ಸುಮ್ಮ ನೊಬ್ಬಂಟಿಯೆಂತಿಹುದು? ಬೇಸರವಹುದು

ಹೊಮ್ಮುವೆನು ಕೋಟಿರೂಪದಲಿ ನಾನೆಂದು

ಬೊಮ್ಮನೆಳಸಿದನಂತೆ ಆಯೆಳಸಿಕೆಯೆ ಮಾಯೆ

ನಮ್ಮಿರವು ಮಾಯೆಯಲಿ - ಮಂಕುತಿಮ್ಮ