ಜಗಧೀಶ್ವರಿಯ ಗೆಲುವು
ದೇವ ದುಂದುಬಿ ಮೊಳಗಿತೋ ಜಗಧೀಶ್ವರಿಗೆ ಗೆಲುವಾಯಿತೋ ||ಪ||
ಸಪ್ತ ಮಾತೃಕೆಯಾಗಿ ಜೀವ ವಿಚಾರಿಸಿದ ಪರಿ ನೋಡಿದು
ರೌದ್ರ ನರ್ತನ ಕಾಲಲೀಲೆಗೆ ದಾನವರ ಕೊನೆಯಾಯಿತೋ
ತಾಮ ವಿಜೃ೦ಭಿಸಿತು ಕೊನೆಯಲಿ ಸಾತ್ವಿಕತೆಯುಳಿವಾಯಿತೋ
ಕಾಮ ಕ್ರೋಧದ ಅಹಮುಮಮಗಳ ಭಾವ ಮುಕುತಿಯ ಕಂಡಿತು ||೧||
ಭಾರತಿಯ ನಿಶ್ಚಲ ಸುಧರ್ಮದ ಸ್ಥೈರ್ಯ ಗಾರುಡಿಯಾಗಿದೆ
ವೈಷ್ಣವಿಯ ಸಿರಿ ಸಂಪದಂಗಳು ಸಾತ್ವಿಕರ ಬೆಂಬಲಿಸಿದೆ
ವೀರೇ ಶಾಂಭವಿ ದೈತ್ಯ ಭಾವ ಸಮೂಲ ನಾಶವ ಗೈದರೆ
ಧೀರೆ ಚಾಮುಂಡೇಶ್ವರಿಯು ಪಾತಕಿಗಳನು ಸಂಹರಿಸಿರೆ ||೨||
ಕೌಶಿಕಿಗೆ ಇಂದ್ರಾಣಿ ಕೌಮಾರಿಯರ ಸೇನಾ ಬಳಗವು
ನಾರಸಿಂಹಿಣಿ ಘೋರಳು ವಾರಾಹಿ ಜೊತೆ ಸಂಚಲನವು
ಭಗವೆ ಜಗದಂಬಿಕೆಯು ಬಗೆಬಗೆ ರೂಪುಗಳು ತಾನಾದಳು
ಸಿಗಿದು ಶುಂಭ ನಿಶುಂಭ ದಾನವ ರಕ್ತಬೀಜರ ಕೊಂದಳು ||೩||
- ಸದಾನಂದ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!