಳೆದ ಅಪ್ರೈಸಲ್ ಸೈಕಲ್ನಿಂದ !!!ಆರುತಿಂಗಳಲ್ಲಿ ಪ್ರೊಮೋಷನ್ ಸಾದ್ಯವಿರಲಿಲ್ಲ, ಅದಕ್ಕಾಗಿ ನಿನಗೆ ಕಳೆದ ವರ್ಷ ಬಿ ಬ್ಯಾಂಡ್ ಕೊಡುವ ಮಾತಾಗಿತ್ತು, ಆದ್ರೆ ತಿವಾರಿ ನಡು ಪ್ರವೇಶಿಸಿ ಅದಕ್ಕೆ ಕಲ್ಲು ಹಾಕಿದ.

ಈ ವರ್ಷದ ಕಾರಣ ಏನು ಗೊತ್ತ, ನಿನ್ನ ಜೀವನ್ ಇದ್ದಾನಲ್ಲ, ಅವನಿಗೆ ಕ್ಲೈಂಟ್ ನಿಂದ ಆಫರ್ ಸಿಕ್ಕಿದೆ ಅದಕ್ಕಾಗಿ ಅವನನ್ನು ಹಿಡಿದಿಟ್ಟು ಕೊಳ್ಳುವುದು ಕಂಪೆನಿಗೆ ಅವಶ್ಯಕ ವಾಗಿತ್ತು ಅದಕ್ಕೆ ಅವನಿಗೆ ಅವನ ಬ್ಯಾಂಡ್ ನೊಂದಿಗೆ ನಿನ್ನ ಪ್ರೊಮೋಷನ್ ಕೊಟ್ಟ ಆ ತಿವಾರಿ. ಮತ್ತೆ ನಿನ್ನ ಹೆಸರನ್ನು ಪ್ರಸ್ತಾಪಾನೆ ಮಾಡಲಿಲ್ಲ ಅವನು. ಪ್ರಾಜೆಕ್ಟ್ ಮೇನೇಜರ್ ನ ಪ್ರಸ್ತಾವನೆ ಇಲ್ಲದೆ ನಾನು ಏನು ಮಾಡಲಾಗಲಿಲ್ಲ. ನಿನಗೆ ನ್ಯಾಯ ಒದಗಿಸಲಾಗದಕ್ಕೆ ದುಃಖವಿದೆ ಮನಸಲ್ಲಿ ಅದೇ ಕಾರಣಕ್ಕೆ ನೀನು ನಿನ್ನೆ ಸಂಜೆ ಬಾಲ್ಕನಿಗೆ ಬಂದಾಗ ನಿನ್ನ ನೋಟದಿಂದ ನನ್ನನ್ನು ನಾನು ಬಚಾವು ಮಾಡಿಕೊಂಡದ್ದು" ಎಂದು ತನ್ನ ಮಾತು ಮುಗಿಸಿದರು.

 

ಜೀವನ್ ನ ಗುಟ್ಟು ತಿಳಿದಾಗಿತ್ತು, ತಿವಾರಿಯ ಇನ್ನೊಂದು ಪೊಲಿಟಿಕ್ಸ್ ಬಣ್ಣ ಹೊರಗೆ ಬಿದ್ದಿತ್ತು. ಇನ್ನು ಉಳಿದವರೊಡನೆ ಹೋರಾಡುವ ಅವಶ್ಯಕತೆ ಕಾಣಲಿಲ್ಲ. ಮನಸ್ಸು ಶಾಂತವಾಯಿತು.

 

ಹೊರ ಬಂದು ಬದಿಯಲ್ಲಿ ಕಟ್ಟುತ್ತಿರುವ ಬಿಲ್ಡಿಂಗ್ ನಲ್ಲಿ ಮೇಲೇರುತ್ತಿರುವ ಕ್ರೇನ್ ನೋಡುತ್ತಾ ಇನ್ನೊಂದು ಸಿಪ್ ಮೇಲೇರಿಸಿದೆ.

 

 

ಮುಂದಿನ ಸಿಪ್