ಮರೆತಿಹನೆ ಬೊಮ್ಮ ? ಮರೆತಿಲ್ಲ;ಮರೆತವೊಲಿಹನು
ಧರಿಸಿ ಜೀವಾಕೃತಿಯ ಜಗದಿ ತನ್ನನೆ ತಾನ್
ಅರಿಸಿಕೊಳುವವೊಲಿಹುದು; ದೊರೆತವೋಲ್ ತೋರೆ ಸುಖ
ದೊರೆವವರೆಗಾಯಸವೊ - ಮಂಕುತಿಮ್ಮ