ಜಲಧಿತೀರದಿ ನಿಂತು ವೀಕ್ಷಿಸಿಕ್ಕೆಲಗಳಲಿ
ಚಲವೊಂದಚಲವೊಂದು ಸಮವದಸಮವಿದು
ಕಲೆತಿರ್ಪುವಂತು ಮೇಯಾಮೇಯಗಳು ಜಗದಿ
ಮಿಲಿತತೆಯಿನೇ ರುಚಿಯೊ - ಮಂಕುತಿಮ್ಮ