ಚೀಟಿಯಾಟದ ಬಿನದಿ ತಾನೊರ್ವನಿರ್ವರವೊಲ್
ಆಟವಾಡುತಲಿ ತನ್ನೊರ್ತನವ ಮರೆವಾ
ಮಾಟದಲಿ ಬೊಮ್ಮನುಂ ತನ್ನೇಕತೆಯ ಜೀವ
ಪಾಟಿಯಲಿ ಮರೆತಿಹನು - ಮಂಕುತಿಮ್ಮ