ಏನು ಫಲವು
---------------
ನೂರು ಮಾವಿನ ಮರದಿ 
ಸಾವಿರ ಕೋಗಿಲೆ ಕುಳಿತು
ರಾಗವ ಹಾಡಿದರೇನು ಫಲವು
ಚೈತ್ರಮಾಸವಿಲ್ಲದೆ 
 
ಯಾವ ರಾಗದಿ ಹಾಡಿದರೇನು
ಯಾವ ತಾಳವು ಅದಕೆ ಕೂಡಿದರೇನು
ಸಾಹಿತ್ಯ  ಸುಂದರವಿದ್ದರೆನು ಫಲವು
ಕೊರಳಲ್ಲಿ  ಮಾದುರ್ಯವಿಲ್ಲದೆ
 
ಹತ್ತು ಕವನವ ಹೊಸೆದು
ಹೊತ್ತು ತಂದು ಸುರಿದರೇನು 
ಮತ್ತೆ ಮನದಿ ಮಂಡಿಗೆ ಸವಿದರೇನು ಫಲವು
ಓದುವ ರಸಿಕನಿಲ್ಲದಿದ್ದರೆ