ಧರ್ಮವೆಂಬುದದೇನು? ಕರ್ಮವೆಂಬುದದೇನು?
ಬ್ರಹ್ಮಾಂಡಕಥೆಯೇನು? ಜೀವಿತವಿದೇನು?
ಬ್ರಹ್ಮವೆಲ್ಲಕು ಮೂಲಮಾಯೆ ತತ್ಕೃತಿಜಾಲ
ಬ್ರಹ್ಮವೇ ಜೀವನವೊ ಮಂಕುತಿಮ್ಮ