ಹೆಸರನರಿಯದ ಸಸಿಯೊಳಿರವೆ ರಸಗಂಧಗಳು?

ಬಿಸಿಲದನು ಪಕ್ವ ಗೊಳಿಸುತೆ ಬಿಡಿಸದಿಹುದೆ?

ಪಸರಿಸದೆ ಗಾಳಿಯದನೊಯ್ದು ದಿಸೆದಿಸೆಗಳೊಳು?

ಉಸಿರುತಿಹೆವದ ನಾವು - ಮಂಕುತಿಮ್ಮ