ನಭದ ಬಲಯೊಳನಂತ ಮನದ ಗುಹೆಯೊಳನಂತ
ವುಭಯದಾ ನಡುವೆ ಸಾದ್ಯಂತ ಜೀವಕಥೆ
ವಿಭುವೊಬ್ಬನೀ ಗಾಳಿಬುಡ್ಡೆಗಳನೂದುವನು
ಹಬೆಗುಳ್ಳೆಯೋ ಸೃಷ್ಟಿ - ಮಂಕುತಿಮ್ಮ