ಕಂಡ ದೈವಕ್ಕೆಲ್ಲ ಕೈಯ ಮುಗಿದೇನಹುದು?

ಚಂಡಚತುರೋಪಾಯದಿಂದಲೇನಹುದು?

ತಂಡುಲದ ಹಿಡಿಯೊಂದು ತುಂಡುಬಟ್ಟೆಯದೊಂದು            

ಅಂಡಲೆತವಿದಕೇನೋ? - ಮಂಕುತಿಮ್ಮ