'ಶ್ಯಾನುಭೋಗ್,  ಸುಂಕದ ರಂಗರಾಯರ ೩೦೦ ವರ್ಷದ ಮನೆ'

ನಾವು ನಾಲ್ಕುಮಂದಿ ಮಕ್ಳೂ, ಅಮ್ಮನಿಗೆ ಆಗಾಗ ಸಹಾಯಮಾಡುತ್ತಿದ್ದೆವು. ಕೆಲವು ವೇಳೆ ಅಮ್ಮ ಹೇಳಿದ ಮಾತುಗಳು ನಮಗೆ ಚುಚ್ಚುತ್ತಿದ್ದವು. ಅದೇನೋ ಹೇಳ್ತಾರಲ್ಲ, "ಆಳ್ಮಾಡೊದ್ ಹಾಳು, ಮಗ ಮಾಡೋದ್ ಮಧ್ಯಮ ; ತಾನ್ ಮಾಡೊದ್ ಉತ್ತಮ " ಗೊತ್ತಾಯ್ತಲ್ಲ, ಅನ್ನೋಳು. ಆದ್ರೆ ಅವಳ ಮನಸ್ಸಿನಲ್ಲಿ ನಮ್ಮನ್ನು ಬೈಯ್ಯೋ ವಿಚಾರ ಖಂಡಿತ ಇರಲಿಲ್ಲ !  ದಿನದಲ್ಲಿ ಅದೆಷ್ಟ್ ಗಾದೆಗಳ್ನ ಹೇಳೋಳು ಅವ್ಳು, ಅಂತ ಈಗ್ ಲೆಕ್ಕ ಹಾಕಿದ್ರೆ, ಪ್ರತಿ ಒಂದ್ ಗಂಟೆಗೆ, ೪ ಆದೃ ಇರೋದು ಅಂತ ನನ್ನ ಲೆಕ್ಕ ! " ಒಂದ್ ಹೆತ್ತೋಳು ನಾಕ್ ಹೆತ್ತೊಳ್ಗೆ ಬುದ್ಧಿ ಹೇಳಕ್ ಬಂದ್ಳಂತೆ", "ಸರಿಮನೆಂ ಸೇರ್ ಹಾಕ್ಕೊಂಡ್ರೆ, ನೆರೆಮನೆಮ್ ನೇಣ್ ಹಾಕ್ಕೊಂಡ್ರಂತೆ", "ಖಂಡ್ಗ ತಿಂದೃ ಖಳೆ ಇಲ್ಲ ," " ಕದ ತಿನ್ನೊನ್ಗೆ ಹಪ್ಳೀಡೆ " ಇತ್ಯಾದಿ, ಇತ್ಯಾದಿ. ಅಮ್ಮನಿಗೆ ಬಹಳ ಬೇಸರವಾದಾಗ ತನ್ನನ್ನೇ ಬೈದುಕೊಳ್ಳುತ್ತಾ "ಒಂದು ಹೆಣ್ಣುಮಗು ಇದ್ದಿದ್ದರೆ ಚೆನ್ನಾಗಿತ್ತು," ಅಂತ ಪೇಚಾಡಿಕೊಂಡ ಕ್ಷಣಗಳನ್ನು ನಾನು ಗಮನಿಸಿದ್ದೇನೆ ! ಆದರೂ ಎಂದೂ ಅವಳು ನಮ್ಮನ್ನು ಬೈದೊ, ಅವಹೇಳನ ಮಾಡೊ ಸನ್ನಿವೇಶ ಬರಲೇ ಇಲ್ಲ.

