ಏನು ಭೈರವಲೀಲೆಯೀ ವಿಶ್ವವಿಭ್ರಮಣೆ!|

ಏನು ಭೂತಗ್ರಾಮನರ್ತನೋನ್ಮಾದ! ||

ಏನಗ್ನಿ ಗೋಳಗಳು! ಏನಂತರಾಳಗಳು!|

ಏನು ವಿಸ್ಮಯ ಸೃಷ್ಟಿ? - ಮಂಕುತಿಮ್ಮ |