ಈ ಉದಾಹರಣೆ ಗಮನಿಸಿ:
ಶುಕನೋದಿಂಗುರೆ ಚೆಲ್ವೆ ಕಾಕರವ (ಶುಕನ ಊದಿಂಗೆ ಉರೆ ಚೆಲುವೆ ಕಾಕರವ - ಗುಣ ಸಂಧಿ)
[ಮುಕುರಂ ಕೈಯೊಳಿರಲ್ಕೆ ನೀರ ನೆಳಲೇಕೈ ಕಾಮಧೇನಿರ್ದುಮೂ |
ಟಕೆ ಗೊಡ್ಡಾಕಳನಾಳ್ವರೇ ಗುಣಯುತರ್ ಪಾಲುಂಡು ಮೇಲುಂಬರೇ ||
ಶುಕನೋದಿಂಗುರೆ ಚೆಲ್ವೆ ಕಾಕರವ ರಂಭಾನೃತ್ಯಕಂ ಡೊಂಬರೇ|| || - ಸೋಮೇಶ್ವರ ಶತಕ ]
ಇದು ಶುಕ|ನೂ|ದಿಂಗೆ ಅಲ್ಲವೇ? ಸಂಸ್ಕೃತದ ಗುಣಸಂಧಿಯನ್ನು ಕನ್ನಡದಲ್ಲಿ ಬಳಸಲು ಹೋಗಿ ಊದಿಂಗೆ ತಪ್ಪಿ ಓಂದಿಂಗೆ ಆಂದಂತೆ ಆಗಲಿಲ್ಲವೇ ? ಗುಣಸಂಧಿ ಸಂಸ್ಕೃತಸಂಧಿ. ಅದನ್ನು ಸಂಸ್ಕೃತ ಶಬ್ಧಗಳಿಗೆಮಾತ್ರ ಬಳಸಬೇಕು. ಊದು ಕನ್ನಡ ಪದ ಹಾಗಾಗಿ ಇಲ್ಲಿ ಗುಣಸಂಧಿ ಬಳಸಬಾರದು.
ಗುಣಸಂಧಿ ಕನ್ನಡದಲ್ಲಿ ಇಲ್ಲ ಎನ್ನುವುದು ನನ್ನ ಅಭಿಪ್ರಾಯ!
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!