ಮನೆಯ ಮುಂದಿದ್ದ ಭಾವಿ (ಉಪ್ಪುನೀರಿನ ಭಾವಿ)


 
"ನೀರ್ ಸೇದೋಸಮಯದಲ್ಲಿ, ಹಾಥ್ ಬಟಾನ " ಅಂತಾರಲ್ಲ ಹಾಗೆ ಕೈಕೊಡುವುದು.(ಇದಕ್ಕೆ ಅರ್ಥ ಬೇರೆ, ಅಂದರೆ ಮೋಸಮಾಡುವುದು ಅಂತ ತಾನೆ) ಮತ್ತೊಂದು, ರುಬ್ಬುವಾಗ, ಬೀಸುವಾಗ, ಅಥವಾ ಕುಟ್ಟುವಾಗ, ಇಲ್ಲವೇ ನೆಲ ಗುಡಿಸುವಾಗ, ಮನೆಗೆ ಕುಡಿಯುವ ನೀರಿನ ಸರಬರಾಜು, ಮತ್ತೆ ಮನೆ ಸಾರಿಸುವುದು, ಸುಣ್ಣಬಳಿಯುವುದು, ಕೆಮ್ಮಣ್ಣು ಬಳಿಯುವುದು, ಕಟ್ಟಿಗೆ ಸೀಳಿ ಅಟ್ಟದ ಮೇಲೆ ಒಟ್ಟುವುದು ಇತ್ಯಾದಿ, ಇತ್ಯಾದಿ. ಒಂದ್ ಕಡೆ ಈಗ ಕೂತ್ಕೊಂಡು ಅವನ್ನೆಲ್ಲಾ ಯೋಚಸ್ತಾ ಹೋದ್ರೆ, ಒಬ್ಬ ಆಗಿನ ಕಾಲದ ನಮ್ಮಮ್ಮನಂಥ ಸದ್ಗ್ಗೃಹಿಣಿಗೆ, 'ತುರುಸ್ಕೊಳ್ಳಕ್ಕೆ ಪುರುಸೊತ್ತಿರುತಿರಲಿಲ್ಲ ಅನ್ನಬಹುದೇನೋ' ! ಸಾರಿ, ಆಪದ ಬಳ್ಬಾರ್ದಾಗಿತ್ತು. ಸಾದ್ಯವೇ ಇಲ್ಲ. ಈ ಪರಿಸ್ತಿತಿಯಲ್ಲಿ ಆದೇ ಸರಿಯಾದ ಅಪ್ಪಟವಾದ ಸರಿಹೊಂದುವ ಪದ ! 'ಹಳ್ಳಿಗಳಲ್ಲಿ ಆಯಾ ಪದಗಳ್ನ ಬಳಸ್ದಿದ್ರೆ, ಅವ್ರಿಗೆ ಅರ್ಥ ಆಗೋದಾದೃ ಹೇಗೆ ಪಾಪ' !
 
ಉದಾ ಹರಣೆಗೆ, 'ನಾನ್ ಕೆರೆಕಡೆ ಹೋಗ್ತೀನಿ' ಅಂದ್ರೆ,  ಗೊತ್ತಾಗೋದು 'ಪಾಯಖಾನೆಗೆ ಹೋಗೊ ಆಸಾಮಿ ಇವ, ಅಂತ' ! 'ತಂಬಿಗೆ ತೊಗೊಂಡ್ ಹೋಗ್ತೀನಿ' ಅಂದ್ರೋ, "ಅದ್ಯಾಕ್ ಈಗ ತಂಬಿಗೆ.." ಕೊಡಿಲ್ಲಿ. ಬೇರೆ ಏನಾದ್ರು ಕೆಲ್ಸ ನೋಡಕೋ ಹೋಗು, ತಂಬಿಕೆ ತೊಗೊಂಡ್ ಹೋಗ್ತಾನಂತೆ, ಪೆದ್ದ," ಅಂತ ಗೋಣ್ ಮುರ್ಯೋರು " ! ಬೆಂಗಳೂರಿನ ಜನ, ಅಂದ್ರೆ ನಮ್ಮ ಸೋದರ್ಮಾವ, ಮೊದಲಾದವರು, "ಇಲ್ಲಿ ಕಕ್ಕಸ್ ಗೆ ಹೋಗೊದೆಲ್ಲಿ " ? ಅಂದಾಗ ನಾವೆಲ್ಲಾ 'ಕಿಸಕ್' ಅಂತ ನಕ್ಕಿದ್ದೆವು. ಯಾಕೆ ಅಂತ ನಮಗೂ ಗೊತ್ತಿರ್ಲಿಲ್ಲ. 