ಬೆಂಗಳೂರಿನ ಬೀದಿಗಳಲ್ಲಿ ನಾಯಿಗಳು ಕಚ್ಚಿ ಮಕ್ಕಳು ಸತ್ತಾಗಲೇ ಅವುಗಳೊಂದು ಸಮಸ್ಯೆಯೆಂದನಿಸಿದ್ದು; ಪ್ರತೀ ವರ್ಷವೂ ಮೊದಲ ಮಳೆ ಬಿದ್ದು, ಕಸ-ಕಡ್ಡಿಗಳಿಂದ ತುಂಬಿದ ಚರಂಡಿಗಳಲ್ಲಿ ನೀರು ಹರಿಯದೇ ಉಂಟಾಗುವ ಪ್ರವಾಹದಲ್ಲಿ ಒಂದಿಬ್ಬರು ಕೊಚ್ಚಿಹೋದಾಗಲೇ ಓ, ಇದೂ ಒಂದು ಸಮಸ್ಯೆಯೇ ಅಂತನಿಸುವುದು. ಬೃಹತ್ ಬೆಂಗಳೂರು ಮಹಾನಗರಪಾಲಿಕೆಯು ಕಳೆದ ಐದು ವರ್ಷಗಳಲ್ಲಿ ಐವತ್ತು ಸಾವಿರ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಲು ಹೊರಟು ಎರಡು ಲಕ್ಷ ನಾಯಿಗಳ ಮೇಲೆ ಆರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದರೂ ನಾಯಿಗಳಿಂದ ಕಚ್ಚಿಸಿಕೊಳ್ಳುವವರ, ಅದರಿಂದ ಸಾಯುವವರ ಸಂಖ್ಯೆಯು ಕಡಿಮೆಯಾದಂತೇನೂ ತೋರುವುದಿಲ್ಲ. ಅದೇ ರೀತಿ, ಚರಂಡಿಗಳ ‘ತುರ್ತು ದುರಸ್ತಿಗಾಗಿ’ ___LINK_OPEN_href="http://www.hindu.com/2007/04/24/stories/2007042417850100.htm" target="_blank" title="ದಿ ಹಿಂದೂ ಪತ್ರಿಕೆಯ ವರದಿಯನ್ನು ನೋಡಿ"___ಮುನ್ನೂರು ಕೋಟಿ ರೂಪಾಯಿಗಳ ಯೋಜನೆಯನ್ನು ಬೃ.ಬೆಂ.ಮ.ಪಾ. ಹಾಕಿಕೊಂಡಿದ್ದರೂ, ಅದರಿಂದೇನೂ ಪ್ರಯೋಜನವಾದಂತೆ ಕಾಣುತ್ತಿಲ್ಲ. ಉದ್ಯಾನನಗರಿಯಲ್ಲಿರುವ ಮಾಹಿತಿವಂತ ತೆರಿಗೆದಾರರು ಕಟ್ಟಿದ ಕೋಟಿಗಟ್ಟಲೆ ಹಣವೆಲ್ಲ ಹೀಗೆ ನಾಯಿಪಾಲೋ, ಚರಂಡಿಪಾಲೋ ಆಗುತ್ತಿದ್ದು, ಜನಸಾಮಾನ್ಯರು ತರಗೆಲೆಗಳಂತೆ ಬಿದ್ದು ಸಾಯುತ್ತಿದ್ದರೂ, ಬೆಂಗಳೂರಿಗರು ಮಾತ್ರ ಅದೇಕೆ ಸುಮ್ಮನಿದ್ದಾರೋ?
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಯುಕ್ತಿ 2011: ಮುಕ್ತ ಚಿಂತನೆಯ ಕಾರ್ಯಾಗಾರ
ಲಸಿಕೆಗಳು ಬೇಕೆ?
ತುಳುನಾಡಿನ 'ಪಬ್ಬುಗಳು'
ವ್ಯಾಕರಣ
ಉಕಾರಮೆಂಬುದು ಪ್ರಥಮಾವಿಭಕ್ತಿಯ ಪ್ರತ್ಯಯಮೇ ಅಲ್ಲಮೆಂದು ಕನ್ನಡಕಂದನಭಿಮತಂ
ಮಗುವಿಗೆ ಹೆಸರು ಹುಡುಕಿ ಕೊಡಿ
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!