'ಮನೇಲ್ಹೋಗಕ್ ಸಾಧ್ಯವೇ', 'ಕೆರೆ ಅಂಗ್ಳ ಇರೋದ್ಯಾತಕ್ಕೆ', 'ಊರಿನ್ ಜನವೆಲ್ಲಾ ಅಲ್ಗೇ ಹೋಗ್ತಾರಪ್ಪ'. "ಇದೇನು ಮಾತು ಅಂತ". ಇದು ನಮ್ಮ ಧೋರಣೆಯಾಗಿತ್ತು. ಮಾವನಿಗೋ ಪ್ರಾಣಸಂಕಟ ! "ಎಲ್ರೂ ಓಡಾಡೊ ಜಾಗ್ದಲ್ಲಿ ಹ್ಯಾಗೋ ಹೋಗೊದು", ಏನಾದೃ ವ್ಯವಸ್ಥೆ ಮಾಡಬಾರದೇ. 'ಸುಬ್ಬಿ (ತಂಗಿ, ಹೆಸರು, ಸುಬ್ಬಮ್ಮ ಅಂತ. ಗಂಡನ ಮನೆಯವರು, ರಾಧಮ್ಮ ಅಂತ ಕೂಗೊರು) ನಿನಗಾದೃ ಗೊತ್ತಾಗಲ್ವೆ. ಏನಾದ್ರೂ ವ್ಯವಸ್ಥೆ ಮಾಡಮ್ಮ' ಅನ್ನೊರು.
 
ಆದ್ರೆ, ನಮ್ಮಮ್ಮ ಹೊಳಲ್ಕೆರೆಗೆ ಬಂದು ಈಗಾಗ್ಲೆ ದಶಕಗಳ ಮೇಲಾಗಿದೆ. 'ಇಲ್ಲಿನ್ ನೀರ್ ಕುಡ್ದು ಅವಳ್ ಉಸ್ರಾಡೋದು', 'ಯೋಚ್ನೆ ಮಾಡೊದೂ ಹೊಳಲ್ಕೆರೆ ಜನದ್ ತರ್ಹವೇ' ! ಹಾಗೆ ಕ್ಷೀಣವಾಗಿ ನಗೋದ್ ಬಿಟ್ರೆ,  ಏನೂ ಹೇಳ್ತಿರ್ಲಿಲ್ಲ. "ನೋಡಣ್ಣ, ನಾಳೆ ಹೊತ್ತಿಗ್ ಮುಂಚೆ ಏದ್ದು, ಕೆರೆಕಡೆ ಹೋಗಿ ಎಲ್ಲ ತೀರಿಸ್ಕೊಂಡ್ ಬರಬಾರ್ದೆ"  "ಇಲ್ಲಿ ಮನೇಲಿ ಕಕ್ಕಸ್ ಕಟ್ಸೊ ವಿಚಾರ ಯಾರ್ಮುಂದಾದ್ರು ಹೇಳ್ಗೀಳಿಯ ; ಬಿದ್ದು ನಕ್ಕಾರು " ಅಂದ್ಬಿಡೊದೆ ! ನಮ್ ಮಾವ "ಸರಿಹೋಯ್ತು. ನಾವಿನ್ನು ಹೆಚ್ಚು ದಿನ ಈ ಊರ್ನಲ್ಲಿ ಇದ್ದಹಾಗೇ. ಬಿಡಮ್ಮ; ರಂಗಣ್ಣನ್ ಕಿವಿಗ್ ಹಾಕ್ಬೇಡ" ."ಅದ್ಸರಿ, ಬೊಂಬಾಯ್ ಪಟ್ಣದಲ್ಲಿದ್ದೋರು ನೀವೆಲ್ಲ. ಅದೆಂಗ್... ಇಲ್ಲಿ ಈ ತರಹ....."... ಮಾತು ಮಧ್ಯದಲ್ಲಿ ನಿಂತೇ ಹೋಯ್ತು. ಅಮ್ಮನ ನಗುವಿನ ಒಂದು "ಮಿಂಚು" ನಮ್ಮ ಮಾವನ ಬಾಯಿಮುಚ್ಚಿಸಿತ್ತು. ಬೊಂಬಾಯ್ನಲ್ಲಿದ್ದಾಗ, ಅಲ್ಲಿನ್ತರಹ,  ಇಲ್ಲಿದ್ದಾಗ ಇಲ್ಲಿನ್ತರ್ಹ. " "ಅಲ್ವೇನಪ್ಪ. ಸೂರಣ್ಣ "? ಸದ್ಯ, " ಬಿ ರೋಮನ್ ಇನ್ ರೋಂ " ಅನ್ನಲಿಲ್ಲ. ನಮ್ ಧರ್ಮಕ್ಕೆ ! ಅಮ್ಮ ಅಷ್ಟಕ್ಕೂ ಕಾನ್ವೆಂಟ್ ಹೋದೋಳಲ್ವ. ಆ ಸಮಯಕ್ಕೆ ಈ ಇಂಗ್ಲೀಷ್ ಗಾದೆ, ತಕ್ಷಣ  ಅವಳ ನೆನಪಿಗೆ ಬರಲಿಲ್ಲ ಅನ್ಸತ್ತೆ. ಇಲ್ದಿದ್ರೆ ಸುಮ್ನೆ ಬಿಡೋಳ ಅವ್ಳು   !
 
ಸರಿ. ಇನ್ನು ಸಹಾಯದ ವಿಷಯ ; ನಮ್ಮ ಅಣ್ಣಂದಿರು, ನಾಗರಾಜ, ರಾಮಕೃಷ್ಣರ ಸರದಿ ಆದಮೇಲೆ, ಅಂದ್ರೆ, ಅವೃ ಓದಕ್ಕೊ ಕೆಲ್ಸಕ್ಕೊ ಬೇರೆ ಊರ್ಗೆ ಹೋದ್ರು ಅಂದಾಗ, ಅವರ್ ಜಾಗ್ದಲ್ಲಿ ಅವರ ತಮ್ಮಂದಿರು ಆ ಕೆಲ್ಸ ನಿಭಾಯ್ಸಬೇಕಲ್ವ ? ಒಬ್ಳೆ ಅಮ್ಮ ಎಷ್ಟು ಅಂತ ದುಡೀತಾಳೆ ! ಸ್ವಲ್ಪ ದೇಹಧಾರಡ್ಯ ಚೆನ್ನಾಗಿದ್ದ ನನ್ನನ್ನು ಅಮ್ಮ ಸ್ವಲ್ಪ ಮೆಚ್ಚಿಕೊಂಡಿದೃ ಅಂತ ಈಗ ನನಗೆ ಅನ್ನಿಸ್ತಿದೆ ! ಪರವಾಗಿಲ್ಲ ಏನಾದೃ ಅದು ಇದು ಹೇಳಿದ್ರೆ, ಮಾಡ್ಬಲ್ಲ ಅಂತ ! "ಬಂಗಾರ, ವೆಂಕ್ಟೇಶ್ ದೇವೃ, ಸ್ವಲ್ಪ ಹೂರ್ಣ ರುಬ್ಕೊಡಪ್ಪ". ನಾನು ಅದಕ್ಕೆ ರೆಡಿ. ನಂತರ "ಈ ಹಾಳು ಒಲೆ ಉರಿಯೋದೆ ಇಲ್ಲ. ಕಟ್ಗೆ ಎಲ್ಲ ಒದ್ದೆ. ಅಟ್ಟದಿಂದ ಸ್ವಲ್ಪ ಕಟ್ಟಿಗೆ ತೆಗೆದು ಮೊಚ್ನಲ್ಲಿ ಸೀಳ್ಕೊಡಪ್ಪ". ಸರಿ ಅದಕ್ಕೂ ನಾನು," ಎಸ್ " ಅಂತಿದ್ದೆ. ಬೇಜಾರ್ ಮುಖ ಮಾಡ್ಕೊಂಡ್ನೊ ; "ಸರಿ ಬಿಡು ನಾನೆ ಏನಾದೃ ಮಾಡ್ಕೊತಿನಿ." ಅನ್ನೊರು. ಪಾಪ ಊದ್ಕೊಳ್ವೆ ಹಿಡ್ಕೊಂಡ್ ಊದಿ -ಊದಿ, ಎರಡ್ ಕಣ್ಣಲ್ಲಿ ನೀರು, ಕಣ್ಣೆಲ್ಲ ಕೆಂಪು. ಆಗ, " ಕಾಸ್ಟ ವ್ಯಸನ " ಅಂತ ದೊಡ್ಡೊರ್ ಎಲ್ಲ ಹೇಳೋರಲ್ವಾ. ಆಗ ಅದರ್ ಅರ್ಥ ಆಗಿರ್ಲಿಲ್ಲ. ಈಗ ಪದಗಳ ಅರ್ಥ ತಿಳೀತಿದೆ.
 
ನಾನು "ಎಸ್. ಎಸ್. ಎಲ್. ಸಿ ಪರೀಕ್ಷೆ " ಮುಗ್ಸಿ, ಬೆಂಗ್ಳೂರ್ಗೋದ್ಮೇಲೆ, ಮೇಲೆ ತಿಳಿಸಿದ ಎಲ್ಲಾ ಕೆಲಸ ಮಾಡಿಕೊಡೋದು ನನ್ನ ತಮ್ಮ "ಚಂದ್ರ "ನ ವರಸೆಯಾಯ್ತು.  ಪಾಪ, ಯಾವಾಗ್ಲು ನೆಗಡಿ, ಸೊರ-ಸೊರ ಶಬ್ದ. ಮೂಗ್ನ ತಿಕ್ಕೀ-ತಿಕ್ಕೀ ಕೆಂಪ್ಗಾಗಿರೋದು. ಮೊದ್ಲೆ ಅವ್ನು ಬಿಳಿ ಮಿಶ್ರದ ಕೆಂಪುಬಣ್ಣದೋನು. ನಮ್ಮಪ್ಪನ ತರ್ಹ. 'ಮುಖ ಒಳ್ಳೇಕೆಂಪುಕೋತಿ ತರ್ಹ ಆಗಿರೋದು' ! ನಾನು ನಮ್ಮನ ತರಹ, ಕಪ್ಪು. ಯಾವ ಬಣ್ಣದ ಬದಲಾವಣೆಯೂ ನನ್ನ ಮೇಲೆ ಪರಿಣಾಮ ಬೀರ್ತಿರ್ಲಿಲ್ಲ ! ಎಲ್ರು ನನ್ನ "ವರಟ" ಅನ್ನೋರು.
 
 
ಮಧ್ಯದಲ್ಲಿರಿರೋಗೆ ನಮ್ಮಮ್ಮ. ಈಕಡೆ ನಮ್ಮ ಲಲ್ಲಿತತ್ತಿಗೆ. ಆಕಡೆ ನನ್ನ ಪತ್ನಿ-ಸರೋಜಾ.   ಈ ಚಿತ್ರದ ವಿಶೇಷತೆಯೆಂದರೆ, ಅಂದಿನ ಮತ್ತು ಇಂದಿನ ದಿನಗಳನ್ನು ಜೋಡಿಸುವ ಕೆಲಸಮಾಡುತ್ತದೆ ಇದು. ನಮ್ಮ ಎರಡನೆಯ ಲಲಿತತ್ತಿಗೆ ಯಿಂದ ನನ್ನ ಹೆಂಡತಿಯ ಕಾಲದವರೆಗೆ ಹಬ್ಬಿರುವ ಕಾಲದ ಗಣನೆಯನ್ನು ನಾವು ಕಾಣಬಹುದು.... 
ಉಗಾದಿ ಹಬ್ಬದ ಸಂಭ್ರಮ : 
ಉಗಾದಿ ಹಬ್ಬದ ಸಂಭ್ರಮನ ಹೇಳೋದ್ರಲ್ಲಿ ಸ್ವಾರಸ್ಯವಿಲ್ಲವೇನೊ ಅನ್ಸತ್ತೆ. ಅದನ್ನ ಅನ್ಭವಿಸ್ಬೇಕು ನೋಡಿ. ಹಳ್ಳಿನಲ್ಲಿ ವಾಸಮಾಡೊರ್ಗೆಲ್ಲ ಉಗಾದಿ ಅಂದ್ರೆ ಭಾರಿ ದೊಡ್ಡಹಬ್ಬ. ಕೆಲ್ವರು ಹೇಳೋಹಾಗೆ ಹೊಸ ಬಟ್ಟೆ ತೊಟ್ಗೊಳೊದು ಅವತ್ತೆ. ಎಣ್ಣೆ ನೀರ್ ಹಾಕ್ಕಂಡು ಒಸ ಬಟ್ಟೆ ಉಟಕಂಡು ರಾಜನ್ತರಹ ಓಡಾಡೊದ್ರಲ್ಲಿ ಏನೇ ಕುಶಿ. ಬೆಳಿಗ್ಯೆ ಮೈಗೆ ಹರಳೆಣ್ಣೆ ಹಚ್ಕಂಡ್ರೆ, ಆಯ್ತು. ತಲೆಮೇಲ್ ಸ್ನಾನಮಾಡಿ ಸಿಗೆಕಾಯ್ನಾಗೆ ಚೆನ್ನಾಗ್ ಉಜ್ಜಿ, ಮೈಯೊಳ್ಗಿನ್ ಎಣ್ಣೆ ತೆಗ್ಯೊವರ್ಗೂ ಅದೇನ್ ಲಗ್ಗೆ ಚಂಡಿನಾಟ ಆಡ್ತಾರೋ ಆದೇವ್ರಿಗೆ ಗೊತ್ತು. 'ಹೆಡ್ ಅಂಡ್ ಟೈಲ್' ಅಂತ ಕಾಸನ್ ತೂರಿ ಕೆಳ್ಗೆ ಬಿದ್ಕೂಡ್ಲೆ ಕೈಮುಚ್ಕಂಡು ತೆಲೆನೊ ಬಾಲನೊ, ಅಂತ ಕೇಳೊದೆ ಚೆನ್ನ. ಅದಕ್ಕೆ ದುಡ್ಡು ಕಟ್ಟಿ ಸೋಲೋದು ಇಲ್ವೆ ಗೆಲ್ಲೊದು. ಇದು ಆದಿನವೆಲ್ಲಾ ನಡಿತಾನೆ ಇರ್ತದೆ.
ಹೊಸ ವರ್ಷದ ಪಂಚಾಂಗ ಶ್ರವಣ :
ಊರ ಗೋಪಾಲದೇವರ ಗುಡಿಯಲ್ಲಿ 'ಪಂಚಾಂಗ ಶ್ರವಣ'ದ ಏರ್ಪಾಡು ಇರೋದು, ನಾವೆಲ್ಲಾ ನಮ್ಮ ಮನೆಯಲ್ಲೇ ಆ ವಿಧಿಯನ್ನು ಮಾಡಿಕೊಳ್ಳುತ್ತಿದ್ದೆವು. ಆದರೆ ಕೆಲವರು, ಗುಡಿಗೆ ಹೋಗಿ, ಅರ್ಚಕ, ಗೋಪಾಲಣ್ಣನವರು ಪೂಜೆಯನಂತರ ಓದುತ್ತಿದ್ದ ಪಂಚಾಂಗದಿಂದ ವರ್ಷದ ಮಳೆ, ಬೆಳೆ, ಪ್ರಜೆಗಳ ಕ್ಷೇಮಸಮಾಚಾರ, ಇತ್ಯಾದಿಗಳ ವಿವರಗಳನ್ನು ಪಡೆದು ಮನೆಗೆ ತೆರಳುತ್ತಿದ್ದರು. 
 
'ಎಲ್ಲಕ್ಕಿಂತ ಹೆಚ್ಚಂದ್ರೆ, ಬೈಗಿನ್ ಕಡೆ ಊರಿನ್ ಜನಎಲ್ಲಾ ಆಕಾಶ್ದ್ ಕಡೆ ದಿಟ್ಟಿಸ್ ನೋಡಿದ್ದೆ ನೋಡಿದ್ದು'. ನಾವು ನಮ್ಮ ಮನೆ ಬಾವಿ ಕಡೆ ಕಟ್ಟೆಮೇಲ್ ಕೂತು, ಕಣ್ಣಿನ ಮೇಲೆ ಕೈ ಮುಷ್ಟಿ ಇಟ್ಟು ಆಕಾಶದ್ ಕಡೆ ನೋಡ್ತಿದ್ವಿ. ಪಾಡ್ಯದ್ ದಿನ ಚಂದ್ರ ಒಳ್ಳೆ ಗೀರಿಟ್ಟಂಗಿರೊದು. ಆಕಡೆ ಈಕಡೆ ನೋಡೊದ್ರೊಳ್ಗೆ ಮುಳ್ಗೆ ಹೋಯ್ತು ಅನ್ನೊ ಸೊಲ್ಲು ತಪ್ತಿರ್ಲಿಲ್ಲ. 'ಸ್ವಾಮಿ ಕಾಣಿಸ್ತೇನಪ್ಪ ಎಂಕ್ಟೇಸಣ್ಣ, ನಾಗಣ್ಣ, ರಾಮ್ಕ್ರಿಷ್ಣಪ್ಪ,' 'ಸೊಮೇರೆಲ್ಲಿ ಒಳಗ್ ಕುಂಥ್ಗಂಡ್ ಏನ್ ಮಾಡ್ತಿಯಪ್ಪ'. 'ಬಾ ಒರ್ಗೆ. ಬನ್ನಿ ಒರಾಕಡ್ಗೆ'. ಅಂತಿದೃ. 'ಅಗೋ ಕಿಟ್ಟಣ್ಣರ್ ಬಂದೃ ನೋಡ್ರಿ'. 'ಅವರ್ ಬಂದ್ರೆ, ಸೋಮಿ ಕಂಡಾಂತ್ಲೆ', 'ನೂರಕ್ಕೆ ನೂರು ಪಾಲು'. ಔದು. 'ಏನ್ ಸಮಾಚಾರ'. 'ತೋರ್ಸಿ ಮಾಪ್ರಬು' , 'ಎಲ್ನೋಡಿದ್ರಿ. ನಮ್ಗು ವಸಿ ತೋರ್ಸಿ.'. 'ನಾನು ಅಲ್ಲೆ ಮೆಟ್ಲಮೇಲೆ ಆಕಡೆ ಸಿದ್ರಾಮಣ್ಣನ ಹತ್ರ ಮಾತಾಡ್ತಿದ್ದೆ ನೊಡವ'. 'ಅಲ್ನೊಡು', ಅಂತ ನಮ್ ಬೀಡಿ ವೆಂಕ್ಟಪ್ಪನ್ ಮಾತು ಬಂತು. 'ಅಲ್ಲೇ ದಿಟ್ಸಿ ಮ್ಯಾಲಕ್ ನೋಡ್ದೆ. ಅಲ್ಲೇ ಕಾಣಿಸ್ತಲ್ಲವಾ'. 'ನಿನ್ಗೆ ಕಾಣ್ಲಿಲ್ಲೇನು.' 'ಯಾರ್ಗೂ ಇನ್ನೂ ಕಾಣಿಸ್ಲಿಲ್ವಾ' ? 'ಮ್ಯಾಲೇ ..ತಡಿ. ತಡಿ.. ಆ ಮರ ಇದ್ಯಲ್ಲವಾ'. 'ಅಂಗೇ ನನ್ ಬೆಳ್ಳನೇ ಗುರ್ತಿಟಕ, 'ಗಾಣಿಗ್ರ ತಿಪ್ಪಯ್ಯನ ಮನೆ ಕಡೆ ಓದಿಯ'. 'ಸರಿಗ್ ನನ್ನ ಬೆಳ್ನೇ ಗುರ್ತಗಿಟ್ಗ ; ಮ್ಯಾಲ್ ನೋಡು, ತಿಳಿತಾ.'
 
'ಔದು. ಕಿಟ್ಟಣ್ಣ. ಕಾಣ್ತ್ ಕಣಪಾ'. 'ಬೇಗ್ ನೋಡ್ರಿ ಎಲ್ಲ. ಇನ್ನೇನ್ ಮುಳ್ಗ ಓಗೊ ಅಂಗೈತೆ'. 'ನಾಳೆ ವೈನಾಗ್ ಕಾಣ್ಸದೆ ಕಣಪಾ'.. 'ಚಂದ್ರಪ್ಪ, ಎಂಕ್ಟೇಸಣ್ಣ, ತಗಳಿ, ಎಲೆನ; ರಂಗಪ್ಪರೆಲ್ಲಪ. ನಮಸ್ಕಾರಮಾಡ್ದೆ ಕಣಪ್ಪ'. 'ಸೋಮಿ ಕಾಣ್ಸತು '.  'ಈ  ವರ್ಸದ ಕೆಲ್ಸ ಮುಗ್ದಂಗಾತಪ'. 'ಓದ್ವರ್ಸಾನೂ ಇಂಗೆ ಇತ್ತಪ. ತಲೆಮ್ಯಾಗೆಲ್ಲ. ಮೌಡ ಇರ್ಲಿಲ್ವ . ಜ್ಯಾಪ್ಕ ಇಲ್ಲೇನು '? ಹೀಗೆ ಬನ್ನಿ ಎಲೆಗಳನ್ನು ಪರಸ್ಪರ ಬದಲಾಯಿಸಿಕೊಂಡ ಬಳಿಕ ಯುಗಾದಿ ಹಬ್ಬದ ಶಾಸ್ತ್ರ ಮುಕ್ತಾಯವಾಗುತ್ತಿತ್ತು.
 
ಸಾಯಂಕಾಲದ ಹೊತ್ಗೆ, ಅದೇನ್ ಕತ್ಲೂ ಅಂದ್ರೆ ಕತ್ಲು. ದಾರಿ ದೀಪಗಳಿಲ್ಲ. ಎಮ್ಮೆ ಹೊಡ್ಕೊಂಡ್ ಬರೋರು ಕೋಲ್ತೊಗೊಂಡ್ ಅವುಗಳ್ನ್ಬ ಮನೆಕಡೆ ತರೋವಾಗ್ ಮಾಡೊ ಸದ್ದು ಗದ್ಲ ಬಿಟ್ರೆ, ಎಲ್ಲ ಮೌನವಾದ ವಾತಾವರಣ. ನಮ್ಮ ಮನೆ ಲಾಂದ್ರದ ಬೆಳಕು ಸ್ವಲ್ಪ ಪ್ರಖರವಾಗಿರೋದು. ಅಮ್ಮ ಸಾಯಂಕಾಲ ಲಾಂದ್ರದ ಹರಳ್ನ ಬೂದಿಯಿಂದ ತಿಕ್ಕಿ ಹೊಳಪು ಕೊಟ್ಟಿರೊಳು. ಎರ್ಡು ಲಾಂದ್ರ ಅಂತೂ ನಮ್ಮನೆಗೆ ಸಾಲ್ದು. ಒಂದ್ 'ಪೆಟ್ರೋ ಮ್ಯಾಕ್ಸ್ ದೀಪ'ನ ಅಟ್ಟದ್ ಗೋಡೆಗೆ ತೂಘಾಕಿರ್ತಿದೃ, 'ಅದ್ಯಾಕೊ ಅವಗಳ್  ಬಳ್ಕೆ ಯಾವಾಗ್ ಮಾಡೊರು ನನಗಂತೂ ತಿಳೀದೆ ತಿಳೀದು'..